ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಖರ್ಚು ವೆಚ್ಚಗಳಿಗೆ ಕಡಿವಾಣ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯಲಿದೆ; ನಾಳೆಯ ದಿನ ಭವಿಷ್ಯ

Tomorrow Horoscope: ಖರ್ಚು ವೆಚ್ಚಗಳಿಗೆ ಕಡಿವಾಣ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯಲಿದೆ; ನಾಳೆಯ ದಿನ ಭವಿಷ್ಯ

23rd May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

 ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (23rd May 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ: ಹುಣ್ಣಿಮೆ 06.20 ರವರೆಗೂ ಇರುತ್ತದೆ ನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ: ವಿಶಾಖ ನಕ್ಷತ್ರವು ಬೆಳಗ್ಗೆ 08.37 ರವರೆಗು ಇದ್ದು ನಂತರ ಅನೂರಾಧ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.39

ರಾಹುಕಾಲ: 1.55 ರಿಂದ 03.31

ಮೇಷ

ಮಗಳ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ. ದಿನನಿತ್ಯದ ಆದಾಯದಲ್ಲಿ ಏರಿಕೆ ಇರುತ್ತದೆ. ವಿದ್ಯಾರ್ಥಿಗಳು ಎಲ್ಲರ ಆಶಯದಂತೆ ವಿದ್ಯಾರ್ಜನೆಯಲ್ಲಿ ಮೊದಲಿಗರಾಗುತ್ತಾರೆ. ಬಹುದಿನದ ಕನಸಿನಂತೆ ವಿಶಾಲವಾದ ಮನೆಯನ್ನು ಕೊಳ್ಳುವ ಯೋಜನೆ ರೂಪಿಸುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಸಂತಾನ ಲಾಭವಿದೆ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸು ಗೆಂಪು

ವೃಷಭ

ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿ ತೋರುವಿರಿ. ವಿದ್ಯಾರ್ಥಿಗಳು ನಿರೀಕ್ಷಿತ ಯಶಸ್ಸು ಗಳಿಸುತ್ತಾರೆ. ಗೆಲ್ಲುವ ಗುರಿ ಇರುವ ಕಾರಣ ಕುಟುಂಬದ ಆದಾಯದಲ್ಲಿ ತೊಂದರೆ ಆಗದು. ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವಿರಿ. ಸೋದರಿಯ ಕುಟುಂಬದ ಸಮಸ್ಯೆ ಬಗೆಹರಿಸಲು ಶತಪ್ರಯತ್ನ ಪಡುವಿರಿ. ಸಂಗಾತಿಗೆ ಅನಿರೀಕ್ಷಿತ ಧನಲಾಭವಿದೆ. ನರನಿಶ್ಯಕ್ತಿಯ ತೊಂದರೆಯಿಂದ ಬಳಲುವಿರಿ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಮಿಥುನ

ಉದ್ಯೋಗದಲ್ಲಿ ನಿಮ್ಮ ಕಾರ್ಯದಕ್ಷತೆಗೆ ತಕ್ಕಂಥ ಸ್ಥಾನ ಮಾನ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಎದುರಾಗಲಿದೆ. ಸಾಲದ ವ್ಯವಹಾರದಲ್ಲಿ ಬೇರೆಯವರ ಸಹಾಯ ಪಡೆಯುವಿರಿ. ಮಾರಾಟ ಪ್ರತಿನಿಧಿಗಳಾದಲ್ಲಿ ಉತ್ತಮ ಆದಾಯ ಇರುತ್ತದೆ. ಉತ್ತಮ ಅವಕಾಶ ದೊರೆವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಕಟಕ

ವ್ಯಾಪಾರ ವ್ಯವಹಾರದಲ್ಲಿ ಸೋದರರ ನಡುವೆ ಬಿನಾಭಿಪ್ರಾಯ ಉಂಟಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಬರವಣಿಗೆಯಲ್ಲಿಯೂ ಮುನ್ನಡೆಯುತ್ತಾರೆ. ಭೂ ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ತಂದೆಯವರಿಗೆ ಲಾಭವಿರುತ್ತದೆ. ಅನಾವಶ್ಯಕ ವಿವಾದದಿಂದಾಗಿ ವೈರಾಗ್ಯದ ಭಾವನೆ ಉಂಟಾಗುತ್ತದೆ. ತೋಟಗಾರಿಕೆಯಿಂದ ಲಾಭವಿದೆ. ತಾಯಿಯ ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬೂದು

ಸಿಂಹ

ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಬದಲಾವಣೆ ಉಂಟಾಗಲಿದೆ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಫಲಿತಾಂಶಕ್ಕೆ ಕಾಯದೆ ನಿಮ್ಮ ಕರ್ತವ್ಯವನ್ನು ಪೂರೈಸುವಿರಿ. ಆತ್ಮೀಯರ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿನ ಅನಿರೀಕ್ಷಿತ ಬದಲಾವಣೆಯಿಂದ ಅನುಕೂಲವಿದೆ. ಭೂ ಸಂಬಂಧಿತ ವ್ಯವಹಾರದಲ್ಲಿ ನಿರೀಕ್ಷಿತ ಲಾಭಾಂಶ ದೊರೆಯುತ್ತದೆ. ಕುಟುಂಬದ ಕೆಲಸ ಕಾರ್ಯಗಳು ಮುಂದೂಡಲ್ಪಡುತ್ತವೆ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ನೀಲಿಬಣ್ಣ

ಕನ್ಯಾ

ವಿದ್ಯಾರ್ಥಿಗಳು ವಿಶೇಷ ಅದ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ರಾಜಕೀಯದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ವ್ಯವಸಾಯದಲ್ಲಿ ಆಸಕ್ತಿಯ ಜೊತೆಯಲ್ಲಿ ಅವಕಾಶವೂ ದೊರೆಯುತ್ತದೆ. ಗಣ್ಯ ವ್ಯಕ್ತಿಗಳ ಆಶ್ರಯ ದೊರೆಯುತ್ತದೆ. ಸೋದರಿಯ ವಿವಾಹ ನಿಶ್ಚಯವಾಗುತ್ತದೆ. ಸಮಾಜದಲ್ಲಿ ಗೌರವದ ಸ್ಥಾನ ಮಾನ ಲಭಿಸುತ್ತವೆ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಗುಲಾಬಿ

ತುಲಾ

ಕುಟುಂಬದ ಅಬಿವೃದ್ದಿಯ ಬಗ್ಗೆ ಗಮನ ತೋರುವಿರಿ. ವಿಚಾರ ಅರಿಯದೆ ದುಡುಕಿ ಮಾತನಾಡುವ ಕಾರಣ ವಿರೋಧಿಗಳು ಹೆಚ್ಚುತ್ತಾರೆ. ರಕ್ತದೊತ್ತಡದ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರ ವ್ಯವಹಾರದಲ್ಲಿ ಅಡಚಣೆ ಎದುರಾಗುತ್ತದೆ. ಸಂಸಾರದಲ್ಲಿನ ತೊಂದರೆ ದೂರವಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಗಿವ ಮುನ್ನವೇ ಉದ್ಯೋಗ ಲಭಿಸುತ್ತದೆ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು ಉತ್ತರ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ವೃಶ್ಚಿಕ

ಹಣದ ವ್ಯವಹಾರದಲ್ಲಿ ಸಹಾಯದ ನಿರೀಕ್ಷೆ ಬೇಡ. ವಿದ್ಯಾರ್ಥಿಗಳು ಯೋಗ ಮತ್ತು ಪ್ರಾಣಾಯಾಮದಂತಹ ಸಾಂಪ್ರಾದಾಯಿಕ ಕಲೆಗಳನ್ನು ಕಲಿಯಲಿದ್ದಾರೆ. ಆಹಾರ ಕ್ರಮದ ಬದಲಾವಣೆ ಆರೊಗ್ಯದಲ್ಲಿ ಸ್ಥಿರತೆಯನ್ನು ನೀಡುತ್ತದೆ. ತಪ್ಪು ನಿರ್ಧಾರದಿಂದ ಸ್ನೇಹಿತರಿಂದ ದೂರ ಉಳಿಯುವಿರಿ. ಗಣ್ಯವ್ಯಕ್ತಿಯೊಬ್ಬರ ಸಹಾಯ ಸಹಕಾರ ದೊರೆಯುತ್ತದೆ.

ಪರಿಹಾರ: ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಧನಸ್ಸು

ಶ್ರಮವೆನಿಸುವ ಕೆಲಸವನ್ನು ಮಾಡಲಿಚ್ಚಿಸುವುದಿಲ್ಲ. ತಂದೆಯವರ ಹಣದ ವಿವಾದವನ್ನು ಪರಿಹರಿಸುವಿರಿ. ಐಷಾರಾಮಿ ವಾಹನ ಕೊಳ್ಳುವ ಮನಸ್ಸಾಗುತ್ತದೆ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉದ್ಯೋಗ ಗಳಿಸುತ್ತಾರೆ. ಕಮೀಷನ್ ಆಧಾರಿತ ಉಪವೃತ್ತಿಯೊಂದನ್ನು ಆರಂಭಿಸುವಿರಿ. ದುಬಾರಿ ಬೆಲೆಯ ವಸ್ತ್ರಗಳನ್ನು ಕೊಳ್ಳುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಂದು

ಮಕರ

ಎಲ್ಲರು ಮೆಚ್ಚುವಂತೆ ಮಾತನಾಡಿ ಕೆಲಸ ಸಾಧಿಸುವಿರಿ. ಕುಟುಂಬದ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಜಾಣ್ಮೆಯಿಂದ ವರ್ತಿಸುವಿರಿ. ಸದ್ದಿಲ್ಲದೆ ವಿದ್ಯಾರ್ಥಿಗಳು ತಮ್ಮಗುರಿ ತಲುಪುತ್ತಾರೆ. ನಿಮ್ಮ ಮನಸ್ಸಿನ ಯೋಜನೆಯನ್ನು ಯಾರಿಗೂ ತಿಳಿಸುವುದಿಲ್ಲ. ಗೃಹಿಣಿಯರು ನಿಶ್ಯಕ್ತಿಯಿಂದ ಬಳಲುತ್ತಾರೆ. ವಿದ್ಯಾರ್ಥಿಗಳು ನೆಮ್ಮದಿಯಿಂದ ಮನರಂಜನೆಯತ್ತ ಗಮನಹರಿಸುತ್ತಾರೆ.

ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಕುಂಭ

ವಿದ್ಯಾರ್ಥಿಗಳು ಗುರಿ ತಲುಪುವ ತನಕ ಮೌನ ವಹಿಸುವರು. ಮನಸ್ಸಿನ ನೋವನ್ನುಯಾರಿಗೂ ತಿಳಿಸದೆ ಬೇರೆಯವರ ಗೆಲುವಿನಲ್ಲಿ ಪಾಲ್ಗೊಳ್ಳುವಿರಿ. ಗೃಹಿಣಿಯರಿಗೆ ಬಿಡುವಿಲ್ಲದ ದುಡಿಮೆ ಆಗಿರುತ್ತದೆ. ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಬಯಸುತ್ತಾರೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕುಟುಂಬದ ಸದಸ್ಯರ ಜೊತೆ ಮನರಂಜನಾ ತಾಣಕ್ಕೆ ತೆರಳುವಿರಿ.

ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಸಿರು

ಮೀನ

ವ್ಯಾಪಾರ ವ್ಯಾವಹಾರದಲ್ಲಿ ಸಾಧಾರಣ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಪರಸ್ಥಳಕ್ಕೆ ತೆರಳಲಿದ್ದಾರೆ. ಸೋದರನ ವ್ಯಾಪಾರಕ್ಕೆ ಸಹಾಯ ಮಾಡುವಿರಿ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಗಾಯಕರಿಗೆ ಅಪರೂಪದ ಅವಕಾಶ ದೊರೆಯುತ್ತದೆ. ಆಧುನಿಕತೆಗೆ ತಕ್ಕಂತೆ ಮನೆಯನ್ನು ನವೀಕರಿಸುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಕಿರುಪ್ರವಾಸಕ್ಕೆ ತೆರಳುವಿರಿ.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಕೇಸರಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).