Tomorrow Horoscope: ಗೃಹಾಲಂಕಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಹೊಸ ಉದ್ಯಮ ಆರಂಭಕ್ಕೆ ತಡೆ; ನಾಳೆಯ ದಿನ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಗೃಹಾಲಂಕಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಹೊಸ ಉದ್ಯಮ ಆರಂಭಕ್ಕೆ ತಡೆ; ನಾಳೆಯ ದಿನ ಭವಿಷ್ಯ

Tomorrow Horoscope: ಗೃಹಾಲಂಕಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಹೊಸ ಉದ್ಯಮ ಆರಂಭಕ್ಕೆ ತಡೆ; ನಾಳೆಯ ದಿನ ಭವಿಷ್ಯ

15th May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ಗೃಹಾಲಂಕಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಹೊಸ ಉದ್ಯಮ ಆರಂಭಕ್ಕೆ ತಡೆ; ನಾಳೆಯ ದಿನ ಭವಿಷ್ಯ
ಗೃಹಾಲಂಕಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಹೊಸ ಉದ್ಯಮ ಆರಂಭಕ್ಕೆ ತಡೆ; ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (15th May 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಬುಧವಾರ

ತಿಥಿ: ಅಷ್ಟಮಿ ದಿನಪೂರ್ತಿ ಇರುತ್ತದೆ

ನಕ್ಷತ್ರ: ಆಶ್ಲೇಷ ನಕ್ಷತ್ರವು 04.40ರವರೆಗೂ ಇದ್ದು ನಂತರ ಮಖ ನಕ್ಷತ್ರವು ಆರಂಭವಾಗುತ್ತದೆ

ಸೂರ್ಯೋದಯ: ಬೆಳಗ್ಗೆ 05.54

ಸೂರ್ಯಾಸ್ತ: ಸಂಜೆ 06.37

ರಾಹುಕಾಲ: 12.20 ರಿಂದ 01.55

ಮೇಷ

ವಿದ್ಯಾರ್ಥಿಗಳು ಚುರುಕುತನದಿಂದ ನಿರ್ದಿಷ್ಠ ಗುರಿ ತಲುಪುತ್ತಾರೆ. ಸುಲಭವಾಗಿ ಹಣಕಾಸಿನ ವಿಷಯದಲ್ಲಿ ಯಾರನ್ನೂ ನಂಬುವುದಿಲ್ಲ. ಯಾವುದೇ ಕೆಲಸವಾದರೂ ನಿಷ್ಠೆಯಿಂದ ಪೂರ್ಣಗೊಳಿಸುವಿರಿ. ಭಯವಿಲ್ಲದೆ ತೆಗೆದುಕೊಳ್ಳುವುವ ನಿರ್ಧಾರಗಳು ಸಫಲಗೊಳ್ಳಲಿವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಗುಲಾಬಿ

ವೃಷಭ

ಆಪತ್ತಿನಲ್ಲಿರುವವರಿಗೆ ಸಹಾಯ ಮಾಡುವಿರಿ. ಸೋದರರ ಜೊತೆಯಲ್ಲಿ ಬೇಸರದ ಸನ್ನಿವೇಶ ಉಂಟಾಗಲಿದೆ. ಕಮೀಷನ್ ಆಧಾರಿತ ಉದ್ಯೋಗದಲ್ಲಿಹೆಚ್ಚಿನ ಲಾಭಾಂಶ ಇರುತ್ತದೆ. ಕುಟುಂಬದ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕುಟುಂಬದಲ್ಲಿ ವಿವಾಹದ ಮಾತುಕತೆಯು ಸಫಲಗೊಳ್ಳಲಿದೆ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಮಕ್ಕಳ ಮನಸ್ಸಿಗೆ ಸಂತೋಷವಾಗುವ ನಿರ್ಧಾರವೊಂದನ್ನು ಕೈಗೊಳ್ಳುವಿರಿ.

ಪರಿಹಾರ : ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ

ಮಿಥುನ

ವಿದ್ಯಾರ್ಥಿಗಳಿಗೆ ಕಲಿಕೆಯ ಹಂತದಲ್ಲಿ ಇರುವಾಗಲೇ ಉದ್ಯೋಗ ದೊರೆಯುತ್ತದೆ. ಕುಟುಂಬದ ಪೂರ್ಣ ಜವಾಬ್ದಾರಿ ನಿಮಗೆ ದೊರೆಯುತ್ತದೆ. ಉದ್ಯೋಗಸ್ಥರು ಒತ್ತಡವಿಲ್ಲದೆ ಜಿವನ ನಡೆಸುವರು. ಹೊಸ ವ್ಯಾಪಾರ ಆರಂಭಿಸುವ ವಿಚಾರ ಮುಂದೆ ಹೋಗಲಿದೆ. ಗೃಹಾಲಂಕಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಗಣ್ಯವ್ಯಕ್ತಿಗಳ ಸಹಾಯ ಸಹಕಾರ ನಿಮಗೆ ದೊರೆಯುತ್ತದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಬೂದು

ಕಟಕ

ಸಾರಿಗೆಗೆ ಸಂಬಂಧಿಸಿದ ಉದ್ಯೋಗದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಚುರುಕುತನದಿಂದ ಕಲಿಕೆಯಲ್ಲಿ ಮುಂದುವರೆಯುವಿರಿ. ಪಾಲುದಾರಿಕೆಯ ವ್ಯಾಪಾರ ವ್ಯವಹಾಗಳಲ್ಲಿ ಹೂಡಿದ ಬಂಡವಾಳಕ್ಕೆ ಮೋಸವಿರುವುದಿಲ್ಲ. ಆರೋಗ್ಯದಲ್ಲಿ ಏರಿಳಿತ ಉಂಟಾಗಲಿದೆ. ಧಾರ್ಮಿಕ ಕೇಂದ್ರದ ನಿರ್ವಹಣೆಯಲ್ಲಿ ನಿಮ್ಮ ಕೈ ಮೇಲಾಗಲಿದೆ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ಸಿಂಹ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಸಮಾಜದಲ್ಲಿ ವರ್ಚಸ್ಸು ಇರುವ ನಾಯಕರಾಗಿ ರೂಪುಗೊಳ್ಳುವಿರಿ. ಸ್ನೇಹಿತರ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ದೊರೆಯುತ್ತದೆ. ಪುಟ್ಟ ಮಕ್ಕಳಲ್ಲಿ ಕಫದ ತೊಂದರೆ ಇರುತ್ತದೆ. ಮುಂಗೋಪದಿಂದ ವರ್ತಿಸಿದಲ್ಲಿ ಆತ್ಮೀಯರು ದೂರವಾಗುತ್ತಾರೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿ ದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು

ಕನ್ಯಾ

ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಬೆಂಬಲ ದೊರೆಯುತ್ತದೆ. ಹಣದ ಕೊರತೆ ಕಡಿಮೆ ಆಗಲಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಅನಾರೋಗ್ಯ ಇರಲಿದೆ. ಕುಟುಂಬದಲ್ಲಿ ವಿರಸದ ಸನ್ನಿವೇಶಗಳು ಎದುರಾಗಲಿದೆ. ತಾಯಿಯ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ನಿರ್ಧಾರವೇ ಅಂತಿಮವಾಗಲಿದೆ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ತಿಳಿ ಹಸಿರು

ತುಲಾ

ವಿದ್ಯಾರ್ಥಿಗಳು ಸ್ವಂತ ಸಾಮರ್ಥ್ಯದಿಂದ ಗುರಿ ತಲುಪುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗಾತಿಯ ಕಷ್ಟ ನಷ್ಟಗಳಿಗೆ ಪರಿಹಾರವನ್ನು ಕಂಡುಹಿಡಿಯುವಿರಿ. ಕುಟುಂಬದ ಹಿರಿಯರ ಜೊತೆಗೂಡಿ ಯಾತ್ರಾಸ್ಥಳಕ್ಕೆ ಪ್ರವಾಸ ಹೋಗುವಿರಿ. ಸಾಲದ ವ್ಯವಹಾರ ಇಷ್ಟಪಡುವುದಿಲ್ಲ. ಉದ್ಯೋಗ ದೊರೆತು ಮಕ್ಕಳು ವಿದೇಶಕ್ಕೆ ತೆರಳಲಿದ್ದಾರೆ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ನಸು ಗೆಂಪು

ವೃಶ್ಚಿಕ

ಮನೆತನದ ಭೂಮಿಯ ವಿಚಾರದಲ್ಲಿ ಸಂಧಾನ ನಡೆಸುವಿರಿ. ಸಂಗಾತಿಯ ಜೊತೆಯಲ್ಲಿ ವಿರಸದ ಸನ್ನಿವೇಶಗಳು ಎದುರಾಗುತ್ತವೆ. ಸ್ಟಾಕ್‌ ಮತ್ತು ಷೇರಿನ ವ್ಯವಹಾರದಿಂದ ಹಣ ಗಳಿಸುವಿರಿ. ಸಮಯ ವ್ಯರ್ಥಮಾಡದೆ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗುವಿರಿ. ನಿಮ್ಮಲ್ಲಿನ ಒಳ್ಳೆಯತನದ ದುರುಪಯೋಗ ಆಗಬಹುದು ಎಚ್ಚರಿಕೆ ಇರಲಿ.

ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಧನಸ್ಸು

ದೃಢವಾದ ಸಂಕಲ್ಪವಿದ್ದರೆ ಯಾವುದೇ ಕೆಲಸವನ್ನು ಮಾಡಬಲ್ಲರು. ಕಷ್ಟ ನಷ್ಟಗಳಿಗೆ ಹೆದರದೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅರೆಮನಸ್ಸಿನಿಂದ ಉದ್ಯೋಗ ಬದಲಿಸುವಿರಿ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರೆತರೆ ವಿಶೇಷ ಸಾಧನೆ ಮಾಡಬಲ್ಲರು. ಆತ್ಮೀಯರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಮಕರ

ಮನಸ್ಸಿಗೆ ಮುದ ನೀಡುವ ಹವ್ಯಾಸದಲ್ಲಿ ತೊಡಗುವಿರಿ. ಬೇಸರವಾದರೂ ಒತ್ತಾಯಕ್ಕೆ ಮಣಿದು ಉದ್ಯೋಗ ಬದಲಾಯಿಸುವ ಯೋಚನೆ ಕೈಬಿಡುವಿರಿ. ಮನೆಮಂದಿಯ ಜೊತೆಗೂಡಿ ಯಾತ್ರಾಸ್ಥಳಕ್ಕೆ ಬೇಟಿ ನೀಡುವಿರಿ. ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ. ವಾಹನದಿಂದ ತೊಂದರೆ ಎದುರಾಗಬಹುದು ಎಚ್ಚರಿಕೆ ಇರಲಿ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ತೋರುವಿರಿ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬೂದು ಬಣ್ಣ

ಕುಂಭ

ಉದ್ಯೋಗದಲ್ಲಿ ಗುರಿ ತಲುಪಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಆತ್ಮೀಯರ ಸಲಹೆಯನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಪ್ರೀತಿಯ ಮನೋಭಾವನೆ ನೆಲೆಸಿರುತ್ತದೆ. ಸಂಚಾರದಲ್ಲಿ ಸಂತಸದಿಂದ ದಿನವನ್ನು ಕಳೆಯುವಿರಿ. ವಿದ್ಯಾರ್ಥಿಗಳು ಗುಟ್ಟಾಗಿಯೇ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಸಂಬದವಿಲ್ಲದ ಹಣದ ವಿವಾದದಲ್ಲಿ ಸಿಲುಕುವ ಸಾಧ್ಯತೆ ಇದೆ.

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಆಕಾಶ ನೀಲಿ

ಮೀನ

ಅನಾಯಾಸವಾಗಿ ವೃತ್ತಿಯಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ನಡೆಯಲಿರುವ ವಿವಾಹ ಕಾರ್ಯದ ವಿವಾದವನ್ನು ದೂರ ಮಾಡುವಿರಿ. ಉತ್ತಮ ಯೋಚನಾಶಕ್ತಿ ಹೊಸ ಅವಕಾಶಗಳನ್ನು ರೂಪಿಸುತ್ತವೆ. ವ್ಯವಸಾಯದಲ್ಲಿ ಆಸಕ್ತಿ ಇರಲಿದೆ. ಭೂ ಸಂಬಂಧಿತ ವ್ಯಾಪಾರ ವಹಿವಾಟಿನಲ್ಲಿ ಲಾಭವಿರುತ್ತದೆ. ಸಾರ್ವಜನಿಕ ಸಂಸ್ಥೆಯ ನಿರ್ವಹಣೆಯ ಅಧಿಕಾರ ದೊರೆಯುತ್ತದೆ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಕೆಂಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.