ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಸಂಗಾತಿಗೆ ಆಭರಣ ಕೊಳ್ಳುವಿರಿ, ಕೆಲಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಬೇಸರ ಕಾಡಲಿದೆ; ನಾಳೆಯ ದಿನ ಭವಿಷ್ಯ

Tomorrow Horoscope: ಸಂಗಾತಿಗೆ ಆಭರಣ ಕೊಳ್ಳುವಿರಿ, ಕೆಲಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಬೇಸರ ಕಾಡಲಿದೆ; ನಾಳೆಯ ದಿನ ಭವಿಷ್ಯ

31st May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ಸಂಗಾತಿಗೆ ಆಭರಣ ಕೊಳ್ಳುವಿರಿ, ಕೆಲಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಬೇಸರ ಕಾಡಲಿದೆ; ನಾಳೆಯ ದಿನ ಭವಿಷ್ಯ
ಸಂಗಾತಿಗೆ ಆಭರಣ ಕೊಳ್ಳುವಿರಿ, ಕೆಲಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಬೇಸರ ಕಾಡಲಿದೆ; ನಾಳೆಯ ದಿನ ಭವಿಷ್ಯ

ನಾಳೆಯ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಈ ಮಾಹಿತಿ ಒದಗಿಸಿದ್ದಾರೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (31st May 2024 Daily Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಶುಕ್ರವಾರ

ತಿಥಿ: ಬೆಳಗ್ಗೆ 09:38 ವರೆಗೆ ಅಷ್ಟಮಿ ಇದ್ದು ನಂತರ ನವಮಿ ಆರಂಭವಾಗುತ್ತದೆ

ನಕ್ಷತ್ರ : ಬೆಳಗ್ಗೆ 06:14 ವರೆಗೆ ಶತಭಿಷ ನಕ್ಷತ್ರವಿದ್ದು ನಂತರ ಪೂರ್ವ ಭಾದ್ರಪದ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05:24

ಸೂರ್ಯಾಸ್ತ: ಸಂಜೆ 7:14

ರಾಹುಕಾಲ: ಬೆಳಗ್ಗೆ 10:35 ರಿಂದ 12:19 ವರೆಗೆ

ರಾಶಿ ಫಲ

 

ಮೇಷ ರಾಶಿ

ನಿಮ್ಮ ಸಂಗಾತಿಗಾಗಿ ನೀವು ಕೆಲವು ಹೊಸ ಉಡುಗೊರೆಗಳು ಮತ್ತು ಆಭರಣಗಳನ್ನು ಖರೀದಿಸುತ್ತೀರಿ. ಕೆಟ್ಟ ಅಭ್ಯಾಸಗಳನ್ನು ಬಿಡುವುದು ಉತ್ತಮ. ಉದ್ಯೋಗದ ಸಲುವಾಗಿ ದೂರದ ಊರಿಗೆ ಪ್ರಯಾಣಿಸಬಹುದು. ಅನಾವಶ್ಯಕ ಖರ್ಚುಗಳು ಹೆಚ್ಚಾಗಬಹುದು. ಬಹಳ ದಿನಗಳಿಂದ ನಿಮಗೆ ಬರಬೇಕಿದ್ದ ಹಣ ವಾಪಸ್‌ ದೊರೆಯಲಿದೆ. ಆರೋಗ್ಯ ಸುಧಾರಿಸುತ್ತದೆ.

ವೃಷಭ ರಾಶಿ

ಕೆಲಸದಲ್ಲಿ ನಿಮ್ಮ ಶ್ರಮವನ್ನು ಹಿರಿಯ ಅಧಿಕಾರಿಗಳು ಗುರುತಿಸುತ್ತಾರೆ. ಆರೋಗ್ಯದ ಕಡೆ ಗಮನ ನೀಡಿ. ಉತ್ತಮ ಆಹಾರ ಸೇವಿಸಿ. ನಿಮ್ಮ ಆಡಳಿತ ಗ್ರಹ ಶುಕ್ರವು ಇಂದು ಎಲ್ಲಾ ರೀತಿಯಲ್ಲೂ ಉತ್ತಮ ಫಲಗಳನ್ನು ನೀಡಲಿದ್ದಾನೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಆತುರ ಬೇಡ. ತಾಳ್ಮೆಯಿಂದ ಯೋಚಿಸಿ , ಆತ್ಮೀಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.

ಮಿಥುನ ರಾಶಿ

ನಿಮ್ಮ ಕಾರ್ಯಗಳನ್ನು ಎಲ್ಲರೂ ಪ್ರಶಂಶಿಸುತ್ತಾರೆ. ಕುಟುಂಬದೊಂದಿಗೆ ಶಾಂತಿ ಮತ್ತು ನೆಮ್ಮದಿ ಇರುತ್ತದೆ. ನಿರೀಕ್ಷೆಗಿಂತ ಹೆಚ್ಚಿನ ಹಣ ಬರಲಿದೆ. ವೆಚ್ಚವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಬೆಂಬಲವಿದೆ.

ಕರ್ಕಾಟಕ ರಾಶಿ

ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ. ದಿನಾಂತ್ಯದಲ್ಲಿ ಎಲ್ಲವೂ ಸರಿ ಆಗಲಿದೆ. ಒತ್ತಡವನ್ನು ಕಡಿಮೆ ಮಾಡಿ. ಆದಾಯ ಖರ್ಚು ಸರಿಸಮನಾಗಿ ಇರಲಿದೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ವಾದ ವಿವಾದಗಳನ್ನು ತಪ್ಪಿಸಿ. ಆರೋಗ್ಯ ಸಮಸ್ಯೆಗಳಿರುತ್ತವೆ. ವೈದ್ಯರನ್ನು ಸಂಪರ್ಕಿಸಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಮಧ್ಯಮ ಫಲಿತಾಂಶ ದೊರೆಯಲಿದೆ. ಪ್ರಮುಖ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಆಪ್ತರೊಂದಿಗೆ ಜಗಳವಾಗುವ ಸೂಚನೆಗಳಿವೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ವಾದಗಳನ್ನು ತಪ್ಪಿಸಿ. ಪ್ರಮುಖ ದಾಖಲೆಗಳಿಗೆ ಸಹಿ ಮಾಡುವಾಗ ಜಾಗರೂಕರಾಗಿರಿ.

ಕನ್ಯಾ ರಾಶಿ

ಉದ್ಯಮಿಗಳು ಪಾಲುದಾರಿಕೆ ವ್ಯವಹಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ಪ್ರತಿಭೆಯಿಂದ ಎಲ್ಲರನ್ನೂ ಮೆಚ್ಚಿಸುವಿರಿ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಉದ್ಯೋಗಿಗಳಿಗೆ ಸಾಧಾರಣ ಸಮಯ. ಆರೋಗ್ಯ ಸಹಜವಾಗಿರುತ್ತದೆ. ಶ್ರೀಕೃಷ್ಣನ ಪೂಜೆ ಮಾಡಬೇಕು.

ತುಲಾ ರಾಶಿ

ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ದೊರೆಯಲಿದೆ. ಹಠಾತ್ ಆರ್ಥಿಕ ಲಾಭಗಳಿವೆ. ಸಹೋದರರಿಂದ ಸಹಾಯವೂ ದೊರೆಯುತ್ತದೆ. ದೇವಾಲಯಗಳಿಗೆ ಭೇಟಿ ನೀಡುವಿರಿ. ಸಮಾಜದಲ್ಲಿ ಗೌರವ ದೊರೆಯಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ಉದ್ಯೋಗಿಗಳು ಸಂಬಳ ಹೆಚ್ಚಳ ಮತ್ತು ಬಡ್ತಿ ಪಡೆಯುತ್ತಾರೆ. ಮಹಿಳೆಗೆ ಕೌಟುಂಬಿಕ ಸಮಸ್ಯೆಗಳಿರುತ್ತವೆ.

ವೃಶ್ಚಿಕ ರಾಶಿ

ಸಹೋದರರು ಮತ್ತು ಸಂಬಂಧಿಕರೊಂದಿಗೆ ಕಲಹದ ಸೂಚನೆಗಳಿವೆ. ವ್ಯವಹಾರಗಳ ವಿಸ್ತರಣೆಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಹಿಳೆಯರಿಗೆ ಮಾನಸಿಕ ಒತ್ತಡ ಇರುತ್ತದೆ. ಒಂದಿಷ್ಟು ಹಣ ಕಳೆದುಕೊಳ್ಳಬಹುದು. ಸ್ನೇಹಿತರು ಶತ್ರುಗಳಾಗಿ ಬದಲಾಗಬಹುದು. ಆದರೆ ನೀವು ತಾಳ್ಮೆಯಿಂದ ಇದ್ದರೆ ಬಹುತೇಕ ಸಮಸ್ಯೆ ಪರಿಹಾರವಾದಂತೆ.

ಧನಸ್ಸು ರಾಶಿ

ಆಸ್ತಿ ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳು ಕಿರಿಕಿರಿಯುಂಟುಮಾಡುತ್ತವೆ. ಸಾಲ ಮಾಡಬೇಕಾಗಿಬರಬಹುದು. ಸಂತಾನದ ವಿಷಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರಿಗಳಿಗೆ ಸಾಧಾರಣ ಲಾಭವಿದೆ. ಉದ್ಯೋಗಿಗಳಿಗೆ ಹಠಾತ್ ಸಮಸ್ಯೆ ಎದುರಾಗಬಹುದು. ಕೌಟುಂಬಿಕ ಸಮಸ್ಯೆಗಳು ತಲೆದೋರಬಹುದು. ನೀವು ಅಂದುಕೊಂಡ ಕೆಲಸಗಳು ಸಾಗುವುದಿಲ್ಲ.

ಮಕರ ರಾಶಿ

ಉದ್ಯೋಗ ಪ್ರಯತ್ನಗಳು ಫಲ ನೀಡುವುದಿಲ್ಲ. ಮಿತ್ರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದು. ತೀರ್ಥಯಾತ್ರೆ ಕೈಗೊಳ್ಳಲಿದ್ದೀರಿ. ಇತರರಿಂದ ಬರಬೇಕಾದ ಹಣ ಸಕಾಲಕ್ಕೆ ಸಿಗುವುದಿಲ್ಲ. ಸಂಬಂಧಿಕರಿಂದ ಸಹಾಯ ದೊರೆಯುತ್ತದೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿವೆ. ಸಹೋದರ ಸಹೋದರಿಯರೊಂದಿಗೆ ಜಗಳ ಉಂಟಾಗಬಹುದು. ಉದ್ಯೋಗದಲ್ಲಿ ಹಠಾತ್ ಬದಲಾವಣೆ ಇರಲಿದೆ.

ಕುಂಭ ರಾಶಿ

ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ಹೊಸ ವಾಹನ ಮತ್ತು ಆಭರಣಗಳನ್ನು ಖರೀದಿಸುವಿರಿ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಬರಬೇಕಿದ್ದ ಹಣ ವಾಪಸ್‌ ದೊರೆಯಲಿದೆ. ಹಠಾತ್ ಆರ್ಥಿಕ ಲಾಭಗಳಿವೆ. ವ್ಯಾಪಾರಸ್ಥರಿಗೆ ಲಾಭ ದೊರೆಯಲಿದೆ. ಹೊಸ ಪಾಲುದಾರರ ಸೇರ್ಪಡೆಯಿಂದ ಲಾಭವಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಇದೆ.

ಮೀನ ರಾಶಿ

ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ. ಪೋಷಕರ ಸಮಸ್ಯೆಗಳು ಮತ್ತು ಸಂಬಂಧಿಕರಿಂದ ಒತ್ತಡ. ದೈಹಿಕ ಕಾಯಿಲೆಗಳು ನೋವುಂಟುಮಾಡಬಹುದು. ವಿವಾದಗಳಿಂದ ದೂರವಿರುವುದು ಉತ್ತಮ. ಸಹೋದರ-ಸಹೋದರಿಯರ ನಡುವೆ ಜಗಳ ಉಂಟಾಗುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬರಹ: ಬ್ರಹ್ಮಶ್ರೀ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶರ್ಮ, ಜ್ಯೋತಿಷಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.