Tomorrow Horoscope: ಆತ್ಮೀಯರ ಜೊತೆ ಹಣದ ವಿವಾದ ಉಂಟಾಗಬಹುದು; ದಾಂಪತ್ಯದಲ್ಲಿ ಪೀತಿ ಹೆಚ್ಚಾಗಲಿದೆ; ನಾಳೆಯ ದಿನ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಆತ್ಮೀಯರ ಜೊತೆ ಹಣದ ವಿವಾದ ಉಂಟಾಗಬಹುದು; ದಾಂಪತ್ಯದಲ್ಲಿ ಪೀತಿ ಹೆಚ್ಚಾಗಲಿದೆ; ನಾಳೆಯ ದಿನ ಭವಿಷ್ಯ

Tomorrow Horoscope: ಆತ್ಮೀಯರ ಜೊತೆ ಹಣದ ವಿವಾದ ಉಂಟಾಗಬಹುದು; ದಾಂಪತ್ಯದಲ್ಲಿ ಪೀತಿ ಹೆಚ್ಚಾಗಲಿದೆ; ನಾಳೆಯ ದಿನ ಭವಿಷ್ಯ

23rd April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ಏಪ್ರಿಲ್‌ 23ರ ದಿನ ಭವಿಷ್ಯ
ಏಪ್ರಿಲ್‌ 23ರ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (23rd April 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ : ಹುಣ್ಣಿಮೆ ರಾತ್ರಿ 04.01 ರವರೆಗು ಇರುತ್ತದೆ ನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ : ಚಿತ್ತೆ ನಕ್ಷತ್ರವು ರಾತ್ರಿ 09.35 ರವರೆಗೂ ಇರುತ್ತದೆ ನಂತರ ಸ್ವಾತಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.06

ಸೂರ್ಯಾಸ್ತ: ಸಂಜೆ 06.32

ರಾಹುಕಾಲ : ಮಧ್ಯಾಹ್ನ 03.29 ರಿಂದ ಸಂಜೆ05.03

ರಾಶಿಫಲ

ಮೇಷ

ಉದ್ಯೋಗದಲ್ಲಿ ಯಾವುದೇ ಬದಲಾವಣೆ ಎದುರಾಗದು. ವಿದ್ಯಾರ್ಥಿಗಳು ಹಟದದಿಂದ ಗುರಿ ಸಾಧಿಸುವಿರಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಬೇರೆಯವರಿಗೆ ಸಹಾಯ ಮಾಡುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಧಾರ್ಮಿಕ ಸ್ಥಳಕ್ಕೆ ತೆರಳುವಿರಿ. ಅನಿರೀಕ್ಷಿತ ಧನ ಲಾಭ ಕಂಡು. ಹೊಸ ವ್ಯಾಪಾರ ವ್ಯವಹಾರವನ್ನು ಆರಂಭಿಸುವ ಆಸೆ ಇರದು. ಆತುರದಿಂದ ದಿನದ ಕೆಲಸ ಕಾರ್ಯಗಳನ್ನು ಮಾಡುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ವೃಷಭ

ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಾಗಿ ಹೆಚ್ಚಿನ ಅನುಕೂಲತೆಗಳು ಉಂಟಾಗಲಿವೆ. ವಿದ್ಯಾರ್ಥಿಗಳಿಗೆ ಸಂತೋಷದ ವಾರ್ತೆಯೊಂದು ಬರಲಿದೆ. ನಿಮ್ಮ ಸುತ್ತಲಿರುವ ಜನರನ್ನು ಎಚ್ಚರಿಕೆಯಿಂದ ಮಾತನಾಡಿಸಿ. ಅವಿವಾಹಿತರಿಗೆ ವಿವಾಹಯೋಗ ಇರಲಿದೆ. ಆತ್ಮೀಯರ ಜೊತೆ ಹಣದ ವಿವಾದ ಉಂಟಾಗಬಹುದು. ದಾಂಪತ್ಯದಲ್ಲಿ ಪೀತಿ ಮತ್ತು ವಿಶ್ವಾಸ ಹೆಚ್ಚುತ್ತದೆ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಬಿಳಿ ಬಣ್ಣ

ಮಿಥುನ

ಮಕ್ಕಳಿಗೆ ಸ್ಥಿರವಾದ ಆರೋಗ್ಯ ಇರದು. ಕುಟುಂಬದಲ್ಲಿ ಬೇಸರದ ಘಟನೆ ನಡೆಯುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆ ಉಂಟಾಗುತ್ತದೆ. ವಿದ್ಯಾರ್ಥಿಗಳು ದೃಡವಾದ ಮನಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯುವರು. ವಿದೇಶಿ ಸಂಸ್ಥೆಯ ಜೊತೆಯಲ್ಲಿ ವ್ಯಾಪಾರ ಆರಂಭಿಸುವ ಮಾತುಕತೆ ನಡೆಸುವಿರಿ. ಕೊಂಚ ನಿಧಾನ ಎನಿಸಿದರೂ ಕೆಲಸ ಕಾರ್ಯಗಳು ನಿಮ್ಮ ಎಣಿಕೆಯಂದಂತೆ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸ್ನೇಹಿತರ ಜೊತೆಯಲ್ಲಿ ದಿನ ಕಳೆಯುವಿರಿ. ಹಣವನ್ನು ಉಳಿಸುವ ಬಗ್ಗೆ ಗಮನ ನೀಡಿರಿ.

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು

ಕಟಕ

ದುಡುಕದೆ ಮುಖ್ಯವಾದ ಕೆಲಸ ಕಾರ್ಯಗಳನ್ನು ನೆರವೇರಿಸುವಿರಿ. ಪ್ರತಿಯೊಬ್ಬರೂ ನೆನಪಿಡಬೇಕಾದ ಕೆಲಸವವೊಂದನ್ನು ಮಾಡುವಿರಿ. ಬಂದು ಬಳಗದವರು ಹಣಕಾಸಿನ ನೆರವು ನೀಡಲಿದ್ದಾರೆ. ಜೀವನವನ್ನು ನಿಮ್ಮದೇ ಆದ ರೀತಿಯಲ್ಲಿ ರೂಪಿಸಿಕೊಳ್ಳುವಿರಿ. ಬೇಸರದ ವೇಳೆ ಸಂಗಾತಿಯ ಪ್ರೀತಿ ಹೊಸ ಶಕ್ತಿ ಮತ್ತು ಆಸೆಯನ್ನು ನೀಡುತ್ತದೆ. ಮನೆಯ ನವೀಕರಣದ ಜವಾಬ್ದಾರಿ ನಿಮ್ಮದಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಆಕಾಶ ನೀಲಿ

ಸಿಂಹ

ಉದ್ಯೋಗದಲ್ಲಿ ಕಾರ್ಯದಕ್ಷತೆಯ ಕಾರಣದಿಂದ ಉನ್ನತ ಸ್ಥಾನ ಮಾನವನ್ನು ಗಳಿಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ವಿದ್ಯಾರ್ಥಿಗಳ ಮುಗ್ಧ ವರ್ತನೆ ವಿಧ್ಯಾಭ್ಯಾಸದಲ್ಲಿ ಎದುರಾಗುವ ಸಮಸ್ಯೆಯನ್ನು ದೂರಮಾಡುತ್ತದೆ. ಒಳ್ಳೆಯ ಪರಿಸರವನ್ನು ಅರಸಿ ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಇತರರ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ನೀಡುವ ಸಾಮರ್ಥ್ಯ ತೋರುವಿರಿ. ಮಿತಿ ಮೀರಿದ ಖರ್ಚು ಬೇಸರಕ್ಕೆ ಕಾರಣವಾಗಲಿದೆ.

ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ 11

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ : ಕೆಂಪು ಬಣ್ಣ

ಕನ್ಯಾ

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಅದಾಯ ಮೀರಿದ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ. ವಿದ್ಯಾರ್ಥಿಗಳು ಮನರಂಜನೆ ಮತ್ತು ಆಟದಿಂದ ಮನಸ್ಸನ್ನು ಹಗುರ ಮಾಡಿಕೊಳ್ಳಲಿದ್ದಾರೆ. ಉದ್ಯಮದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಆರ್ಥಿಕ ಲಾಭ ಹೆಚ್ಚುತ್ತದೆ. ಕಷ್ಟದ ಕಾಲದಲ್ಲಿ ಸಂಗಾತಿಯ ಬೆಂಬಲ ದೊರೆಯುತ್ತದೆ. ಪುರಾತನಕಾಲದ ವಸ್ತುಗಳ ಮಾರಾಟದಿಂದ ಆದಾಯ ಗಳಿಸುವಿರಿ.

ಪರಿಹಾರ : ಬೆಳ್ಳಿ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಕಿತ್ತಳೆ

ತುಲಾ

ಉದ್ಯೋಗದಲ್ಲಿ ಅಧಿಕಾರಿಗಳ ಪ್ರೋತ್ಸಾಹ ಹೊಸ ಹುಮ್ಮಸ್ಸು ತುಂಬುತ್ತದೆ. ವಿದ್ಯಾರ್ಥಿಗಳು ತಮ್ಮ ವಯಸ್ಸಿನ ಗುಂಪಿನ ನಾಯಕರಾಗಿ ಹೊರ ಹೊಮ್ಮುವಿರಿ. ಮನರಂಜನೆಗಾಗಿ ಹೆಚ್ಚಿನ ಖರ್ಚಾಗುತ್ತದೆ. ಎದುರಾಗುವ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಎದುರಿಸಬಲ್ಲಿರಿ. ಸಿಡುಕಿನ ವರ್ತನೆ ಕುಟುಂಬದಲ್ಲಿ ಅಸಮಾಧಾನವನ್ನು ಉಂಟು ಮಾಡುತ್ತದೆ. ಹೊಸ ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸುವಿರಿ.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಳದಿ ಬಣ್ಣ

ವೃಶ್ಚಿಕ

ಕುಟುಂಬದಲ್ಲಿನ ಮಗುವಿನ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ವಿದ್ಯಾರ್ಥಿಗಳು ಭಾವನಾತ್ಮಕ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆಯುತ್ತಾರೆ. ಹಣಕಾಸಿನ ಕೊರೆತೆ ಕಡಿಮೆ ಆಗುತ್ತದೆ. ಒತ್ತಡಕ್ಕೆ ಮಣಿದು ಹಣವನ್ನು ವ್ಯರ್ಥವೆನಿಸುವ ವಿಚಾರಗಳಿಗೆ ಖರ್ಚು ಮಾಡುವಿರಿ. ವಂಶಾಧಾರಿತ ಉದ್ಯೋಗ ಅಥವ ವ್ಯಾಪಾರದಲ್ಲಿ ಪ್ರಗತಿ ದೊರೆಯಲಿದೆ. ಪ್ರಾಣಿ ಪಕ್ಷಿಗಳಬಗ್ಗೆ ಅನುಕಂಪ ಇರಲಿದೆ. ವಾಹನದಿಂದ ತೊಂದರೆ ಇರಬಹುದು ಎಚ್ಚರಿಕೆ ಇರಲಿ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಸಿರು

ಧನಸ್ಸು

ಕುಟುಂಬದಲ್ಲಿ ಎಲ್ಲರ ಮನಸ್ಸೂ ಒಂದೇ ಆಗಿರುತ್ತದೆ. ಸ್ವಂತ ಶಕ್ತಿಯಿಂದ ಉದ್ಯಮವೊಂದನ್ನುಆರಂಭಿಸಿ ಉತ್ತಮ ಸ್ಥಾನ ಮಾನ ಪಡೆಯುವಿರಿ. ಸಮರ್ಪಣಾ ಮನೋಭಾವನೆಯಿಂದ ಕುಟುಂಬದ ತೊಂದರೆ ದೂರವಾಗಲಿದೆ. ಶ್ರಮಕ್ಕೆ ತಕ್ಕಂತಹ ಪ್ರತಿಫಲ ಪಡೆಯುವಿರಿ. ಸ್ಥಿರವಾದ ಮನೋಭಾವ ವಿದ್ಯಾರ್ಥಿಗಳಿಗೆ ಉನ್ನತ ಅವಕಾಶಗಳನ್ನು ನೀಡುತ್ತದೆ. ಮಕ್ಕಳ ವಿಚಾರದಲ್ಲಿ ಸಮಸ್ಯೆಯೊಂದು ಎದುರಾಗುತ್ತದೆ.

ಪರಿಹಾರ : ನೆರೆಹೊರೆಯ ಮಕ್ಕಳಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿ

ಮಕರ

ಯಾವುದೇ ವಿಚಾರವನ್ನು ಲಘುವಾಗಿ ಪರಿಗಣಿಸದ ಕಾರಣ ತೊಂದರೆ ಕಾಣದು. ಉದ್ಯೋಗದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಮಕ್ಕಳ ರಕ್ಷಣೆ ಮತ್ತು ಹೊಣೆಗಾರಿಕೆಯ ಜವಾಬ್ದಾರಿ ನಿಮ್ಮದಾಗುತ್ತದೆ. ವ್ಜಿದ್ಯಾರ್ಥಿಗಳು ಹಿರಿಯರ ಸಲಹೆ ಸೂಚನೆಯನ್ನು ಪಾಲಿಸುವುದು ಮುಖ್ಯ. ಗೃಹಬಳಕೆಯ ಸಾಧನಗಳ ಖರೀದಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಜೀವನದ ಎಲ್ಲಾ ಸಮಸ್ಯೆಗಳನ್ನು ಜಹಿಸಿ ಸಂತೋಷದಿಂದ ಬಾಳುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಕುಂಭ

ಕುಟುಂಬದಲ್ಲಿ ಬೇಸರ ಮನೆ ಮಾಡಿರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳು ವಿಶ್ವಾಸವನ್ನು ಬೆಳೆಸಿಕೊಂಡು ಕಲಿಕೆಯಲ್ಲಿ ಅಗ್ರಗಣ್ಯ ಸ್ಥಾನ ಗಳಿಸುವರು. ಹೆಚ್ಚಿನ ಪರಿಶ್ರಮದಿಂದ ಕ್ರಮೇಣ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಮೊದಲ ಆದ್ಯತೆಯನ್ನು ಸ್ವಂತ ಕೆಲಸಗಳಿಗೆ ನೀಡುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಅನಿವಾರ್ಯವಾಗಿ ವಾಸಸ್ಥಳವನ್ನು ಬದಲಾಯಿಸುವಿರಿ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಮೀನ

ಬಹು ದಿನದ ನಿರೀಕ್ಷೆಯಂತೆ ಉನ್ನತ ಅಧಿಕಾರ ಲಭಿಸುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ ಆದರೂ ಜೀವನದಲ್ಲಿ ತೊಂದರೆ ಇರದು. ಹಣದ ಸ್ಥಿತಿಗತಿ ಕ್ರಮೇಣವಾಗಿ ಸುಧಾರಿಸುತ್ತದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಹೊರ ಬಂದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಸಂಗಾತಿಯ ಜೊತೆ ಮನಸ್ತಾಪ ಉಂಟಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಕಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.