ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕವಿಗಳು, ಲೇಖಕರಿಗೆ ಉನ್ನತ ಗೌರವ, ಕೋಪ ಕಡಿಮೆ ಮಾಡಿಕೊಂಡರೆ ಕೆಲಸದಲ್ಲಿ ಯಶಸ್ಸು; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

ಕವಿಗಳು, ಲೇಖಕರಿಗೆ ಉನ್ನತ ಗೌರವ, ಕೋಪ ಕಡಿಮೆ ಮಾಡಿಕೊಂಡರೆ ಕೆಲಸದಲ್ಲಿ ಯಶಸ್ಸು; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

20th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಕವಿಗಳು, ಲೇಖಕರಿಗೆ ಉನ್ನತ ಗೌರವ, ಕೋಪ ಕಡಿಮೆ ಮಾಡಿಕೊಂಡರೆ ಕೆಲಸದಲ್ಲಿ ಯಶಸ್ಸು; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ
ಕವಿಗಳು, ಲೇಖಕರಿಗೆ ಉನ್ನತ ಗೌರವ, ಕೋಪ ಕಡಿಮೆ ಮಾಡಿಕೊಂಡರೆ ಕೆಲಸದಲ್ಲಿ ಯಶಸ್ಸು; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (20th June 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ: ತ್ರಯೋದಶಿ ಬೆಳಗ್ಗೆ 06.13 ರವರೆಗೂ ಇದ್ದು ನಂತರ ಚತುರ್ದಶಿ ತಿಥಿ ಇರುತ್ತದೆ.

ನಕ್ಷತ್ರ : ಅನೂರಾಧ ನಕ್ಷತ್ರವು ಸಂಜೆ 05.22 ರವರೆಗೆ ಇದ್ದು ನಂತರ ಜ್ಯೇಷ್ಠ ನಕ್ಷತ್ರ ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.53

ಸೂರ್ಯಾಸ್ತ: ಸಂಜೆ 06.48

ರಾಹುಕಾಲ: 02.01 ರಿಂದ 03.37

ರಾಶಿಫಲ

ಮೇಷ

ದುಡುಕಿ ಖರ್ಚು ಮಾಡಿ ನಂತರ ಚಿಂತೆಗೆ ಒಳಗಾಗುವಿರಿ. ಬದಲಾಗುವ ವಾತಾವರಣದ ಕಾರಣ ಅನಾರೋಗ್ಯವಿರುತ್ತದೆ. ಸರ್ಕಾರಿ ನೌಕರರಿಗೆ ಶುಭಸುದ್ದಿಯೊಂದು ಬರಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಉದ್ಯೋಗದಲ್ಲಿ ತಪ್ಪು ಮಾಡುವ ಸಾಧ್ಯತೆ ಇರುತ್ತದೆ. ಆದಾಯಕ್ಕೆ ಸಮನಾದ ಖರ್ಚು ವೆಚ್ಚಗಳಿರುತ್ತವೆ. ಪ್ರಯೋಜನವಿಲ್ಲದ ಓಡಾಟ ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬೂದು

ವೃಷಭ

ಮಾತಿನಲ್ಲಿ ಎಲ್ಲರ ಮನ ಗೆಲ್ಲುವ ಚತುರತೆ ಇರುತ್ತದೆ. ಕಷ್ಟವಲ್ಲದ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಿರಿ. ಇರುವ ಉದ್ಯೋಗದಲ್ಲಿ ಅನಾವಶ್ಯಕ ವಿವಾದಗಳು ಎದುರಾಗುತ್ತದೆ. ಸಂಗಾತಿಯ ಚಿನ್ನಾಭರಣಗಳಿಗೆ ಹಣ ಖರ್ಚು ಮಾಡುವಿರಿ. ಕಾನೂನು ಪ್ರಕ್ರಿಯೆಯಲ್ಲಿ ಯಶಸ್ಸು ಗಳಿಸುವಿರಿ ಹಣಕಾಸಿನ ವ್ಯವಹಾರದಲ್ಲಿ ಲಾಭವಿದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಆಕಾಶ ನೀಲಿ

ಮಿಥುನ

ವೃತ್ತಿಯ ವಿಚಾರಲ್ಲಿ ಗಲಿಬಿಲಿ ಇರುತ್ತದೆ. ದೀರ್ಘಕಾಲದಿಂದ ಕಾಡುತ್ತಿರುವ ಆನಾರೋಗ್ಯದ ತೊಂದರೆ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳು ಆತುರದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಗುರುಗಳ ಮಾರ್ಗದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ವಿಶ್ರಾಂತಿಯ ಕೊರತೆ ಇರುತ್ತದೆ. ಸಂಗಾತಿ ಜೊತೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ನೀರಿರುವ ಪ್ರದೇಶದಲ್ಲಿ ತೊಂದರೆ ಇರುತ್ತದೆ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೆಂಪು

ಕಟಕ

ಸಾರ್ವಜನಿಕ ಜೀವನದಲ್ಲಿ ನಿಮಗೆ ಉನ್ನತ ಗೌರವ ಲಭಿಸುತ್ತದೆ. ಯಾರನ್ನೂ ನಂಬದೆ ಏಕಾಂಗಿಯಾಗಿ ಕೆಲಸ ಕಾರ್ಯಗಳಲ್ಲಿ ಮಗ್ನರಾಗುವಿರಿ. ವ್ಯಾಪಾರದಲ್ಲಿ ಆಸಕ್ತಿ ಇರುವುದಿಲ್ಲ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಮಧ್ಯವರ್ತಿಗಳಿಂದ ತೊಂದರೆ ಉಂಟಾಗಬಹುದು. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸ ಆರಂಭಿಸಲಿದ್ದೀರಿ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಎಲೆ ಹಸಿರು

ಸಿಂಹ

ಆಧುನಿಕತೆಯ ಸೋಗಿಗೆ ಮರುಳಾಗುವಿರಿ. ವಂಶದಲ್ಲಿನ ಹಿರಿಯನ ಸ್ಥಾನ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಅಧಿಕಾರಿಗೆ ಸಮನಾದ ಸ್ಥಾನ ದೊರೆಯುತ್ತದೆ. ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮಕ್ಕಳಿಗೆ ವಿದೇಶಿ ಸಹಭಾಗಿತ್ವದ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ನಿಮ್ಮ ನಿಷ್ಠುರದ ಮಾತುಗಳಿಂದ ವಿವಾದವೊಂದು ಎದುರಾಗುತ್ತದೆ. ರಕ್ತ ದೋಷವುಳ್ಳವರು ಎಚ್ಚರಿಕೆ ವಹಿಸಿ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ :4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕೇಸರಿ

ಕನ್ಯಾ

ಏಕಾಗ್ರತೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಒಳ್ಳೆಯದು. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಯೋಗದ ಮೊರೆ ಹೋಗುವಿರಿ. ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಪ್ರೀತಿ ವಿಶ್ವಾಸದಿಂದ ಮಕ್ಕಳ ಮನ ಗೆಲ್ಲುವಿರಿ. ನಿಮ್ಮ ತಪ್ಪನ್ನು ಮರೆಮಾಚಿ ಬೇರೆಯವರ ತಪ್ಪನ್ನು ಟೀಕಿಸುವಿರಿ. ಕೆಲಸಕ್ಕಿಂತಲೂ ಮಾತು ಹೆಚ್ಚಾಗುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಕಂಡು ಬರಲಿವೆ.

 ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ :7

ಅಷ್ಟದ ದಿಕ್ಕು ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ತುಲಾ

ಹೊಸ ಅವಕಾಶಗಳನ್ನು ಎದುರು ನೋಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಬಂದು ಬಳಗದವರ ಸಹಾಯ ಸಹಕಾರ ದೊರೆಯುತ್ತದೆ. ಆತಂಕವಿದ್ದರೂ ವಿಧ್ಯಾಭ್ಯಾಸದಲ್ಲಿ ಸದಾ ಮುಂದಿರುವಿರಿ. ಆತ್ಮೀಯರ ಭೂವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸುವಿರಿ. ಕವಿಗಳು ಮತ್ತು ಲೇಖಕರಿಗೆ ಉನ್ನತ ಗೌರವ ದೊರೆಯುತ್ತದೆ. ಧಾರ್ಮಿಕ ಯಾತ್ರೆ ಮಾಡುವವರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ವೃಶ್ಚಿಕ

ನಿರೀಕ್ಷೆಗೂ ಮೀರಿದ ಖರ್ಚು ಆತಂಕವನ್ನು ಸೃಷ್ಠಿಸುತ್ತದೆ. ಅಜೀರ್ಣದ ತೊಂದರೆ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಮುಂಗೋಪ ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ನವ ದಂಪತಿಗಳಿಗೆ ಶುಭಸುದ್ಧಿಯೊಂದು ಬರಲಿದೆ. ಹೊಸ ವ್ಯಾಪಾರ ವಹಿವಾಟನ್ನು ಆರಂಭಿಸಲು ಕಾರ್ಯ ಯೋಜನೆ ರೂಪಿಸುವಿರಿ.

ಪರಿಹಾರ : ಹಣೆಯಲ್ಲಿ ತಿಲಕ ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಧನಸ್ಸು

ಶಾಂತಿ ಸೌಹಾರ್ದದಿಂದ ಕುಟುಂಬದ ವಿವಾದವೊಂದು ಸುಖಾಂತ್ಯಗೊಳ್ಳುತ್ತದೆ. ಭೂವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ಗಳಿಸುವಿರಿ. ಯಂತ್ರೋಪಕರಣಗಳಿಂದ ತೊಂದರೆ ಆಗಬಹುದು ನೆನಪಿರಲಿ. ವ್ಯಾಪಾರದಲ್ಲಿ ಸಾಧಾರಣ ಪ್ರಗತಿ ಕಂಡುಬರುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಕಾರಣ ಸಮಸ್ಯೆಗಳು ಕಡಿಮೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಮಕರ

ಹಣದ ವಿವಾದಕ್ಕೆ ಮಾತುಕತೆಯಿಂದ ಅಂತ್ಯ ಹಾಡುವಿರಿ. ಬುದ್ಧಿವಾದ ಹೇಳಲು ಹೋದರೆ ವಿವಾದಕ್ಕೆ ಒಳಗಾಗುವಿರಿ. ಕಾರ್ಮಿಕ ವೃಂದಕ್ಕೆ ವೇತನದ ಸಮಸ್ಯೆ ಬಗೆಹರಿಯುತ್ತದೆ. ವಿದ್ಯಾರ್ಥಿಗಳು ಸಹನೆಯಿಂದ ತಮ್ಮ ಗುರಿ ತಲುಪುತ್ತಾರೆ. ಜನರ ಶ್ರೇಯೋಭಿವೃದ್ಧಿಗಾಗಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಗೃಹಿಣಿಯರಿಗೆ ಹಾರ್ಮೋನಿನ ತೊಂದರೆಇರುತ್ತದೆ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಸಿರು

ಕುಂಭ

ನಿಮ್ಮ ಕಲ್ಪನೆಗೆ ಎಲ್ಲರ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಗುತ್ತದೆ. ಮಾನಸಿಕ ವಿಶ್ರಾಂತಿಗಾಗಿ ಏಕಾಂಗಿಯಾಗಿ ದಿನ ಕಳೆಯುವಿರಿ. ಯಾರ ಅರಿವಿಗೂ ಬಾರಂತೆ ಹಣ ಉಳಿತಾಯ ಮಾಡುವಿರಿ. ಕುಟುಂಬದಲ್ಲಿ ನಿಮ್ಮ ತೀರ್ಮಾನಗಳಿಗೆ ಮನ್ನಣೆ ದೊರೆಯುವುದಿಲ್ಲ. ಮಕ್ಕಳ ಕೆಲಸದ ಬಗ್ಗೆ ಅಸಮಾಧಾನ ಇರುತ್ತದೆ. ಉದ್ಯೋಗ ಅರಸಿ ವಿದೇಶಕ್ಕೆ ತೆರಳುವಿರಿ. ವಿದೇಶೀ ಭಾಷೆಯನ್ನು ಕಲಿಯುವ ಆಸೆ ತೋರುವಿರಿ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಕಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 6

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಮೀನ

ದೊರೆಯುವ ಆದಾಯದಲ್ಲೇ ಸಂತೃಪ್ತಿಯ ಜೀವನ ನಡೆಸುವಿರಿ. ಕುಟುಂಬದಲ್ಲಿರುವ ಹೆಣ್ಣು ಮಕ್ಕಳ ಜೀವನದಲ್ಲಿ ವಿಶೇಷ ಬದಲಾವಣೆಗಳು ಕಾಣಲಿವೆ. ಸಂಗಾತಿಯನ್ನು ವಿಶೇಷ ಪ್ರೀತಿಯಿಂದ ಕಾಣುವಿರಿ. ಅನಿರೀಕ್ಷಿತ ಧನಲಾಭವಿದೆ. ನೆರೆಹೊರೆಯವರ ನಡುವೆ ಅನಗತ್ಯ ವಾದ ವಿವಾದ ಇರುತ್ತವೆ. ಆಡುವ ಮಾತು ಕಡಿಮೆಯಾದರೂ ಅದರಲ್ಲಿ ವಿಶೇಷ ಅರ್ಥ ಕೂಡಿರುತ್ತದೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 9

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.