ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಬಿಡುವಿಲ್ಲದ ಕೆಲಸ ಕಾರ್ಯ ಇರುತ್ತೆ, ಹಣಕಾಸಿನ ಸಮಸ್ಯೆ ದೂರವಾಗುತ್ತೆ; ನಾಳೆಯ ದಿನ ಭವಿಷ್ಯ

Tomorrow Horoscope: ಬಿಡುವಿಲ್ಲದ ಕೆಲಸ ಕಾರ್ಯ ಇರುತ್ತೆ, ಹಣಕಾಸಿನ ಸಮಸ್ಯೆ ದೂರವಾಗುತ್ತೆ; ನಾಳೆಯ ದಿನ ಭವಿಷ್ಯ

11th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ಜೂನ್ 11ರ ಮಂಗಳವಾರದ ಭವಿಷ್ಯವನ್ನು ಜೂನ್ 10ರ ಸೋಮವಾರವೇ ತಿಳಿಯಿರಿ.
ಜೂನ್ 11ರ ಮಂಗಳವಾರದ ಭವಿಷ್ಯವನ್ನು ಜೂನ್ 10ರ ಸೋಮವಾರವೇ ತಿಳಿಯಿರಿ.

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (11th June 2024 Horoscope)

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ಪಂಚಮಿ ಸಾ. 05.29 ರವರೆಗೂ ಇರುತ್ತದೆ. ಆನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ: ಆಶ್ಲೇಷ ನಕ್ಷತ್ರವು ರಾ. 12.08 ರವರೆಗು ಇರುತ್ತದೆ. ಆನಂತರ ಮಖ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.45

ರಾಹುಕಾಲ: ಹ. 03.35 ರಿಂದ ಸ. 05.11

ಮೇಷ ರಾಶಿ

ಹಠದ ಸ್ವಭಾವ ಇರುತ್ತದೆ. ಏಕಾಗ್ರತೆಯಿಂದ ಆರಂಭಿಸಿದ ಕೆಲಸಗಳನ್ನು ಯಶಸ್ವಿಗೊಳಿಸುವಿರಿ. ನಿಮ್ಮ ತಾಯಿಯವರು ಆತ್ಮೀಯರಿಗೆ ಹಣದ ಸಹಾಯ ಮಾಡುತ್ತಾರೆ. ಆದಾಯಕ್ಕೆ ಕೊರತೆ ಇರುವುದಿಲ್ಲ. ಆದರೆ ಅತಿಯಾದ ಕೋಪ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಯುವಕ ಯುವತಿಯರಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಹೆಚ್ಚು ಪ್ರಯತ್ನ ಪಡಬೇಕು. ವಿದ್ಯೆಗೆ ತಕ್ಕಂತಹ ಉದ್ಯೋಗ ದೊರೆಯಲಿದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ.

ಪರಿಹಾರ: ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ರಕ್ತದ ಕೆಂಪು

ವೃಷಭ ರಾಶಿ

ಸಂಗಾತಿಯು ಅಧಿಕ ದೇಹದ ತೂಕದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ನಿಮಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಇರುತ್ತವೆ. ಹೆಚ್ಚಿನ ಪ್ರಯತ್ನವಿದ್ದರೂ ಸಾಧಾರಣ ಫಲ ಪಡೆಯುವಿರಿ. ವಾಹನ ಚಲಾಯಿಸುವ ವೇಳೆ ಎಚ್ಚರಿಕೆ ಇರದಿದ್ದರೆ ದಂಡ ತೆರಬೇಕಾಗುವುದು. ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗುತ್ತದೆ. ನಿಮ್ಮಿಂದ ಸೋದರನ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಕಷ್ಟದ ವೇಳೆಯಲ್ಲಿಯೂ ಭಯಪಡದೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದ ಮತ್ತು ನೆರೆಹೊರೆಯವರ ವಿಶ್ವಾಸವನ್ನು ಗಳಿಸುವಿರಿ. ಹಣಕಾಸಿನ ವ್ಯವಹಾರಗಳ ವಿಚಾರದಲ್ಲಿ ನಿಮ್ಮ ತಾಯಿಯವರ ಸಲಹೆ ಪಾಲಿಸುವಿರಿ. ಸಾಲ ಅಥವಾ ಸಹಾಯವಾಗಿ ಯಾರಿಂದಲೂ ಹಣವನ್ನು ಪಡೆಯುವುದಿಲ್ಲ.

ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಎಲೆಹಸಿರು

ಮಿಥುನ ರಾಶಿ

ಉದ್ಯೋಗದಲ್ಲಿನ ನಿಮ್ಮ ಕಾರ್ಯ ವೈಖರಿಯನ್ನು ಹಿರಿಯ ಅಧಿಕಾರಿಗಳು ಮೆಚ್ಚುತ್ತಾರೆ. ವಾಹನವೊಂದು ಉಡುಗೊರೆಯಾಗಿ ದೊರೆಯುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ತಾಯಿಯವರಿಗೆ ಅನಾರೋಗ್ಯವಿರುತ್ತದೆ. ಉದ್ಯೋಗಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಸ್ವಂತ ಕೆಲಸ ಕಾರ್ಯಗಳು ನೀಡುವಿರಿ. ಕುಟುಂಬದ ಹೊರಗಿನವರನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಸ್ಥಿರವಾದ ಮನಸ್ಥಿತಿ ಇರುವುದಿಲ್ಲ. ಬಿಡುವಿನ ವೇಳೆ ಬೇರೆಯವರಿಗೆ ಸಹಾಯ ಮಾಡುವಿರಿ. ದಾಂಪತ್ಯದಲ್ಲಿ ವಿಶೇಷವಾದಂತಹ ಪ್ರೀತಿ ವಿಶ್ವಾಸ ಮನೆ ಮಾಡಿರುತ್ತದೆ. ಬಿಡುವಿನ ವೇಳೆ ಸಮಾಜಸೇವೆ ಮಾಡುವಿರಿ. ಕುಟುಂಬದ ಸ್ತ್ರೀಯರಿಗೆ ಅನಾವಶ್ಯಕ ಚಿಂತೆ ಇರುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ. .

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಕೇಸರಿ

ಕಟಕ ರಾಶಿ

ಒಮ್ಮೆ ನಿರ್ಧರಿಸಿದ ಕೆಲಸವನ್ನು ಅಗತ್ಯವಾಗಿ ಮಾಡುವಿರಿ. ಗೌರವ ಪ್ರತಿಷ್ಠೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ನಿಮ್ಮ ತಾಯಿಯ ಧೈರ್ಯದ ಗುಣ ನಿಮಗೆ ದಾರಿದೀಪವಾಗುತ್ತದೆ. ಉತ್ತಮ ಆದಾಯವಿದ್ದರೂ ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ವಯೋವೃದ್ದರೂ ದೂರದ ಸಂಬಂಧಿಕರನ್ನು ಭೇಟಿ ಮಾಡುತ್ತಾರೆ. ಹಿರಿಯರ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ. ನಿಮ್ಮ ಯಶಸ್ಸನ್ನು ತಾಳದ ವಿರೋಧಿಗಳು ತೊಂದರೆಗಳನ್ನು ಸೃಷ್ಟಿಸುತ್ತಾರೆ. ಸೋದರನಿಗೆ ಅನಾರೋಗ್ಯ ವಿರುತ್ತದೆ. ಕಣ್ಣುಅಥವಾ ಎದೆ ಉರಿತದ ತೊಂದರೆ ನಿಮ್ಮನ್ನು ಕಾಡುತ್ತದೆ. ನೀರಿರುವ ಪ್ರದೇಶಗಳಲ್ಲಿ ತೊಂದರೆ ಇರುತ್ತದೆ ಎಚ್ಚರವಿರಲಿ.

ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಸಿಂಹ ರಾಶಿ

ಎಲ್ಲರ ಮನಸ್ಸನ್ನು ಗೆಲ್ಲುವಂತೆ ಮಾತನಾಡುವಿರಿ. ಕಣ್ಣಿನ ದೋಷವಿರುತ್ತದೆ. ಗೃಹಿಣಿಯರಿಗೆ ವಿಶೇಷವಾದಂತಹ ಫಲ ದೊರೆಯುತ್ತದೆ. ಕುಟುಂಬದ ಹಿರಿಯರಿಗೆ ಅನಿರೀಕ್ಷಿತ ಧನ ಲಾಭ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವಿರುತ್ತದೆ. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರುತ್ತದೆ. ಸ್ವಂತ ಮನೆ ಮಾಡಬೇಕೆಂಬ ಆಸೆಯೂ ಮೂಡುತ್ತದೆ. ಹಣದ ಮೇಲೆ ಅತಿಯಾದ ಆಸೆ ಇರುವುದಿಲ್ಲ. ಸಣ್ಣಪುಟ್ಟ ಯಶಸ್ಸನ್ನು ಸಂಭ್ರಮಿಸುವಿರಿ. ಗುಟ್ಟಾಗಿ ಹಣವನ್ನು ಸಂಪಾದಿಸುವಿರಿ. ಇರುವ ವಾಹನವನ್ನು ಮಾರಾಟ ಮಾಡುವಿರಿ, ಆದರೆ ತಕ್ಷಣವೇ ಹೊಸ ವಾಹನವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ಕನ್ಯಾ ರಾಶಿ

ಮನೆಯಲ್ಲಿರುವ ಮಕ್ಕಳನ್ನು ನೀರಿರುವ ಸ್ಥಳಕ್ಕೆ ಬಿಡದಿರಿ. ಬಂಧು ಬಳಗದವರಿಂದ ದೂರವಿರುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಪ್ರಯೋಜನ ಇಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಎಲ್ಲರಿಗೂ ಅನುಕೂಲ ವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವಿರಿ. ಧಾರ್ಮಿಕ ಕೇಂದ್ರದ ಪುನರುಜ್ಜೀವನದ ಉಸ್ತುವಾರಿ ವಹಿಸುವಿರಿ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವ ಮೊದಲು ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸುವಿರಿ. ನಿಮಗೆ ವಿಶಾಲವಾದಂತಹ ಮನಸ್ಸಿರುತ್ತದೆ. ಅನಾವಶ್ಯಕವಾದ ವಿವಾದಗಳಿಂದ ಕುಟುಂಬದಲ್ಲಿ ಅಶಾಂತಿ ಮನೆ ಮಾಡುತ್ತದೆ.

ಪರಿಹಾರ: ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 10

ಅಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ತುಲಾ ರಾಶಿ

ವಿದ್ಯಾರ್ಥಿಗಳಿಗೆ ವಿಶೇಷವಾದಂತಹ ಫಲಗಳು ದೊರೆಯುತ್ತವೆ. ಯುವಕ ಯುವತಿಯರು ಬಂಧು ಬಳಗದವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಆರಂಭದಲ್ಲಿ ಯಾವುದೇ ಕೆಲಸ ಕಾರ್ಯವಾದರೂ ಅಡಚಣೆಗಳನ್ನು ಎದುರಿಸುವಿರಿ. ಕೋಪಗೊಂಡಾಗ ಅತಿ ಉದ್ವೇಗದಿಂದ ವರ್ತಿಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ಹಣದ ವಿಚಾರದ ಆಲೋಚನೆ ಇರುತ್ತದೆ. ಮಕ್ಕಳ ಉತ್ತಮ ಜೀವನಕ್ಕೆ ಸೂಕ್ತ ತಳಹದಿ ಹಾಕುವಿರಿ.

ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಹಳದಿ

ವೃಶ್ಚಿಕ ರಾಶಿ

ವಿರೋಧಿಗಳು ಇದ್ದರು ಯಾವುದೇ ತೊಂದರೆ ಉಂಟಾಗದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಯೋಜನೆಗಳನ್ನು ಯಾರಿಗೂ ತಿಳಿಸದಿರಿ. ಮೌನವಾಗಿದ್ದಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಸಂತಾನಲಾಭವಿದೆ. ಬಂಧು-ಬಳಗದವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವಿರಿ. ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಉತ್ತಮ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಜನಸೇವೆಯಲ್ಲಿ ಇರುವವರಿಗೆ ಯಶಸ್ಸಿನ ಜೊತೆ ಮೇಲ್ಮಟ್ಟದ ಗೌರವ ದೊರೆಯುತ್ತದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ಕೋಪ ಸ್ವಭಾವವನ್ನು ಕಡಿಮೆ ಮಾಡಿರಿ.

ಪರಿಹಾರ: ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಹಸಿರು

ಧನಸ್ಸು ರಾಶಿ

ಅನಿಯಮಿತ ಆಹಾರ ಸೇವನೆಯಿಂದ ಅಜೀರ್ಣತೆ ಉಂಟಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಕಂಡುಬರಲಿವೆ. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಸಹನೆಯಿಂದ ಜೀವನದಲ್ಲಿ ಮುಂದುವರೆಯುವಿರಿ. ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗವನ್ನು ಬದಲಿಸುವಿರಿ. ಸ್ಥಿರವಾದ ಮನಸ್ಥಿತಿ ಇರುವುದಿಲ್ಲ. ಕುಟುಂಬದ ಕೆಲಸಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ಜನ್ಮದ ತೊಂದರೆ ಉಂಟಾಗಬಹುದು. ಉತ್ತಮ ದೇಹದಾಡ್ಯತೆ ಪಡೆಯುವಿರಿ. ಹಣದ ಕೊರತೆ ಉಂಟಾಗುವುದಿಲ್ಲ. ಹೊಸ ಅವಕಾಶಗಳಿಗಾಗಿ ಎದುರು ನೋಡುವಿರಿ. ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಭಾಗವಹಿಸುವಿರಿ. ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ.

ಪರಿಹಾರ: ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ

ಮಕರ ರಾಶಿ

ಸಂತಾನ ಲಾಭವಿದೆ ಕಣ್ಣಿನ ತೊಂದರೆ ಇದ್ದಲ್ಲಿ ನಿವಾರಣೆಯಾಗುತ್ತದೆ. ವಿವಿಧ ಮೂಲಗಳಿಂದ ಹಣಗಳಿಸುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಹಿನ್ನಡೆ ಕಾಣುವುದಿಲ್ಲ. ಕಷ್ಟಪಟ್ಟು ದುಡಿಯುವ ಕಾರಣ ತೊಂದರೆ ಇರುವುದಿಲ್ಲ. ಸ್ವಂತ ಪ್ರತಿಭೆ ಮತ್ತು ಸ್ವ ಪ್ರಯತ್ನದ ಬಗ್ಗೆ ಹೆಚ್ಚಿನ ನಂಬಿಕೆ ಇರುತ್ತದೆ. ಯಂತ್ರೋಪಕರಣಗಳ ರಾಜನಿಂದ ಉತ್ತಮ ಲಾಭ ಅಂಶ ಗಳಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ಯಶಗಳಿಸಲು ಸಾಧ್ಯ. ನಿಮ್ಮ ಮನಸ್ಸಿಗೆ ಇಷ್ಟವೆನಿಸುವ ಒಡವೆ ವಸ್ತುಗಳನ್ನು ಕೊಳ್ಳುವಿರಿ. ಕುಟುಂಬದ ಸದಸ್ಯರ ಜೊತೆಗೆ ದೀರ್ಘಕಾಲದ ಪ್ರವಾಸ ಏರ್ಪಡಿಸುವಿರಿ. ವಂಶದ ಆಸ್ಥಿಯಲ್ಲಿ ನಿರೀಕ್ಷಿತ ಪಾಲು ದೊರೆಯುತ್ತದೆ.

ಪರಿಹಾರ: ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ನೇರಳೆ

ಕುಂಭ ರಾಶಿ

ವಿದ್ಯಾರ್ಥಿಗಳು ಪರಸ್ಥಳದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಅನಿರೀಕ್ಷಿತ ಧನ ಲಾಭವಿದೆ. ದೃಷ್ಟಿ ದೋಷದಿಂದ ಬಳಲುವಿರಿ. ದುಡುಕದೆ ತಾಳ್ಮೆಯಿಂದ ವರ್ತಿಸುವಿರಿ. ಇದರಿಂದಾಗಿ ನಿಮ್ಮ ವಿರೋಧಿಗಳು ಸ್ನೇಹಿತರಾಗಿ ಮಾರ್ಪಡುತ್ತಾರೆ. ಯಾರನ್ನು ಸುಲಭವಾಗಿ ನಂಬುವುದಿಲ್ಲ. ಉದ್ಯೋಗಕ್ಕೆ ಸಂಬಂಧಪಟ್ಟ ಅತಿ ಮುಖ್ಯ ವಿಚಾರಗಳನ್ನು ರಹಸ್ಯವಾಗಿ ಇಡುವಿರಿ. ಮಾತನ್ನು ಕಡಿಮೆ ಮಾಡಿ ಕೆಲಸ ಕಾರ್ಯದಲ್ಲಿ ಮುನ್ನಡೆಯುವಿರಿ. ಬಂಧು ಬಳಗದವರೊಂದಿಗೆ ಉತ್ತಮ ಸಂಬಂಧವಿರುತ್ತದೆ. ದಂಪತಿಗಳ ಮಧ್ಯೆ ಇದ್ದ ಮನಸ್ತಾಪ ದೂರವಾಗುತ್ತದೆ. ನೋಡಲು ಸುಂದರವಾಗಿ ಕಾಣುವ ವಸ್ತ್ರಗಳನ್ನು ಸಂಗಾತಿಗೆ ಉಡುಗೊರೆಯಾಗಿ ನೀಡುವಿರಿ.

ಪರಿಹಾರ: ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಗುಲಾಬಿ

ಮೀನ ರಾಶಿ

ಸತಿಪತಿಗಳ ಮಧ್ಯೆ ಬೇಸರವಿರುತ್ತದೆ. ಹಿರಿಯ ಸೋದರನ ಜೊತೆಯಲ್ಲಿ ಹಣದ ವ್ಯವಹಾರದ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಬಲ್ಲಿರಿ. ಸೋದರಿಯ ದಾಂಪತ್ಯ ಜೀವನದಲ್ಲಿನ ವಿವಾದವು ನಿಮ್ಮಿಂದ ಸುಖಾಂತ್ಯಗೊಳ್ಳಲಿದೆ. ಆತುರ ತೋರದೆ ಪ್ರತಿಯೊಂದು ವಿಚಾರಗಳನ್ನು ಅರಿತು ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಸಾಹಸ ಕ್ರೀಡೆಗಳಲ್ಲಿ ತೊಡಗುವವರು ಎಚ್ಚರಿಕೆಯಿಂದ ಇರಬೇಕು. ನಿಮ್ಮನ್ನು ನಂಬಿದವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಹೆದರಿಕೆಯ ಗುಣವಿದ್ದರೂ ಹಠದಿಂದ ಕೆಲಸ ಸಾಧಿಸುವಿರಿ. ನಿಮ್ಮ ಕುಟುಂಬದಲ್ಲಿ ಒಬ್ಬರು ಕಷ್ಟನಷ್ಟಗಳು ಮರೆಯಾಗಿ ಸಂತೃಪ್ತಿಯ ಜೀವನ ಆರಂಭಿಸುತ್ತಾರೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣುವಿರಿ.

ಪರಿಹಾರ: ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)