ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಮತ್ತೊಬ್ಬರ ಟೀಕೆಯ ಮಾತುಗಳಿಗೆ ಗಮನ ಬೇಡ, ಮಕ್ಕಳಿಗೂ ಎಲ್ಲಾ ರೀತಿ ಒಳಿತಾಗಲಿದೆ; ನಾಳೆಯ ದಿನ ಭವಿಷ್ಯ

Tomorrow Horoscope: ಮತ್ತೊಬ್ಬರ ಟೀಕೆಯ ಮಾತುಗಳಿಗೆ ಗಮನ ಬೇಡ, ಮಕ್ಕಳಿಗೂ ಎಲ್ಲಾ ರೀತಿ ಒಳಿತಾಗಲಿದೆ; ನಾಳೆಯ ದಿನ ಭವಿಷ್ಯ

2nd June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ಮತ್ತೊಬ್ಬರ ಟೀಕೆಯ ಮಾತುಗಳಿಗೆ ಗಮನ ಬೇಡ, ಮಕ್ಕಳಿಗೂ ಎಲ್ಲಾ ರೀತಿ ಒಳಿತಾಗಲಿದೆ; ನಾಳೆಯ ದಿನ ಭವಿಷ್ಯ
ಮತ್ತೊಬ್ಬರ ಟೀಕೆಯ ಮಾತುಗಳಿಗೆ ಗಮನ ಬೇಡ, ಮಕ್ಕಳಿಗೂ ಎಲ್ಲಾ ರೀತಿ ಒಳಿತಾಗಲಿದೆ; ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd June 2024 Horoscope)

ನಾಳಿಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಭಾನುವಾರ

ತಿಥಿ: ಏಕಾದಶಿ

ನಕ್ಷತ್ರ: ರೇವತಿ

ಸೂರ್ಯೋದಯ: ಬೆಳಗ್ಗೆ 05:23

ಸೂರ್ಯಾಸ್ತ: ಸಂಜೆ 07:15

ರಾಹುಕಾಲ: ಸಂಜೆ 05:31 ರಿಂದ 07:15 ವರೆಗೆ

ರಾಶಿಫಲ

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ.  ಆತ್ಮೀಯರು ನಿಮ್ಮ ಹಣಕಾಸಿನ ವಹಿವಾಟುಗಳನ್ನು ನಿಭಾಯಿಸುತ್ತಾರೆ. ಅನುಭವಿಗಳ ಸಲಹೆ ತೆಗೆದುಕೊಳ್ಳಿ. ಆಧ್ಯಾತ್ಮಿಕತೆ ಹೆಚ್ಚುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮೇಷ ರಾಶಿಯವರು ಹೆಚ್ಚಿನ ಶುಭ ಫಲಗಳನ್ನು ಪಡೆಯಲು ಆದಿತ್ಯನ ಹೃದಯವನ್ನು ಪಠಿಸಿ. ಸೂರ್ಯ ನಮಸ್ಕಾರ ಮಾಡುವುದರಿಂದ ಶುಭ ಫಲ ಸಿಗುತ್ತದೆ. ದಕ್ಷಿಣಾಮೂರ್ತಿ ಸ್ತೋತ್ರ ಪಠಿಸುವುದು ಒಳ್ಳೆಯದು.

ವೃಷಭ ರಾಶಿ

 ಯಾವುದೇ ಕಾರಣಕ್ಕೂ ಎದೆ ಗುಂದಬೇಡಿ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ವೆಚ್ಚಗಳು ಆದಾಯಕ್ಕೆ ಅನುಗುಣವಾಗಿರುತ್ತವೆ. ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಪ್ರಮುಖ ದಾಖಲೆಗಳ ಬಗ್ಗೆ ಎಚ್ಚರದಿಂದಿರಿ. ಹಳೆಯ ಪರಿಚಯಸ್ಥರನ್ನು ಭೇಟಿ ಮಾಡಿ. ಕೆಲಸ ಬದಲಿಸುವಿರಿ. ಈ ರಾಶಿಯವರು ಹೆಚ್ಚಿನ ಶುಭ ಫಲಿತಾಂಶಗಳನ್ನು ಪಡೆಯಲು ಸೂರ್ಯಾಷ್ಟಕವನ್ನು ಪಠಿಸಿ.  

ಮಿಥುನ ರಾಶಿ

 ಗಣ್ಯವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮಗೆ ಬರಬೇಕಿದ್ದ ಬಾಕಿ ಹಣ ದೊರೆಯುತ್ತದೆ. ಅನಗತ್ಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ನಿಮ್ಮ ಘನತೆಗೆ ಧಕ್ಕೆಯಾಗದಂತೆ ವರ್ತಿಸಿ.ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆ ಅಗತ್ಯ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಬಂಧುಗಳೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವಿರಿ. ಮಿಥುನ ರಾಶಿಯವರು ಹೆಚ್ಚು ಶುಭ ಫಲಗಳಿಗಾಗಿ ಅರುಣಂ ಪಾರಾಯಣ ಮಾಡಿದರೆ ಒಳ್ಳೆಯದು. 

ಕರ್ಕಾಟಕ ರಾಶಿ

 ಒಪ್ಪಂದಗಳಿಗೆ ಇದು ಅನುಕೂಲಕರ ಸಮಯ. ಏಕಪಕ್ಷೀಯ ನಿರ್ಧಾರಗಳು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆಪ್ತ ಸ್ನೇಹಿತರ ಸಲಹೆಯನ್ನು ಅನುಸರಿಸಿ. ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಸಾಧಾರಣ ಲಾಭವಿದೆ.  ದೂರದ ಪ್ರಯಾಣ ಸಾಧ್ಯತೆ ಇದೆ. ಕರ್ಕಾಟಕ ರಾಶಿಯವರು ಹೆಚ್ಚಿನ ಫಲಿತಾಂಶಗಳನ್ನು ಪಡೆಯಲು ಸೂರ್ಯ ನಾರಾಯಣ ಮೂರ್ತಿಯ ಆರಾಧನೆ ಮಾಡಿ.  

ಸಿಂಹ ರಾಶಿ

 ವಿವಿಧ ಮೂಲಗಳಿಂದ ಆದಾಯ ದೊರೆಯಲಿದೆ. ನಿಮ್ಮ ಮಧ್ಯಸ್ಥಿಕೆಯಿಂದ ಸಮಸ್ಯೆಯೊಂದು ಬಗೆಹರಿಯಲಿದೆ. ಫೋನ್ ಸಂದೇಶಗಳ ಬಗ್ಗೆ ಎಚ್ಚರದಿಂದ ವ್ಯವಹರಿಸಬೇಕು. ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿ. ಸಂಬಂಧಿಕರನ್ನು ಭೇಟಿ ಮಾಡಲಿದ್ದೀರಿ. ಸಿಂಹ ರಾಶಿಯವರು ಇನ್ನಷ್ಟು ಶುಭ ಫಲಿತಾಂಶಗಳನ್ನು ಪಡೆಯಲು ನವಗ್ರಹ ಪೀಡಹರ ಸ್ತೋತ್ರವನ್ನು ಪಠಿಸಿ.  

ಕನ್ಯಾ ರಾಶಿ

 ವಿಶ್ರಾಂತಿ ಇಲ್ಲದೆ ಕೆಲಸ ಮಾಡುವಿರಿ. ನಿರೀಕ್ಷೆಗಳು ನಿಜವಾಗುತ್ತವೆ. ಕೆಲಸದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಇನ್ನಷ್ಟು ಶ್ರಮ ವಹಿಸಬೇಕಿದೆ. ಸ್ನೇಹಿತರೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೀರಿ.  ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರಿ. ಮೂರನೇ ವ್ಯಕ್ತಿಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಕನ್ಯಾ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳನ್ನು ಪಡೆಯಲು ಸೂರ್ಯನನ್ನು ಪೂಜಿಸಿ. 

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಉತ್ತಮ ದಿನ.  ಕೆಲಸ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ಸಾಗುತ್ತದೆ. ಮದುವೆಯ ಪ್ರಯತ್ನ ಫಲ ನೀಡಲಿದೆ. ದಿಢೀರ್‌ ಪ್ರವಾಸವನ್ನು ಯೋಜಿಸಲಿದ್ದೀರಿ. ಆರೋಗ್ಯದ ವಿಚಾರಗಳಲ್ಲಿ ಜಾಗ್ರತೆ ವಹಿಸಬೇಕು. ತುಲಾ ರಾಶಿಯವರಿಗೆ ನವಗ್ರಹ ಪೀಡಹರ ಮಂತ್ರ ಪಠಣೆ ಹೆಚ್ಚು ಶುಭ ಫಲಿತಾಂಶಗಳನ್ನು ನೀಡುತ್ತದೆ.  

ವೃಶ್ಚಿಕ ರಾಶಿ

  ಆಪ್ತ ಸ್ನೇಹಿತರ ಸಲಹೆಯನ್ನು ಅನುಸರಿಸಿ. ಖರ್ಚು ವೆಚ್ಚಗಳು ಸಮನಾಗಿರಲಿವೆ. ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಿ. ಪ್ರಮುಖ ವಿಚಾರದ ಬಗ್ಗೆ ಬಹಳ ಯೋಚನೆ ಮಾಡುವಿರಿ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ. ವೃಶ್ಚಿಕ ರಾಶಿಯವರು ಹೆಚ್ಚು ಶುಭ ಫಲಗಳಿಗಾಗಿ ಆದಿತ್ಯ ಹೃದಯವನ್ನು ಪಠಿಸಬೇಕು.  

ಧನು ರಾಶಿ

 ನಿಮ್ಮ ಗುರಿಯನ್ನು ನೀವು ಸಾಧಿಸುವಿರಿ. ನಿಮ್ಮ ಪರಿಶ್ರಮ ಇತರರಿಗೆ ಸ್ಪೂರ್ತಿಯಾಗಲಿದೆ. ಹಣ ಉಳಿತಾಯದ ಬಗ್ಗೆ ಗಮನ ಕೊಡಿ. ವ್ಯವಹಾರಗಳಲ್ಲಿ ಏಕಾಗ್ರತೆ ಸಾಧಿಸಲಿದ್ದೀರಿ. ಪ್ರಮುಖ ಕೆಲಸ ಕಾರ್ಯಗಳನ್ನು ಸೂಕ್ತ ಸಮಯಕ್ಕೆ ಪೂರೈಸಲಿದ್ದೀರಿ. ಅಪರಿಚಿತರೊಂದಿಗೆ ಜಾಗರೂಕರಾಗಿರಬೇಕು. ಧನು ರಾಶಿಯವರು ಹೆಚ್ಚು ಶುಭ ಫಲಗಳಿಗಾಗಿ ಸೂರ್ಯಾಷ್ಟಕವನ್ನು ಪಠಿಸಬೇಕು.  

ಮಕರ ರಾಶಿ

  ಮರಳು ಮಾಡುವ ಜಾಹೀರಾತುಗಳನ್ನು ನಂಬಿ ಮೋಸ ಹೋಗಬೇಡಿ, ಎಲ್ಲವನ್ನೂ ಕೂಲಂಕಷವಾಗಿ ವಿವರಿಸಿ. ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಸಹಾಯದಿಂದ ಮತ್ತೊಬ್ಬರಿಗೆ ಒಳ್ಳೆಯದಾಗಲಿದೆ. ಆದರೆ ಮತ್ತೊಬ್ಬರಿಂದ ಸಹಾಯ ನಿರೀಕ್ಷಿಸಬೇಡಿ, ಪ್ರಮುಖ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ. ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಮಕರ ರಾಶಿಯವರು ಇನ್ನಷ್ಟು ಶುಭ ಫಲಿತಾಂಶಗಳಿಗಾಗಿ ನವಗ್ರಹಶಾಂತಿ ಮಾಡಿಸಬೇಕು.  

ಕುಂಭ ರಾಶಿ

  ಹೊಸ ಕೆಲಸಗಳನ್ನು ಆರಂಭಿಸಲಿದ್ದೀರಿ. ಒಳ್ಳೆ ಅವಕಾಶಗಳು ದೊರೆಯಲಿದೆ. ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಬಹಳ ಹಿಂದೆ ಆರಂಭಿಸಿದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಖರ್ಚು ವೆಚ್ಚಗಳ ಕಡೆ ಗಮನ ಇರಲಿ. ಮಕ್ಕಳಿಗೆ ಒಳ್ಳೆಯದಾಗುತ್ತದೆ. ಪರಿಚಯಸ್ಥರ ಮಾತುಗಳು ಬೇಸರ ಎನಿಸಿದರೂ ನಿಮ್ಮನ್ನು ಟೀಕೆ ಮಾಡುವವರ ಕಡೆ ಗಮನ ಕೊಡಬೇಡಿ. ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ.  

ಮೀನ ರಾಶಿ

  ಸಂಬಂಧಗಳು ಸುಧಾರಿಸಲಿವೆ. ಖರ್ಚು ಹೆಚ್ಚಾಗುವುದು, ಉಳಿತಾಯದ ಕಡೆ ಗಮನ ಹರಿಸಬೇಕು. ಪ್ರೀತಿಪಾತ್ರರ ಆರೋಗ್ಯ ಏರುಪೇರಾಗಬಹುದು. ಮತ್ತೊಬ್ಬರ ಕೆಲಸ ಕಾರ್ಯಗಳ ನಡುವೆ ಹಸ್ತಕ್ಷೇಪ ಬೇಡ. ಹಿರಿಯರನ್ನು ಭೇಟಿ ಮಾಡಲಿದ್ದೀರಿ.  ಮೀನ ರಾಶಿಯವರಿಗೆ ಹೆಚ್ಚು ಮಂಗಳಕರ ಫಲಿತಾಂಶಗಳಿಗಾಗಿ ನವಗ್ರಹ ಸ್ತೋತ್ರ ಪಠಿಸಿ.

ಬರಹ: ಬ್ರಹ್ಮಶ್ರೀ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶರ್ಮ

ಮೊಬೈಲ್ : 9494981000

www.chilakamarthi.com

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).