Tomorrow Horoscope: ಕುಟುಂಬದ ಜವಾಬ್ದಾರಿಯಿಂದ ಹೆಚ್ಚಿನ ಒತ್ತಡ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ; ನಾಳೆಯ ದಿನ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಕುಟುಂಬದ ಜವಾಬ್ದಾರಿಯಿಂದ ಹೆಚ್ಚಿನ ಒತ್ತಡ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ; ನಾಳೆಯ ದಿನ ಭವಿಷ್ಯ

Tomorrow Horoscope: ಕುಟುಂಬದ ಜವಾಬ್ದಾರಿಯಿಂದ ಹೆಚ್ಚಿನ ಒತ್ತಡ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ; ನಾಳೆಯ ದಿನ ಭವಿಷ್ಯ

20th March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ (PC: Manjunath Kotagunasi)

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (20th March 2024 Horoscope).

ನಾಳೆಯ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಶುಕ್ಲಪಕ್ಷ-ಬುಧವಾರ

ತಿಥಿ : ಏಕಾದಶಿ ರಾತ್ರಿ 03.49 ರವರೆಗೂ ಇರುತ್ತದೆ ನಂತರ ದ್ವಾದಶಿ ಆರಂಭವಾಗುತ್ತದೆ

ನಕ್ಷತ್ರ : ಪುಷ್ಯ ನಕ್ಷತ್ರವು ರಾತ್ರಿ 12.14 ರವರೆಗೆ ಇರುತ್ತದೆ ನಂತರ ಆಶ್ಲೇಷ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.24

ಸೂರ್ಯಾಸ್ತ: ಸಂಜೆ 06.29

ರಾಹು ಕಾಲ: ಮಧ್ಯಾಹ್ನ 12.00 ರಿಂದ 01.30

ದಿನದ ವಿಶೇಷ: ಇಂದು ಸರ್ವೇಷಾಮೇಕಾದಶಿ

ರಾಶಿಫಲ

ಮೇಷ

ಕೆಲವರ ಸಹವಾಸದಿಂದ ದೂರವಿರಲು ವಾಸಸ್ಥಳವನ್ನು ಬದಲಿಸುವಿರಿ. ಉಷ್ಣದ ತೊಂದರೆ ಕಾಡುತ್ತದೆ. ಆಹಾರದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕಾಗುತ್ತದೆ. ಸಾಂಪ್ರದಾಯಕ ಕಲೆಯಲ್ಲಿ ಆಸಕ್ತಿ ಮೂಡಲಿದೆ. ಕಲಾವಿದರಿಗೆ ತಮ್ಮ ಪ್ರತಿಭೆಗೆ ತಕ್ಕಂತೆ ಅವಕಾಶಗಳು ದೊರೆಯುತ್ತವೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ತಂದೆಯವರಿಗೆ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಬಣ್ಣ: ನೇರಳೆ ಬಣ್ಣ

ವೃಷಭ

ವಿದ್ಯಾರ್ಥಿಗಳು ಸ್ವಂತ ಬುದ್ಧಿಬಲದಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಖರ್ಚು ವೆಚ್ಚಕ್ಕೆ ತಕ್ಕಂತ ಆದಾಯ ಇರುತ್ತದೆ. ಆದಾಯ ಹೆಚ್ಚಿಸಲು ಉಪವೃತ್ತಿಯನ್ನು ಆರಂಭಿಸುವಿರಿ. ಬಡವರಿಗೆ ಸಹಾಯ ಮಾಡುವಿರಿ. ಕಣ್ಣಿನ ತೊಂದರೆ ಇದ್ದಲ್ಲಿ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಕುಟುಂಬದಲ್ಲಿ ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ. ಪಶುಸಂಗೋಪನೆಯಲ್ಲಿ ಆಸಕ್ತಿ ಮೂಡಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಗುಲಾಬಿ

ಮಿಥುನ

ವೈಭೋಗದ ಜೀವನವನ್ನು ಇಷ್ಟಪಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ನಿರೀಕ್ಷೆಯಿಂದ ದಿನ ಕಳೆಯುತ್ತಾರೆ. ವಾಹನದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ ವಹಿಸಿ. ದಂಪತಿಗಳ ನಡುವೆ ಅನ್ಯೋನ್ಯತೆ ಇರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ವೃತ್ತಿಯನ್ನು ಬದಲಾಯಿಸುವಿರಿ. ತಾಯಿಗೆ ಅನಾರೋಗ್ಯ ಇರುತ್ತದೆ. ಹಣ ಉಳಿಸುವ ಆಲೋಚನೆ ಮಾಡಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಕಟಕ

ಉದ್ಯೋಗಸ್ಥರಿಗೆ ಉನ್ನತ ಅಧಿಕಾರ ದೊರೆಯುತ್ತದೆ. ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಅವಕಾಶವೊಂದು ದೊರೆಯುತ್ತದೆ. ಭೂವಿವಾದವನ್ನು ಎದುರಿಸಬೇಕಾಗುತ್ತದೆ. ಭೂಮಿ ಕೊಳ್ಳುವ ಮನಸ್ಸು ಮಾಡುವಿರಿ. ವಿದ್ಯಾರ್ಥಿಗಳಿಗೆ ಶುಭಫಲ ದೊರೆಯುತ್ತವೆ. ಪಾಲುಗಾರಿಕೆ ವ್ಯಾಪಾರದಲ್ಲಿನ ವಿವಾದ ಕೊನೆಯಾಗಲಿದೆ. ಜೀವನದ ಆಡ್ಡಿ ಆತಂಕಗಳನ್ನು ದಿಟ್ಟತನದಿಂದ ಎದುರಿಸುವಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬೂದು

ಸಿಂಹ

ಪಾಲುಗಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ಪಡೆಯುವಿರಿ. ಗಣ್ಯವ್ಯಕ್ತಿಯೊಬ್ಬರು ಕುಟುಂಬದ ಆಸ್ತಿಯ ವಿವಾದವನ್ನು ಬಗೆಹರಿಸುತ್ತಾರೆ. ವಿದ್ಯಾರ್ಥಿಗಳಿಗೆ ವಿದೇಶಿ ಆಡಳಿತದ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ಒತ್ತಡವನ್ನು ಉಂಟುಮಾಡುತ್ತದೆ. ಮಹಿಳೆಯರು ಚಿನ್ನ ಬೆಳ್ಳಿ ಒಡವೆಗಳಿಗೆ ಹೆಚ್ಚಿನ ಹಣ ಖರ್ಚುಮಾಡುತ್ತಾರೆ. ಆತುರದಲ್ಲಿ ಮುಖ್ಯವಾದ ಕೆಲಸ ಕಾರ್ಯಗಳನ್ನು ಪೂರೈಸುವಿರಿ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಕಂದು

ಕನ್ಯಾ

ಸಾಲದ ವ್ಯವಹಾರ ಮಾಡಬೇಡಿ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಆಮದು ರಪ್ತು ವ್ಯಾಪಾರದಲ್ಲಿ ಹೇರಳ ಲಾಭ ಗಳಿಸುವಿರಿ. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಥಿತಿಯನ್ನು ಹೊಂದುವ ಅಗತ್ಯವಿದೆ. ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಬಾಳ ಸಂಗಾತಿಯ ಸಹಾಯ ಸಹಕಾರ ದೊರೆಯುತ್ತದೆ. ಪ್ರಸ್ತುತ ಇರುವ ವ್ಯಾಪಾರ ವ್ಯವಹಾರವನ್ನು ಮುಂದುವರಿಸಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಂಡುಬರುವುದು.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು ಉತ್ತರ

ಅದೃಷ್ಟದ ಬಣ್ಣ: ಕಪ್ಪು

ತುಲಾ

ವಿದ್ಯಾರ್ಥಿಗಳು ಕಲಿಕೆಯನ್ನು ಆಟದಂತೆ ಪರಿಗಣಿಸುತ್ತಾರೆ. ಕಾನೂನು ಪಾಲನಾ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಣದ ಕೊರತೆಯನ್ನು ಕಡಿಮೆಮಾಡಲು ಸಣ್ಣಪ್ರಮಾಣದ ವ್ಯಾಪಾರ ಆರಂಭಿಸುವಿರಿ. ಧೈರ್ಯ ಸಾಹಸದ ಗುಣ ನಿಮ್ಮಲ್ಲಿದೆ. ಶಾಂತಿ ಸಂಧಾನದಿಂದ ಕುಟುಂಬದ ಭೂವಿವಾದಕ್ಕೆ ಬಗೆಹರಿಯುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ತಿಳಿ ಹಸಿರು

ವೃಶ್ಚಿಕ

ಕೃಷಿಯಾಧಾರಿತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವರು. ಮನಸ್ಸಿದ್ದರೂ ಉದ್ಯೋಗವನ್ನು ಬದಲಿಸಲು ಸಾಧ್ಯವಾಗದು. ಹಣಕಾಸಿನ ನಿರ್ವಹಣೆಯಲ್ಲಿ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ಅನಗತ್ಯ ವಾದ ವಿವಾದಗಳನ್ನು ಮರೆತು ಕುಟುಂಬದವರೊಂದಿಗೆ ಪ್ರೀತಿಯಿಂದ ವರ್ತಿಸಿ. ದೈಹಿಕ ವ್ಯಾಯಾಮದಿಂದ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನಸು ಗೆಂಪು

ಧನಸ್ಸು

ವ್ಯಾಪಾರ ವ್ಯವಹಾರದಲ್ಲಿ ಲಾಭದಾಯಕ ಬೆಳವಣಿಗೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಕಲಿಕಾ ಅವಧಿಯಲ್ಲೇ ಉದ್ಯೋಗ ದೊರೆಯುತ್ತದೆ. ಕಷ್ಟದ ಸಮಯದಲ್ಲಿ ಸೋದರಿಯ ಆಸರೆ ದೊರೆಯುತ್ತದೆ. ಸಂತಾನ ಲಾಭವಿದೆ. ರಕ್ತ ದೋಷದ ತೊಂದರೆ ಇರುತ್ತದೆ. ಕೋಪ ಬಂದಷ್ಟೇ ಬೇಗ ಮರೆಯಾಗುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಧಾರ್ಮಿಕ ಕೇಂದ್ರಕ್ಕೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಹಣೆಯಲ್ಲಿ ತಿಲಕ ಧರಿಸಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಮಕರ

ವ್ಯಾಪಾರ ವ್ಯವಹಾರದಲ್ಲಿ ಆದಾಯಕ್ಕೆ ತಕ್ಕಂತಹ ಖರ್ಚು ಎದುರಾಗುತ್ತದೆ. ವಿದ್ಯಾರ್ಥಿಗಳು ನೆಮ್ಮದಿಯಿಂದ ಕಾಲ ಕಳೆಯಲಿದ್ದಾರೆ. ಕೇವಲ ಪ್ರಯೋಜನಕಾರಿ ಕೆಲಸಗಳನ್ನು ಮಾತ್ರ ಆಯ್ದುಕೊಳ್ಳುವಿರಿ. ಉದ್ಯೋಗ ಬದಲಿಸುವ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸಿ. ವಂಶದ ಆಸ್ತಿಯ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವಿರಿ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಕುಂಭ

ವ್ಯಾಪಾರ ವ್ಯವಹಾರದಲ್ಲಿ ಎಲ್ಲರನ್ನೂ ಅನುಮಾನಿಸುವಿರಿ. ವಿದ್ಯಾರ್ಥಿಗಳು ಮಾತು ಕಡಿಮೆ ಮಾಡಿ ಕೆಲಸವನ್ನು ಹೆಚ್ಚು ಮಾಡುವರು. ಹಣಕಾಸಿನ ವಿಚಾರದಲ್ಲಿ ಸ್ವಂತ ನಿರ್ಧಾರದ ಮೇಲೆ ನಂಬಿಕೆ ಇರುತ್ತದೆ. ವಂಶದಲ್ಲೇ ವಿಶೇಷ ಸ್ಥಾನ ಮಾನ ದೊರೆಯುತ್ತದೆ. ಪಾಲುದಾರಿಕೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಾಲದ ವ್ಯವಹಾರ ಒಳ್ಳೆಯದಲ್ಲ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಬೂದು ಬಣ್ಣ

ಮೀನ

ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಗಳಿಸುತ್ತಾರೆ. ಸಂಗಾತಿಯು ಹಳೆಯ ಕೌಟುಂಬಿಕ ವಿವಾದಕ್ಕೆ ಪರಿಹಾರ ಸೂಚಿಸುತ್ತಾರೆ. ವಿದ್ಯಾರ್ಥಿಗಳು ಅಧ್ಕಯನದಲ್ಲಿ ಉನ್ನತ ಮಟ್ಟಕ್ಕೆ ತಲುಪುತ್ತಾರೆ. ದಂಪತಿ ನಡುವೆ ವಿರಸವಿರುತ್ತದೆ. ಧಾರ್ಮಿಕ ಕೇಂದ್ರ ಅಥವಾ ಅಧ್ಯಯನ ಕೇಂದ್ರಗಳ ಒಡೆತನ ಲಭಿಸುತ್ತದೆ. ಇಷ್ಟಪಡುವ ಒಡವೆ ಮತ್ತು ವಸ್ತ್ರಗಳಿಗಾಗಿ ಹೆಚ್ಚಿನ ಹಣ ಖರ್ಚುಮಾಡುವಿರಿ. ಎಲ್ಲರ ಸಹಕಾರದಿಂದ ದಿನದ ಕೆಲಸವನ್ನು ಆರಂಭಿಸುವಿರಿ. ತಲೆನೋವಿನ ತೂಂದರೆ ಕಾಡಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಆಕಾಶ ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.