ನಾಳೆಯ ದಿನ ಭವಿಷ್ಯ; ವೃಶ್ಚಿಕ ರಾಶಿಯವರಿಗೆ ಧನಲಕ್ಷ್ಮಿಯ ಕೃಪೆ, ಯಾವ ರಾಶಿಗೆಲ್ಲ ಧನಲಾಭ, ಇಲ್ಲಿದೆ 12 ರಾಶಿ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಾಳೆಯ ದಿನ ಭವಿಷ್ಯ; ವೃಶ್ಚಿಕ ರಾಶಿಯವರಿಗೆ ಧನಲಕ್ಷ್ಮಿಯ ಕೃಪೆ, ಯಾವ ರಾಶಿಗೆಲ್ಲ ಧನಲಾಭ, ಇಲ್ಲಿದೆ 12 ರಾಶಿ ಭವಿಷ್ಯ

ನಾಳೆಯ ದಿನ ಭವಿಷ್ಯ; ವೃಶ್ಚಿಕ ರಾಶಿಯವರಿಗೆ ಧನಲಕ್ಷ್ಮಿಯ ಕೃಪೆ, ಯಾವ ರಾಶಿಗೆಲ್ಲ ಧನಲಾಭ, ಇಲ್ಲಿದೆ 12 ರಾಶಿ ಭವಿಷ್ಯ

Tomorrow Rashi Bhavishya in Kannada July 15; ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ. (ರಾಶಿಫಲ ವಿವರಣೆ: ಎಚ್‌. ಸತೀಶ್, ಜ್ಯೋತಿಷಿ).

ಅವಿವಾಹಿತರಿಗೆ ವಿವಾಹ ಯೋಗವಿದೆ, ಸ್ವಂತ ಮನೆ ಕೊಳ್ಳುವ ಆಸೆ ನೆರವೇರಲಿದೆ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ
ಅವಿವಾಹಿತರಿಗೆ ವಿವಾಹ ಯೋಗವಿದೆ, ಸ್ವಂತ ಮನೆ ಕೊಳ್ಳುವ ಆಸೆ ನೆರವೇರಲಿದೆ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ

'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವ ಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ. ಅಂಥವರಿಗೆ ಕೈದೀವಿಗೆಯಾಗಬಲ್ಲ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (15th July 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲಪಕ್ಷ, ಸೋಮವಾರ

ತಿಥಿ : ನವಮಿ ಹ. 03.32 ರ ವರೆಗು ಇರುತ್ತದೆ. ಆನಂತರ ದಶಮಿ ಆರಂಭವಾಗುತ್ತದೆ.

ನಕ್ಷತ್ರ : ಸ್ವಾತಿ ನಕ್ಷತ್ರವು ರಾ. 009.53 ರವರೆgU ಇದ್ದು ಆನಂತರ ವಿಶಾಖ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ ಬೆ. 06.00

ಸೂರ್ಯಾಸ್ತ ಸ. 06.49

ರಾಹುಕಾಲ : ಬೆ. 07.40 ರಿಂದ ಬೆ. 09.16

ಮೇಷ ರಾಶಿ: ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗದು. ವಿದ್ಯಾರ್ಥಿಗಳು ವಿಶ್ರಾಂತಿಗೂ ಮನ ನೀಡದೆ ಕಲಿಕೆಯಲ್ಲಿ ಕಠಿಣವಾದ ಅಧ್ಯಯನ ಮಾಡುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭಗಳಿಸುವಿರಿ. ಗಂಟಲ ಬೇನೆಯಿಂದ ಬಳಲುವ ಸಾಧ್ಯತೆಗಳಿವೆ.

ಪರಿಹಾರ : ಬೆಳ್ಳಿ ಉಂಗುರ ಧರಿಸಿ ದಿನಚರಿ ಶುರುಮಾಡಿ

ಅದೃಷ್ಟದ ಸಂಖ್ಯೆ 7

ಅದೃಷ್ಟದ ದಿಕ್ಕು : ನೈಋತ್ಯ

ಅದೃಷ್ಟದ ಬಣ್ಣ : ಹಸಿರು ಬಣ್ಣ

ವೃಷಭ ರಾಶಿ: ಉದ್ಯೋಗದಲ್ಲಿನ ಅಡಚಣೆಗಳನ್ನು ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳುವಿರಿ. ಸ್ನೇಹಿತನಿಂದ ಹಣಕಾಸಿನ ಕೊರತೆ ಕಡಿಮೆ ಆಗಲಿದೆ. ವಿದ್ಯಾರ್ಥಿಗಳು ಸೋಲಿಗೆ ಎದೆಗುಂದದೆ ತಮ್ಮ ಗುರಿ ತಲುಪುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ವರಮಾನ ಇರುವುದಿಲ್ಲ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನಚರಿ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಮಿಥುನ ರಾಶಿ: ಸಣ್ಣ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಂತಸದ ವಾತಾವರಣವನ್ನು ಅರಸಿ ಕಿರುಪ್ರವಾಸ ಕೈಗೊಳ್ಳುವಿರಿ. ಮನದಲ್ಲಿ ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗಲಾರದು.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಕಟಕ ರಾಶಿ: ಉದ್ಯೋಗದಲ್ಲಿನ ಅಡಚಣೆಗಳು ದೂರವಾಗಲಿವೆ. ಮಕ್ಕಳ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸರಿದಾರಿಯಲ್ಲಿ ಇರಲಿ. ನೂತನ ಅವಕಾಶ ದೊರೆಯುವ ಕಾರಣ ಉದ್ಯೋಗ ಬದಲಾಯಿಸುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಗಂಭೀರದ ವಾತಾವರಣ ನೆಲೆಸಿರುತ್ತದೆ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ. .

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಸಿಂಹ ರಾಶಿ: ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಲಭಿಸದ ಕಾರಣ ಉದ್ಯೋಗ ಮಾಡುವ ಮನಸ್ಸಿರುವದಿಲ್ಲ. ಉದ್ಯೋಗ ಬದಲಾಯಿಸಲು ನಿಶ್ಚಯಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ನಿರೀಕ್ಷೆಯಲ್ಲಿ ಇರುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರ ಧರಿಸಿ ದಿನಚರಿ ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಬಿಳಿ ಬಣ್ಣ

ಕನ್ಯಾ ರಾಶಿ: ಹಣದ ಕೊರತೆ ನಿಮ್ಮನ್ನು ಧೈರ್ಯಗೆಡಿಸುತ್ತದೆ. ಆತಂಕದ ಸನ್ನಿವೇಶದಲ್ಲಿ ಕುಟುಂಬದ ಸದಸ್ಯರಿಂದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನಚರಿ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು ದಕ್ಶಿಣ

ಅದೃಷ್ಟದ ಬಣ್ಣ ಬೂದು ಬಣ್ಣ

ತುಲಾ ರಾಶಿ: ಉದ್ಯೋಗದಲ್ಲಿ ನಿಮ್ಮ ಕಾರ್ಯನೈಪುಣ್ಯತೆಗೆ ಮೆಚ್ಚುಗೆ ದೊರೆತು, ಎಲ್ಲರ ಸಹಕಾರ ದೊರೆಯುತ್ತದೆ. ಸಾಮಾಜಿಕ ಜೀವನದಲ್ಲಿ ಉನ್ನತ ಮಟ್ಟ ತಲುಪುವಿರಿ. ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ. ಹಣಕಾಸಿನ ಕೊರತೆ ಇರುವುದಿಲ್ಲ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು ನೈಋತ್ಯ

ಅದೃಷ್ಟದ ಬಣ್ಣ ಕಂದು ಬಣ್ಣ

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಸೌಹಾರ್ದಯುತ ವಾತಾವರಣ ಇರಲಿದೆ. ನಿಮ್ಮ ಮನದ ಆಶೋತ್ತರಗಳು ಈಡೇರಲಿವೆ. ಹೊಸ ರೀತಿಯ ಜೀವನವನ್ನು ಇಷ್ಟಪಡುವಿರಿ. ಉದ್ಯೋಗದಲ್ಲಿ ಹೆಚ್ಚಿನ ಪರಿಶ್ರಮದಿಂದ ಉನ್ನತ ಅಧಿಕಾರ ಗಳಿಸುವಿರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಪ್ಪುಬಣ್ಣ

ಧನಸ್ಸು ರಾಶಿ: ನಿರೀಕ್ಷಿತ ಫಲದೊರೆಯದ ಕಾರಣ ಉದ್ಯೋಗದಲ್ಲಿ ಆಸಕ್ತಿ ಇರುವುದಿಲ್ಲ. ಹಣದ ದುರಾಸೆ ಇರುವುದಿಲ್ಲ. ದೊರಕಿದ್ದನ್ನು ಸಂತೋಷದಿಂದ ಸ್ವೀಕರಿಸುವಿರಿ. ವಿದ್ಯಾರ್ಥಿಗಳು ಮನರಂಜನೆಯಲ್ಲಿ ಮುಳುಗಿದರೂ ಕಲಿಕೆಯಲ್ಲಿ ಹಿಂದೆ ಉಳಿಯುವುದಿಲ್ಲ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಮಕರ ರಾಶಿ: ಉದ್ಯೋಗದಲ್ಲಿ ಪ್ರಯೋಜನಕಾರಿ ಬದಲಾವಣೆಗಳು ಉಂಟಾಗಲಿವೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಅವಲಂಬಿತರಾಗುತ್ತಾರೆ. ವಿದ್ಯಾರ್ಥಿಗಳು ಚುರುಕುತನದಿಂದ ಮುಂದುವರೆಯುತ್ತಾರೆ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಕುಂಭ ರಾಶಿ: ಹಣಕಾಸಿನ ವಿಚಾರದಲ್ಲಿ ಗೋಪ್ಯತೆಯನ್ನು ಉಳಿಸಿಕೊಳ್ಳುವಿರಿ. ಕುಟುಂಬದಲ್ಲಿ ಮುಖ್ಯವಾಗಿ ಮಕ್ಕಳ ಪ್ರೀತಿ ನಿಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಸ್ವಂತ ಕೆಲಸ ಕಾರ್ಯದಲ್ಲಿ ಶತ ಪ್ರಯತ್ನ ಪಡುವಿರಿ. ಉದ್ಯೋಗದಲ್ಲಿ ಅಸಾಧಾರಣ ಪ್ರಗತಿ ಕಂಡುಬರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆ ಕಂಡು ಬಾರದು.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಮೀನ ರಾಶಿ: ಮಿತ್ರರೊಬ್ಬರ ಸಹಾಯದಿಂದ ಉದ್ಯೊಗ ಲಭಿಸುತ್ತದೆ. ನೀವಿರುವ ಕಡೆ ಸುಖ ಸಂತೋಷ ಮನೆ ಮಾಡಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿನ ವರಮಾನಕ್ಕೆ ಯಾವುದೇ ಧಕ್ಕೆ ಉಂಟಾಗದು. ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ 4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಹೊಗೆ ಬಣ್ಣ

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.