ಕನ್ನಡ ಸುದ್ದಿ  /  Astrology  /  Tomorrow Horoscope Astrological Prediction For 4th April 2024 Horoscope Kundali News In Kannada Sts

Tomorrow Horoscope: ಆಸ್ತಿ ತಗಾದೆಗೆ ಪರಿಹಾರ ದೊರೆಯಲಿದೆ, ವೃತ್ತಿ ಕ್ಷೇತ್ರದ ವಿರೋಧಿಗಳ ಬಗ್ಗೆ ಎಚ್ಚರಿಕೆ ಇರಲಿ; ನಾಳೆಯ ದಿನ ಭವಿಷ್ಯ

4th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (4th April 2024 Horoscope).

ನಾಳೆಯ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಗುರುವಾರ

ತಿಥಿ : ದಶಮಿ 11.50 ರವರೆಗೂ ಇದ್ದು ನಂತರ ಏಕಾದಶಿ ಆರಂಭವಾಗಲಿದೆ.

ನಕ್ಷತ್ರ : ಶ್ರವಣ ನಕ್ಷತ್ರವು .04.18 ರವರೆಗೂ ಇದ್ದು ನಂತರ ಧನಿಷ್ಠ ನಕ್ಷತ್ರ ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 06.15

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: 01.30 ರಿಂದ 03.00

ರಾಶಿ ಫಲ

ಮೇಷ

ವಾಣಿಜ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಿಹಿ ಸುದ್ಧಿಯನ್ನು ನಿರೀಕ್ಷಿಸಬಹುದು. ಮಹಿಳಾ ಉದ್ಯೋಗಿಗಳಿಗೆ ಶುಭದಿನ. ಅಜೀರ್ಣದ ತೊಂದರೆ ನಿಮ್ಮನ್ನು ಕಾಡಬಹುದು. ಕಲಾವಿದರಿಗೆ ಪ್ರಶಸ್ತಿ-ಸಮ್ಮಾನ ದೊರೆಯುತ್ತವೆ. ಸಭೆ ಸಮಾರಂಭಗಳಲ್ಲಿ ಅಥಿತಿಗಳಾಗಿ ಭಾಗವಹಿಸುವಿರಿ. ಬುದ್ಧಿವಂತಿಕೆಯಿಂದ ಅವಕಾಶವನ್ನು ನಿಮ್ಮದಾಗಿಸಿಕೊಳ್ಳುವಿರಿ. ನೀವು ಆಡುವ ಪ್ರತಿ ಮಾತಿಗೂ ಮನ್ನಣೆ ದೊರೆಯುತ್ತದೆ. ನಿಮ್ಮ ಬಾಳ ಸಂಗಾತಿಯ ಜೊತೆಗಿನ ಸಮಸ್ಯೆಯೊಂದು ಕೊನೆಗೊಳ್ಳಲಿದೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಳದಿ

ವೃಷಭ

ಮಕ್ಕಳ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿದ ಅಡ್ಡಿಯೊಂದು ದೂರವಾಗಲಿದೆ. ತೋಟಗಾರಿಕೆಯಲ್ಲಿ ತೊಡಗಿದವರಿಗೆ ಮಧ್ಯಮ ಮಟ್ಟದ ಲಾಭ ದೊರೆಯಲಿದೆ. ನಿಮ್ಮ ತಾಯಿಯವರ ಆರೋಗ್ಯದಲ್ಲಿ ಕೊಂಚ ಏರುಪೇರು ಇರುತ್ತದೆ. ಆದಾಯದ ಬಗ್ಗೆ ಹೊಸ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸುವಿರಿ. ಆಸ್ತಿಯ ತಗಾದೆ ಇದ್ದಲ್ಲಿ ಪರಿಹಾರ ದೊರೆಯುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಲಾಭವಿದೆ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು :ಈಶಾನ್ಯ

ಅದೃಷ್ಟದ ಬಣ್ಣ : ಹಸಿರು ಬಣ್ಣ

ಮಿಥುನ

ಕೌಟುಂಬಿಕ ವಿಚಾರಗಳಲ್ಲಿ ಶ್ರದ್ದೆ ವಹಿಸುವಿರಿ. ನಿಮ್ಮ ತೀರ್ಮಾನಗಳನ್ನು ಎಲ್ಲರೂ ಗೌರವಿಸುತ್ತಾರೆ. ಉದ್ಯೋಗದಲ್ಲಿ ನಿರೀಕ್ಷಿಸಿದ ಅನುಕೂಲತೆಗಳು ದೊರೆಯುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ತಂದೆ ತಾಯಿಗಳ ಸಹಾಯ ದೊರೆಯುತ್ತದೆ. ಕಷ್ಟಪಟ್ಟು ಸಮಯ ವ್ಯರ್ಥ ಮಾಡದೆ ಓದುವ ಕಾರಣ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡುತ್ತಾರೆ. ಹಣ ಉಳಿತಾಯ ಮಾಡಲು ಸಫಲರಾಗುವಿರಿ. ಸಮಾಜ ಸೇವೆಯಲ್ಲಿ ನೆಮ್ಮದಿ ಕಾಣುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕಟಕ

ವಾದ ವಿವಾದಗಳಿಗೆ ಅವಕಾಶ ಕೊಡದೆ ಕೆಲಸ ಸಾಧಿಸುವಿರಿ. ನಿಮ್ಮ ಸೋದರಿಯ ಜೀವನದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಲಿದೆ. ನಿಮ್ಮ ಕ್ರಿಯಾಶೀಲ ವ್ತ್ಯಕ್ತಿತ್ವ ಜನಮನ್ನಣೆ ಗಳಿಸುತ್ತದೆ. ಜನೋಪಕಾರಿ ಕೆಲಸವೊಂದನ್ನು ಮಾಡುವಿರಿ. ಸಮಾಜದಲ್ಲಿ ವಿಶೇಷವಾದ ಗೌರವ ದೊರೆಯುತ್ತದೆ. ಅನಿವಾರ್ಯವಾಗಿ ಬೇರೆಯವರಿಂದ ಹಣದ ಸಹಾಯ ಪಡೆಯುವಿರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ

ಸಿಂಹ

ಅತಿಯಾದ ಆತ್ಮವಿಶ್ವಾಸದಿಂದ ಹಣಕಾಸಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಿರಿ. ಹಿರಿಯರ ಆದೇಶವನ್ನು ಪಾಲಿಸಿದರೆ ಕಷ್ಟ ನಷ್ಟಗಳು ಕಡಿಮೆ ಆಗುತ್ತವೆ. ಸ್ವಂತ ಉದ್ಯಮ ಇದ್ದಲ್ಲಿ ಕಾರ್ಮಿಕರಿಗೆ ಒತ್ತಡ ಹೆಚ್ಚಾಗುತ್ತದೆ. ಸಂಘ ಸಂಸ್ಥೆಗಳಿಗೆ ಧನ ಸಹಾಯ ಮಾಡುವಿರಿ. ಹೈನುಗಾರಿಕೆಯ ವ್ಯಾಪಾರ ಅಥವಾ ಪಶು ಸಂಗೋಪನೆಯಲ್ಲಿ ಹೆಚ್ಚಿನ ಆದಾಯ ಗಳಿಸುವಿರಿ. ಬೇಸರ ಕಳೆಯಲು ದೂರದ ಊರಿನಲ್ಲಿ ಕೆಲಕಾಲ ತಂಗುವಿರಿ. ನಿಮ್ಮ ಮಕ್ಕಳ ಜೀವನದಲ್ಲಿ ಒಳ್ಳೆಯ ಘಳಿಗೆ ಆರಂಭವಾಗುತ್ತವೆ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಗುಲಾಬಿ ಬಣ್ಣ

ಕನ್ಯಾ

ನಿಮ್ಮ ಹಿರಿಯ ಅಣ್ಣ ಆಥವ ಅಕ್ಕನಿಗೆ ತಾಯಿಯಿಂದ ಹಣದ ಸಹಾಯ ದೊರೆಯಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕೃಷಿ ಭೂಮಿಯನ್ನು ಕೊಳ್ಳುವ ನಿಮ್ಮ ಆಸೆ ಪೂರೈಸಲಿದೆ. ಜನರೊಂದಿಗೆ ಬೆರೆಯದೆ ದೂರ ಉಳಿಯುವಿರಿ. ಒತ್ತಡಕ್ಕೆ ಒಳಗಾಗಿ ಮುಖ್ಯ ಕೆಲಸವೊಂದು ಮುಂದೂಡಲ್ಪಡುತ್ತದೆ. ದೃಢವಾದ ಮನಸ್ಸಿರದು.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ತುಲಾ

ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಮನೆತನದ ಭೂಮಿಯನ್ನು ಕಾನೂನುರೀತ್ಯಾ ಪಡೆಯುವಿರಿ. ಸಮಾಜದಲ್ಲಿ ಉನ್ನತ ಕೀರ್ತಿ ಪ್ರತಿಷ್ಠೆಯನ್ನು ಸಂಪಾದಿಸುವಿರಿ. ನಿಮ್ಮ ತಂದೆಯ ಜೊತೆ ಅನಾವಶ್ಯಕ ವಾದ ವಿವಾದ ಉಂಟಾಗುತ್ತದೆ. ಬೇಸರದಿಂದ ಮೌನಕ್ಕೆ ಶರಣಾಗುವಿರಿ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಬೂದು ಬಣ್ಣ

ವೃಶ್ಚಿಕ

ಮಹಿಳಾ ಉದ್ಯಮಿಗಳು ನಿರೀಕ್ಷಿತ ಯಶಸ್ಸನ್ನು ಪಡೆಯಲಿದ್ದಾರೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ತಂದೆಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆವ ಸೂಚನೆಗಳಿವೆ. ವಿದ್ಯಾರ್ಥಿಗಳು ಹಟದಿಂದ ವಿಧ್ಯಾಭ್ಯಾಸದಲ್ಲಿ ನಿರತರಾಗುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವಿರಿ. ಉದ್ಯೋಗ ನೀಡಿದ ಸಂಸ್ಥೆಯ ಮೂಲಕ ವಿದೇಶಕ್ಕೆ ತೆರಳುವಿರಿ. ಕುಟುಂಬಲ್ಲಿ ಸಕಾರಾತ್ಮಕ ಬದಲಾವಣೆಯೊಂದು ಕಾಣಲಿದೆ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ಧನಸ್ಸು

ದೊರೆಯುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಜೀವನದ ಒಳ್ಳೆಯ ದಿನಗಳು ಆರಂಭವಾಗುತ್ತವೆ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಹಣಕಾಸಿನ ವಿಚಾರದಲ್ಲಿ ದಿಢೀರ್ ನಿರ್ಧಾರವನ್ನು ತೆಗೆದುಕೊಂಡು ಯಶಸ್ವಿಯಾಗುವಿರಿ. ನಿಮ್ಮ ಕೈ ಕಾಲುಗಳಿಗೆ ಪೆಟ್ಟು ಬೀಳ ಬಹುದು. ಅಪರೂಪದ ಅತಿಥಿಗಳು ನಿಮ್ಮ ಮನೆಗೆ ಆಗಮಿಸಲಿದ್ದಾರೆ. ನಿಮ್ಮ ಪಾಲಿನ ಆಸ್ತಿಯನ್ನು ಹಣದ ಅವಶ್ಯಕತೆಗಾಗಿ ಮಾರಾಟ ಮಾಡುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಮಕರ

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಿಲ್ಲ. ಅಚ್ಚರಿಯ ಬದಲಾವಣೆಯೊಂದು ನಿಮ್ಮ ಪರವಾಗಿರುತ್ತದೆ. ಅತಿಯಾದ ತಲೆ ನೋವು ನಿಮ್ಮನ್ನು ಕಾಡಲಿದೆ. ಬೇರೆಯವರ ವಾದ ವಿವಾದಗಳ ಮಧ್ಯಸ್ಥಿಕೆ ವಹಿಸಿದಲ್ಲಿ ತೊಂದರೆ ಉಂಟಾಗಲಿದೆ. ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿ ಹಸಿರು

ಕುಂಭ

ಮೊದಲು ಮಾತಿನಿಂದ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ಮಾನಸಿಕ ಒತ್ತಡಕ್ಕೆ ಮಣಿಯುವುದಿಲ್ಲ. ವೃತ್ತಿಯಲ್ಲಿ ಬೇಸರ ಮೂಡುತ್ತದೆ. ಮಕ್ಕಳ ಸಹಯೋಗದಿಂದ ಕ್ರಿಯಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಲ್ಲದ ಮನಸ್ಸಿಂದ ವಾಸಸ್ಥಳವನ್ನು ಬದಲಾಯಿಸುವಿರಿ. ನಿಮ್ಮ ಮಾತಿಗೆ ಗೌರವಿಸಿ ಗೃಹಿಣಿಯರು ಗುಡಿ ಕೈಗಾರಿಕೆಯನ್ನು ಆರಂಭಿಸುತ್ತಾರೆ. ಮಕ್ಕಳು ಉದ್ಯೋಗಕ್ಕಾಗಿ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಾರೆ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸು ಗೆಂಪು

ಮೀನ

ವೃತ್ತಿ ಕ್ಷೇತ್ರದ ವಿರೋಧಿಗಳ ಬಗ್ಗೆ ಎಚ್ಚರಿಕೆ ಇರಲಿ. ಕಲಾವಿದರಿಗೆ ದೊಡ್ಡ ಅವಕಾಶವೊಂದು ಬರಲಿದೆ. ಕಡಿಮೆ ಆದಾಯದ ವ್ಯಾಪಾರವನ್ನು ಮಾಡುವುದಿಲ್ಲ. ನೆಮ್ಮದಿ ಇರದು. ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವಿರಿ. ಮಕ್ಕಳ ಜೀವನದ ರೀತಿ ಸಂತೃಪ್ತಿ ನೀಡುತ್ತದೆ. ಪಾಲುಗಾರಿಕೆಯ ಉದ್ಯಮದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಅನಾವಶ್ಯಕವಾಗಿ ಯಾರನ್ನೂ ನಂಬದಿರಿ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).