Tomorrow Horoscope: ಚಿನ್ನಾಭರಣ ಖರೀದಿಗೆ ಹೆಚ್ಚಿನ ಹಣ ಖರ್ಚು, ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ; ನಾಳೆಯ ದಿನ ಭವಿಷ್ಯ
12th May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (12th May 2024 Horoscope)
ನಾಳೆಯ ಪಂಚಾಂಗ
ಶ್ರೀಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಭಾನುವಾರ
ತಿಥಿ: ಪಂಚಮಿ ರಾ. 04.11 ರವರೆಗು ಇರುತ್ತದೆ. ಆನಂತರ ಷಷ್ಠಿ ಆರಂಭವಾಗುತ್ತದೆ.
ನಕ್ಷತ್ರ: ಆರ್ದ್ರೆ ನಕ್ಷತ್ರವು ಮಧ್ಯಾಹ್ನ 12.038 ರವರೆಗೆ ಇರುತ್ತದೆ. ಆನಂತರ ಪುನರ್ವಸು ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.05.55
ಸೂರ್ಯಾಸ್ತ: ಸ.06.36
ರಾಹುಕಾಲ: ಸ. 05.04 ರಿಂದ ಸ. 06.39
ಮೇಷ ರಾಶಿ
ಕುಟುಂಬದ ಒಟ್ಟು ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಶುಭ್ರವಾದ ಮನಸ್ಸಿನಿಂದ ಜನರ ವಿಶ್ವಾಸ ಗೆಲ್ಲುವಿರಿ. ಹಣವನ್ನು ಉಳಿಸುವ ಯೋಜನೆಗೆ ಚಾಲನೆ ದೊರೆಯುತ್ತದೆ . ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ. ವಾಹನಗಳ ಬಗ್ಗೆ ಆಸಕ್ತಿ ಕಡಿಮೆ. ಸಂತಾನಲಾಭವಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕಂತಹ ಫಲ ದೊರೆಯಲಿದೆ. ವಿವಾಹ ಕಾರ್ಯದಲ್ಲಿ ಅನಾವಶ್ಯಕ ಮನಸ್ತಾಪ ಇರುತ್ತದೆ. ಉದ್ಯೋಗದಲ್ಲಿ ಎಲ್ಲರ ಜೊತೆಯಲ್ಲಿ ಸ್ನೇಹ ಪ್ರೀತಿಯಿಂದ ವರ್ತಿಸುವಿರಿ. ಅನುಚಿತ ಮಾತುಕತೆಯಿಂದ ಬೇಸರದ ಸನ್ನಿವೇಶ ಎದುರಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪುನಿರ್ಧಾಗಳನ್ನು ತೆಗೆದುಕೊಳ್ಳುವಿರಿ.
ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ
ವೃಷಭ ರಾಶಿ
ನೀವು ಸಮಯೋಚಿತ ಮಾತುಕತೆಯಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಯಾರ ಮಾತನ್ನೂ ಕೇಳದೆ ಮನದ ಮಾತಿಗೆ ಬೆಲೆ ನೀಡುವಿರಿ. ಕುಟುಂಬದಲ್ಲಿನ ವಾದ ವಿವಾದಗಳಿಗೆ ಕಡಿವಾಣ ಹಾಕುವಿರಿ. ಖರ್ಚುವೆಚ್ಚಗಳನ್ನು ಸರಿದೂಗಿಸುವಷ್ಟು ಆದಾಯ ಇರುತ್ತದೆ. ಕುಟುಂಬದಲ್ಲಿ ಆಶಾದಾಯಕ ಬದಲಾವಣೆಗಳು ನೆಮ್ಮದಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಆನುಕೂಲಕರ ಬದಲಾವಣೆಗಳು ಉಂಟಾಗುತ್ತದೆ. ವ್ಯಾಪಾರ ವ್ಯವಹಾರಗಳ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ.
ಪರಿಹಾರ: ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಮಿಥುನ ರಾಶಿ
ಯಾತ್ರಾಸ್ಥಳಕ್ಕೆ ಕುಟುಂಬದವರೊಡನೆ ಸಂಚಾರವಿರುತ್ತದೆ. ಹೆಚ್ಚಿನ ವರಮಾನವನ್ನು ಗುರಿಯಾಗಿಸುವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ. ಕುಟುಂಬದ ಹಿರಿಯರಿಗೆ ರಕ್ತಸಂಬಂಧಕರಿಂದ ತೊಂದರೆ ಉಂಟಾಗುತ್ತದೆ. ಯಂತ್ರದಿಂದ ತೊಂದರೆ ಆಗಲಿದೆ ಎಚ್ಚರಿಕೆ ಇರಲಿ. ವೃತ್ತಿಕ್ಷೇತ್ರದಲ್ಲಿ ವಿಶೇಷ ಸ್ಥಾನ ಮಾನ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟ ಸಮ ಪ್ರಮಾಣದಲ್ಲಿ ಇರುತ್ತದೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನ ಲಭಿಸುತ್ತದೆ.
ಪರಿಹಾರ: ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ
ಕಟಕ ರಾಶಿ
ಅತುರದ ನಿರ್ಧಾರದಿಂದ ಕುಟುಂಬದ ವಿವಾದವೊಂದು ದೂರವಾಗುವುದು. ಗಣ್ಯವ್ಯಕ್ತಿಗಳ ಸಹಾಯದಿಂದ ಧಾರ್ಮಿಕ ಸಂಸ್ಥೆಯೊಂದರಲ್ಲಿ ಉದ್ಯೋಗ ಲಭಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಸೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಭೂ ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ತಂದೆಯವರಿಗೆ ಸಹಾಯ ಮಾಡುವಿರಿ. ಮನಸ್ಸಿಗಾದ ಬೇಸರದಿಂದ ವೈರಾಗ್ಯದ ಭಾವನೆ ಉಂಟಾಗುತ್ತದೆ. ತೋಟಗಾರಿಕೆಯಲ್ಲಿ ಆಸಕ್ತಿ ಉಂಟಾಗಲಿದೆ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ವಿದ್ಯೆಗಳಿಸುತ್ತಾರೆ. ಆತ್ಮೀಯರ ಹಣದ ಕೊರತೆ ನೀಗಿಸಲು ಪ್ರಯತ್ನಿಸುವಿರಿ. ತಾಯಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ.
ಪರಿಹಾರ: ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ಸಿಂಹ ರಾಶಿ
ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ. ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯುತ್ತಾರೆ. ಉದ್ಯೋಗದಲ್ಲಿ ಪ್ರಗತಿ ಕಂಡು ಉನ್ನತ ಅಧಿಕಾರ ದೊರೆಯುತ್ತದೆ. ಭೂ ಸಂಬಂಧಿತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಧಾರ್ಮಿಕ ಕಾರ್ಯವೊಂದ ನ್ನು ಆಯೋಜಿಸುವಿರಿ. ಕುಟುಂಬದ ಹಿರಿಯರ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಸಮಯಕ್ಕೆ ತಕ್ಕಂತೆ ಹಣದ ಸಹಾಯ ದೊರೆಯುತ್ತದೆ. ದಾಂಪತ್ಯದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ. ಕಾರ್ಮಿಕವೃಂದಕ್ಕೆ ವಿಶೇಷವಾದ ಲಾಭವಿದೆ. ವಿದ್ಯಾರ್ಥಿಗಳಿಗೆ ಅವಧಿಗೆ ಮುನ್ನವೇ ಉದ್ಯೋಗ ದೊರೆಯುತ್ತದೆ.
ಪರಿಹಾರ: ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ಕನ್ಯಾ ರಾಶಿ
ತಂದೆಗೆ ಹಣದ ಸಹಾಯ ದೊರೆತು ಭೂವಿವಾದವು ಪರಿಹಾರವಾಗುತ್ತವೆ. ಕುಟುಂಬದಲ್ಲಿ ಒಮ್ಮತದ ಕೊರತೆ ಕಾಣುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ತಮ್ಮ ಗುರಿ ತಲುಪಲಿದ್ದಾರೆ. ಉದ್ಯೋಗದ ವಿಚಾರದಲ್ಲಿ ವಿಶೇಷ ಜ್ಞಾನ ಗಳಿಸಲು ವಿದೇಶಕ್ಕೆ ತೆರಳುತ್ತಾರೆ. ಮಕ್ಕಳಿಗೆ ಗಣ್ಯ ವ್ಯಕ್ತಿಗಳ ಆಶ್ರಯ ದೊರೆಯುತದೆ. ಬಂಧು ಬಳಗದವರ ಸಹಾಯದಿಂದ ಸೋದರಿಯ ವಿವಾಹ ನಿಶ್ಚಯವಾಗುತ್ತದೆ. ಸಮಾಜದಲ್ಲಿ ವಿಶೇಷ ಗೌರವಾದರಗಳು ಲಭಿಸುತ್ತವೆ. ಆಧ್ಯಾತ್ಮಿಕ ಗುರುಗಳ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 4
ಅಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ
ತುಲಾ ರಾಶಿ
ಕುಟುಂಬದ ವಿಶೇಷವಾದ ಕೆಲಸವೊಂದು ಯಶಸ್ವಿಯಾಗಲು ಕಾರಣರಾಗುವಿರಿ. ಪರಸ್ಥಳದಲ್ಲಿ ಅಭಿವೃದ್ದಿ ಹೊಂದುವಿರಿ. ದುಡುಕಿನ ಮಾತಿನ ಕಾರಣ ವಿರೋಧಿಗಳು ಹೆಚ್ಚುತ್ತಾರೆ. ಉಷ್ಣ ಅಥವಾ ರಕ್ತದೊತ್ತಡದ ತೊಂದರೆ ಇರುತ್ತದೆ. ಉದ್ಯೋಗದಲ್ಲಿದ್ದ ಅಡಚಣೆಗಳು ದೂರವಾಗಿ ಉತ್ಸಾಹ ಮೂಡುತ್ತದೆ. ಕ್ರಮೇಣವಾಗಿ ಮನದ ಆತಂಕ ದೂರವಾಗುತ್ತದೆ. ವಿದ್ಯಾರ್ಥಿಗಳಿಗೆ ಅನಾಯಾಸವಾಗಿ ಉತ್ತಮ ಫಲಗಳು ದೊರೆಯಲಿವೆ. ಸರಳವಾದ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಹಿರಿಯವರ ಅನುಭವ ನಿಮಗೆ ಸಹಾಯವಾಗುತ್ತದೆ.
ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಕೆಂಪು
ವೃಶ್ಚಿಕ ರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಯೋಗ ಮತ್ತು ಪ್ರಾಣಾಯಾಮದಿಂದ ಆರೊಗ್ಯದಲ್ಲಿ ಸ್ಥಿರತೆ ಗಳಿಸುವಿರಿ. ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವ ಕಾರಣ ವೃತ್ತಿಯಲ್ಲಿ ತೊಂದರೆ ಉಂಟಾಗಲಿದೆ. ನಿಮ್ಮ ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಯಶಸ್ಸಿಯಾಗಲಿವೆ. ಸಾರ್ವಜನಿಕ ಸಂಘ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಬೆಳ್ಳಿ ಚಿನ್ನಾಭರಣಗಳ ಖರೀದಿ ಮಾಡುವಿರಿ. ಸಂಬಂಧಿಯೊಬ್ಬರೊಂದಿಗೆ ಪಾಲುಗಾರಿಕೆ ವ್ಯಾಪಾರ ಆರಂಭಿಸಿ ಯಶಸ್ವಿಯಾಗುವಿರಿ.
ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಧನಸ್ಸು ರಾಶಿ
ಕುಟುಂಬದಲ್ಲಿ ಒಮ್ಮತದಗುಣ ವೈಭವಯುತ ಜೀವನಕ್ಕೆ ನಾಂದಿಯಾಗುತ್ತದೆ. ತಾಯಿಗೆ ತವರುಮನೆಯಿಂದ ಹಣದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಪ್ರಯತ್ನದಿಂದಾಗಿ ಕುಟುಂಬದ ಹಣಕಾಸಿನ ತೊಂದರೆ ದೂರವಾಗಲಿದೆ. ತಂದೆಯವರ ಆರೋಗ್ಯದಲ್ಲಿ ತೊಂದರೆ ಇದ್ದರೂ ಅದರಿಂದ ಪಾರಾಗುತ್ತಾರೆ. ಹೊಸ ವಾಹನವನ್ನು ಕೊಳ್ಳುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಲಾಭವಿದೆ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುತ್ತಾರೆ. ಕಮಿಷನ್ ಆಧಾರಿತ ಉಪವೃತ್ತಿಯೊಂದನ್ನು ಆರಂಭಿಸುತ್ತೀರಿ.
ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಮಕರ ರಾಶಿ
ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ದೃಢ ಮನಸ್ಸಿನಿಂದ ಎದುರಿಸುವಿರಿ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ. ಸೋದರರೊಬ್ಬರು ಆತುರದಿಂದ ಉದ್ಯೋಗವನ್ನು ಬದಲಾಯಿಸಿ ತೊಂದರೆಗೆ ಒಳಗಾಗುತ್ತಾರೆ. ತಾಯಿಯವರಿಂದ ಒಡವೆಗಳು ಬಡುವಳಿಯಾಗಿ ದೊರೆಯುತ್ತದೆ. ಉದ್ಯೋಗದಲ್ಲಿ ನಿಮ್ಮ ಅವಶ್ಯಕತೆ ಹೆಚ್ಚಾಗುವ ಕಾರಣ ವೇತನವೂ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ರುಚಿಕರ ಆಹಾರ ಮತ್ತು ನಿದ್ದೆಯ ಮೇಲೆ ವ್ಯಾಮೋಹ ಹೆಚ್ಚಾಗುತ್ತದೆ. ಭೂ ವ್ಯವಹಾರದಲ್ಲಿ ಲಾಭವಿದೆ. ಮಕ್ಕಳ ಜವಾಬ್ದಾರಿಯು ಹೆಚ್ಚುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಕುಂಭ ರಾಶಿ
ದುಡುಕಿನ ಮಾತಿನಿಂದ ದೂರವಿದ್ದು ಶಾಂತಿ ಸಂಯಮದಿಂದ ಕೆಲಸವನ್ನು ಸಾಧಿಸುವಿರಿ. ಮನದ ವಿಚಾರವನ್ನು ಯಾರಿಗೂ ತಿಳಿಸದ ಕಾರಣ ತೊಂದರೆ ಇರುವುದಿಲ್ಲ. ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳು ಈಡೇರಲಿವೆ. ಹಣ ಉಳಿಸುವ ಸಲುವಾಗಿ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಉದ್ಯೋಗದಲ್ಲಿ ಇದ್ದ ಒತ್ತಡವು ಮರೆಯಾಗುತ್ತದೆ. ಗೆಲುವಿನ ಕಾರಣ ವಿದ್ಯಾರ್ಥಿಗಳು ನೆಮ್ಮದಿಯಿಂದ ಇರುತ್ತಾರೆ. ಯಾರ ಸಹಾಯವನ್ನೂ ನಿರೀಕ್ಷಿಸದೆ ಸ್ವತಂತ್ರವಾಗಿ ಮುಂದುವರೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಮೀನ ರಾಶಿ
ಬಹುದಿನದಿಂದ ಇದ್ದ ಮನದಾಸೆಯೊಂದು ಈಡೇರಲಿದೆ. ಹಣಕಾಸಿನ ವಿವಾದದಿಂದ ದೂರ ಉಳಿಯುವಿರಿ. ಮುಂಗೋಪ ಬಿಟ್ಟು ಸ್ನೇಹ ಪ್ರೀತಿಯಿಂದ ವ್ಯವಹರಿಸಿ ಗೆಲುವು ಸಾಧಿಸುವಿರಿ. ಹಣಕಾಸಿನ ವ್ಯಾವಹಾರದ ಸಂಸ್ಥೆಯನ್ನು ಆರಂಭಿಸುವ ಯೋಚನೆ ಮಾಡುವಿರಿ. ಬಂಧು ಬಳಗದವರು ಅನಾವಶ್ಯಕವಾಗಿ ನಿಮ್ಮ ಬಗ್ಗೆ ಸುದ್ಧಿ ಹರಡುತ್ತಾರೆ. ಗಾಯನ ಕ್ಷೇತ್ರದಲ್ಲಿ ಇದ್ದಲ್ಲಿ ಉತ್ತಮ ಅವಕಾಶ ಪಡೆಯುವಿರಿ. ಆಧುನಿಕತೆ ಒಗ್ಗಿಕೊಂಡು ನಡೆಯ ಬೇಕಾಗುತ್ತದೆ. ಜನರಿಂದ ಉನ್ನತ ಗೌರವ ದೊರೆಯುತ್ತದೆ. ಅನಿವಾರ್ಯತೆ ಇರುವವರಿಗೆ ಹಣದ ಸಹಾಯ ಮಾಡುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ : ಕಿತ್ತಳೆಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).