ಕನ್ನಡ ಸುದ್ದಿ  /  Astrology  /  Tomorrow Horoscope Astrological Prediction For 30th March 2024 Horoscope Kundali News In Kannada Sts

Tomorrow Horoscope: ಉದ್ಯೋಗದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಲಿದ್ದೀರಿ, ಭೂ ವಿವಾದ ಎದುರಾಗಲಿದೆ; ನಾಳಿನ ದಿನಭವಿಷ್ಯ

30th March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ಮಾರ್ಚ್‌ 30ರ ದಿನಭವಿಷ್ಯ
ಮಾರ್ಚ್‌ 30ರ ದಿನಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (30th March 2024 Horoscope).

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಶನಿವಾರ

ತಿಥಿ: ಪಂಚಮಿ ಸಂಜೆ 5.17 ರವರೆಗೂ ಇರುತ್ತದೆ. ಅನಂತರ ಷಷ್ಠಿ ಆರಂಭವಾಗಲಿದೆ.

ನಕ್ಷತ್ರ: ಅನುರಾದ ನಕ್ಷತ್ರವು ಸಂಜೆ 6.31 ರವರೆಗೂ ಇರುತ್ತದೆ. ಅನಂತರ ಜ್ಯೇಷ್ಠ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಿಗ್ಗೆ 6.16

ಸೂರ್ಯಾಸ್ತ: ಸಂಜೆ 6.30

ರಾಹುಕಾಲ: ಬೆಳಿಗ್ಗೆ 9.00 ರಿಂದ ಬೆಳಿಗ್ಗೆ 10.30

ರಾಶಿಫಲ

ಮೇಷ

ಸಮಯವನ್ನು ಗೌರವಿಸುವ ನೀವು ಯಾವುದಾದರೂಂದು ಕೆಲಸದಲ್ಲಿ ನಿರತರಾಗುವಿರಿ. ಆದಾಯ ಹೆಚ್ಚುತ್ತದೆ. ಕೌಟುಂಬಿಕ ಜವಾಬ್ದಾರಿ ಹೆಚ್ಚುತ್ತದೆ. ಹಿರಿಯರ ಸಲಹೆ ಸೂಚನೆಯಂತೆ ನಡೆವ ಕಾರಣ ತೊಂದರೆಗಳು ನಿವಾರಣೆ ಆಗಲಿದೆ. ವಿದೇಶಿ ಭಾಷಾ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ವೃಷಭ

ಜೀವನವು ಸುಖ ಸಂತೋಷದಿಂದ ಕೂಡಿರುತ್ತದೆ. ಸಹೋದ್ಯೊಗಿಗಳ ಜೊತೆ ಹೊಂದಾಣಿಕೆಯಿಂದ ಬಾಳುವಿರಿ. ಸಂದಿಗ್ಧತೆಗೆ ಒಳಗಾಗಿ ಸೋದರ ಅಥವ ಸೋದರಿಯ ವ್ಯಾಪಾರ ವಹಿವಾಟಿನಲ್ಲಿ ಪಾಲುದಾರರಾಗುವಿರಿ. ವಿದ್ಯಾರ್ಥಿಗಳಿಗೆ ಹಿರಿಯರಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ತಿಳಿ ಹಸಿರು ಬಣ್ಣ

ಮಿಥುನ

ಎಲ್ಲರ ಜೊತೆಯಲ್ಲಿ ಹೊಂದಿಕೊಂಡು ಬಾಳಲು ಪ್ರಯತ್ನಿಸುವಿರಿ. ಆಸ್ತಿಯ ವಿಚಾರದಲ್ಲಿ ಸೋದರಿಯ ಜೊತೆ ಮನಸ್ತಾಪ ಉಂಟಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಧನಲಾಭವಿರುತ್ತದೆ ಖರ್ಚು ವೆಚ್ಚಗಳನ್ನು ಕಡಿತಗೊಳಿಸಲು ಪ್ರಯತ್ನಿಸಿ. ಹಣ ಸಂಪಾದನೆಯನ್ನು ಗುರಿಯಾಗಿಸಿಕೊಂಡು ವಿದೇಶಕ್ಕೆ ತೆರಳುವಿರಿ. ಆತ್ಮೀಯರೊಂದಿಗೆ ಪಾಲುದಾರಿಕೆ ವ್ಯಾಪಾರವಿರುತ್ತದೆ.

ಪರಿಹರ: ಧಾರ್ಮಿಕ ಕೇಂದ್ರಗಳಿಗೆ ಹಾಲು, ಮೊಸರು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಕಟಕ

ಸ್ವಂತ ನಿರ್ಧಾರದಿಂದ ಉದ್ಯೋಗದಲ್ಲಿನ ತೊಂದರೆ ಮರೆಯಾಗುತ್ತದೆ. ಕಾರಣವಿಲ್ಲದೆ ಯಾರೊಂದಿಗೂ ವಾದ ವಿವಾದ ಮಾಡದಿರಿ. ಅನಿರೀಕ್ಷಿತ ಧನಲಾಭವಿದೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಒಡವೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಮನೆಕೊಳ್ಳುವ ಬಗ್ಗೆ ವಿಚಾರ ನಡೆಸುವಿರಿ. ಓಡಾಟಗಳಿಂದ ದೂರ ಇರುವುದು ಒಳ್ಳೆಯದು.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರತ ಬಿಳಿ ಬಣ್ಣ

ಸಿಂಹ

ಕುಟುಂಬದಲ್ಲಿನ ಹಿರಿಯರ ತೀರ್ಮಾನಗಳಿಗೆ ಬದ್ಧರಾಗಬೇಕಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರದಲ್ಲಿನ ತೊಡಕು ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳು ಹಠದ ಗುಣದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಭೂ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಹಾಲಿನ ಬಣ್ಣ

ಕನ್ಯಾ

ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಹಿರಿಯ ಅಧಿಕಾರಿಗಳ ಪ್ರಶಂಸೆಯನ್ನು ಗಳಿಸುವಿರಿ. ಸ್ವಂತ ಶಾಲಾ ಕಾಲೇಜನ್ನು ಆರಂಭಿಸುವ ಆಸೆ ಈಡೇರುತ್ತದೆ. ಮನಸ್ಸಿಲ್ಲದಿದ್ದರೂ ಮನೆಯನ್ನು ಬದಲಿಸುವಿರಿ. ಭೂವಿವಾದವೊಂದು ದೂರವಾಗುತ್ತದೆ. ಆತ್ಮೀಯರೊಬ್ಬರ ಉದ್ಯಮದಲ್ಲಿ ಪಾಲುದಾರಿಕೆ ಪಡೆಯುವಿರಿ.

ಪರಿಹಾರ: ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 11

ಅಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ತುಲಾ

ಉದ್ಯೋಗದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವಿರಿ. ಆತ್ಮೀಯರ ಜೊತೆಯಲ್ಲಿ ಹಣಕಾಸಿನ ಸಂಸ್ಥೆಯೊಂದನ್ನು ಆರಂಭಿಸುವಿರಿ. ವಿದ್ಯಾರ್ಥಿಗಳಿಗೆ ಯಾವುದೆ ಸಮಸ್ಯೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಗಮನ ಇರಲಿ. ಪಾಲುದಾರಿಕೆಯ ವ್ಯಾಪಾರದಲ್ಲಿ ಎಚ್ಚರವಿರಲಿ. ಮನದ ಭಾವನೆಯನ್ನು ಮಕ್ಕಳ ಜೊತೆ ಹಂಚಿಕೊಳ್ಳುವಿರಿ.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ವೃಶ್ಚಿಕ

ಉದ್ಯೋಗವು ಯಾವುದೇ ಬದಲಾವಣೆ ಇಲ್ಲದೆ ಸಾಗಲಿದೆ. ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಕಂಡು ಬರದು. ಹೊಸ ಕಾರ್ಯಯೋಜನೆಗಳು ಉದ್ಯೋಗದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಹೊಸ ವ್ಯಾಪಾರವನ್ನು ಆರಂಭಿಸಲು ಹಿರಿಯರ ಸಹಾಯ ದೊರೆಯುತ್ತದೆ. ಭೂ ವಿವಾದವಿರುತ್ತದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಿ.

ಪರಿಹಾರ: ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ರಕ್ತದಬಣ್ಣ

ಧನಸ್ಸು

ತಪ್ಪಾದ ನಿರ್ಧಾರದಿಂದ ಹಣಕಾಸಿನ ತೊಂದರೆ ಎದುರಾಗಲಿದೆ. ಉದ್ಯೋಗದಲ್ಲಿ ಅಧಿಕಾರಿಗಳ ರೀತಿ ನೀತಿಯಿಂದ ಅಸಮಾಧಾನಗೊಳ್ಳುವಿರಿ. ಸಹೋದ್ಯೋಗಿಗಳ ಸಹಾಯ ದೊರೆಯಲಿದೆ. ಮಕ್ಕಳ ಜೊತೆಯಲ್ಲಿ ಪ್ರೀತಿಯಿಂದ ವರ್ತಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಮಕರ

ಅರೆ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಕಷ್ಟ ನಷ್ಟಗಳಿಗೆ ಹೆದರುವುದಿಲ್ಲ. ಯಾರಿಂದಲೂ ಸಹಾಯ ಬಯಸುವುದಿಲ್ಲ. ಜಯಶಾಲಿಯಾಗುವರು. ಸೋದರನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಪ್ರಶಾಂತವಾದ ಸನ್ನಿವೇಶವನ್ನು ಇಷ್ಟಪಡುವಿರಿ.

ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಕುಂಭ

ನಿಮ್ಮ ಮಾತನ್ನು ಎಲ್ಲರೂ ಗೌರವಿಸುತ್ತಾರೆ. ಉದ್ಯೋಗದಲ್ಲಿ ಅಧಿಕಾರಿಯ ಸ್ಥಾನಮಾನವನ್ನು ತಲುಪುವಿರಿ. ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ಶುದ್ಧ ಮನಸ್ಕರಾಗಿ ದೊರೆಯುವ ಕೆಲಸವನ್ನು ಮಾಡುವಿರಿ. ಅನಾವಶ್ಯಕವಾದ ಮಾತುಗಾರಿಕೆಗೆ ಪ್ರಾಶಸ್ತ್ಯ ನೀಡುವುದಿಲ್ಲ. ಮಕ್ಕಳ ಮೇಲೆ ಅನುಕಂಪ ಇರುತ್ತದೆ.

ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಮೀನ

ಬುದ್ಧಿವಂತಿಕೆಯ ನಿರ್ಧಾರ ಕುಟುಂಬಕ್ಕೆ ಆಸರೆಯಾಗುತ್ತದೆ. ವಾಸಸ್ಥಳವನ್ನು ಬದಲಿಸುವಿರಿ. ಹಣಕಾಸಿನ ಕೊರತೆ ನೀಗಲು ಬಿಡುವಿನ ವೇಳೆ ವ್ಯಾಪಾರವನ್ನು ಆರಂಭಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ಮನೆಯನ್ನು ವಿಸ್ತರಿಸಲು ನಿರ್ಧರಿಸುವಿರಿ. ವೃದ್ದಾಶ್ರಮ ಅಥವಾ ಅನಾಥಾಶ್ರಮದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ.

ಪರಿಹಾರ: ಪುಟ್ಟ ಮಕ್ಕಳಿಗೆ ಬೆಣ್ಣೆ ನೀಡಿ ಇಂದಿನ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕಂದು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).