Tomorrow Horoscope: ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ, ಭೂವಿವಾದಲ್ಲಿ ನಿಮ್ಮ ಪರ ಗೆಲುವು; ನಾಳೆಯ ದಿನ ಭವಿಷ್ಯ
9th May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.
ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th May 2024 Horoscope).
ನಾಳೆಯ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಗುರುವಾರ
ತಿಥಿ: ಪಾಡ್ಯ ಬೆಳಗ್ಗೆ 06.55 ರವರೆಗೂ ಇರುತ್ತದೆ ನಂತರ ಉಪರಿ ಬಿದಿಗೆ ಇರುತ್ತದೆ.
ನಕ್ಷತ್ರ : ಕೃತ್ತಿಕಾ ನಕ್ಷತ್ರವು 12.54 ರವರೆಗೂ ಇದ್ದು ನಂತರ ರೋಹಿಣಿ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.56
ಸೂರ್ಯಾಸ್ತ: ಸಂಜೆ 06.35
ರಾಹುಕಾಲ: ಮಧ್ಯಾಹ್ನ 03.30 ರಿಂದ 05.03ವರೆಗೆ
ಮೇಷ
ತಂದೆಗೆ ಸಂಬಂಧಿಸಿದ ಭೂ ವಿವಾದವಿರುತ್ತದೆ. ಸತ್ಯಾಸತ್ಯತೆಗಳ ಅರಿವಿದ್ದರೂ ಮೌನವಹಿಸುವಿರಿ. ಹಿರಿಯರ ಜೊತೆ ವಾದ ಮಾಡದ ಕಾರಣ ಉದ್ಯೋಗದಲ್ಲಿ ನೆಮ್ಮದಿ ಕಾಣುವಿರಿ. ಹವ್ಯಾಸಕ್ಕೆಂದು ಆರಂಭಿಸಿದ ವ್ಯಾಪಾರದಲ್ಲಿ ಲಾಭವಿದೆ. ವಿದೇಶಕ್ಕೆ ತೆರಳುವ ಅವಕಾಶವನ್ನು ಬಳಸಿಕೊಳ್ಳುವಿರಿ. ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಬಿಳಿ
ವೃಷಭ
ಇರುವ ಹಣವನ್ನೆಲ್ಲಾ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ಪರಸ್ಥಳಕ್ಕೆ ತೆರಳುವಿರಿ. ವಿದ್ಯಾರ್ಥಿಗಳು ಸಂತಸದಿಂದ ಇರುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಭೂವಿವಾದವೊಂದು ಕಾನೂನಿನ ಸಹಾಯದಿಂದ ನಿಮ್ಮ ಪರವಾಗುತ್ತದೆ. ಹಣದ ಕೊರತೆಯನ್ನು ನೀಗಿಸಲು ಬಿಡುವಿನ ವೇಳೆ ಉಪವೃತ್ತಿಯೊಂದನ್ನು ಮಾಡುವಿರಿ. ಮಕ್ಕಳಿಂದ ಹಣದ ಸಹಾಯವಿದೆ.
ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಬೂದು
ಮಿಥುನ
ದಾಂಪತ್ಯದಲ್ಲಿದ್ದ ಮನಸ್ತಾಪ ಕೊನೆಯಾಗುವುದು. ಆತ್ಮೀಯರ ಸಹಾಯದಿಂದ ವೈಭವಯುತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಣಕಾಸಿನ ಸಂಸ್ಥೆಯೊಂದರ ಒಡೆತನ ನಿಮ್ಮದಾಗಲಿದೆ. ಹೊಸ ವಾಹನ ಕೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಬೇಸರದ ವಾತಾವರಣ ಇರುತ್ತದೆ. ಅಧಿಕಾರಿಗಳಿಗೆ ಕಾರ್ಮಿಕ ವಲಯದಿಂದ ವಿರೋಧ ಉಂಟಾಗುತ್ತದೆ. ಶಾಂತ ಸ್ವಭಾವಿಗಳಾದರೂ ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ.
ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕಂದು
ಕಟಕ
ಸಂಗಾತಿಯ ತಪ್ಪು ಕಲ್ಪನೆಯಿಂದ ಹಣಕಾಸಿನ ತೊಂದರೆ ಉಂಟಾಗಲಿದೆ. ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಲಿದ್ದಾರೆ. ಯಾರಲ್ಲೂ ತಾರತಮ್ಯ ಮಾಡದೆ ನೆಮ್ಮದಿಯಿಂದ ಬಾಳುವಿರಿ. ಉದ್ಯೋಗದಲ್ಲಿ ಉನ್ನತ ಗೌರವ ದೊರೆಯುತ್ತವೆ. ಕುಟುಂಬದಲ್ಲಿ ಯಾವುದೇ ಬದಲಾವಣೆ ಉಂಟಾಗದು. ಸಂಗಾತಿಯೊಡನೆ ಉತ್ತಮ ಸ್ನೇಹಿತರಂತೆ ಬಾಳುವಿರಿ. ಹಣದ ತೊಂದರೆ ಇರುವುದಿಲ್ಲ.
ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಪ್ಪು
ಸಿಂಹ
ಉದ್ಯೋಗದಲ್ಲಿ ವಿಶೇಷವಾದ ಬದಲಾವಣೆ ನಿಮಗೆ ಸಹಕಾರಿಯಾಗಿರುತ್ತದೆ. ಉತ್ತಮ ಆದಾಯ ಇರುವುದಿಲ್ಲ. ಆದರೂ ಹಣದ ತೊಂದರೆ ಬಾರದು. ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಸಹನೌಕರರನ್ನು ಕಾಪಾಡುವ ಹೊಣೆ ಹೊರುವಿರಿ. ನಿಮ್ಮಲ್ಲಿನ ನಾಯಕತ್ವದ ಗುಣದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವಿಶೇಷ ಸಾಧನೆ ಮಾಡಲಿದ್ದಾರೆ. ಭೂವ್ಯವಹಾರದಲ್ಲಿ ಉತ್ತಮ ಲಾಭವಿದೆ.
ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ತಿಳಿ ಹಸಿರು
ಕನ್ಯಾ
ಉದ್ಯೋಗದಲ್ಲಿ ಬದಲಾವಣೆ ಇಲ್ಲದ ಕಾರಣ ಬೇಸರ ಉಂಟಾಗುತ್ತದೆ. ಕುಟುಂಬದಲ್ಲಿ ಘಟನೆಯೊಂದು ನಡೆಯಲಿದೆ. ಕುಟುಂಬದಲ್ಲಿ ವಿವಾಹದ ಸಂಭ್ರಮ ನೆಲೆಸುತ್ತದೆ. ಸುಖ ಸೌಹಾರ್ದತೆ ಇರುತ್ತದೆ. ಸಂಚಾರದಿಂದ ಲಾಭ ಗಳಿಸುವಿರಿ. ವಯೋವೃದ್ಧರಿಗೆಗೆ ಕಫದ ತೊಂದರೆ ಇರುತ್ತದೆ. ಹಣದ ಕೊರತೆ ಎದುರಾಗುತ್ತದೆ. ಭೂವಿವಾದದಲ್ಲಿ ಶತೃತ್ವ ಉಂಟಾಗುತ್ತದೆ.
ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ನಸು ಗೆಂಪು
ತುಲಾ
ಸಮಾಜಸೇವೆಯಲ್ಲಿ ತಲ್ಲೀನರಾಗುವಿರಿ. ಬಡವರ ಏಳಿಗೆಗಾಗಿ ಸಂಘ ಸಂಸ್ಥೆಯೊಂದನ್ನು ಆರಂಭಿಸುವಿರಿ. ನಿರೀಕ್ಷೆ ತಲುಪದ ಕಾರಣ ವಿದ್ಯಾರ್ಥಿಗಳಿಗೆ ನಿರಾಸೆಯ ದಿನವಾಗಲಿದೆ. ಇರುವ ಹಣವನ್ನೆಲ್ಲಾ ಖರ್ಚು ಮಾಡಿವವರೆಗೂ ನಿದ್ದೆಯೂ ಮಾಡುವುದಿಲ್ಲ. ಹೊಗಳಿಕೆಗೆ ಮರುಳಾಗಿ ಮೋಸ ಹೋಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕ ಜೀವನದ ಮನಸ್ತಾಪಗಳಿಂದ ದೂರ ಉಳಿಯುವಿರಿ.
ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ
ವೃಶ್ಚಿಕ
ಬಹುಬೇಗ ಹೊಗಳಿಕೆಗೆ ಮರುಳಾಗುವಿರಿ. ಉದ್ಯೋಗದಲ್ಲಿ ವಿವಾದ ಎದುರಾದರೂ ಯಾವುದೇ ತೊಂದರೆ ಆಗದು. ಸಂಸಾರದಲ್ಲಿ ಒಮ್ಮತದ ವಾತಾವರಣ ಇರುವುದಿಲ್ಲ. ಬಹುದಿನದ ಕನಸಾದ ವಿಚಾರವೊಂದು ನಿಜವಾಗಲಿದೆ. ಸೋದರನಿಗೆ ವಿವಾಹ ಯೋಗವಿದೆ. ವೈಭವದ ಜೀವನಕ್ಕಾಗಿ ಅತಿಯಾಗಿ ಹಣವನ್ನು ಖರ್ಚು ಮಾಡುವಿರಿ. ಸಂಗಾತಿಯೊಂದಿಗೆ ಉತ್ತಮ ಸಂಬಂಧವಿರುತ್ತದೆ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಬಿಳಿ
ಧನಸ್ಸು
ರಕ್ತಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಗೌರವದಿಂದ ನೋಡುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ವಿದ್ಯಾರ್ಥಿಗಳು ಕಷ್ಟದ ಪರಿವೇ ಇಲ್ಲದೆ ಅಭ್ಯಾಸದಲ್ಲಿ ನಿರತರಾಗುವಿರಿ. ಮನೆಯಲ್ಲಿ ನಡೆಯಬೇಕಿದ್ದ ವಿವಾಹವೊಂದು ಮುಂದಕ್ಕೆ ಹೋಗಲಿದೆ. ಅತಿಯಾದ ಆಸೆ ಇರದೆ ತೃಪ್ತಿಕರ ಜೀವನ ನಡೆಸುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ.
ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬೂದು
ಮಕರ
ಸಾಧ್ಯವಾದಷ್ಟೂ ವೇಗವಾಗಿ ಕೆಲಸ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿರಿ. ಮನಸ್ಸಿಟ್ಟು ಕೆಲಸ ಮಾಡುವ ಕಾರಣ ಉದ್ಯೋಗದಲ್ಲಿ ಗೌರವಾದರಗಳು ಲಭಿಸುತ್ತವೆ. ವಿದ್ಯಾರ್ಥಿಗಳು ಓದಿನಲ್ಲಿ ಸದಾ ಮುಂದಿರುತ್ತಾರೆ. ತಿನ್ನುವ ಹವ್ಯಾಸ ಬದಲಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ವಾಹನಗಳ ದುರಸ್ತಿ ಮತ್ತು ಮಾರಾಟದಲ್ಲಿ ಲಾಭವಿರುತ್ತದೆ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಆಕಾಶ ನೀಲಿ
ಕುಂಭ
ವೈಭವದ ಜೀವನವನ್ನು ನಡೆಸುವಿರಿ. ವಿವಾಹದಲ್ಲಿದ್ದ ವಿವಾದವು ದೂರವಾಗುತ್ತದೆ. ವೃತ್ತಿಯಲ್ಲಿ ಆಂತರಿಕ ಬದಲಾವಣೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಅಪರೂಪದ ಅವಕಾಶ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಹಿರಿಯರ ಮಾತಿನಂತೆ ನಡೆದುಕೊಂಡಲ್ಲಿ ಯಾವುದೇ ತೊಂದರೆ ಬಾರದು.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕೆಂಪು
ಮೀನ
ದೃಢವಾದ ನಿಲುವಿನಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಿರಿ. ವಿದ್ಯಾರ್ಥಿಗಳು ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ. ಸ್ವತಂತ್ರವಾಗಿ ಮಾಡುವ ವ್ಯಾಪಾರದಲ್ಲಿ ಲಾಭವಿದೆ. ಯೋಗ ಪ್ರಾಣಾಯಾಮದ ಅಭ್ಯಾಸದಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ. ಸೋದರರಿಗೆ ಹಣದ ಸಹಾಯ ಮಾಡುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಎಲೆ ಹಸಿರು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).