Tomorrow Horoscope: ಕುಟುಂಬದಲ್ಲಿ ಸ್ನೇಹಮಯ ವಾತಾವರಣವಿರುತ್ತೆ, ಸ್ವಂತ ವ್ಯಾಪಾರದಲ್ಲಿ ಉತ್ತಮ ಆದಾಯ ಇರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಕುಟುಂಬದಲ್ಲಿ ಸ್ನೇಹಮಯ ವಾತಾವರಣವಿರುತ್ತೆ, ಸ್ವಂತ ವ್ಯಾಪಾರದಲ್ಲಿ ಉತ್ತಮ ಆದಾಯ ಇರುತ್ತೆ

Tomorrow Horoscope: ಕುಟುಂಬದಲ್ಲಿ ಸ್ನೇಹಮಯ ವಾತಾವರಣವಿರುತ್ತೆ, ಸ್ವಂತ ವ್ಯಾಪಾರದಲ್ಲಿ ಉತ್ತಮ ಆದಾಯ ಇರುತ್ತೆ

19th July 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ಜುಲೈ 19ರ ಶುಕ್ರವಾರದ ದಿನ ಭವಿಷ್ಯವನ್ನು ಜುಲೈ 18ರ ಗುರುವಾರವೇ ತಿಳಿಯಿರಿ
ಜುಲೈ 19ರ ಶುಕ್ರವಾರದ ದಿನ ಭವಿಷ್ಯವನ್ನು ಜುಲೈ 18ರ ಗುರುವಾರವೇ ತಿಳಿಯಿರಿ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (19th July 2024 Horoscope)

ನಾಳಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ದಕ್ಷಿಣಾಯಣ-ಗ್ರೀಷ್ಮಋತು-ಆಷಾಡ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ: ತ್ರಯೋದಶಿ ಸಾ. 05.45 ರವರೆಗು ಇರುತ್ತದೆ. ಆನಂತರ ಚತುರ್ದಶಿ ಆರಂಭವಾಗುತ್ತದೆ.

ನಕ್ಷತ್ರ: ಮೂಲ ನಕ್ಷತ್ರವು ರಾ. 02.17 ರವರೆಗು ಇದ್ದು ಆನಂತರ ಪೂರ್ವಾಷಾಡ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.01

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: ಬೆಳಗ್ಗೆ 10.54 ರಿಂದ ಮಧ್ಯಾಹ್ನ 12.30

ಮೇಷ ರಾಶಿ

ಹಿರಿಯರ ಒತ್ತಡಕ್ಕೆ ಮಣಿದು ಬಂಧುವೊಬ್ಬರಿಗೆ ಸಹಾಯ ಮಾಡುವಿರಿ. ಕುಟುಂಬದಲ್ಲಿ ಸಂದಿಗ್ದಮಯ ಪರಿಸ್ಥಿತಿ ಎದುರಾಗುತ್ತದೆ. ಬೇಸರದ ನಡುವೆಯೂ ಸ್ವಂತ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಿರಿ. ಹಣಕಾಸಿನ ವಿಚಾರದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ದುಡುಕುತನದ ನಿರ್ಧಾರ ತೆಗೆದುಕೊಳ್ಳುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ವೃಷಭ ರಾಶಿ

ಆತ್ಮವಿಶ್ವಾಸದಿಂದ ಸರಿದಾರಿಯಲ್ಲಿ ಜೀವನ ನಡೆಸುವಿರಿ. ಆದರೆ ಹಠದ ಗುಣ ಒಳ್ಳೆಯದಲ್ಲ. ಕುಟುಂಬದಲ್ಲಿ ಸ್ನೇಹಮಯ ವಾತಾವರಣವಿರುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ವಿದ್ಯಾರ್ಥಿಗಳು ಪರಿಕ್ಷೆಗಳ ಮುಖಾಂತರ ಉದ್ಯೋಗ ಗಳಿಸಲು ಯಶಸ್ಸನ್ನು ಗಳಿಸುತ್ತಾರೆ. ಕಣ್ಣಿನ ದೋಷವುಳ್ಳವರು ಎಚ್ಚರಿಕೆ ವಹಿಸಬೇಕು. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಮಿಥುನ ರಾಶಿ

ಜೀವನದ ಸುಮಧುರ ಘಗಳಿಗೆಯನ್ನು ಎಲ್ಲರ ಜೊತೆ ಹಂಚಿಕೊಳ್ಳುವಿರಿ. ವಂಶದ ಆಸ್ತಿಯಲ್ಲಿ ನಿಮಗೆ ಸೂಕ್ತ ಪಾಲು ದೊರೆಯುತ್ತದೆ. ಸೋದರಿಯ ಕೌಟುಂಬಿಕ ವಿವಾದವನ್ನು ಬಗೆಹರಿಸುವಿರಿ. ಹಣಕಾಸಿನ ತೊಂದರೆ ಇರದು. ಕುಟುಂಬದಲ್ಲಿನ ಸಂಪೂರ್ಣ ಅಧಿಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ಥಿರವಾದ ಆದಾಯ ದೊರೆಯುತ್ತದೆ. ಕಷ್ಟಪಟ್ಟು ದುಡಿಯುವ ಹಣವನ್ನು ಉಳಿತಾಯ ಮಾಡುವಲ್ಲಿ ಸಫಲರಾಗುವಿರಿ.

ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಕಂದು ಬಣ್ಣ

ಕಟಕ ರಾಶಿ

ಸುದೀರ್ಘವಾದ ಪ್ರಯಾಣ ದೇಹಾಲಸ್ಯವನ್ನು ಹೆಚ್ಚಿಸುತ್ತದೆ. ಸತತ ಪ್ರಯತ್ನದಿಂದ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಗಳನ್ನು ಪಡೆಯುವಿರಿ. ತಂದೆಯವರಿಗೆ ಸಂಬಂಧಿಸಿದ ಕೆಲಸದಲ್ಲಿ ಒತ್ತಡ ಎದುರಾಗುತ್ತದೆ. ಯಾರ ಮಾತನ್ನು ಪರಿಗಣಿಸದೆ ಸ್ವತಂತ್ರವಾಗಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿನ ಕೆಲಸ ಕಾರ್ಯಗಳು ಅತಿ ವೇಗವಾಗಿ ಪೂರೈಸಲ್ಪಡುತ್ತದೆ. ವಿದ್ಯಾರ್ಥಿಗಳು ಸಹನೆಯಿಂದ ನಿರೀಕ್ಷಿತ ಗುರಿ ತಲುಪಲಿದ್ದಾರೆ. ಸ್ವಂತ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ.

ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು

ಸಿಂಹ ರಾಶಿ

ಅರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಣದ ಕೊರತೆ ನಿಮ್ಮನ್ನು ಸದಾ ಕಾಡುತ್ತದೆ. ಉತ್ತಮ ಹವ್ಯಾಸಗಳಿಂದ ಉತ್ತಮ ಆರೋಗ್ಯ ಉಳಿಸಿಕೊಳ್ಳುವಿರಿ. ಆದಾಯದಲ್ಲಿ ಸ್ಥಿರತೆ ಲಭಿಸುತ್ತದೆ. ನೇರ ನಿಷ್ಠುರದ ನಡೆನುಡಿಯ ಕಾರಣ ಆತ್ಮೀಯರು ವಿರೋಧಿಗಳಾಗುತ್ತಾರೆ. ಕುಟುಂಬದಲ್ಲಿ ನಿಮ್ಮ ನಿರ್ಧಾರಗಳನ್ನು ಎಲ್ಲರೂ ಪಾಲಿಸುತ್ತಾರೆ. ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡುವಿರಿ. ವಿದ್ಯಾರ್ಥಿಗಳಲ್ಲಿ ಗೆಲ್ಲಲೇ ಬೇಕೆಂಬ ಹಠ ಛಲ ನಿಮ್ಮಲ್ಲಿ ಇರುತ್ತದೆ. ಹಳೆಯ ಶಾಸ್ತ್ರ ಸಂಪ್ರದಾಯವನ್ನು ಆಚರಿಸುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ತಿಳಿಹಸಿರು

ಕನ್ಯಾ ರಾಶಿ

ದಿಢೀರ್ ಅಂತ ತೆಗೆದುಕೊಂಡ ತೀರ್ಮಾನ ದೊಡ್ಡ ದುರಂತವನ್ನು ತಪ್ಪಿಸುತ್ತದೆ. ಆರೋಗ್ಯದ ಸಮಸ್ಯೆಗಳು ಎದುರಾಗಬಹುದು. ಅನಿರೀಕ್ಷಿತ ಧನ ಲಾಭವಿದೆ. ಸಂಗಾತಿಯೊಂದಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಅನಾವಶ್ಯಕವಾಗಿ ಮಾಡಲೇಬೇಕಾದ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಉದ್ಯೋಗದಲ್ಲಿ ಯಾವುದೇ ಅಡಚಣೆ ಬಾರದು. ತಾಯಿಯವರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಧಾರ್ಮಿಕ ಕಾರ್ಯಗಳಿಗೆ ಬೇಕಾದ ಪದಾರ್ಥಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬದವರಿಂದ ಹಣದ ಸಹಾಯ ದೊರೆಯುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ: 3

ಅಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ನಸುಗೆಂಪು

ತುಲಾ ರಾಶಿ

ಅತಿಯಾದ ಬುದ್ಧಿವಂತಿಕೆಯನ್ನು ತೋರಿ ಸಮಸ್ಯೆಗೆ ಸಿಲುಕುವಿರಿ. ಸಮಯಕ್ಕೆ ತಕ್ಕಂತೆ ವರ್ತಿಸಿ ವಿವಾದದಿಂದ ಪಾರಾಗುವ ರೀತಿ ತಿಳಿದಿರುತ್ತದೆ. ಕುಟುಂಬದ ಸಂತೋಷ ಮತ್ತು ನೆಮ್ಮದಿ ನಿಮ್ಮ ನಡವಳಿಕೆಯನ್ನು ಅವಲಂಭಿಸಿರುತ್ತದೆ. ಕುಟುಂಬದ ಆದಾಯದ ಮೂಲ ನೀವಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸಂಗಾತಿಯ ಜೊತೆ ಆರಂಭಿಸುವ ವ್ಯಾಪಾರ ವ್ಯವಹಾರಗಳು ಲಾಭದಾಯಕ. ಸೋದರ ಅಥವಾ ಸೋದರಿಯ ಜೀವನದ ವಿವಾದವನ್ನು ದೂರ ಮಾಡುವಿರಿ.

ಪರಿಹಾರ: ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ವೃಶ್ಚಿಕ ರಾಶಿ

ನಿರಾಸೆಯಿಂದ ಬಳಲಿ ಬೇಸರಕ್ಕೆ ಒಳಗಾಗುವಿರಿ. ಅಧಿಕಾರ ವರ್ಗದಲ್ಲಿ ಇದ್ದಲ್ಲಿ ನೌಕರರ ವಿರೋಧವನ್ನು ಎದುರಿಸುವಿರಿ. ಎಲ್ಲರೊಂದಿಗೆ ಅಧಿಕಾರ ಚಲಾಯಿಸದೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ವಿದ್ಯಾರ್ಥಿಗಳು ಸಹಪಾಠಿಗಳ ಪ್ರೀತಿ ವಿಶ್ವಾಸವನ್ನು ಗಳಿಸುವರು. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಅಧಿಕ ರಕ್ತದ ಒತ್ತಡದ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ಸಹನೆ ಮತ್ತು ಕರುಣೆಯಿಂದ ಎಲ್ಲರನ್ನೂ ಕಾಣುವಿರಿ. ಭಾವಮೈದುನರರ ಸಹಾಯ ದೊರೆಯುತ್ತದೆ.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಧನು ರಾಶಿ

ಯಾರ ಮನಸ್ಸನ್ನು ನೋಯಿಸದೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಸೋಲಿನ ವೇಳೆ ಮುಂಗೋಪ ಬರಲಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಸದಾ ನೆಲೆಸಿರುತ್ತದೆ. ಕೋಪ ಬಂದಷ್ಟೇ ಬೇಗ ಶಾಂತರಾಗುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವಿರಿ. ಉದ್ಯೋಗದಲ್ಲಿ ನಿಮ್ಮ ಕಾರ್ಯ ದಕ್ಷತೆ ಉನ್ನತ ಅಧಿಕಾರ ದೊರೆಯುತ್ತದೆ. ವ್ಯಾಪಾರ ಬೇರೆಯವರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾದಲ್ಲಿ ತೊಂದರೆ ಎದುರಿಸುವಿರಿ. ಚಿನ್ನ ಬೆಳ್ಳಿಯ ವಸ್ತುವನ್ನು ಕೊಳ್ಳುವಿರಿ.

ಪರಿಹಾರ: ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಮಕರ ರಾಶಿ

ಆಟ ಪಾಠಗಳಲ್ಲಿ ಮೊದಲ ಆದ್ಯತೆ ಆಟಕ್ಕೆ ನೀಡುವಿರಿ. ಯೋಗಾಸನ ಮತ್ತು ಕ್ರೀಡಾಪಟುಗಳಿಗೆ ವಿಶೇಷ ಸ್ಥಾನಮಾನ ಮತ್ತು ಉದ್ಯೋಗಾವಕಾಶ ದೊರೆಯುತ್ತದೆ. ಕುಟುಂಬದಲ್ಲಿ ಎಲ್ಲರೂ ಮಾತನಾಡುವವರೇ ಆಗುತ್ತಾರೆ ಆದ್ದರಿಂದ ನೆಮ್ಮದಿ ಕಡಿಮೆ. ಉದ್ಯೋಗದಲ್ಲಿ ಫಲಿತಾಂಶದ ನಿರೀಕ್ಷೆಯಿಲ್ಲದೆ ದಕ್ಷತೆಯಿಂದ ಕೆಲಸ ನಿರ್ವಹಿಸುವಿರಿ. ನಿಸ್ವಾರ್ಥದ ದುಡಿಮೆಗೆ ಅಧಿಕಾರಿಗಳು ಮನಸೋಲುತ್ತಾರೆ. ಕಬ್ಬಿಣ ಅಥವಾ ಯಂತ್ರೋಪಕರಣಗಳ ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ. ಇರುವೆಗೆ ಆಹಾರವನ್ನು ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಆಕಾಶ ನೀಲಿ

ಕುಂಭ ರಾಶಿ

ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುವಿರಿ. ಚಿಕ್ಕಪುಟ್ಟ ಕೆಲಸ ಕಾರ್ಯಗಳಿಗೂ ಬೇರೆಯವರ ಸಹಾಯ ನಿರೀಕ್ಷಿಸುವಿರಿ. ನಿಮ್ಮ ಜೀವನವು ಬೇರೆಯವರಿಗೆ ಸ್ಪೂರ್ತಿ ಆಗಲಿದೆ. ಸ್ವಂತತ್ರವಾಗಿ ಯಾವುದೇ ಕೆಲಸ ಮಾಡಲು ಹಿಂಜರಿವಿರಿ. ವಿದ್ಯಾರ್ಥಿಗಳು ಬಹಳ ಹಗುರವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಕಾಣದು. ದಿಢೀರ್ ಅಂತ ಆರೋಗ್ಯದಲ್ಲಿ ತೊಂದರೆ ಎದುರಾಗಲಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ.

ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಮೀನ ರಾಶಿ

ಆರಂಭದಿಂದಲೇ ಸಂತೋಷ ಮತ್ತು ಚುರುಕಿನಿಂದ ಕೆಲಸವನ್ನು ಆರಂಭಿಸುವಿರಿ. ಗಳಿಸಿದ ಬಹುತೇಕ ಹಣವನ್ನು ಬೇರೆಯವರಿಗಾಗಿ ಖರ್ಚು ಮಾಡಬೇಕಾಗುತ್ತದೆ. ಕುಟುಂಬದ ಹಿರಿಯರ ಮಾತಿಗೆ ಗೌರವ ನೀಡುವುದರಿಂದ ಸಂತೋಷ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಸಡಗರದಿಂದ ಆಚರಿಸುವಿರಿ. ಸೋದರಿಯ ಆಗಮನ ಸಂತೋಷವನ್ನು ಹೆಚ್ಚಿಸುತ್ತದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಕಷ್ಟದಲ್ಲಿರುವ ಸ್ನೇಹಿತರಿಗೆ ಹಣದ ಸಹಾಯವನ್ನು ಮಾಡುವಿರಿ.

ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಎಲೆಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.