ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಕಣ್ಣಿನ ಸಮಸ್ಯೆ ಕಾಡಲಿದೆ, ಸ್ವಂತ ವಾಣಿಜ್ಯ ಸಂಸ್ಥೆಯೊಂದನ್ನು ಆರಂಭಿಸಲಿದ್ದೀರಿ; ನಾಳೆಯ ದಿನ ಭವಿಷ್ಯ

Tomorrow Horoscope: ಕಣ್ಣಿನ ಸಮಸ್ಯೆ ಕಾಡಲಿದೆ, ಸ್ವಂತ ವಾಣಿಜ್ಯ ಸಂಸ್ಥೆಯೊಂದನ್ನು ಆರಂಭಿಸಲಿದ್ದೀರಿ; ನಾಳೆಯ ದಿನ ಭವಿಷ್ಯ

7th May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ಕಣ್ಣಿನ ಸಮಸ್ಯೆ ಕಾಡಲಿದೆ, ಸ್ವಂತ ವಾಣಿಜ್ಯ ಸಂಸ್ಥೆಯೊಂದನ್ನು ಆರಂಭಿಸಲಿದ್ದೀರಿ; ನಾಳೆಯ ದಿನ ಭವಿಷ್ಯ
ಕಣ್ಣಿನ ಸಮಸ್ಯೆ ಕಾಡಲಿದೆ, ಸ್ವಂತ ವಾಣಿಜ್ಯ ಸಂಸ್ಥೆಯೊಂದನ್ನು ಆರಂಭಿಸಲಿದ್ದೀರಿ; ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (7th May2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಮಂಗಳವಾರ

ತಿಥಿ : ಚತುರ್ದಶಿ 10.45 ರವರೆಗೂ ಇದ್ದು ನಂತರ ಅಮಾವಾಸ್ಯೆ ಆರಂಭವಾಗುತ್ತದೆ.

ನಕ್ಷತ್ರ : ಅಶ್ವಿನಿ ನಕ್ಷತ್ರವು 03.02 ರವರೆಗೂ ಇದ್ದು ನಂತರ ಭರಣಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.56

ಸೂರ್ಯಾಸ್ತ: ಸಂಜೆ 06.37

ರಾಹುಕಾಲ: 03.29 ರಿಂದ 05.04

ರಾಶಿಫಲ

ಮೇಷ

ಹಣಕಾಸಿನ ಸಂಬಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರ ಎಲ್ಲರ ಮನಗೆಲ್ಲುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಕುಟುಂಬದವರ ಜೊತೆಯಲ್ಲಿ ವಿದೇಶಕ್ಕೆ ತೆರಳುವ ಅವಕಾಶ ಪಡೆಯುವಿರಿ. ಅಧಿಕಾರಿಗಳಿಗೆ ವಿರೋಧಿಗಳ ಉಪಟಳ ಇರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರ ವ್ಯವಹಾರವು ಮಂದಗತಿಯಲ್ಲಿ ಸಾಗುತ್ತದೆ.

ಪರಿಹಾರ : ಬೆಳ್ಳಿ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಸಿರು

ವೃಷಭ

ರಕ್ತಕ್ಕೆ ಸಂಬಂಧಿಸಿದ ತೊಂದರೆ ನಿಮ್ಮನ್ನು ಕಾಡಬಹುದು. ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಿದರೆ ತೊಂದರೆಯೊಂದು ದೂರವಾಗುವುದು. ವಿದ್ಯಾರ್ಜನೆಯೊಂದನ್ನೇ ಗುರಿಯಾಗಿರಿಸಿಕೊಂಡು ಉನ್ನತ ಮಟ್ಟ ತಲುಪುವಿರಿ. ಹೆಣ್ಣುಮಕ್ಕಳ ಸಂಗೀತ ನಾಟ್ಯಾಭ್ಯಾಸವು ಸುಲಲಿತವಾಗಿ ಸಾಗುತ್ತದೆ. ಸ್ವಂತ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವ ಆಸೆ ಈಡೇರಲಿವೆ. ಕಣ್ಣಿನ ತೊಂದರೆ ಉಂಟಾಗಬಹುದು.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ನೀಲಿ

ಮಿಥುನ

ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಕನಿಷ್ಠ ಪಕ್ಷ ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಿದಲ್ಲಿ ಸಮಸ್ಯೆಯೊಂದು ದೂರವಾಗಲಿದೆ. ವಿದ್ಯಾರ್ಜನೆಯು ಸುಲಲಿತವಾಗಿ ಸಾಲುತ್ತದೆ. ಸ್ವಂತ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವ ಸೂಚನೆಗಳಿವೆ. ಹಳೆಯ ಒಪ್ಪಂದದಂತೆ ಪಾಲುದಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಕ್ಕಳ ಜೀವನವನ್ನು ರೂಪಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೇರಳೆ

ಕಟಕ

ಉತ್ತಮ ಅವಕಾಶ ದೊರೆವ ಕಾರಣ ನೌಕರಿಯನ್ನು ಬದಲಿಸುವಿರಿ. ಕಿವಿಗೆ ಸಂಬಂಧಿಸಿದ ತೊಂದರೆ ಕಾಡುತ್ತದೆ. ಸಮಾಜ ಸೇವೆ ಮಾಡುವವರಿಗೆ ವಿಶೇಷವಾದ ಸವಲತ್ತು ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಇರುತ್ತಾರೆ. ಕುಟುಂಬದವರ ಜೊತೆಗೂಡಿ ಬೃಹತ್ ಯೋಜನೆಯನ್ನು ರೂಪಿಸುವಿರಿ.

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ

ಸಿಂಹ

ಆಮದು ರಫ್ತು ಮಾಡುವ ವ್ಯಾಪಾರದಲ್ಲಿ ಲಾಭವಿರುತ್ತದೆ. ರಾಜಕೀಯ ಧುರೀಣರಿಗೆ ಉನ್ನತ ಅಧಿಕಾರ ದೊರೆಯುತ್ತದೆ. ಕುಟುಂಬದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವರು. ತಂದೆಯವರ ವ್ಯಾಪಾರವನ್ನು ಮುಂದುವರೆಸುವಿರಿ. ಕಲುಷಿತ ಆಹಾರ ಸೇವನೆಯಿಂದ ತೊಂದರೆ ಅನುಭವಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 11

ಅದೃಷ್ಟದ ದಿಕ್ಕು ನೈರುತ್ಯ

ಅದೃಷ್ಟದ ಬಣ್ಣ : ಬಿಳಿ

ಕನ್ಯಾ

ಉದ್ಯೋಗದಲ್ಲಿ ಯಾವುದೇ ಬದಲಾವಣೆ ಇರದು. ವಿದ್ಯಾರ್ಥಿಗಳು ಶುದ್ದ ಮನಸ್ಸಿನಿಂದ ಓದಿನಲ್ಲಿ ಮಗ್ನರಾಗುವರು. ಪಾಲುದಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ಆಮದು ಮತ್ತು ರಪ್ತು ವ್ಯಾಪಾರವು ಉತ್ತಮ ಆದಾಯವನ್ನು ಒದಗಿಸುವುದು. ಸಾಲದ ವ್ಯವಹಾರದಲ್ಲಿ ವಿರೋಧವನ್ನು ಎದುರಿಸುವಿರಿ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಬೂದು

ತುಲಾ

ವಿದ್ಯಾರ್ಥಿಗಳ ಸಾಧನೆ ಅಚ್ಚರಿಗೆ ಕಾರಣವಾಗುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದ ಮಧ್ಯವರ್ತಿಯಾದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಯಾವುದೇ ಬದಲಾವಣೆ ಕಾಣದ ಕಾರಣ ನೌಕರಿಯನ್ನು ಬದಲಾಯಿಸುವಿರಿ. ಹವ್ಯಾಸಿ ಕಲಾವಿದರಿಗೆ ವಿನೂತನ ಅವಕಾಶ ದೊರೆಯುತ್ತದೆ. ಸಂದರ್ಭದ ಕೈಗೊಂಬೆಯಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು ಉತ್ತರ

ಅದೃಷ್ಟದ ಬಣ್ಣ: ಕಂದು

ವೃಶ್ಚಿಕ

ಆಧುನಿಕ ತಂತ್ರಜ್ಞಾನದಲ್ಲಿ ಜ್ಞಾನ ಇರುವ ಕಾರಣ ವಿದೇಶಿ ಕಂಪನಿಯೊಂದರಲ್ಲಿ ಉದ್ಯೋಗ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಕುಟುಂಬದಲ್ಲಿ ನಿಮ್ಮ ಮಾತೇ ಅಂತಿಮವಾಗುತ್ತದೆ. ಬೇಸರದಿಂದ ಆರಂಭಿಸಿದ ತೋಟಗಾರಿಕೆಯಲ್ಲಿ ಉತ್ತಮ ಲಾಭ ಗಳಿಸುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಉನ್ನತ ಸ್ಥಾನಮಾನ ಗಳಿಸುತ್ತಾರೆ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು

ಧನಸ್ಸು

ಆರೋಗ್ಯ ಹಾಳು ಮಾಡುವ ಅಹಾರದಿಂದ ಅಜೀರ್ಣ ಕಾಡಲಿದೆ. ಗಣ್ಯವ್ಯಕ್ತಿಗಳ ಸ್ನೇಹ ಸಹಕಾರ ನಿಮಗೆ ದೊರೆಯುತ್ತದೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಕಂಡುಬರುತ್ತವೆ. ವಿದ್ಯಾರ್ಥಿಗಳು ಹಟದಿಂದ ತಮ್ಮ ಕೆಲಸದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಸ್ವಂತ ವ್ಯಾಪಾರ ವಹಿವಾಟಿನಲ್ಲಿ ಅಲ್ಪ ಪ್ರಮಾಣದ ಲಾಭ ದೊರೆಯುತ್ತದೆ. ಮನೆಯ ಸುತ್ತಮುತ್ತಲಿನ ಹೂವಿನ ಗಿಡಗಳು ಒಣಗದಂತೆ ನೋಡಿಕೊಳ್ಳುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ತಿಳಿ ಹಸಿರು

ಮಕರ

ದುಡುಕದೆ ಯೋಚಿಸಿ ಮಾತನಾಡಿದರೆ ವಾದ ವಿವಾದಗಳಿಂದ ದೂರ ಉಳಿಯುವಿರಿ. ಸ್ವಂತ ಮನೆ ಅಥವಾ ಜಮೀನನ್ನು ಖರೀದಿಸುವಿರಿ. ತಂದೆಗೆ ಸೇರಿದ ಹಣದಲ್ಲಿ ನಿಮಗೆ ಸಹಾಯ ದೊರೆಯುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ವಿದ್ಯಾರ್ಥಿಗಳು ದೃಢ ಸಂಕಲ್ಪದಿಂದ ತಮ್ಮ ಕರ್ತವ್ಯದಲ್ಲಿ ಮಗ್ನರಾಗುತ್ತಾರೆ. ಚಿನ್ನಾಭರಣ ಖರೀದಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನಸು ಗೆಂಪು

ಕುಂಭ

ನಿಮ್ಮಲ್ಲಿ ಅಪ್ರತಿಮ ಪ್ರತಿಭೆಗೆ ತಕ್ಕ ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಹುದುಗಿರುವ ಕಲೆಗೆ ತಕ್ಕ ವೇದಿಕೆ ದೊರೆಯಲಿದೆ. ಸಂಕೋಚದ ವ್ಯಕ್ತಿತ್ವ ನಿಮ್ಮ ಅವಕಾಶಗಳನ್ನು ದೂರ ಮಾಡುತ್ತದೆ ಎಚ್ಚರಿಕೆ ಇರಲಿ. ಮಕ್ಕಳ ಸಹಾಯ ಸಹಕಾರದಿಂದ ಸ್ವಂತ ಸಂಸ್ಥೆಯೊಂದನ್ನು ಆರಂಭಿಸಿ ಯಶಸ್ಸನ್ನು ಕಾಣುವಿರಿ. ಉದ್ಯೋಗಸ್ಥರು ಸಾಮಾನ್ಯವಾದ ಯಶಸ್ಸಿಗೆ ಸಮಾಧಾನರಾಗಬೇಕು.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬಿಳಿ

ಮೀನ

ಆತುರದ ಸ್ವಭಾವ ಇರದು. ವಿದೇಶಿಯವರ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಸೋದರನ ವ್ಯಾಪಾರದಲ್ಲಿ ಪಾಲುಗಾರಿಕೆ ಪಡೆಯುವಿರಿ. ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಮೂಲಕ ಎಲ್ಲರ ಮನಗೆಲ್ಲುತ್ತಾರೆ. ವಿಶೇಷವಾದ ಜ್ಞಾನ ಇರುತ್ತದೆ. ಅಶಕ್ತರಿಗಾಗಿ ಉಚಿತ ಬೋಧನಾ ಕೇಂದ್ರವನ್ನು ಆರಂಭಿಸುವಿರಿ. ಬಿಡುವಿಲ್ಲದ ಕೆಲಸ ಆರೋಗ್ಯದ ಸಮಸ್ಯೆ ಉಂಟುಮಾಡಲಿದೆ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).