ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಹೆಚ್ಚುವುದು, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಹೆಚ್ಚುವುದು, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

22nd June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಹೆಚ್ಚುವುದು, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ
ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಹೆಚ್ಚುವುದು, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (22nd June 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶನಿವಾರ

ತಿಥಿ: ಹುಣ್ಣಿಮೆ ಬೆಳಗ್ಗೆ 06.16 ವರೆಗೂ ಇದ್ದು ಉಪರಿ ಪಾಡ್ಯ ಇರುತ್ತದೆ.

ನಕ್ಷತ್ರ : ಮೂಲ ನಕ್ಷತ್ರವು ಸಂಜೆ 06.23 ರವರೆಗೆ ಇದ್ದು ನಂತರ ಪೂರ್ವಾಷಢ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.53

ಸೂರ್ಯಾಸ್ತ: ಸಂಜೆ 06.48

ರಾಹುಕಾಲ: ಬೆಳಗ್ಗೆ 09.13 ರಿಂದ 10.49

ಮೇಷ

ಕುಟುಂಬಕ್ಕೆ ಹೊಸ ಅತಿಥಿಗಳ ಆಗಮನವಾಗುತ್ತದೆ. ಹಣ ಉಳಿಸಲು ಸಾಧ್ಯವಾಗುವುದಿಲ್ಲ. ಗೃಹೋಪಯೋಗಿ ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ನಿಮ್ಮ ಮಕ್ಕಳು ದುಂದು ವೆಚ್ಚ ಮಾಡುತ್ತಾರೆ. ಸಮಾಜದಲ್ಲಿ ಉನ್ನತ ಗೌರವ ಗಳಿಸುವಿರಿ. ಅಧಿಕಾರಿಗಳಿಗೆ ತಮ್ಮ ಕಾರ್ಮಿಕ ವರ್ಗದಿಂದ ವಿಶೇಷ ಅನುಕೂಲತೆ ದೊರೆಯಲಿದೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೆಂಪು

ವೃಷಭ

ಅಪಜಯಗಳಿಗೆ ಹೆದರದೆ ಮುಂದುವರೆಯುವಿರಿ. ಬೇರೆಯವರ ಗೆಲುವಿನ ಬಗ್ಗೆ ಹಗುರವಾಗಿ ಮಾತನಾಡುವಿರಿ. ವಾಹನ ಚಾಲನೆ ಮಾಡುವುದು ವೇಳೆ ಎಚ್ಚರಿಕೆ ಇರಲಿ. ಯಾರೊಬ್ಬರ ಬುದ್ಧಿ ಮಾತನ್ನು ಕೇಳುವುದಿಲ್ಲ. ಪ್ರತಿಯೊಂದು ವಿಚಾರಗಳಲ್ಲಿಯೂ ನಿಮಗೆ ಸರಿ ಎನಿಸಿದಂತಹ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಶಾಂತವಾಗಿ ಕಂಡರೂ ಕೋಪಗೊಂಡಾಗ ಉದ್ವೇಗದಿಂದ ವರ್ತಿಸುವಿರಿ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಎಲೆ ಹಸಿರು

ಮಿಥುನ

ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಕೌಶಲ್ಯ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ಬೇರೆಯವರಿಗೆ ಬೇಸರ ಉಂಟಾಗುವಂತೆ ಮಾತನಾಡುವಿರಿ. ವಿದೇಶ ಪ್ರಯಾಣ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಉಂಟಾಗಿದ್ದ ವಿರೋಧ ಕೊನೆಗೊಳ್ಳುತ್ತದೆ. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಕಟಕ

ಮಕ್ಕಳ ಬಗ್ಗೆ ಯೋಚನೆ ಇರುತ್ತದೆ. ನಿಮ್ಮ ಸಂಗಾತಿಯು ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ವಿಶೇಷ ಜ್ಞಾನವಿರುತ್ತದೆ. ನಿಮಗೆ ಅರಿವಿಲ್ಲದಂತೆ ಜನಪ್ರಿಯತೆಯ ತುತ್ತತುದಿಯಲ್ಲಿರುವಿರಿ. ಮಕ್ಕಳು ಬೇರೆಯವರನ್ನು ಆಶ್ರಯಿಸದೆ ತಮ್ಮ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಸಣ್ಣವಿಚಾರವಾದರೂ ದೊಡ್ಡದಾಗಿ ಪ್ರತಿಬಿಂಬಿಸುವಿರಿ. ಅತಿಯಾದ ಖರ್ಚಿನಿಂದಾಗಿ ನೆಮ್ಮದಿ ಕೆಡುತ್ತದೆ. ಆದಾಯಕ್ಕಿಂತಲೂ ಹೆಚ್ಚು ಖರ್ಚು ವೆಚ್ಚ ಅಧಿಕವಾಗಿರುತ್ತದೆ

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಸಿಂಹ

ಸಂಕುಚಿತ ಮನಸ್ಸಿರುತ್ತದೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಕೈ ಕಾಲುಗಳಲ್ಲಿ ನಿತ್ರಾಣ ಉಂಟಾಗುತ್ತದೆ. ಯೋಗ ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಆತ್ಮೀಯರು ಹಣದ ಸಹಾಯ ಮಾಡುವರು. ಹಣಕಾಸಿನ ವಿಚಾರದಲ್ಲಿ ದುರಾಸೆ ಇರುತ್ತದೆ. ಗುರು ಹಿರಿಯರ ಸಲಹೆ ಪಾಲಿಸಿದರೆ ತೊಂದರೆ ದೂರವಾಗುತ್ತವೆ. ವಾಹನ ಕೊಳ್ಳುವ ಸೂಚನೆಗಳಿವೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಕೆಂಪು ಬಣ್ಣ

ಕನ್ಯಾ

ಸಮಸ್ಯೆಗಳು ಎದುರಾದಾಗ ಭಯ ಪಡದೆ ಪರಿಹಾರ ಕಂಡುಹಿಡಿಯುವಿರಿ. ಹಣದ ತೊಂದರೆ ಕಡಿಮೆಯಾಗುತ್ತದೆ. ಮನೆಯನ್ನು ಅಲಂಕರಿಸಲು ಆಕರ್ಷಕ ವಸ್ತುಗಳನ್ನು ಕೊಳ್ಳುವಿರಿ. ಮಕ್ಕಳು ಹೆಮ್ಮೆಪಡುವ ಕೆಲಸ ಮಾಡುತ್ತಾರೆ. ಕುಟುಂಬದ ಹಿರಿಯರಿಗೆ ಅನಾರೋಗ್ಯವಿರುತ್ತದೆ. ಯಾರನ್ನೂ ಲೆಕ್ಕಿಸದೆ ಮನದಲ್ಲಿರುವ ವಿಚಾರಗಳನ್ನು ತಿಳಿಸುವಿರಿ. ಪ್ರಯತ್ನಪೂರ್ವಕವಾಗಿ ಉದ್ಯೋಗವನ್ನು ಬದಲಿಸುವ ಸಾಧ್ಯತೆಗಳಿವೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ :11

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ : ಹಳದಿ ಬಣ್ಣ

ತುಲಾ

ಸಂಬಂಧಿಕರಿಂದ ಯಾವುದೇ ಸಹಾಯ ದೊರೆಯುವುದಿಲ್ಲ. ಹೊಸ ಮನೆ ಅಥವಾ ಭೂಮಿಯನ್ನು ಕೊಳ್ಳುವ ಮಾತುಕತೆ ನಡೆಯುತ್ತದೆ. ತಂದೆ ತಾಯಿಯ ಬಗ್ಗೆ ವಿಶೇಷ ಪ್ರೀತಿ ಮತ್ತು ಗೌರವ ತೋರುವಿರಿ. ದಾನ ಧರ್ಮದ ಕೆಲಸವನ್ನು ಮಾಡುವಲ್ಲಿ ಸಂತೋಷ ಕಾಣುವಿರಿ. ಸ್ವಯಂಪ್ರೇರಣೆಯಿಂದ ಆತ್ಮೀಯರಿಗೆ ಸಹಾಯ ಮಾಡುವಿರಿ ಕುಟುಂಬದ ಅತಿಮುಖ್ಯ ವಿಚಾರಗಳನ್ನು ರಹಸ್ಯವಾಗಿ ಇಡುವಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಹಸಿರು

ವೃಶ್ಚಿಕ

ಸಮಾಜದಲ್ಲಿ ನಿಮ್ಮ ನಡವಳಿಕೆಗೆ ಎಲ್ಲರ ಪ್ರಶಂಸೆ ದೊರೆಯುತ್ತದೆ. ಸಮಸ್ಯೆಗಳು ಜೀವನದಲ್ಲಿ ಎದುರಾದಾಗ ಗೆಲ್ಲುವ ಛಲವನ್ನು ತೋರುವಿರಿ. ತಂದೆ ತಾಯಿಯ ಜೊತೆ ಅನಾವಶ್ಯಕವಾಗಿ ಮನಸ್ತಾಪ ಉಂಟಾಗುತ್ತದೆ. ತಂದೆಯಿಂದ ನಿಮಗೆ ಯಾವುದೇ ರೀತಿಯ ಅನುಕೂಲತೆ ದೊರೆಯುವುದಿಲ್ಲ. ಎಲ್ಲರೂ ಮೆಚ್ಚುವಂಥ ಜನೋಪಕಾರಿ ಕೆಲಸಗಳನ್ನು ಮಾಡುವಿರಿ. ಚಿಕ್ಕ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ

ಧನಸ್ಸು

ಅವಶ್ಯಕತೆ ಇರುವಷ್ಟು ಹಣ ಸಂಪಾದಿಸುವ ಸಾಮರ್ಥ್ಯ ನಿಮಗಿರುತ್ತದೆ. ಮನೆಯ ಹೊರಗೂ ಒಳಗೂ ಒಳ್ಳೆ ಹೆಸರು ಗಳಿಸುವಿರಿ. ಅತಿಯಾದ ಕೋಪವಿರುತ್ತದೆ. ಆದರೆ ಅದರಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ. ಕುಟುಂಬದಲ್ಲಿ ಸುಖ ಸಂತೋಷ ಮನೆ ಮಾಡಿರುತ್ತದೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ಅಶಕ್ತ ವಯೋವೃದ್ಧರ ಬಗ್ಗೆ ಕನಿಕರ ವಿರುತ್ತದೆ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮಕರ

ನಿಮ್ಮಉನ್ನತಿಗೆ ಸಹೋದ್ಯೋಗಿಗಳಿಂದ ಅಡ್ಡಿ ಉಂಟಾಗುತ್ತದೆ. ಎದುರಾಗುವ ಆಪತ್ತನ್ನು ಬುದ್ಧಿವಂತಿಕೆಯಿಂದ ಗೆಲ್ಲುವಿರಿ. ನಿಮ್ಮಲ್ಲಿರುವ ಒಳ್ಳೆಯ ಗುಣ ನಡತೆಯನ್ನು ಎಲ್ಲರೂ ಮೆಚ್ಚುತ್ತಾರೆ. ಸಂಗಾತಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ತಂದೆಯ ಕೆಲಸ ಕಾರ್ಯದಲ್ಲಿನ ಅಡ್ಡಿ ಆತಂಕ ದೂರವಾಗುತ್ತದೆ. ಯಾವುದೇ ವಿಚಾರವನ್ನು ಮರೆಮಾಚದೆ ಸತ್ಯವನ್ನು ನುಡಿಯುವಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕುಂಭ

ಗುರು ಹಿರಿಯರಿಂದ ಸ್ಪೂರ್ತಿ ಪಡೆಯುವಿರಿ. ಸರಿಯಾದ ಅಧ್ಯಯನವಿಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ. ನಿಮ್ಮಲ್ಲಿರುವ ಉದಾರ ಬುದ್ಧಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಜನರಿದ್ದಾರೆ. ಅನುಕೂಲವಿಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಸುಖಜೀವನ ನಡೆಸುವಿರಿ. ನಿಮ್ಮ ಮಕ್ಕಳಿಗೆ ವಿಶೇಷ ಬುದ್ಧಿ ಇರುತ್ತದೆ. ಸಮಯದ ಅರಿವಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ:10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ

ಮೀನ

ಆರಂಭದಲ್ಲಿ ಇದ್ದ ಆತಂಕ ಕ್ರಮೇಣ ಮರೆಯಾಗುತ್ತದೆ. ಯಾವುದೇ ವಿಚಾರದಲ್ಲಿ ನಿರ್ದಿಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪ್ರಯತ್ನ ಅವಶ್ಯಕವಾಗುತ್ತದೆ. ಮನಸ್ಸು ಒಳ್ಳೆಯದಾದರೂ ಆಡುವ ಮಾತಿನಿಂದ ಕುಟುಂಬದವರ ವಿರೋಧ ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ತೊಂದರೆ ಎದುರಾಗುತ್ತದೆ. ಹಣದ ತೊಂದರೆಯಿಂದ ಪಾರಾಗಲು ಉಪವೃತ್ತಿಯೊಂದನ್ನು ಆರಂಭಿಸುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಬೂದು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.