ಕುಟುಂಬದ ಮಹಿಳೆಯರಿಗೆ ಅನಾರೋಗ್ಯ ಕಾಡಲಿದೆ, ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ
5th July 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (5th July 2024 Horoscope).
ನಾಳೆಯ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಶುಕ್ರವಾರ
ತಿಥಿ : ಅಮಾವಾಸ್ಯೆ ರಾತ್ರಿ 03.49 ರವರೆಗು ಇದ್ದು ನಂತರ ಪಾಡ್ಯ ಆರಂಭವಾಗುತ್ತದೆ.
ನಕ್ಷತ್ರ: ಆರ್ದ್ರೆ ನಕ್ಷತ್ರವು ರಾತ್ರಿ 04.16 ರವರೆಗೆ ಇದ್ದು ನಂತರ ಪುನರ್ವಸು ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.58
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: 10.51 ರಿಂದ 12.27
ರಾಶಿಫಲ
ಮೇಷ
ಯಾವುದೇ ರೀತಿಯ ಕೆಲಸ ಕಾರ್ಯಗಳಿಗೂ ಹಿಂಜರಿಯುವುದಿಲ್ಲ. ವ್ಯವಸಾಯದಲ್ಲಿ ಆಸಕ್ತಿ ಮೂಡುತ್ತದೆ. ಕಷ್ಟಪಟ್ಟು ದುಡಿಯುವುದಕ್ಕೆ ಹೆದರುವುದಿಲ್ಲ. ರಕ್ತದ ದೋಷ ಇದ್ದವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕುಟುಂಬದ ಮಹಿಳೆಯರ ಆರೋಗ್ಯದಲ್ಲಿ ತೊಂದರೆ ಇದೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಇರುವುದಿಲ್ಲ. ಎದುರಾಗುವ ಸಮಸ್ಯೆಗಳನ್ನು ವಿವೇಚನೆಯಿಂದ ಬಗೆಹರಿಸುವಿರಿ.
ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಹಸಿರು
ವೃಷಭ
ನಿಮ್ಮ ಮಕ್ಕಳು ವಿದೇಶಿ ಭಾಷೆಯಲ್ಲಿ ಪಾಂಡಿತ್ಯವನ್ನು ಗಳಿಸುತ್ತಾರೆ. ಅವರಿಗೆ ವಿದೇಶದಲ್ಲಿ ನೆಲೆಸುವ ಯೋಗವಿದೆ. ತಂದೆಯವರಿಗೆ ವಂಶದ ಆಸ್ತಿಯ ಮೇಲೆ ಅಧಿಕಾರ ದೊರೆಯುತ್ತದೆ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ. ಗುರು ಹಿರಿಯರನ್ನು ಗೌರವದಿಂದ ಕಾಣುವಿರಿ. ನಿಮ್ಮಲ್ಲಿ ಗಂಭೀರವಾದ ನಡೆ ನುಡಿ ಇರುತ್ತದೆ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನೀಲಿ
ಮಿಥುನ
ನಿಮ್ಮ ಮೊಗದಲ್ಲಿ ವಿಶೇಷ ತೇಜಸ್ಸು ಇರುತ್ತದೆ. ಕುಟುಂಬದ ಹಿರಿಯರನ್ನು ಗೌರವದಿಂದ ಕಾಣುವಿರಿ. ಸಮಾಜದ ಗಣ್ಯ ವ್ಯಕ್ತಿಯ ಆಸರೆ ದೊರೆಯಲಿದೆ. ವಿಶೇಷ ಕೀರ್ತಿ ಮತ್ತು ಗೌರವವನ್ನು ಪಡೆದು ಎಲ್ಲರ ಗಮನ ಸೆಳೆಯುವಿರಿ. ಪ್ರಯಾಣ ಮಾಡುವುದೆಂದರೆ ಬಹಳ ಇಷ್ಟ. ಸಂಗಾತಿಯ ಒಡನೆ ಉತ್ತಮ ಬಾಂಧವ್ಯ ಇರುತ್ತದೆ. ನೀವು ಮಾಡದ ತಪ್ಪು ನಿಮ್ಮನ್ನು ಕಾಡುತ್ತದೆ.
ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ನೇರಳೆ
ಕಟಕ
ನಿಮ್ಮ ಸೋದರಿಯವರ ದಾಂಪತ್ಯದಲ್ಲಿದ್ದ ಮನಸ್ತಾಪವು ದೂರವಾಗುತ್ತದೆ. ಮಗಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಮನೆಯ ಸೌಂದರ್ಯವನ್ನು ಹೆಚ್ಚಿಸಲು ಹಣದ ಅವಶ್ಯಕತೆ ಇರುತ್ತದೆ. ತಂದೆಯವರು ಬೇಸರ ಕಳೆಯಲು ಧ್ಯಾನ ಯೋಗದ ಮಾರ್ಗ ಅವಲಂಬಿಸುತ್ತಾರೆ. ಉತ್ತಮ ಸಂಪಾದನೆ ಇದ್ದರೂ ಬೇರೆಯವರ ಸಹಾಯ ಬೇಕಾಗುತ್ತದೆ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಗುಲಾಬಿ
ಸಿಂಹ
ನೀವು ಉದ್ಯೋಗದ ಸಲುವಾಗಿ ಕುಟುಂಬದಿಂದ ದೂರ ಉಳಿಯಬೇಕಾದ ಸಂದರ್ಭ ಎದುರಾಗುತ್ತದೆ. ಕಲಾವಿದರಿಗೆ ಉನ್ನತ ಮನ್ನಣೆ ದೊರೆಯುತ್ತದೆ. ಹಳೆಯ ಸ್ನೇಹಿತರೊಬ್ಬರನ್ನು ಭೇಟಿ ಮಾಡುವಿರಿ. ಅಧೀನದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಂದ ಅಪವಾದವೊಂದನ್ನು ಎದುರಿಸುವಿರಿ. ನೀರಿನಿಂದ ತೊಂದರೆ ಇದೆ ಎಚ್ಚರಿಕೆ ಇರಲಿ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ : ಬಿಳಿ ಬಣ್ಣ
ಕನ್ಯಾ
ಕೃಷಿ ಕಾರ್ಯದಲ್ಲಿ ಆಸಕ್ತಿ ಮೂಡುತ್ತದೆ. ನಿಮ್ಮ ಮಕ್ಕಳಿಗೆ ಗುರು ಸಮಾನವಾದ ಉದ್ಯೋಗ ದೊರೆಯುತ್ತದೆ. ನೀವು ತೊಂದರೆಗೆ ಸಿಲುಕಿದಾಗ ತಂದೆಯವರಿಂದ ಸಹಕಾರ ದೊರೆಯಲಿದೆ. ನಿಮ್ಮಲ್ಲಿರುವ ಹಟದ ಪ್ರಕೃತಿ ಸೋಲಿನಿಂದ ಪಾರು ಮಾಡುತ್ತದೆ. ಉಪಯೋಗ ಇರಲಿ ಇಲ್ಲದೆ ಹೋಗಲಿ ಪದೇ ಪದೇ ಪ್ರವಾಸ ಮಾಡಬೇಕಾಗುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು ನೈರುತ್ಯ
ಅದೃಷ್ಟದ ಬಣ್ಣ : ಬೂದು
ತುಲಾ
ಕುಟುಂಬದ ಗೌರವಕ್ಕೆ ಹಾನಿ ಉಂಟು ಮಾಡುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಯಾವುದೇ ಯೋಚನೆ ಇಲ್ಲದೆ ನಿಮ್ಮ ಮನಸ್ಸಿಗೆ ತೋರಿದ ವಿಚಾರವನ್ನು ಹೇಳುವಿರಿ. ನಾನೇ ಹೆಚ್ಚು ನನ್ನ ಕೆಲಸವೇ ಸರಿ ಎಂಬ ಭಾವನೆ ಇರುತ್ತದೆ. ಉದ್ಯೋಗದಲ್ಲಿ ನಿಮಗೆ ಉನ್ನತ ಅಧಿಕಾರ ದೊರೆಯಲಿದೆ. ನಿಮ್ಮ ಅಧೀನದಲ್ಲಿರುವ ಕಾರ್ಮಿಕರ ಜೊತೆ ಸೋದರ ಪ್ರೀತಿಯಿಂದ ಇರುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕಂದು ಬಣ್ಣ
ವೃಶ್ಚಿಕ
ಹೆಣ್ಣು ಮಕ್ಕಳಿಗೆ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ತಂದೆಗೆ ಸಂಬಂಧಪಟ್ಟ ವಂಶದ ಆಸ್ತಿಯ ಅಲ್ಪ ಭಾಗ ಪರರ ಪಾಲಾಗುತ್ತದೆ. ಸೋದರಿಗೆ ಅನಾರೋಗ್ಯವಿರುತ್ತದೆ. ಗೃಹಿಣಿಯರು ಬುದ್ಧಿವಂತಿಕೆಯಿಂದ ಹಣ ಮತ್ತು ಒಡವೆಗಳನ್ನು ಶೇಖರಿಸಿ ಇಡುತ್ತಾರೆ. ಮಗಳು ಅಥವಾ ಮಗನಿಗೆ ಉಡುಗೊರೆಯಾಗಿ ವಾಹನವನ್ನು ನೀಡುವಿರಿ. ಸೋದರ ಅಥವಾ ಸೋದರಿಗೆ ಸಂಬಂಧದಲ್ಲಿ ವಿವಾಹ ನಿಶ್ಚಯ ಆಗುತ್ತದೆ.
ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ತಿಳಿ ಹಸಿರು
ಧನಸ್ಸು
ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ನಿಮ್ಮಲ್ಲಿನ ಬುದ್ದಿವಂತಿಕೆ ಮತ್ತು ಆತ್ಮವಿಶ್ವಾಸವು ಸಮಸ್ಯೆಯನ್ನು ಗೆಲ್ಲಲು ಕಾರಣವಾಗುತ್ತದೆ. ಸಹೋದ್ಯೋಗಿಗಳ ತೊಂದರೆ ಎದುರಾದರೂ ಹಿರಿಯ ಅಧಿಕಾರಿಗಳ ಬೆಂಬಲ ನಿಮಗಿರುತ್ತದೆ. ವೃತ್ತಿಯಲ್ಲಿ ಪ್ರಗತಿಪರ ಬದಲಾವಣೆಗಳು ಕಂಡು ಬರುತ್ತವೆ. ಯುವಕ ಯುವತಿಯರಿಗೆ ವಿಶೇಷವಾದ ಅನುಕೂಲತೆಗಳು ದೊರೆಯುತ್ತವೆ.
ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನಸುಗೆಂಪು
ಮಕರ
ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಇರುವುದಿಲ್ಲ. ಸ್ವಜನ ಪಕ್ಷಪಾತವು ನಿಮ್ಮ ಪ್ರಗತಿಗೆ ಅಡ್ಡಗಾಲಾಗುತ್ತದೆ. ಅರಿವಿಲ್ಲದಂತೆ ನಿಮ್ಮ ಮಕ್ಕಳು ವಿದ್ಯಾಭ್ಯಾಸದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಂಧು ಬಾಂಧವರ ಜೊತೆ ಉತ್ತಮ ಒಡನಾಟ ಇರುತ್ತದೆ. ಜೀವನದಲ್ಲಿ ತೊಂದರೆಗಳು ಎದುರಾಗ ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ಗೆಲ್ಲಲೇಬೇಕೆಂಬ ಹಟ ಹೆಚ್ಚುತ್ತದೆ.
ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ :11
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ
ಕುಂಭ
ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಯಂತ್ರ ಅಥವಾ ವಾಹನದ ತೊಂದರೆಯನ್ನು ಎದುರಿಸುವಿರಿ. ಸೋದರನ ಜೀವನದ ರೀತಿ ನೀತಿಯ ಬಗ್ಗೆ ಗಮನವಿರಲಿ. ದಂಪತಿ ನಡುವೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಬೇರೆಯವರ ಹಣಕಾಸಿನ ಜವಾಬ್ದಾರಿಯನ್ನು ವಹಿಸಿಕೊಂಡಲ್ಲಿ ತೊಂದರೆ ಇದೆ. ನಿಮ್ಮ ಮಕ್ಕಳಿಗೆ ಕಲೆಯೊಂದು ಒಲಿದಿರುತ್ತದೆ.
ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬಿಳಿ
ಮೀನ
ಇದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಸದಾಕಾಲ ಏಕಾಂಗಿಯಾಗಿ ಇರಲು ಬಯಸುವಿರಿ ಸ್ನೇಹಿತರೊಂದಿಗೆ ಸಂತೋಷದಿಂದ ಇರುವಿರಿ. ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಇರುವ ಜನರ ಸ್ನೇಹ ಪ್ರೀತಿಯನ್ನು ಸಂಪಾದಿಸುವಿರಿ. ಭೂ ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಗಳಿಸುವಿರಿ. ಸಣ್ಣಪುಟ್ಟ ಕೆಲಸ ಕಾರ್ಯಗಳಾದರೂ ಹೆಚ್ಚಿನ ಶ್ರದ್ಧೆಯಿಂದ ಮಾಡಬಯಸುವಿರಿ.
ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಬೂದು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
