ಹೆಣ್ಣುಮಕ್ಕಳೊಂದಿಗೆ ತಂದೆ ಮನಸ್ತಾಪ, ನಿಮ್ಮಿಂದ ಸಹಾಯ ಪಡೆದವರೇ ವಿರೋಧಿಗಳಾಗುತ್ತಾರೆ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ
16th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (16th June 2024 Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಭಾನುವಾರ
ತಿಥಿ: ದಶಮಿ ರಾತ್ರಿ 02.14ರವರೆಗೂ ಇದ್ದು ನಂತರ ಏಕಾದಶಿ ಆರಂಭವಾಗುತ್ತದೆ.
ನಕ್ಷತ್ರ: ಹಸ್ತ ನಕ್ಷತ್ರವು ಬೆಳಗ್ಗೆ 09.55 ರವರೆಗೆ ಇದ್ದು ನಂತರ ಚಿತ್ತೆ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆಳಗ್ಗೆ 05.52
ಸೂರ್ಯಾಸ್ತ: ಸಂಜೆ 06.47
ರಾಹುಕಾಲ: ಸಂಜೆ 05.12 ರಿಂದ 06.49
ರಾಶಿಫಲ
ಮೇಷ
ವಂಶಕ್ಕೆ ಸೇರಿದ ಮನೆಯನ್ನು ನವೀಕರಿಸುವಿರಿ. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಅತಿಯಾದ ಭಾವುಕತೆಯಿಂದ ವರ್ತಿಸುವಿರಿ. ಗಂಗಾಸ್ನಾನ ಮಾಡುವಿರಿ. ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಪಿತ್ತದ ದೋಷವಿರುತ್ತದೆ. ಆರಂಭದಲ್ಲಿ ವಿಘ್ನಗಳು ಉಂಟಾದರೂ ಕ್ರಮೇಣ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಮಾಜದಲ್ಲಿನ ನಾಯಕನ ಪಟ್ಟ ನಿಮಗೆ ದೊರೆಯುತ್ತದೆ.
ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಬಿಳಿ
ವೃಷಭ
ಅನಾವಶ್ಯಕ ಖರ್ಚು ವೆಚ್ಚಗಳಿಂದ ಬೇಸರಗೊಳ್ಳುವಿರಿ. ತಪ್ಪು ನಿಮ್ಮಲ್ಲೇ ಇದ್ದರೂ ಬೇರೆಯವರಿಗೆ ಬುದ್ಧಿವಾದ ಹೇಳುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಚಿಕ್ಕಮಕ್ಕಳ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಅನಾರೋಗ್ಯ ಕಾಡಲಿದೆ. ತಂದೆ ಮಕ್ಕಳ ನಡುವೆ ಉತ್ತಮ ಬಾಂಧವ್ಯ ಇರುವುದಿಲ್ಲ. ಧೈರ್ಯ ಸಾಹಸದ ಗುಣವಿರುತ್ತದೆ.
ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಬೂದು
ಮಿಥುನ
ಸಣ್ಣಪುಟ್ಟ ವಿಚಾರಗಳಿಗೂ ದಿಢೀರ್ ಕೋಪಗೊಳ್ಳುವಿರಿ. ವಾದ ವಿವಾದಗಳಿದ್ದರೂ ಜಂಪತಿಗಳ ನಡುವೆ ಉತ್ತಮ ಅನುಬಂಧ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ .ನಿಮ್ಮಲ್ಲಿರುವ ವಿಶೇಷ ಜ್ಞಾನ ಎಲ್ಲರಿಗೂ ಸಹಕಾರಿಯಾಗುತ್ತದೆ. ಗೌರವ ಘನತೆಗಳಿಂದ ಜೀವನವನ್ನು ನಡೆಸುವಿರಿ. ಸಾರ್ವಜನಿಕ ಸಂಘ ಸಂಸ್ಥೆಯ ನಾಯಕತ್ವದ ಜವಾಬ್ದಾರಿ ನಿಮ್ಮದಾಗುತ್ತದೆ.
ಪರಿಹಾರ : ಹಣೆಯಲ್ಲಿ ತಿಲಕ ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಆಕಾಶ ನೀಲಿ
ಕಟಕ
ಮಹಿಳೆಯರು ತಮಗೆ ಇಷ್ಟವಾದಂತಹ ಆಭರಣವನ್ನು ಕೊಳ್ಳುತ್ತಾರೆ. ನಿಮ್ಮ ಮಾತಿಗೆ ಎಲ್ಲೆಡೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕುಟುಂಬದ ಹಿರಿಯರ ಸಹಾಯ ದೊರೆಯಲಿದೆ. ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ಮಕ್ಕಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಅಡ್ಡಿಆತಂಕ ಎದುರಿಸಿದ ನಂತರ ಕೆಲಸ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ. ತಂದೆ ಮತ್ತು ಹೆಣ್ಣು ಮಕ್ಕಳ ನಡುವೆ ಜಗಳವಿರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಕೆಂಪು
ಸಿಂಹ
ಬೇರೊಬ್ಬರ ಮಾತನ್ನು ಕೇಳದೆ ನಿಮ್ಮ ಇಚ್ಛೆಯಂತೆ ನೀವು ನಡೆಯುವಿರಿ. ನೀವೆಷ್ಟೇ ಬುದ್ಧಿವಂತರಾದರು ಅದರ ಸದ್ಬಳಕೆ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ. ನಿಮ್ಮ ಮನೆತನದ ಆಸ್ತಿಯಲ್ಲಿ ವಿವಾದ ಒಂದು ಕಂಡುಬರುತ್ತದೆ ತಾಯಿಯವರ ಹೆಸರಿನಲ್ಲಿರುವ ಸ್ಥಿರಾಸ್ತಿಗೆ ಯಾವುದೇ ತೊಂದರೆ ಇರದು.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ :11
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಎಲೆ ಹಸಿರು
ಕನ್ಯಾ
ತಾಯಿಯ ಸಹಾಯ ಸಹಕಾರದಿಂದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಯಾರನ್ನೂ ಸುಲಭವಾಗಿ ನೀವು ನಂಬುವುದಿಲ್ಲ. ತಾಯಿಗೆ ಸಂಬಂಧಪಟ್ಟ ಆಸ್ತಿ ವಿವಾದದಲ್ಲಿ ಸಿಲುಕುತ್ತದೆ. ಸಂಗಾತಿಯೊಡನೆ ಅನಾವಶ್ಯಕ ಮನಸ್ತಾಪ ಉಂಟಾಗುತ್ತದೆ. ಕುಟುಂಬದ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಮಗಳ ವಿವಾಹ ನಿಶ್ಚಯವಾಗುತ್ತದೆ. ಪ್ರಯಾಣದಿಂದ ನಿಮಗೆ ಲಾಭವಾಗಲಿದೆ.
ಪರಿಹಾರ : ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ತುಲಾ
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮಲ್ಲಿ ಅಳುಕಿನ ಭಾವನೆ ಇರುತ್ತದೆ. ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಟ್ಟೂರಿಗೆ ತೆರಳುವಿರಿ. ಬಡವರಿಗೆ ಜನರ ಸಹಾಯದಿಂದ ಆಹಾರದ ವ್ಯವಸ್ಥೆ ಮಾಡುವಿರಿ. ವಿದ್ಯಾರ್ಥಿಗಳು ಆರಂಭದಲ್ಲಿ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ ಅನುಭವಿಸುತ್ತಾರೆ. ಭೂ ವಿವಾದದ ಕಾರಣ ಆತ್ಮೀಯರು ನಿಮ್ಮಿಂದ ದೂರವಾಗಬಹುದು.
ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ವೃಶ್ಚಿಕ
ನಿಮ್ಮಿಂದ ಸಹಾಯ ಪಡೆದವರು ನಿಮ್ಮನ್ನು ವಿರೋಧಿಸಿ ಮಾತನಾಡುತ್ತಾರೆ. ಸುಲಭವಾಗಿ ಯಾರಿಗೂ ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇರೆಯವರ ಮಾತನ್ನು ನಂಬಿ ತಪ್ಪು ಮಾಡಿ ನಂತರ ಪಶ್ಚಾತಾಪ ಪಡುವಿರಿ. ಉತ್ತಮ ಜ್ಞಾನವಿರುತ್ತದೆ. ಖರ್ಚಿನ ಮೇಲೆ ಹಿಡಿತವಿರದ ಕಾರಣ ಹಣದ ಕೊರತೆ ಉಂಟಾಗುತ್ತದೆ.
ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಧನಸ್ಸು
ಸೋದರ ಅಥವಾ ಸೋದರಿಯ ವಿವಾಹ ನಿಶ್ಚಯವಾಗುತ್ತದೆ. ನಿಮಗೆ ಪ್ರಾಚೀನ ಕಲೆಗಳ ಬಗ್ಗೆ ಉತ್ತಮ ಅಭಿರುಚಿ ಇರುತ್ತದೆ. ಸಂಗಾತಿಗೆ ಕ್ಷಮಾಗುಣ ಇರುವ ಕಾರಣ ದಾಂಪತ್ಯ ಸುಖಮಯವಾಗಿರುತ್ತದೆ. ಆಪತ್ಕಾಲಕ್ಕಾಗಿ ಕಷ್ಟವಾದರೂ ಹಣವನ್ನು ಉಳಿಸುವಿರಿ. ಮಕ್ಕಳು ವೈಭವದ ಜೀವನವನ್ನು ನಡೆಸುತ್ತಾರೆ. ಹಣಕಾಸಿನ ವಿವಾದವೊಂದು ಸುಖಾಂತ್ಯಗೊಳ್ಳುತ್ತದೆ.
ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಮಕರ
ಎಲ್ಲರೊಂದಿಗೆ ಸಹನೆಯಿಂದ ವರ್ತಿಸಿದರೆ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಬೇಕು. ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ ಕಂಡುಬರುತ್ತದೆ. ಅದೃಷ್ಟವಶಾತ್ ಸೋದರನು ಆಪತ್ತಿನಿಂದ ಪಾರಾಗುತ್ತಾನೆ. ನಿಮಗೆ ರಕ್ತಕ್ಕೆ ಸಂಬಂಧಪಟ್ಟ ದೋಷವಿರುತ್ತದೆ. ದೈಹಿಕ ಶಕ್ತಿಯು ಕಡಿಮೆಯಾಗುತ್ತದೆ.
ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಕುಂಭ
ಹಣಕಾಸಿನ ವಿಚಾರದಲ್ಲಿ ಅಪವಾದವೊಂದನ್ನು ಎದುರಿಸಬೇಕಾಗುತ್ತದೆ. ಸಮಾಜದಲ್ಲಿ ಗೌರವಯುತ ಸ್ಥಾನ ದೊರೆಯುತ್ತದೆ. ನಿಮ್ಮ ನಯವಾದ ಮಾತಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯಲಿದೆ. ನೆಮ್ಮದಿಯ ಜೀವನವನ್ನು ನಡೆಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತದೆ. .
ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ನೀಲಿ ಬಣ್ಣ
ಮೀನ
ವಿದ್ಯಾರ್ಥಿಗಳು ಆತಂಕವಿಲ್ಲದೆ ಕಲಿಕೆಯಲ್ಲಿ ತೊಡಗುತ್ತಾರೆ. ಚಾಡಿ ಮಾತುಗಳನ್ನು ನಂಬುವುದಿಲ್ಲ. ನಿಮ್ಮಿಂದಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಇರುತ್ತದೆ. ನಿಮ್ಮ ಸಂಗಾತಿಗೆ ಸ್ನೇಹಿತರಿಗೆ ಸಹಾಯ ಮಾಡುವ ಹಂಬಲವಿರುತ್ತದೆ. ಕುಟುಂಬದಲ್ಲಿ ದಂಪತಿ ನಡುವೆ ಉತ್ತಮ ಒಡನಾಟ ಇರುತ್ತದೆ. ನಿತ್ಯ ಜೀವನಕ್ಕೆ ಸಾಕಾಗುವಷ್ಟು ಹಣ ಸುಲಭವಾಗಿ ದೊರೆಯುತ್ತದೆ. .
ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ 4
ಅದೃಷ್ಟದ ದಿಕ್ಕು : ಉತ್ತಮ
ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
