ಮಾದರಿ ಕೆಲಸದ ಮೂಲಕ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದ್ದೀರಿ, ಸಾಲವಾಗಿ ನೀಡಿದ್ದ ಹಣ ವಾಪಸ್‌ ದೊರೆಯಲಿದೆ; ನಾಳೆಯ ದಿನ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಾದರಿ ಕೆಲಸದ ಮೂಲಕ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದ್ದೀರಿ, ಸಾಲವಾಗಿ ನೀಡಿದ್ದ ಹಣ ವಾಪಸ್‌ ದೊರೆಯಲಿದೆ; ನಾಳೆಯ ದಿನ ಭವಿಷ್ಯ

ಮಾದರಿ ಕೆಲಸದ ಮೂಲಕ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದ್ದೀರಿ, ಸಾಲವಾಗಿ ನೀಡಿದ್ದ ಹಣ ವಾಪಸ್‌ ದೊರೆಯಲಿದೆ; ನಾಳೆಯ ದಿನ ಭವಿಷ್ಯ

7th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (7th June 2024 Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ--ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ: ಪಾಡ್ಯ 04.43 ವರೆಗೂ ಇರುತ್ತದೆ ನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರವು ರಾತ್ರಿ 08.10 ವರೆಗೂ ಇರುತ್ತದೆ ನಂತರ ಆರ್ದ್ರೆ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.44

ರಾಹುಕಾಲ: 10.47 ರಿಂದ 12.23

ರಾಶಿ ಫಲ

ಮೇಷ

ವಂಶಾಧಾರಿತ ಆಸ್ತಿಯ ಬಗ್ಗೆ ಆಸಕ್ತಿ ಮೂಡುತ್ತದೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ಇರುವ ಕಾರಣ ವಿಶ್ರಾಂತಿ ಇರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರದ್ಧೆ ತೋರಿಸುವುದಿಲ್ಲ. ಕುಟುಂಬವನ್ನು ಸಂತೋಷದಿಂದ ಇರಿಸಲು ಪ್ರಯತ್ನ ಪಡುವಿರಿ. ಪಾಲುದಾರಿಕೆ ವ್ಯಾಪಾರವನ್ನು ನಂಬುವುದಿಲ್ಲ. ಸ್ವಂತ ಪ್ರಯತ್ನದಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿ ಹಸಿರು

ವೃಷಭ

ಗಡಿಬಿಡಿಯ ವಾತಾವರಣದಿಂದ ಒತ್ತಡಕ್ಕೆ ಒಳಗಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಇರುವುದಿಲ್ಲ. ನಿಮ್ಮ ಕೆಲಸದ ಬಗ್ಗೆ ಎಲ್ಲರ ಗಮನ ಇರುತ್ತದೆ. ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಗೋಪ್ಯವಾಗಿ ಇಡುವಿರಿ. ನಿಮ್ಮ ಪ್ರೀತಿಪಾತ್ರರು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಉದ್ಯೋಗದಲ್ಲಿ ಪ್ರಮೋಷನ್‌ ದೊರೆಯುವ ಸಾಧ್ಯತೆ ಇದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸು ಗೆಂಪು

ಮಿಥುನ

ನಿರೀಕ್ಷಿತ ಮೂಲದಿಂದ ಹಣದ ಸಹಾಯ ದೊರೆಯುವುದಿಲ್ಲ. ಸಾಲವಾಗಿ ನೀಡಿದ್ದ ಹಣವು ನಿಮ್ಮ ಕೈಸೇರುವುದು. ಸ್ನೇಹಿತರ ಬೆಂಬಲ ನಿಮಗೆ ದೊರೆಯುತ್ತದೆ. ಸದ್ಯಕ್ಕೆ ವಿವಾಹ ಕಾರ್ಯ ನಡೆಯುವ ಸಾಧ್ಯತೆ ಇಲ್ಲ. ಸ್ತ್ರೀಯರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಬೇಸರ ಹೆಚ್ಚಾಗಿ ಏಕಾಂಗಿಯಾಗಿ ಬಾಳಲು ಇಚ್ಚಿಸುವಿರಿ.

ಪರಿಹಾರ : ತಾಯಿ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ. .

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಕಟಕ

ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಲ್ಲಿರಿ. ಉತ್ತಮ ಆದಾಯ ಗಳಿಸಲು ವಿವಿಧ ಯೋಜನೆಯಲ್ಲಿ ಹಣ ಹೂಡುವಿರಿ. ಆಪತ್ತಿನಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ನೀವು ಮಾಡುವ ಕೆಲಸ ಕಾರ್ಯಗಳು ಎಲ್ಲರಗೂ ಸ್ಪೂರ್ತಿಯಾಗುತ್ತದೆ. ಆತ್ಮೀಯರೊಡನೆ ಹೊರಗೆ ಹೋಗಿ ಸಮಯ ಕಳೆಯಲಿದ್ದೀರಿ. ಉದ್ಯೋಗಿಗಳಿಗೆ ವೇತನ ಹೆಚ್ಚುತ್ತದೆ. ಸಂಗಾತಿಯ ಜೊತೆಯಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಸಿಂಹ

ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧನೆ ನಿಮ್ಮಲ್ಲಿ ಸಂತೋಷ ಮತ್ತು ಹೆಮ್ಮೆ ಮೂಡಿಸುತ್ತದೆ. ಬಂಧು ಬಳಗದವರ ಜೊತೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ಅತೃಪ್ತಿ ಇರುತ್ತದೆ. ಕೋಪದಿಂದ ತಪ್ಪು ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗಿಗಳಿಗೆ ಸಂತೋಷದ ಸುದ್ಧಿ ಬರಲಿದೆ. ದಂಪತಿ ನಡುವೆ ಆತ್ಮೀಯತೆ ಇರುತ್ತದೆ. ಸರ್ಕಾರದ ಸಹಕಾರದಿಂದ ವ್ಯಾಪಾರವೊಂದನ್ನುಆರಂಭಿಸುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಬೂದು

ಕನ್ಯಾ

ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸದೆ ಹೋದಲ್ಲಿ ಕೆಲಸ ಕಾರ್ಯದಲ್ಲಿ ಸುಲಭ ಯಶಸ್ಸು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ತೊಂದರೆ ಇರುತ್ತದೆ. ಕುಟುಂಬದ ಸದಸ್ಯರ ಜೊತೆಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ. ನೀವು ಕಂಡ ಕನಸುಗಳು ಈಡೇರಲಿವೆ. ಕಣ್ಣಿನ ತೊಂದರೆ ಇರಲಿದೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿ ದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು ನೈರುತ್ಯ

ಅದೃಷ್ಟದ ಬಣ್ಣ : ಆಕಾಶ ನೀಲಿ

ತುಲಾ

ಸಹೋದ್ಯೋಗಿಗಳಿಂದ ವಿಶೇಷ ಗೌರವಕ್ಕೆ ಪಾತ್ರರಾಗುವಿರಿ. ಸಂಗಾತಿಯ ಮನದ ಭಾವನೆಗಳನ್ನು ಗೌರವಿಸುವಿರಿ. ಆತುರದಿಂದ ಯಾವುದೇ ಕೆಲಸಕ್ಕೆ ಕೈ ಹಾಕದಿರಿ. ಸೋದರನ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಿರಿ. ದೀರ್ಘಕಾಲದಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆಯ ಬಗ್ಗೆ ಎಚ್ಚರಿಕೆ ಇರಲಿ. ಸಂಗಾತಿಯೊಡನೆ ಅನಾವಶ್ಯಕ ವಾದ ವಿವಾದ ಎದುರಾಗುತ್ತದೆ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು; ಪಶ್ಚಿಮ

ಅದೃಷ್ಟದ ಬಣ್ಣ; ಕೆಂಪು

ವೃಶ್ಚಿಕ

ವಂಶಕ್ಕೆ ಸಂಬಂಧಿಸಿದ ವೃತ್ತಿಯನ್ನು ಅವಲಂಬಿಸುವಿರಿ. ಅಶಕ್ತರಿಗೆ ಸಹಾಯ ಮಾಡುವ ನಿಮ್ಮ ಮನಸ್ಸನ್ನು ಎಲ್ಲರೂ ಗೌರವಿಸುತ್ತಾರೆ. ಈಗ ಇರುವ ಮನೆಯನ್ನು ನವೀಕರಿಸುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಆತ್ಮೀಯರು ಸಹಕರಿಸುತ್ತಾರೆ. ಹಣದ ತೊಂದರೆ ಇರುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಸಂತಸ ಮನೆ ಮಾಡುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಹೆಚ್ಚಿನ ಆಸಕ್ತಿ ತೋರುತ್ತಾರೆ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಎಲೆ ಹಸಿರು

ಧನಸ್ಸು

ತಾಯಿಗೆ ಅನಿರೀಕ್ಷಿತ ಧನಲಾಭವಿದೆ. ಅನಿವಾರ್ಯವಾಗಿ ನಿಮ್ಮ ಜೀವನಶೈಲಿಯನ್ನು ಬದಲಿಸುವಿರಿ. ಸ್ವಂತ ಖರ್ಚಿಗಿಂತಲೂ ಬೇರೆಯವರಿಗೆ ಮಾಡುವ ಖರ್ಚುಗಳು ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ತಮ್ಮ ಕಾರ್ಯ ಸಾಧಿಸಲಿದ್ದಾರೆ. ಪಾಲುದಾರಿಕೆ ವ್ಯಾಪಾರ ಆರಂಭಿಸುವ ಯೋಚನೆಗೆ ಚಾಲನೆ ದೊರೆಯುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೇಸರಿ

ಮಕರ

ಸ್ನೇಹಿತರ ಜೊತೆಗೂಡಿ ದೂರದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಮಕ್ಕಳ ಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ದೈಹಿಕ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳುವಿರಿ. ಮಾನಸಿಕ ಸದೃಢತೆ ಲಭಿಸುತ್ತದೆ. ಹೊಸ ಭೂಮಿ ಅಥವಾ ಮನೆಯನ್ನು ಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತಿ ಕಂಡುಬರುತ್ತದೆ. ಸ್ವಂತ ಉದ್ಧಿಮೆ ಆರಂಭಿಸುವ ಆಸೆ ನೆರವೇರುತ್ತದೆ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗಾಗಿ ಮನರಂಜನಾ ಕೂಟವನ್ನು ಆಯೋಜಿಸುವಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ಕುಂಭ

ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ಗೊಂದಲದ ವಾತಾವರಣ ಇರಲಿದೆ. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಇರುತ್ತದೆ. ಪ್ರಯತ್ನಿಸಿದಲ್ಲಿ ಹಣವನ್ನು ಉಳಿಸಬಹುದು. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಹಟದ ಸ್ವಭಾವದಿಂದ ಆತ್ಮೀಯ ಗೆಳೆಯರಲ್ಲೊಬ್ಬರು ದೂರವಾಗುತ್ತಾರೆ. ಕೆಲವೊಂದು ತಪ್ಪು ತಿಳುವಳಿಕೆಗಳ ಕಾರಣ ಸಂಗಾತಿ ಜೊತೆ ಮನಸ್ತಾಪ ಉಂಟಾಗಲಿದೆ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ಮೀನ

ಅಪೂರ್ಣಗೊಂಡಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಅನಿರೀಕ್ಷಿತವಾಗಿ ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ಸಂಗಾತಿಯು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಮಕ್ಕಳೊಡನೆ ಪ್ರಯಾಣಕ್ಕೆ ಹೋಗುವಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಶ್ರಮಕ್ಕೆ ತಕ್ಕಂಥ ಫಲ ದೊರೆಯುತ್ತದೆ. ಉದ್ಯೋಗ ಬದಲಾಯಿಸುವಿರಿ. ಕಮೀಷನ್ ಆಧಾರಿತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ.

ಪರಿಹಾರ : ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ 3

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.