ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ವಾಸ ಸ್ಥಾನವನ್ನು ಬದಲಿಸುವಿರಿ, ಕುಟುಂಬದಲ್ಲಿ ಶುಭ ಸಮಾರಂಭ ನಡೆಯಲಿದೆ; ನಾಳೆಯ ದಿನ ಭವಿಷ್ಯ

Tomorrow Horoscope: ವಾಸ ಸ್ಥಾನವನ್ನು ಬದಲಿಸುವಿರಿ, ಕುಟುಂಬದಲ್ಲಿ ಶುಭ ಸಮಾರಂಭ ನಡೆಯಲಿದೆ; ನಾಳೆಯ ದಿನ ಭವಿಷ್ಯ

29th May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (29th May 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ: ಷಷ್ಠಿ 01.06 ರವರೆಗೂ ಇರುತ್ತದೆ ನಂತರ ಸಪ್ತಮಿ ಆರಂಭವಾಗುತ್ತದೆ.

ನಕ್ಷತ್ರ : ಶ್ರವಣ ನಕ್ಷತ್ರವು ಬೆಳಗ್ಗೆ 08.26 ರವರೆಗೂ ಇದ್ದು ನಂತರ ಧನಿಷ್ಠ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.41

ರಾಹುಕಾಲ: 12.20 ರಿಂದ 01.56

ರಾಶಿ ಫಲ

ಮೇಷ

ಬೇರೊಬ್ಬರ ಸಹಾಯ ಇಲ್ಲದೆ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವಿರಿ. ಮಾನಸಿಕ ಒತ್ತಡದಿಂದ ಅನಾರೋಗ್ಯ ಉಂಟಾಗುತ್ತದೆ. ನಿಮ್ಮಲ್ಲಿನ ಆತ್ಮಶಕ್ತಿಯು ಸೋಲಿನ ಭಯದಿಂದ ಪಾರು ಮಾಡುತ್ತದೆ. ಮಕ್ಕಳ ನಿಸ್ವಾರ್ಥ ಪ್ರೀತಿ ದೊರೆತು ಸಂತೋಷದಿಂದ ಬಾಳುವಿರಿ. ಹಣಕಾಸಿಗೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಅನುಸ್ಠಾನಕ್ಕೆ ತರುವಿರಿ.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ವೃಷಭ

ಕುಟುಂಬದ ಹಿರಿಯರ ನಡೆ ನುಡಿಯನ್ನು ಒಪ್ಪುವುದಿಲ್ಲ. ನಿಮ್ಮ ಅನುಭವದಿಂದ ಸಹೋದ್ಯೋಗಿಗಳು ಅನೇಕ ವಿಚಾರಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಚಾಡಿ ಮಾತಿನಿಂದ ತೊಂದರೆಗೆ ಒಳಗಾಗಬಹುದು. ವಿಶ್ವಾಸದಿಂದ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ಅನಗತ್ಯವಾದ ಹಣದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವಿರಿ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ

ಮಿಥುನ

ಹಣಕಾಸಿನ ತೊಂದರೆ ಇರುವುದಿಲ್ಲ. ನೀವು ಕುಟುಂಬದ ಸದಸ್ಯರೊಡನೆ ಆಮದು ರಪ್ತಿನ ವ್ಯಾಪಾರ ಆರಂಭಿಸುವಿರಿ. ಆತ್ಮಸ್ಥೈರ್ಯವನ್ನು ಗಳಿಸಲು ಪ್ರಯತ್ನಿಸಿ. ಅಮೂಲ್ಯ ವಸ್ತುಗಳನ್ನು ಶೇಖರಿಸುವಿರಿ. ನಿಮ್ಮಲ್ಲಿನ ನಾಯಕತ್ವದ ಗುಣಗಳು ಇತರರಿಗೆ ಮಾದರಿ ಆಗಲಿದೆ. ಜನರ ಅವಶ್ಯಕತೆಗಳನ್ನು ಪೂರೈಸುವ ಸಾರ್ವಜನಿಕ ಸಂಸ್ಥೆಯನ್ನು ಆರಂಭಿಸುವಿರಿ.

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಬೂದು

ಕಟಕ

ಬೇಸರ ಉಂಟಾಗಿ ಉದ್ಯೋಗವನ್ನು ಬದಲಿಸುವಿರಿ. ಸಮಯ ವ್ಯರ್ಥಮಾಡದೆ ಮಕ್ಕಳಿಗೆ ಸಹಾಯವಾಗುವ ಕೆಲಸ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನ ಮೇಲೆ ಪರಿಣಾಮ ಬೀರುವ ಕೆಲಸವೊಂದು ನಡೆಯಲಿದೆ. ಆತ್ಮೀಯರ ಆಗಮನ ಮನದ ಸಂತಸವನ್ನು ಹೆಚ್ಚಿಸಲಿದೆ. ನೋವನ್ನು ಮರೆತು ಎಲ್ಲರ ಜೊತೆ ಸಂತಸದಿಂದ ಬಾಳುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಆಕಾಶ ನೀಲಿ

ಸಿಂಹ

ಹಣ ಉಳಿತಾಯದ ಬಗ್ಗೆ ಯೋಜನೆ ರೂಪಿಸುವಿರಿ. ಉದ್ಯೋಗದಲ್ಲಿ ಹೊಸದಾಗಿ ಕಲಿಯಬೇಕಾದ ವಿಚಾರಗಳಿಗೆ ಒತ್ತು ನೀಡುವಿರಿ. ನಿಮ್ಮಲ್ಲಿನ ಕಲಾ ಕೌಶಲ್ಯವನ್ನು ಆತ್ಮೀಯರಿಗೆ ಧಾರೆ ಎರೆಯುವಿರಿ. ದೃಢವಾದ ನಿರ್ಧಾರದಿಂದ ಹಣ ಉಳಿಸಲಿದ್ದೀರಿ. ಮಾತಿಗಿಂತಲೂ ಮೌನವೇ ಸರಿ ಎಂಬ ನಿರ್ಧಾರಕ್ಕೆ ಬರುವಿರಿ. ಸಂಗಾತಿ ಜೊತೆ ಮಧುರವಾದ ಸಂಬಂಧ ಇರುತ್ತದೆ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಕೆಂಪು

ಕನ್ಯಾ

ಉದ್ಯೋಗದಲ್ಲಿ ಸಂಭವಿಸುವ ಬದಲಾವಣೆಗಳು ನಿಮಗೆ ವರವಾಗಲಿದೆ. ಇಂದು ಎಲ್ಲರೊಡನೆ ಮಂಗಳ ಕಾರ್ಯವೊಂದರಲ್ಲಿ ಭಾಗಿಯಾಗುವಿರಿ. ಬಿಡುವಿನ ವೇಳೆ ಮಕ್ಕಳ ಜೊತೆ ವಿಹಾರಕ್ಕೆ ತೆರಳುವಿರಿ. ಹಿರಿಯರ ಅನುಭವದಿಂದ ಬಾಳಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ಬೇರೆಯವರ ತಪ್ಪನ್ನು ಮನ್ನಿಸುವ ನೀವು ನಿಮ್ಮ ತಪ್ಪಿಗೆ ಪಶ್ಚಾತಾಪ ಪಡುವಿರಿ. ಬೇರೆಯವರನ್ನು ಟೀಕಿಸದಿರಿ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ : ಎಲೆ ಹಸಿರು

ತುಲಾ

ನಿಮ್ಮ ಚುರುಕುತನದಿಂದ ಬಹಳ ದಿನದ ಹಿಂದಿನ ಕೆಲಸ ಕಾರ್ಯವೊಂದು ಪೂರ್ಣಗೊಳ್ಳಲಿದೆ. ಅನಾವಶ್ಯಕವಾಗಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಗೀಡಾಗುವಿರಿ. ನಿಮ್ಮ ಹೊಸ ಹಣಕಾಸಿನ ಯೋಜನೆಯನ್ನು ಆತ್ಮೀಯರ ಸಹಾಯದಿಂದ ಆರಂಭಿಸುವಿರಿ. ನೆರೆಹೊರೆಯವರ ವಿಶ್ವಾಸಕ್ಕೆ ಪಾತ್ರರಾಗುವಿರಿ. ಬಾಳ ಸಂಗಾತಿಯ ಮುಂಗೋಪ ಬೇಸರಕ್ಕೆ ಕಾರಣವಾಗಲಿದೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು ಉತ್ತರ

ಅದೃಷ್ಟದ ಬಣ್ಣ: ಕೇಸರಿ

ವೃಶ್ಚಿಕ

ನಿಮ್ಮ ಮಗುವಿನ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಆತ್ಮೀಯರಿಂದ ದೊರೆತ ಹಣದಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಕೋಪದಿಂದ ಮುಕ್ತರಾದಲ್ಲಿ ಹೊಸ ಅವಕಾಶವೊಂದು ನಿಮ್ಮದಾಗಲಿದೆ. ಆಮಂತ್ರಣ ಇಲ್ಲದೆ ಹೋದರೂ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಬೇಕಾಗುತ್ತದೆ. ಹಿರಿಯ ಸಹೋದ್ಯೋಗಿಗಳ ಸಲಹೆಯನ್ನು ಒಪ್ಪಿದಲ್ಲಿ ಯಶಸ್ಸು ನಿಮದಾಗಲಿದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಧನಸ್ಸು

ದೀರ್ಘಕಾಲದ ಅನಾರೋಗ್ಯಕ್ಕೆ ಶಾಶ್ವತ ಮದ್ದೊಂದು ದೊರೆಯಲಿದೆ. ಲಾಭ ನಷ್ಟವನ್ನು ಗಮನಿಸದೆ ವ್ಯಾಪಾರದಲ್ಲಿ ಮುಂದುವರೆಯುವಿರಿ. ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೆ ಉತ್ತಮ ಲಾಭ ದೊರೆಯುತ್ತದೆ. ಮಕ್ಕಳ ಜೊತೆ ಉತ್ತಮ ಒಡನಾಟ ಇರಲಿದೆ. ಸಂಗಾತಿ ಜೊತೆ ಉತ್ತಮ ಅನುಬಂಧ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ವರಮಾನ ಹೆಚ್ಚುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೆಂಪು

ಮಕರ

ಅನಾವಶ್ಯಕವಾಗಿ ಚಿಂತಿಸಿ ಅರೆ ತಲೆಶೂಲೆಯಿಂದ ಬಳಲುವಿರಿ. ಉದ್ಯೋಗದಲ್ಲಿ ಯಶಸ್ಸಿನ ಸಂತೋಷದ ಕ್ಷಣಗಳನ್ನು ಸಹೋದ್ಯೋಗಿಗಳ ಜೊತೆ ಆಚರಿಸುವಿರಿ. ನೀವು ನಿರಾಸೆಯನ್ನೂ ಆನಂದದಿಂದಲೇ ಸ್ವೀಕರಿಸುವಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸುವಿರಿ. ಅನಿರೀಕ್ಷಿತವಾದ ಆದಾಯದಲ್ಲಿನ ಏರಿಕೆ ನಿಮ್ಮ ಮನಸ್ಸಿನ ಶಾಂತಿ ನೀಡುತ್ತದೆ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಿತ್ತಳೆ

ಕುಂಭ

ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಹಿಂದಿನ ದಿನಗಳಲ್ಲಿ ನಿರ್ಣಯಿಸಿದ್ದ ಪ್ರಯಾಣ ಮೊಟಕುಕೊಳ್ಳುತ್ತದೆ. ನಿಮ್ಮಲ್ಲಿನ ಹವ್ಯಾಸವು ಎಲ್ಲರ ಗಮನ ಸೆಳೆಯುವುದು. ವಿಶ್ರಾಂತಿ ಇಲ್ಲದ ಕೆಲಸ ನಿಮ್ಮದಾಗುತ್ತದೆ. ಆರ್ಥಿಕವಾಗಿ ಸದೃಢರಾಗುವಿರಿ. ಮೊದಲೇ ಲಾಭವನ್ನು ಲೆಕ್ಕಾಚಾರ ಮಾಡಿ ನಂತರ ಕೆಲಸವನ್ನು ಆರಂಭಿಸುವಿರಿ. ಮಕ್ಕಳು ಸಂತೋಷ ನೀಡುವ ಕೆಲಸಗಳನ್ನು ಮಾಡಲಿದ್ದಾರೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಳದಿ

ಮೀನ

ಸ್ನೇಹಿತರೊಬ್ಬರು ತಪ್ಪು ಕಲ್ಪನೆಯಿಂದ ನಿಮ್ಮಿಂದ ದೂರವಾಗಲಿದ್ದಾರೆ. ವೈಯಕ್ತಿಕ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡುವಿರಿ. ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತರಾಗುವಿರಿ. ಹಿರಿಯರ ಸೇವೆ ಮಾಡುವ ಅವಕಾಶ ದೊರೆಯುತ್ತದೆ. ಪ್ರೀತಿ ವಿಶ್ವಾಸದಿಂದ ಮಕ್ಕಳ ಜೊತೆ ಸಂತೋಷದಿಂದ ಬಾಳುವಿರಿ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).