ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಅನಿರೀಕ್ಷಿತ ಧನ ಲಾಭ, ಒಡಹುಟ್ಟಿದವರ ನಡುವೆ ಉತ್ತಮ ಬಾಂಧವ್ಯ; ನಾಳೆಯ ದಿನ ಭವಿಷ್ಯ

Tomorrow Horoscope: ಅನಿರೀಕ್ಷಿತ ಧನ ಲಾಭ, ಒಡಹುಟ್ಟಿದವರ ನಡುವೆ ಉತ್ತಮ ಬಾಂಧವ್ಯ; ನಾಳೆಯ ದಿನ ಭವಿಷ್ಯ

1st May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (1st May 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ : ಅಷ್ಟಮಿ ರಾತ್ರಿ 12.44 ರವರೆಗೂ ಇದ್ದು ಆನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ : ಶ್ರವಣ ನಕ್ಷತ್ರವು ರಾತ್ರಿ 12.17 ರವರೆಗೂ ಇದ್ದು ನಂತರ ಧನಿಷ್ಠ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.59

ಸೂರ್ಯಾಸ್ತ: ಸಂಜೆ 06.34

ರಾಹುಕಾಲ: 12.20 ರಿಂದ 01.54

ರಾಶಿಫಲ

ಮೇಷ

 ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಉದ್ಯೋಗದಲ್ಲಿ ಆತ್ಮೀಯರ ಮಾರ್ಗದರ್ಶನದಿಂದ ಉತ್ತಮ ಯಶಸ್ಸನ್ನು ಗಳಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿರುತ್ತದೆ. ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನುಕಾಣುವಿರಿ. ವಿದ್ಯಾರ್ಥಿಗಳ ನಿರೀಕ್ಷೆಗಳು ಹುಸಿಯಾಗದು.  

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ತಿಳಿ ಹಸಿರು

ವೃಷಭ

 ಉತ್ತಮ ಆದಾಯವಿರುತ್ತದೆ. ಮಿತಿ ಮೀರಿದ ಖರ್ಚು ವೆಚ್ಚಗಳಿಂದ ಹಣದ ಕೊರತೆ ಎದುರಾಗುತ್ತವೆ. ಅವಶ್ಯಕತೆ ಇದ್ದಲ್ಲಿ ತಾಯಿಯವರು ಹಣದ ಸಹಾಯ ಮಾಡುತ್ತಾರೆ. ಹೆಚ್ಚಿನ ಪ್ರಯತ್ನದಿಂದ ಸ್ವಂತ ಮನೆಯ ಕನಸು ನನಸಾಗಲಿದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ಕರ್ತವ್ಯ ಪಾಲನೆಯಲ್ಲಿ ನಿರತರಾಗುತ್ತಾರೆ. ತಾಯಿಯವರಿಗೆ ತವರಿನ ಹಣದಲ್ಲಿ ಪಾಲು ದೊರೆಯುತ್ತದೆ.  

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ 4

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ನಸುಕೆಂಪು

ಮಿಥುನ

 ಅನಿರೀಕ್ಷಿತ ಧನಲಾಭವಿರುತ್ತದೆ. ಕೆಲಸ ಕಾರ್ಯಗಳ ವೈಖರಿಯನ್ನು ಪದೇ ಪದೇ ಬದಲಿಸದಿರಿ. ಸೋದರ ಸೋದರಿಯ ಒಡನೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ವಿದ್ಯಾರ್ಥಿಗಳು ಕಷ್ಟ ಪಟ್ಟು ತಮ್ಮ ಗುರಿ ತಲುಪುತ್ತಾರೆ . ಉದ್ಯೋಗದಲ್ಲಿ ಬಗೆ ಹರಿಹದ ಕಾರ್ಯದ ಒತ್ತಡ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಆದಾಯ ಗಳಿಸುವಿರಿ.  

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಕಟಕ

 ಹಣಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ ಒಮ್ಮತದ ನಿಲುವು ಉಂಟಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಉತ್ತಮ ಸಹಕಾರ ದೊರೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಬಂಡವಾಳದ ಕೊರತೆ ಇರುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ತಂದೆಯ ಆರೋಗ್ಯದಲ್ಲಿನ ತೊಂದರೆ ಮರೆಯಾಗಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ.  

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ

ಸಿಂಹ

  ಜಗಳದಿಂದ ದೂರ ಉಳಿದು ಎಲ್ಲರೊಂದಿಗೆ ಸಮಾಧಾನದಿಂದ ಬಾಳುವಿರಿ. ಮೃದುವಾದ ಮಾತುಕತೆಯಿಂದಲೇ ಎದುರಾಗುವ ತೊಂದರೆಗಳನ್ನು ಗೆಲ್ಲುವಿರಿ. ಸೋದರರ ನಡುವೆ ಹಣದ ವಿಚಾರವಾಗಿ ವಿವಾದಗಳು ಇರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ವಾದದಲ್ಲಿ ತೊಡಗುವಿರಿ. ಮನದ ಬೇಸರ ಕಳೆಯಲು ದೂರದ ಪ್ರದೇಶಕ್ಕೆ ಪ್ರವಾಸ ಮಾಡುವಿರಿ. 

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 5

ಅದೃಷ್ಟದ ದಿಕ್ಕು ನೈರುತ್ಯ

ಅದೃಷ್ಟದ ಬಣ್ಣ : ಬೂದು

ಕನ್ಯಾ

  ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು. ಬುದ್ದಿವಂತಿಕೆಯಿಂದ ನಿಮ್ಮಿಂದ ಸಹಾಯ ಪಡೆಯುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಅಹಿತಕರ ವಾತಾವರಣ ಉಂಟಾಗದು. ಪ್ರಯತ್ನಪಟ್ಟಲ್ಲಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಬಹುದು. ವ್ಯಾಪಾರ ವ್ಯವಹಾರಗಳು ಮಧ್ಯಮ ಮಟ್ಟದಲ್ಲಿ ಸಾಗುತ್ತವೆ. ಅಶಕ್ತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವಿರಿ.  

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಆಕಾಶ ನೀಲಿ

ತುಲಾ

 ತಾಯಿಯವರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ವಿದ್ಯಾರ್ಥಿಗಳು ಒತ್ತಡದಿಂದ ಹೊರಬಂದು ಕ್ರೀಡೆ ಮನರಂಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಷ್ಟ ನಷ್ಟಗಳಿಗೆ ಹೆದರದ ಮನಸ್ಥಿತಿ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ವ್ಯವಸಾಯ ಮತ್ತು ಪಶು ಸಂಗೋಪನೆಯಲ್ಲಿ ಆಸಕ್ತಿ ಮೂಡಲಿದೆ.  

ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ವೃಶ್ಚಿಕ

ನಿಮ್ಮ ಪ್ರಯತ್ನದಿಂದಾಗಿ ಕುಟುಂಬದಲ್ಲಿ ಸಂತೋಷ ನೆಮ್ಮದಿ ತುಂಬಿರುತ್ತದೆ. ಮುಂಗೋಪಿಗಳು. ಆದರೆ ಕೋಪದಲ್ಲಿಯೂ ತಪ್ಪು ಮಾಡುವುದಿಲ್ಲ. ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆ ಎದುರಾಗದು. ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಮರೆತು ವಿಶ್ರಾಂತಿಗೆ ಸಾಗುತ್ತಾರೆ. ಸಂಗಾತಿಯೊಂದಿಗೆ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.  

ಪರಿಹಾರ : ಬೆಳ್ಳಿ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೇಸರಿ

ಧನಸ್ಸು

ಸುಲಭವಾಗಿ ಸೋಲನ್ನು ಒಪ್ಪದೆ ಸತತ ಪ್ರಯತ್ನದಿಂದ ಯಶಸ್ಸು ಗಳಿಸುವಿರಿ. ಹಿರಿಯ ಸಹೋದರರಿಂದ ಹಣದ ಸಹಾಯ ದೊರೆಯುವುದು. ಕುಟುಂಬದಲ್ಲಿ ಮಕ್ಕಳ ಕಾರಣ ವಾದ ವಿವಾದ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ನಿರೀಕ್ಷಿಸಿದ ಫಲಿತಾಂಶ ಬರದು. ವ್ಯಾಪಾರ ವ್ಯವಹಾರಗಳು ನಿಮ್ಮ ಇಚ್ಛೆಯಂತೆಯೇ ನಡೆಯುತ್ತದೆ. 

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ

ಮಕರ

ಅನಿವಾರ್ಯವಾಗಿ ವಾಸವಿರುವ ಮನೆಯನ್ನು ಬದಲಾಯಿಸುವಿರಿ. ಸಮರ್ಪಣಾ ಮನೋಭಾವನೆಯಿಂದ ಉದ್ಯೋಗದಲ್ಲಿ ಉತ್ತಮ ಹೆಸರನ್ನು ಗಳಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರವು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಯಶಸ್ಸಿನತ್ತ ನಡೆಯುತ್ತಾರೆ. ಕೈಲಿರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ.  

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ಕುಂಭ

 ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಅನುಕೂಲ ದೊರೆಯುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರದು. ಜೀವನದಲ್ಲಿ ಎದುರಾಗುವ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ವಿದ್ಯಾರ್ಥಿಗಳಿಗೆ ಹಿನ್ನಡೆ ಲಭಿಸದು. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಕ್ರಮೇಣ ಉತ್ತಮ ಆದಾಯ ದೊರೆಯುತ್ತದೆ. ಕೃಷಿಕರಿಗೆ ಉತ್ತಮ ಹಣ ಗಳಿಕೆ ಇರುತ್ತದೆ.  

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಿತ್ತಳೆ

ಮೀನ

 ಆದಾಯಕ್ಕೆ ಕೊರತೆ ಇರದು. ಆದರೆ ಸರಿ ಸಮವಾದ ಖರ್ಚು ವೆಚ್ಚಗಳು ಸದಾ ಇರುತ್ತವೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಇರಲಿದೆ. ಮಕ್ಕಳಿಗೆ ಅಧಿಕಾರ ಯೋಗ ಪ್ರಾಪ್ತಿ ಇದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಅಧಿಕಾರಿಯಾಗಿ ಬಡ್ತಿ ಪಡೆಯಬಹುದು. ಸ್ವಂತ ವ್ಯಾಪಾರ ವ್ಯವಹಾರಗಳು ಮಧ್ಯಮ ಮಟ್ಟದಲ್ಲಿ ಲಾಭಗಳಿಸುತ್ತವೆ. ವಿದ್ಯಾರ್ಥಿಗಳು ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. 

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).