Tomorrow Horoscope: ಸಂತಸದ ಕ್ಷಣವೊಂದು ನಿಮ್ಮದಾಗುತ್ತೆ, ಬೇಸರದಿಂದ ಉದ್ಯೋಗ ಬದಲಿಸುವ ಸಾಧ್ಯತೆ
16th July 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (16th July 2024 Horoscope)
ನಾಳಿನ ಪಂಚಾಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮಋತು-ಆಷಾಡ ಮಾಸ-ಶುಕ್ಲಪಕ್ಷ-ಮಂಗಳವಾರ
ತಿಥಿ: ದಶಮಿ ಹ. 04.47 ರವರೆಗು ಇರುತ್ತದೆ. ಆನಂತರ ಏಕಾದಶಿ ಆರಂಭವಾಗುತ್ತದೆ.
ನಕ್ಷತ್ರ: ವಿಶಾಖ ನಕ್ಷತ್ರವು ರಾ. 11.41 ರವರೆಗು ಇದ್ದು ಆನಂತರ ಅನೂರಾಧ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 06.01
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: ಮಧ್ಯಾಹ್ನ 03.41 ರಿಂದ ಸಂಜೆ 05.17
ಮೇಷ ರಾಶಿ
ಯಾರಿಗೂ ತಿಳಿಸದೆ ಸ್ವಂತ ಕೆಲಸವನ್ನು ಯಶಸ್ಚಿಯಿಂದ ಪೂರ್ಣಗೊಳಿಸುವಿರಿ. ಅಸಾಧ್ಯದ ವಿಚಾರಗಳಿಗೆ ಯೋಚಿಸುವ ಕಾರಣ ಮಾನಸಿಕ ಒತ್ತಡ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ತಕ್ಕಂತೆ ಉತ್ತಮ ಬದಲಾವಣೆಗಳು ಕಂಡುಬರಲಿದೆ. ಆತ್ಮೀಯರೊಬ್ಬರು ನಿಮಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ನೀಡುತ್ತಾರೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯಲ್ಲಿ ಮಗ್ನರಾಗುತ್ತಾರೆ. ವ್ಯಾಪಾರ ವ್ಯವಹಾರದ ಆದಾಯದಲ್ಲಿ ಸಮತೋಲನ ಉಂಟಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವಲ್ಲಿ ವಿಫರಾಗುವಿರಿ. ಕುಟುಂಬದೊಂದಿಗೆ ಕಳೆಯಲು ಕೆಲ ಸಮಯವನ್ನು ಮೀಸಲಿಡುವಿರಿ.
ಪರಿಹಾರ: ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನೀಲಿ
ವೃಷಭ ರಾಶಿ
ಅರೆ ಮನಸ್ಸಿನ ನಿರ್ಧಾರದಿಂದಾಗಿ ಉತ್ತಮ ಅವಕಾಶವು ಕೈತಪ್ಪಿ ಹೋಗುತ್ತದೆ. ಬೇರೆಯವರ ಸಮಸ್ಯೆಯೊಂದನ್ನು ಬಗೆಹರಿಸುವ ಕಾರಣ ಹಣದ ಸಹಾಯ ದೊರೆಯುತ್ತದೆ. ಹಣದ ತೊಂದರೆಯಿಂದ ಪಾರಾಗುವಿರಿ. ನಿಮ್ಮ ವರ್ತನೆಯಲ್ಲಿ ಉಂಟಾಗುವ ಬದಲಾವಣೆಗಳು ಎಲ್ಲರ ಮನಗೆಲ್ಲುತ್ತದೆ. ಕುಟುಂಬದ ನೆಮ್ಮದಿಗೆ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವಿರಿ. ದಂಪತಿಗಳ ನಡುವೆ ಬೇಸರ ಮೂಡುವ ಪ್ರಸಂಗವೊಂದು ನಡೆಯಲಿದೆ. ನಿರೀಕ್ಷಿಸಿದಂತೆ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಆದರೆ ದೂರದ ಊರಿಗೆ ವರ್ಗಾವಣೆಯಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿಮ್ಮ ಲೆಕ್ಕಾಚಾರದಂತೆ ಲಾಭ ದೊರೆಯುವುದಿಲ್ಲ.
ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ನೇರಳೆ
ಮಿಥುನ ರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಕುಟುಂಬದಲ್ಲಿನ ವಿವಾದವು ಮರೆಯಾಗಿ ಸಹಜ ಸ್ಥಿತಿಗೆ ಮರಳುತ್ತದೆ. ಚಾಡಿ ಮಾತುಗಳನ್ನು ನಂಬಿ ವಿವಾದಕ್ಕೆ ಸಿಲುಕುವಿರಿ. ದಾಂಪತ್ಯದಲ್ಲಿ ವಿವಾದ ಉಂಟಾಗಲಿದೆ. ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳಿಂದ ನಿಮಗೆ ಯಾವುದೇ ಉಪಯೋಗ ಇರುವುದಿಲ್ಲ. ಬೇಸರದಿಂದ ಉದ್ಯೋಗ ಬದಲಿಸುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರೆಯುವರು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರಕುತ್ತದೆ. ಆದರೆ ಹಣವನ್ನು ಉಳಿಸಲು ವಿಫಲರಾಗುವಿರಿ. ಆತ್ಮೀಯರೊಬ್ಬರ ಭೇಟಿಯಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ.
ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಗುಲಾಬಿ
ಕಟಕ ರಾಶಿ
ಉತ್ತಮ ಆರೋಗ್ಯಕ್ಕಾಗಿ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಸ್ವಂತ ವೈದ್ಯದ ಬದಲು ವೈದ್ಯರನ್ನು ಭೇಟಿಯಾಗುವುದು ಕ್ಷೇಮಕರ. ಕುಟುಂಬದಲ್ಲಿ ವಾದ ವಿವರಗಳು ಇದ್ದರೂ ವಿಕೋಪಕ್ಕೆ ಹೋಗಲಾರದು. ತಪ್ಪನ್ನು ಕ್ಷಮಿಸುವ ಗುಣದಿಂದ ಎಲ್ಲರ ಪ್ರೀತಿಗೆ ಪಾತ್ರರಾಗುವಿರಿ. ಉದ್ಯೋಗದಲ್ಲಿ ಶಾಂತಿ ಸಂಧಾನದಿಂದ ಸಮಸ್ಯೆಗಳನ್ನು ದೂರ ಮಾಡುವಿರಿ. ಮೌನದಿಂದ ಇದ್ದಲ್ಲಿ ಕುಟುಂಬದಲ್ಲಿ ಸಾಮರಸ್ಯ ಉಂಟಾಗಲು ಸಾಧ್ಯವಾಗುತ್ತದೆ.
ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಸಿಂಹ ರಾಶಿ
ಆತುರದ ತೀರ್ಮಾನಗಳು ನಿರಾಸೆಗೆ ಕಾರಣವಾಗುತ್ತದೆ. ಕುಟುಂಬದ ಹಿರಿಯರ ಸಲಹೆ, ಸೂಚನೆಗಳನ್ನು ಪಾಲಿಸಿದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ನಿಮಸ್ಯೆ ದೂರವಾಗಲಿದೆ. ಸಂತಸದ ಕ್ಷಣವೊಂದು ನಿಮ್ಮದಾಗಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಯಶಸ್ಸನ್ನು ಗಳಿಸುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಬೇಸರ ಕಳೆಯಲು ಮನರಂಜನಾ ಸ್ಥಳಕ್ಕೆ ತೆರಳುವಿರಿ. ನವವಿವಾಹಿತರಿಗೆ ಸಂತಾನ ಲಾಭವಿದೆ. ಸೋದರಿಯ ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಮರುಕಳಿಸುತ್ತದೆ.
ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಬೂದು ಬಣ್ಣ
ಕನ್ಯಾ ರಾಶಿ
ಸ್ನೇಹಿತರು ಸಂಬಂಧಿಕರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಸಂತೋಷಕೂಟವನ್ನು ಏರ್ಪಡಿಸಲು ಹಣವನ್ನು ಖರ್ಚು ಮಾಡುವಿರಿ. ಆಹಾರ ಸೇವನೆಯಲ್ಲಿ ಇತಿ ಮಿತಿ ಇರದೆ ಹೋದಲ್ಲಿ ಅನಾರೋಗ್ಯ ಉಂಟಾಗುತ್ತದೆ. ನೀವು ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ಉದ್ಯೋಗದಲ್ಲಿ ಬದಲಾವಣೆ ಎದುರಾಗುತ್ತದೆ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿನ ನಿರೀಕ್ಷೆ ನಿಜವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.
ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 9
ಅಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕಂದು
ತುಲಾ ರಾಶಿ
ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುವಿರಿ. ನಿಮ್ಮ ಜೀವನ ನಿರ್ವಹಣೆಯ ಪರಿ ಎಲ್ಲರ ಮನ ಗೆಲ್ಲುತ್ತದೆ. ಸಮಾಜದಲ್ಲಿ ಜನಮೆಚ್ಚುವ ಕೆಲಸಗಳನ್ನು ಮಾಡುವಿರಿ. ನಾಯಕನ ಸ್ಥಾನಮಾನ ಗಳಿಸಲು ಹಾತೊರೆಯುವಿರಿ. ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಶುಭಫಲಗಳು ದೊರೆಯಲಿವೆ. ಹಣಕಾಸಿನ ವಿಚಾರದಲ್ಲಿ ದಿಟ್ಟನಿಲುವನ್ನು ತೆಗೆದುಕೊಳ್ಳುವಿರಿ. ಪಾಲುಗಾರಿಕೆಯ ವಿಚಾರದಲ್ಲಿ ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಗ್ರಹಣ ಶಕ್ತಿ ಉತ್ತಮವಾದ್ದರಿಂದ ಕಲಿಕೆಯಲ್ಲಿ ತೊಂದರೆ ಇರದು. ತಂದೆಯವರ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ದೊರೆಯುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ, ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕಪ್ಪು
ವೃಶ್ಚಿಕ ರಾಶಿ
ಬಿಡುವಲ್ಲದ ದುಡಿಮೆ ಮನಕ್ಕೆ ಬೇಸರವನ್ನು ಉಂಟುಮಾಡುತ್ತದೆ. ಯೋಗ ಮತ್ತು ವ್ಯಾಯಾಮದಿಂದ ದೈಹಿಕ ಶಕ್ತಿಯು ಹೆಚ್ಚುತ್ತದೆ. ಒಂಟಿತನ ಬೇಸರ ಉಂಟುಮಾಡುತ್ತದೆ. ಕುಟುಂಬದಲ್ಲಿ ಉತ್ತಮ ಆತ್ಮೀಯತೆ ಇರುತ್ತದೆ. ಹಣಕಾಸಿನ ಕೊರತೆಯನ್ನು ಎದುರಿಸುವಿರಿ. ಉದ್ಯೋಗದಲ್ಲಿ ಎದುರಾಗುವ ಪರಿಸ್ಥಿತಿಗೆ ಹೊಂದಿಕೊಂಡು ನಡೆಯುವಿರಿ. ಮನರಂಜನೆಗೆ ಮೊದಲ ಆದ್ಯತೆಯನ್ನು ನೀಡುವಿರಿ. ಪ್ರವಾಸದಲ್ಲಿಯೇ ಹೆಚ್ಚಿನ ವೇಳೆಯನ್ನು ಕಳೆಯುವಿರಿ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಇಲ್ಲದೆ ಹೋದರೂ ಎಚ್ಚರಿಕೆ ಇರಲಿ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ತಿಳಿ ಹಸಿರು
ಧನಸ್ಸು ರಾಶಿ
ನಿಮ್ಮ ಮನಸ್ಸಿಗೆ ಸರಿ ಎಂದೆನಿಸುವ ಕೆಲಸವನ್ನು ಮಾತ್ರ ಮಾಡಲಿಚ್ಚಿಸುವಿರಿ. ದಿನವಿಡೀ ಕುಟುಂಬದ ಸದಸ್ಯರ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಉದ್ಯೋಗದ ಬಗ್ಗೆ ಅನಿರೀಕ್ಷಿತ ವರ್ತಮಾನವೊಂದು ಬರಲಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೊಸ ಆಯಾಮವನ್ನು ಸೃಷ್ಟಿಸಲಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಿರಿ. ನಿಮ್ಮ ಮುಂಜಾಗರೂಕತೆಯಿಂದ ಎದುರಾಗುವ ಸಮಸ್ಯೆಯೊಂದು ದೂರವಾಗಲಿವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಪ್ರಗತಿ ಗಳಿಸುತ್ತಾರೆ. ಗೃಹಿಣಿಯರಿಗೆ ವಿಶ್ರಾಂತಿಯ ಅಗತ್ಯತೆ ಇರುತ್ತದೆ.
ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ನಸುಗೆಂಪು
ಮಕರ ರಾಶಿ
ಯಾವುದೇ ಕೆಲಸವನ್ನು ಮಾಡಲು ಮನಸ್ಸಿರುವುದಿಲ್ಲ. ತಿನ್ನುವುದು, ಕುಡಿಯುವುದು, ವಿಶ್ರಾಂತಿ ತೆಗೆದುಕೊಳ್ಳುವುದು ಇಷ್ಟೇ ದಿನದ ನಿಮ್ಮ ಕೆಲಸವಾಗುತ್ತದೆ. ನಿಮ್ಮಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಕುಟುಂಬದ ಎಲ್ಲರೊಂದಿಗೂ ದೀರ್ಘ ಕಾಲದ ಪ್ರಯಾಣ ಬೆಳೆಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಕುಟುಂಬದ ಮೇಲೆ ವಿಶೇಷವಾದ ನಂಬಿಕೆ ನಿಮ್ಮ ಮನದಲ್ಲಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಹಿನ್ನಡೆ ಇರುವುದಿಲ್ಲ. ನಿಮ್ಮಲ್ಲಿನ ಕಾರ್ಯ ದಕ್ಷತೆ ಹೊಸ ಅವಕಾಶಗಳನ್ನು ಕಲ್ಪಿಸುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಪರಿಹಾರ: ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ
ಕುಂಭ ರಾಶಿ
ಸದಾ ಒತ್ತಡದ ಜೀವನ ಇರುತ್ತದೆ. ಹಣಕಾಸಿನ ಕೊರತೆಯನ್ನು ಕಡಿಮೆ ಆಗಲಿದೆ. ವಿಶ್ರಾಂತಿ ಇಲ್ಲದೆ ಕೆಲಸ ನಿರ್ವಹಿಸಿ ಬೇಸರಕ್ಕೆ ಒಳಗಾಗುವಿರಿ. ಹಿರಿಯರ ಸಲಹೆ ಸಹಕಾರವನ್ನು ಅನುಸರಿಸಬೇಕಾಗುತ್ತದೆ. ಹೊಸ ಅವಕಾಶ ದೊರೆತು ಉದ್ಯೋಗವನ್ನು ಬದಲಾಯಿಸುವಿರಿ. ನಿಮ್ಮ ನಿರೀಕ್ಷೆಯಂತೆ ಗುರಿ ತಲುಪಲು ಅನ್ಯರ ಸಹಾಯ ಬೇಕಾಗುತ್ತದೆ. ವಿದ್ಯಾರ್ಥಿಗಳು ಮನರಂಜನೆ ಮರೆತು ವೇಳೆಯನ್ನು ವ್ಯರ್ಥ ಮಾಡದೆ ವಿದ್ಯಾಭ್ಯಾಸದಲ್ಲಿ ತೊಡಗಲಿದ್ದಾರೆ. ನಿಮ್ಮಲ್ಲಿನ ಹಾಸ್ಯದ ಮನೋಭಾವನೆ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ವ್ಯಾಪಾರ ವ್ಯವಹಾರದಲ್ಲಿ ಸಾಮಾನ್ಯ ಗತಿಯ ಆದಾಯ ದೊರೆಯುತ್ತದೆ. ಶಾಂತಿ ನೆಮ್ಮದಿಯಿಂದ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುವಿರಿ.
ಪರಿಹಾರ: ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ಮೀನ ರಾಶಿ
ಮನೆಯಲ್ಲಿ ಗರ್ಭಿಣಿಯರಿಗೆ ಉತ್ತಮ ಆತಿಥ್ಯದ ಅಗತ್ಯತೆ ಇರುತ್ತದೆ. ಕಷ್ಟವಿಲ್ಲದೆ ಬುದ್ದಿವಂತಿಕೆಯಿಂದ ಹಣವನ್ನು ಸಂಪಾದಿಸಬಲ್ಲಿರಿ. ಚಿಕ್ಕ ಪುಟ್ಟ ವಿಚಾರಗಳಿಗೂ ಹೆಚ್ಚಿನ ಹಣ ಖರ್ಚು ಮಾಡುವಿರಿ. ನಿಮ್ಮ ಮಾತಿಗೆ ಎಲ್ಲರ ಗೌರವ ಲಭಿಸುತ್ತದೆ. ಒಪ್ಪಿದ ಕೆಲಸ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಲ್ಲಿರಿ. ವಿದ್ಯಾರ್ಥಿಗಳು ಉತ್ತಮ ಸಾಧನೆಯತ್ತ ಗಮನಹರಿಸುತ್ತಾರೆ. ಉದ್ಯೋಗದಲ್ಲಿ ನಿಮ್ಮ ಅನುಕೂಲವೆಸುವ ಮಾದರಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಪರಿಚಯ ಇರುವವರ ಜೊತೆ ಅಥವಾ ಸಂಬಂಧದಲ್ಲಿ ವಿವಾಹ ನಿಶ್ಚಯವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಹಣದ ಗಳಿಕೆ ಇರುತ್ತದೆ.
ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
