ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಕುಟುಂಬದ ಆಸ್ತಿ ವಿವಾದದಲ್ಲಿ ಜಯ, ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಯಶಸ್ಸು; ನಾಳೆಯ ದಿನ ಭವಿಷ್ಯ

Tomorrow Horoscope: ಕುಟುಂಬದ ಆಸ್ತಿ ವಿವಾದದಲ್ಲಿ ಜಯ, ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಯಶಸ್ಸು; ನಾಳೆಯ ದಿನ ಭವಿಷ್ಯ

18th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ಜೂನ್ 18ರ ಮಂಗಳವಾರದ ಭವಿಷ್ಯ ಇಂದೇ ತಿಳಿಯಿರಿ.
ಜೂನ್ 18ರ ಮಂಗಳವಾರದ ಭವಿಷ್ಯ ಇಂದೇ ತಿಳಿಯಿರಿ.

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (18th June 2024 Horoscope)

ನಾಳಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ದ್ವಾದಶಿ ಬೆ 05.19ರವರೆಗೂ ಇರುತ್ತದೆ. ಆನಂತರ ತ್ರಯೋದಶಿ ಆರಂಭವಾಗುತ್ತದೆ.

ನಕ್ಷತ್ರ: ಸ್ವಾತಿ ನಕ್ಷತ್ರವು ಮಧ್ಯಾಹ್ನ 02.25 ರವರೆಗೆ ಇದ್ದು, ಆನಂತರ ವಿಶಾಖ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆ.05.52

ಸೂರ್ಯಾಸ್ತ: ಸ.06.47

ರಾಹುಕಾಲ: ಮಧ್ಯಾಹ್ನ 03.37 ರಿಂದ ಸಂಜೆ 05.13

ಮೇಷ ರಾಶಿ

ಎದುರಾಗುವವ ಅಪಾಯಗಳನ್ನು ಮೊದಲೇ ಗ್ರಹಿಸುವಿರಿ. ವಿದ್ಯಾರ್ಥಿಗಳು ಹೊಸ ನಿರೀಕ್ಷೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕಿವಿಯ ನೋವು ನಿಮ್ಮನ್ನು ಕಾಡುತ್ತದೆ. ಚರ್ಮದ ದೋಷವು ಮರೆಯಾಗುತ್ತದೆ. ನಿಮ್ಮಲ್ಲಿ ಇರುವ ವಿಶೇಷ ಪ್ರತಿಭೆಗೆ ತಕ್ಕ ಅವಕಾಶ ದೊರೆಯುತ್ತದೆ. ವಾದ ವಿವಾದಗಳಿಗೆ ಬೇಸರ ಮಾಡಿಕೊಳ್ಳದೆ ಹಾಸ್ಯವಾಗಿ ತೆಗೆದುಕೊಳ್ಳುವಿರಿ. ಪರೋಪಕಾರದ ಗುಣವು ಹಿರಿಯರಿಂದ ಬಳುವಳಿಯಾಗಿ ಬಂದಿದೆ. ಸಂಗಾತಿಯ ಕಾರ್ಯಶ್ರದ್ದೆಯಿಂದ ನಿಮಗೆ ಉತ್ತಮ ಫಲಗಳು ದೊರೆಯಲಿವೆ. ಆದಾಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಹೆಣ್ಣು ಮಕ್ಕಳಿಗೆ ವಿಶೇಷವಾದ ಶುಭಫಲಗಳು ದೊರೆಯುತ್ತವೆ. ನೋಡಲು ಚೆನ್ನಾಗಿ ಕಾಣುವ ವಸ್ತುಗಳನ್ನು ಇಷ್ಟಪಡುವಿರಿ. ಯಾವುದೇ ಕೆಲಸ ಕಾರ್ಯಗಳು ಮಾಡಿದರು ಯಶಸ್ಸು ಇರಲಿದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ತಿಳಿಹಸಿರು

ವೃಷಭ ರಾಶಿ

ಯೋಜಿತ ರೀತಿಯಲ್ಲಿ ಕೆಲಸ ಮಾಡುವ ಕಾರಣ ಯಶಸ್ಸು ದೊರೆಯುತ್ತದೆ. ಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ನಿಮ್ಮ ಸಲಹೆ ಸೂಚನೆಯನ್ನು ಎಲ್ಲರೂ ಒಪ್ಪುತ್ತಾರೆ. ಸಮಾಜದ ನಾಯಕ ಸ್ಥಾನವನ್ನು ಅಲಂಕರಿಸುವಿರಿ. ಅಜೀರ್ಣತೆಯ ತೊಂದರೆಯಿಂದ ಬಳಲುವಿರಿ. ಜಗಳ ಕದನಕ್ಕೆ ಆಸ್ಪದ ನೀಡದೆ ಎದುರಾಗುವ ಸಮಸ್ಯೆಗಳನ್ನು ಮಾತಿನ ಮೂಲಕ ಬಗೆಹರಿಸುವಿರಿ. ನಿಮಗೆ ಹೆಚ್ಚಾದ ಆತ್ಮವಿಶ್ವಾಸವಿರುತ್ತದೆ. ಎಷ್ಟೇ ಕಷ್ಟವಾದರೂ ಗೌರವವನ್ನು ಕಾಪಾಡಿಕೊಳ್ಳಿ. ಕುಟುಂಬದ ಕ್ಷೇಮವನ್ನು ಕಾಪಾಡುವಿರಿ. ನಿಮ್ಮಲ್ಲಿ ಅಪರೂಪದ ಬುದ್ಧಿವಂತಿಗೆ ಇರುತ್ತದೆ. ನವಜಾತ ಶಿಶುಗಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಸೋದರಿಯ ಜೊತೆ ಹಣದ ವಿಚಾರವಾಗಿ ಮನಸ್ತಾಪ ಉಂಟಾಗುತ್ತದೆ.

ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನಸುಗೆಂಪು

ಮಿಥುನ ರಾಶಿ

ಕೆಲಸದ ಸಲುವಾಗಿ ಹಲವಾರು ಸ್ಥಳಗಳಿಗೆ ಭೇಟಿ ನೀಡುವಿರಿ. ಕುಟುಂಬದ ಹಿರಿಯರ ಸಲಹೆ ಸೂಚನೆಯನ್ನು ಪಾಲಿಸುವಿರಿ. ತಂದೆ ತಾಯಿಯ ಜೊತೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಪ್ರತಿಯೊಂದು ವಿಚಾರದಲ್ಲಿಯೂ ನಿಮ್ಮದೇ ಆದ ಚಿಂತನೆ ಇರುತ್ತದೆ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಗೃಹಿಣಿಯರು ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ಯೋಜನೆಯನ್ನು ರೂಪಿಸುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದಲ್ಲಿ ಒಮ್ಮತದ ಕೊರತೆ ಇರುತ್ತದೆ. ಸುಂದರವಾದ ಮನೆಯನ್ನು ಕೊಳ್ಳುವ ಯೋಚನೆ ಮೂಡುತ್ತದೆ. ಸೋದರಿಗೆ ಅನಾರೋಗ್ಯ ವಿರುತ್ತದೆ. ದಂಪತಿಗಳ ನಡುವೆ ಅನಾವಶ್ಯಕವಾದ ವಿವಾದಗಳು ಎದುರಾಗಲಿವೆ.

ಪರಿಹಾರ: ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಕಟಕ ರಾಶಿ

ಕುಟುಂಬದ ಆಸ್ತಿಯ ವಿವಾದದಲ್ಲಿ ಜಯಗಳಿಸುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಇರುವ ಮನೆಯನ್ನು ವಿಸ್ತರಿಸುವಿರಿ. ಹಣ ಸಂಗ್ರಹ ಮಾಡುವಿರಿ. ಉದ್ಯೋಗದಲ್ಲಿ ಅನಾವಶ್ಯಕವಾದ ಅಡಚಣೆಗಳು ಎದುರಾಗುತ್ತವೆ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ವಹಿಸುವುದಿಲ್ಲ, ಪರೋಕ್ಷವಾಗಿ ಜನೋಪಕಾರಿ ಕೆಲಸವನ್ನು ಮಾಡುವಿರಿ. ಕಷ್ಟ ಎನಿಸಿದರು ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಆದಾಯ ದೊರೆಯುತ್ತದೆ. ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗವನ್ನು ಬದಲಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ.

ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಸಿಂಹ ರಾಶಿ

ಸುತ್ತಮುತ್ತಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಮಾಡುವಿರಿ. ನಿಮ್ಮ ಕುಟುಂಬದಲ್ಲಿ ಸ್ರೀಯರಿಗೆ ವಿಶೇಷವಾದಂತಹ ಸ್ಥಾನ ಮಾನ ದೊರೆಯುತ್ತದೆ. ನವ ವಿವಾಹಿತರಿಗೆ ವಿಶೇಷವಾದಂತಹ ಅನುಕೂಲತೆಗಳು ದೊರೆಯಲಿವೆ. ಆತುರಪಡದೆ ಉತ್ತಮ ಜೀವನಕ್ಕಾಗಿ ಹಣವನ್ನು ಉಳಿಸುವಿರಿ. ಆದರೆ ಉದ್ಯೋಗದಲ್ಲಿ ಅನಾವಶ್ಯಕವಾದ ಅಡೆ ತಡೆಗಳಿರುತ್ತವೆ. ಇದರಿಂದಾಗಿ ಕೆಲಸ ಮಾಡಲು ಆಸಕ್ತಿ ಮೂಡುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ವಿರುತ್ತದೆ. ಗುರು ಹಿರಿಯರ ಸಲಹೆ ನಿಮ್ಮನ್ನು ಸರಿ ಹಾದಿಯಲ್ಲಿ ನಡೆಸುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಆಕಾಶನೀಲಿ

ಕನ್ಯಾ ರಾಶಿ

ಶೀತದ ತೊಂದರೆ ಇರುತ್ತದೆ. ಸಮಾನ ಮನಸ್ಕರ ಸಹವಾಸ ಉಂಟಾಗುತ್ತದೆ. ನಿಮ್ಮ ಪ್ರಯತ್ನದಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಸಮಾಜದಲ್ಲಿ ಉನ್ನತ ಕೀರ್ತಿ ಪಡೆಯುವಿರಿ. ವಯೋವೃದ್ಧರಿಗೆ ವಿಟಮಿನ್ ಕೊರತೆಯಿಂದ ಇರುತ್ತದೆ. ತಂದೆಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಧಾರ್ಮಿಕ ಗುರುಗಳ ಆಶೀರ್ವಾದ ದೊರೆಯುತ್ತದೆ. ಹಣದ ಕೊರತೆ ಉಂಟಾಗುತ್ತದೆ. ಆದರೆ ನೀವು ಮಾಡಿದ ಸಹಾಯವನ್ನು ನೆನೆದು ಆತ್ಮೀಯರು ನಿಮಗೆ ನೆರವಾಗುತ್ತಾರೆ. ಕೆಲಸದ ನಡುವೆ ವಿಶ್ರಾಂತಿಯನ್ನು ಬಯಸುವಿರಿ. ಉದ್ಯೋಗದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ. ಹೊಂದಾಣಿಕೆಯ ಗುಣವು ನಿಮ್ಮನ್ನು ಅಪಾಯದಿಂದ ಪಾರು ಮಾಡುತ್ತದೆ.

ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 7

ಅಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ತುಲಾ ರಾಶಿ

ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಿರಿ. ಉತ್ತಮ ಆದಾಯವಿದ್ದರೂ ಹಣದ ಕೊರತೆ ಕಂಡು ಬರುತ್ತದೆ. ಅಡ್ಡಿ ಆತಂಕಗಳು ಎದುರಾದರು ಬುದ್ಧಿವಂತಿಕೆಯಿಂದ ಪಾರಾಗುವಿರಿ. ದೀರ್ಘ ಕಾಲದ ಪ್ರವಾಸಕ್ಕೆ ತೆರಳುವಿರಿ. ತಾಯಿಯವರಿಗೆ ಅನಾರೋಗ್ಯವಿರುತ್ತದೆ. ಕೋಪವನ್ನು ಕಡಿಮೆ ಮಾಡಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಅವಧಿಯಲ್ಲಿ ಉದ್ಯೋಗ ಲಭಿಸುತ್ತದೆ. ವಾಸ ಸ್ಥಳವನ್ನು ಬದಲಿಸುವಿರಿ. ಯುವತಿಯರಿಗೆ ವಿಶೇಷವಾದಂತಹ ಲಾಭವಿದೆ.

ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ ಎಲೆಹಸಿರು ಬಣ್ಣ

ವೃಶ್ಚಿಕ ರಾಶಿ

ಉತ್ತಮ ಮಟ್ಟದಲ್ಲಿ ಜೀವನವನ್ನು ನಡೆಸಿ ಎಲ್ಲರಿಗೂ ಮಾದರಿಯಾಗುವಿರಿ. ಹೆಚ್ಚಿನ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಲು ಸಾಧ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ನಿರಾಸೆಯ ವೇಳೆ ಉದ್ವೇಗದಿಂದ ವರ್ತಿಸುವಿರಿ. ಸಾರ್ವಜನಿಕರ ನಡುವೆ ನಾಯಕನಾಗಿ ಬಾಳುವಿರಿ. ಶುಭಕರ ಫಲಿತಾಂಶಗಳಿದ್ದರೂ ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ವಿವಾದವು ಕೊನೆಯಾಗುತ್ತದೆ. ನಿಮ್ಮ ಮನಸ್ಸಿಗೆ ಹತ್ತಿರವಾಗುವಂತಹ ದಿನದೊಂದಿಗೆ ಸ್ನೇಹವನ್ನು ಬೆಳೆಸುವಿರಿ. ಅನಿರೀಕ್ಷಿತವಾಗಿ ತೊಂದರೆಯೊಂದನ್ನು ಎದುರಿಸಬೇಕಾಗುತ್ತದೆ. ಬೇರೆಯವರ ಮೇಲೆ ಅವಲಂಬಿಸದೆ ಸ್ವತಂತ್ರವಾಗಿ ಜೀವನ ನಿರ್ವಹಿಸುವಿರಿ.

ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ

ಧನಸ್ಸು ರಾಶಿ

ಸ್ಥಿರವಾದ ಮಾತಿನಿಂದ ಮತ್ತು ಮನಸ್ಸಿನಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ವಿಶೇಷ ಲಾಭವಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮತ್ತು ಆದಾಯವನ್ನು ಸರಿದೋಗಿಸಿಕೊಂಡು ಹೋಗುವಿರಿ. ದಿನನಿತ್ಯದ ವ್ಯವಹಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಕುಟುಂಬದ ಜವಾಬ್ದಾರಿಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಬುದ್ಧಿವಂತಿಕೆಯಿಂದ ಹಣವನ್ನು ಸಂಪಾದಿಸುವಿರಿ. ಅನಾರೋಗ್ಯವಿರುತ್ತದೆ. ಜೀವನದಲ್ಲಿದ್ದ ತೊಂದರೆಗಳು ಮರೆಯಾಗುತ್ತವೆ. ಕುಟುಂಬದಲ್ಲಿ ಅನಾವಶ್ಯಕ ಅಡೆತಡೆಗಳು ಬೇಸರವನ್ನು ಉಂಟುಮಾಡುತ್ತದೆ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ. ಅವಿವಾಹಿತರಿಗೆ ಸಂಬಂಧದಲ್ಲಿ ವಿವಾದ ವಿವಾಹವಾಗುತ್ತದೆ. ಮಕ್ಕಳ ವಿಚಾರವಾಗಿ ದಂಪತಿಗಳ ನಡುವೆ ವಾದ ವಿವಾದವಿರುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮಕರ ರಾಶಿ

ತಪ್ಪು ಅಭಿಪ್ರಾಯದಿಂದ ಸಂಬಂಧಿಕರೊಬ್ಬರು ನಿಮ್ಮಿಂದ ದೂರವಾಗುತ್ತಾರೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ಉದ್ಯೋಗದಲ್ಲಿ ಧನಾತ್ಮಕ ರೀತಿಯಲ್ಲಿ ಆಂತರಿಕ ಬದಲಾವಣೆಗಳಾಗುತ್ತವೆ. ಹಿರಿಯ ಅಧಿಕಾರಿಗಳ ಸಂಪರ್ಕ ದೊರೆಯುತ್ತದೆ. ಶಾಂತಿ ನೆಮ್ಮದಿಯ ಜೀವನ ಇರುತ್ತದೆ. ದಂಪತಿಗಳ ನಡುವಿನ ಬೇಸರವು ಮರೆಯಾಗುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ಹಣದ ತೊಂದರೆ ಇರುವುದಿಲ್ಲ. ಬಾಳ ಸಂಗಾತಿಗೆ ಅನಾರೋಗ್ಯವಿರುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಕೋಪದಿಂದ ವರ್ತಿಸುವಿರಿ. ಮಾಡದ ತಪ್ಪು ನಿನ್ನನ್ನು ಬಾಧಿಸುತ್ತದೆ. ಬೇರೆಯವರಿಂದ ಹಣದ ಸಹಾಯ ದೊರೆಯುತ್ತದೆ. ಕುಟುಂಬದಲ್ಲಿ ಶುಭ ಕಾರ್ಯವೊಂದು ನಡೆಯಲಿದೆ.

ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು

ಕುಂಭ ರಾಶಿ

ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಹೆಚ್ಚಿನ ಶ್ರದ್ಧೆ ತೋರಬೇಕು. ಹಣದ ಕೊರತೆ ಕಂಡು ಬರುತ್ತದೆ. ಆದರೂ ಯಾವುದೇ ತೊಂದರೆಯಾಗದಂತೆ ನಿರ್ವಹಿಸುವಿರಿ. ಅನಾವಶ್ಯಕವಾದ ವಿವಾದಗಳಿರುತ್ತವೆ. ಯಾವುದೇ ಕೆಲಸ ಕಾರ್ಯಗಳಾದರೂ ಹೆಚ್ಚಿನ ಪ್ರಯತ್ನದಿಂದ ಮಾತ್ರ ಯಶಸ್ವಿಗೊಳಿಸಲು ಸಾಧ್ಯ. ಹಣಕಾಸಿನ ವಿಚಾರದಲ್ಲಿ ವಿವಾದ ಒಂದರಲ್ಲಿ ಸಿಲುಕುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಮನದಲ್ಲಿರುವ ಯೋಚನೆಯನ್ನು ಯಾರಿಗೂ ಹೇಳಿಕೊಳ್ಳುವುದಿಲ್ಲ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸ್ನೇಹಿತರೊಬ್ಬರು ನಿಮ್ಮೊಂದಿಗೆ ವ್ಯಾಪಾರವೊಂದನ್ನು ಆರಂಭಿಸುತ್ತಾರೆ. ವಿದೇಶ ಪ್ರಯಾಣ ಯೋಗವಿದೆ. ದಂಪತಿಗಳ ನಡುವೆ ಅನಾವಶ್ಯಕ ಸಮಸ್ಯೆಗಳು ಉದ್ಭವಿಸುತ್ತದೆ.

ಪರಿಹಾರ: ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಮೀನ ರಾಶಿ

ಆದಾಯವು ಕಡಿಮೆಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಯೋಚನೆ ಇರುತ್ತದೆ. ನಿಮ್ಮ ಆಪ್ತರೊಬ್ಬರು ನಿಮ್ಮಿಂದ ದೂರವಾಗುತ್ತಾರೆ. ನಿಮ್ಮ ಆಶೋತ್ತರಗಳು ಈಡೇರಲಿವೆ. ಕಷ್ಟ ನಷ್ಟಗಳನ್ನು ಪರಿಗಣಿಸದೆ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಜೀವನದಲ್ಲಿ ನಿಧಾನವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುವಿರಿ. ಅನಿರೀಕ್ಷಿತವಾಗಿ ಎದುರಾಗುವ ಬದಲಾವಣೆಗಳಿಗೆ ಹೊಂದಿಕೊಂಡು ಬಾಳುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಲಾಭವಿರುತ್ತದೆ. ಐಷಾರಾಮಿ ಜೀವನಕ್ಕೆ ಮಾರು ಹೋಗುವಿರಿ. ಸಂಗೀತ ನಾಟ್ಯದಂತಹ ಪ್ರಾಚೀನ ಕಲೆಗಳು ನಿಮಗೆ ಸಿದ್ಧಿಸುತ್ತವೆ.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಳದಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.