ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ; ನಾಳೆಯ ದಿನ ಭವಿಷ್ಯ

ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ; ನಾಳೆಯ ದಿನ ಭವಿಷ್ಯ

17th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ; ನಾಳೆಯ ದಿನ ಭವಿಷ್ಯ
ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ; ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (17th June 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಸೋಮವಾರ

ತಿಥಿ : ಏಕಾದಶಿ ರಾತ್ರಿ12.04ರವರೆಗೂ ಇರುತ್ತದೆ. ಆನಂತರ ದ್ವಾದಶಿ ಆರಂಭವಾಗುತ್ತದೆ.

ನಕ್ಷತ್ರ : ಚಿತ್ತೆ ನಕ್ಷತ್ರವು .12.19 ರವರೆಗೆ ಇದ್ದು ಆನಂತರ ಸ್ವಾತಿ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ05.52

ಸೂರ್ಯಾಸ್ತ: ಸಂಜೆ 06.47

ರಾಹುಕಾಲ: ಬೆಳಗ್ಗೆ07.36 ರಿಂದ 09.12

ರಾಶಿ ಫಲ

 

ಮೇಷ

ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ನಡೆವ ಕಾರಣ ಯಾವುದೇ ತೊಂದರೆ ಇರದು. ಎಲ್ಲರ ಜೊತೆ ಮೌನದಿಂದ ನಡೆದುಕೊಳ್ಳುವಿರಿ. ಕುಟುಂಬದ ವರಮಾನದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಆರೋಗ್ಯ ಸ್ಥಿರವಾಗಿರುತ್ತದೆ. ಹೆಚ್ಚಿನ ಪ್ರಯತ್ನದಿಂದ ಕೆಲಸ ಕಾರ್ಯಗಳನ್ನು ಮಾಡುವಿರಿ. ಮಡದಿ ಮಕ್ಕಳ ಜೊತೆ ಸಂತೋಷದಿಂದ ಬಾಳುವಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ

ವೃಷಭ

ಸಹೋದ್ಯೋಗಿಗಳ ಜೊತೆ ಆತ್ಮೀಯವಾಗಿ ಬೆರೆತು ಎಲ್ಲರ ಮನ ಗೆಲ್ಲುವಿರಿ. ಕೈ ಕಾಲುಗಳಲ್ಲಿ ನೋವಿರುತ್ತದೆ. ಬಂಧು ಬಳಗದವರ ತೊಂದರೆಯನ್ನು ಬಗೆಹರಿಸುವಿರಿ. ಖರ್ಚು ವೆಚ್ಚಗಳು ಕಡಿಮೆ ಆಗುತ್ತದೆ. ಬೇರೆಯವರ ಸಲಹೆಯನ್ನು ಒಪ್ಪುವಿರಿ. ಚಿಕ್ಕಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಹೊಸ ನಿರೀಕ್ಷೆಗಳು ಕಾರ್ಯರೂಪಕ್ಕೆ ಬರಲಿವೆ. ವಂಶದ ಹಿರಿಯರ ಆಗಮನ ಖುಷಿ ನೀಡಲಿದೆ.

ಪರಿಹಾರ : ತಾಯಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಗುಲಾಬಿ

ಮಿಥುನ

ಪ್ರತಿಯೊಂದು ವಿಚಾರದಲ್ಲೂ ಹೆಚ್ಚಿನ ಆಸಕ್ತಿ ತೋರುವಿರಿ. ಮುಂಗೋಪ ನಿಯಂತ್ರಿಸಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಹಣಕಾಸಿನ ವ್ಯವಹಾರ ಉತ್ತಮವಾಗಿಲಿದೆ. ಹಣಕಾಸನ್ನು ಉಳಿಸುವ ಯೋಜನೆಗೆ ಸೋದರನ ಸಹಕಾರ ದೊರೆಯುತ್ತದೆ. ನಿಮಗೆ ಅರಿವಿಲ್ಲದಂತೆ ಹಣವನ್ನು ಖರ್ಚು ಮಾಡುವಿರಿ.

ಪರಿಹಾರ : ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಕಟಕ

ಗೃಹಿಣಿಯರ ಸಹಯೋಗದಲ್ಲಿ ಗುಡಿಕೈಗಾರಿಕೆಯನ್ನು ಆರಂಭಿಸುವ ಯೋಜನೆ ರೂಪಿಸುವಿರಿ. ಶಾಂತಿ ಸಂಧಾನ ನಡೆಸುವಲ್ಲಿ ಪ್ರಮುಖ ಪಾತ್ರವಹಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸುವುದಿಲ್ಲ. ಮಕ್ಕಳ ಜೊತೆ ಪ್ರೀತಿಯಿಂದ ವರ್ತಿಸುವಿರಿ. ಶುಭಕಾರ್ಯಗಳಿಗೆ ಹಣ ಖರ್ಚುಮಾಡುವಿರಿ. ಸಾಲದ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಸ್ವತಂತ್ರವಾಗಿ ಜೀವನ ನಿರ್ವಹಿಸುವಿರಿ.

ಪರಿಹಾರ : ಸಿಹಿ ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬೂದು ಬಣ್ಣ

ಸಿಂಹ

ಈ ದಿನ ಹೆಚ್ಚಿನ ಬದಲಾವಣೆ ಕಾಣದು. ಕುಟುಂಬದ ಒಡೆತನ ನಿಮ್ಮದಾಗಲಿದೆ. ಕುಟುಂಬದಲ್ಲಿ ಒಮ್ಮತ ಮೂಡಲು ಪ್ರಯತ್ನಿಸುವಿರಿ. ಆತ್ಮೀಯರ ಸಲಹೆಯನ್ನು ಪಾಲಿಸುವಿರಿ. ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವಿದ್ಯಾಭ್ಯಾಸ ಸುಸೂತ್ರವಾಗಿ ಸಾಗುತ್ತದೆ. ಹೆಣ್ಣುಮಕ್ಕಳ ಬೇಡಿಕೆಗಳನ್ನು ಪೂರೈಸಬೇಕಾಗುತ್ತದೆ. ವೃತ್ತಿಯಲ್ಲಿ ಯಾವುದೇ ಬದಲಾವಣೆಗಳು ಕಾಣದು.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಕಂದು ಬಣ್ಣ

ಕನ್ಯಾ

ಕಾನೂನು ರೀತ್ಯಾ ನಿಮಗೆ ದೊರೆಯಬೇಕಿದ್ದ ಅನುಕೂಲತೆಗಳನ್ನು ಪಡೆಯುವಿರಿ. ತಂದೆಯೊಂದಿಗೆ ಹಣಕಾಸಿನ ವ್ಯವಹಾರ ಆರಂಭಿಸುವಿರಿ. ಸಾರ್ವಜನಿಕ ಸಂಘ ಸಂಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿಯುವಿರಿ. ನಿಮ್ಮ ಅಸಂಬದ್ದ ಟೀಕೆಗಳಿಗೆ ಆತ್ಮೀಯರ ವಿರೋಧ ಇರುತ್ತದೆ. ನಿಮ್ಮ ಮಕ್ಕಳಿಗೆ ಉಡುಗೊರೆಯೊಂದನ್ನು ನೀಡುವಿರಿ.

ಪರಿಹಾರ: ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ತುಲಾ

ಆತ್ಮವಿಶ್ವಾಸದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಸಭೆ ಸಮಾರಂಭಗಳಿಂದ ದೂರ ಉಳಿಯಲು ಬಯಸುವಿರಿ. ವಿದ್ಯಾರ್ಥಿಗಳು ಎಂದಿನಂತೆ ಅಧ್ಯಯನದಲ್ಲಿ ನಿರತರಾಗುತ್ತಾರೆ. ಆತುರಕ್ಕೆ ಒಳಗಾಗದೆ ಯೋಚಿಸಿ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುವಿರಿ. ಮನಸ್ಸಿಗೆ ಬೇಸರ ಉಂಟು ಮಾಡುವ ಕೆಲಸ ನಡೆದರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮ್ಮಲ್ಲಿರುವ ಕ್ಷಮಾ ಗುಣವು ಸ್ನೇಹಿತರ ಗುಂಪನ್ನು ಹೆಚ್ಚಿಸುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ತಿಳಿ ಹಸಿರು

ವೃಶ್ಚಿಕ

ನಿಮ್ಮ ಸರಳವಾದ ಸಲಹೆಗಳನ್ನು ಹಿರಿಯ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮದೇ ಆದ ಛಾಪು ಮೂಡಿಸುವಿರಿ. ಆಕ್ಷೇಪಣೆಗಳನ್ನು ಲೆಕ್ಕಿಸದೆ ಸ್ವಂತ ಕೆಲಸ ಕಾರ್ಯಗಳಿಗೆ ಸಮಯ ಮೀಸಲಿಡುವಿರಿ. ನಿಮ್ಮ ತಪ್ಪನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟಂತೆ ಸಂಗಾತಿಯನ್ನು ಅವಲಂಬಿಸುವಿರಿ. ಹಣದ ಕೊರತೆ ಉಂಟಾಗುವುದಿಲ್ಲ.

ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ..

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಧನಸ್ಸು

ಯಾವುದೇ ಆತಂಕವಿಲ್ಲದೆ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಕುಟುಂಬದಲ್ಲಿನ ಹೊಂದಾಣಿಕೆಯ ಗುಣ ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಪ್ಪಿಗೆ ಶಿಕ್ಷಿಸುವ ಬದಲು ಮನ್ನಿಸಿ ಪ್ರೀತಿ ತೋರುವಿರಿ. ಇದರಿಂದ ಎಲ್ಲರೂ ನಿಮ್ಮ ಪ್ರೀತಿ ವಿಶ್ವಾಸವನ್ನು ಬಯಸುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಅನಾವಶ್ಯಕವಾಗಿ ಹಣ ಖರ್ಚು ಮಾಡುವುದಿಲ್ಲ.

ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಮಕರ

ಎಲ್ಲರ ಜೊತೆಗಿನ ಮಾತುಕತೆ ಕಡಿಮೆ ಮಾಡುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವಿರಿ. ನಿಮ್ಮ ಕಾರ್ಯದಕ್ಷತೆಗೆ ಎಲ್ಲರ ಪ್ರಶಂಸೆ ದೊರೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಾರೆ. ಹಣಕಾಸಿನ ವ್ಯವಹಾರವು ನಿಧಾನಗತಿಯಲ್ಲಿ ಸಾಗಲಿದೆ. ಮಕ್ಕಳ ಸಹಯೋಗದಲ್ಲಿ ವ್ಯಾಪಾರವನ್ನು ಆರಂಭಿಸುವಿರಿ.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ

ಕುಂಭ

ನಿಮ್ಮ ಆತ್ಮಗೌರವವನ್ನು ಕಡಿಮೆ ಮಾಡುವ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಗಳಿಗೆ ತಕ್ಕ ಪುರಸ್ಕಾರ ದೊರೆಯುತ್ತದೆ. ಪೂರ್ವ ಯೋಜನೆ ಇಲ್ಲದೆ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ನಿಮ್ಮ ಸುತ್ತಮುತ್ತಲಿನ ಜನರು ಅನಾವಶ್ಯಕವಾಗಿ ಟೀಕೆ ಮಾಡುತ್ತಾರೆ. ಯಾರ ಮಾತನ್ನು ಆಲಿಸದೆ ಸಮಾಧಾನದಿಂದ ಜೀವನದಲ್ಲಿ ಮುನ್ನಡೆಯವಿರಿ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು

ಮೀನ

ಕಾರ್ಯಕ್ರಮವೊಂದರಲ್ಲಿ ನಿಮ್ಮ ಮನದ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಖ್ಯ ಹಂತವನ್ನು ತಲುಪುತ್ತಾರೆ. ಪುಟ್ಟ ಮಕ್ಕಳಿದ್ದರೆ ಅವರ ಬಗ್ಗೆ ಗಮನವಿರಲಿ. ಜಾರಿ ಬೀಳುವುದರಿಂದ ನಿಮ್ಮ ಕೈಗಾಲುಗಳಿಗೆ ಪೆಟ್ಟಾಗಬಹುದು. ಯಾವುದೇ ವಿಚಾರವನ್ನು ಅಸಡ್ಡೆಯಿಂದ ನೋಡದಿರಿ.

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 11

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಆಕಾಶ ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.