ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಹಣಕಾಸಿನ ವಿಚಾರದಲ್ಲಿ ಸೋಲಿಲ್ಲ, ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತೆ; ನಾಳೆಯ ದಿನ ಭವಿಷ್ಯ

Tomorrow Horoscope: ಹಣಕಾಸಿನ ವಿಚಾರದಲ್ಲಿ ಸೋಲಿಲ್ಲ, ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತೆ; ನಾಳೆಯ ದಿನ ಭವಿಷ್ಯ

1st July 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳಿನ ಅಂದರೆ ಜುಲೈ 1 ರ ದಿನ ಭವಿಷ್ಯವನ್ನು ಇಂದೇ ತಿಳಿಯಿರಿ.
ನಾಳಿನ ಅಂದರೆ ಜುಲೈ 1 ರ ದಿನ ಭವಿಷ್ಯವನ್ನು ಇಂದೇ ತಿಳಿಯಿರಿ.

ನಾಳಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಸೋಮವಾರ

ತಿಥಿ: ದಶಮಿ ಹ.10.47 ರವರೆಗು ಇದ್ದು ಆನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ : ಅಶ್ವಿನಿ ನಕ್ಷತ್ರವು ಬೆ. 07.26 ರವರೆಗೆ ಇದ್ದು ಉಪರಿ ಭರಣಿ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 05.56

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: ಬೆಳಗ್ಗೆ 07.39 ರಿಂದ ಬೆಳಗ್ಗೆ 09.15

ಮೇಷ ರಾಶಿ

ಎಲ್ಲರನ್ನೂ ಸಂಶಯದಿಂದಲೇ ನೋಡುವಿರಿ. ಅತಿ ಬೇಗನೆ ಸಹನೆಯನ್ನು ಕಳೆದುಕೊಂಡು ಉದ್ವೇಗದಿಂದ ವರ್ತಿಸುವಿರಿ. ಹಠದಿಂದಾಗಿ ಕೆಲಸ ಕಾರ್ಯಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವಿರಿ. ಕಷ್ಟದಲ್ಲಿದ್ದವರನ್ನು ಕರುಣೆಯಿಂದ ನೋಡುವುದಲ್ಲದೇ ಸಹಾಯ ಮಾಡುವಿರಿ. ನಿಮಗೆ ತಿಳಿದಿರುವ ವಿಚಾರಗಳಲ್ಲಿ ಮಾತ್ರ ವಾದವನ್ನು ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಸೋಲಿರುವುದಿಲ್ಲ. ಸದಾಕಾಲ ಯಾವುದಾದರೂ ಒಂದು ಕೆಲಸದಲ್ಲಿ ನಿರತರಾಗುವಿರಿ. ಮನದಲ್ಲಿಯೇ ಲೆಕ್ಕಾಚಾರವನ್ನು ಹಾಕಿ ಆನಂತರ ಅದನ್ನು ಕಾರ್ಯರೂಪಕ್ಕೆ ತರುವಿರಿ. ಮನದಲ್ಲಿ ಹೆದರಿಕೆ ಎಂಬುವುದು ಇರುವುದಿಲ್ಲ. ಆದರೆ ಆತುರದ ಗುಣವಿರುತ್ತದೆ. ನಿಮಗೆ ಇಷ್ಟವಾದ ದುಬಾರಿ ವಸ್ತುವೊಂದನ್ನು ಕೊಳ್ಳುವಿರಿ.

ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಿತ್ತಳೆ

ವೃಷಭ ರಾಶಿ

ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಸ್ಥಿರವಾದ ಮನಸ್ಸಿನ ಕಾರಣ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ದೊಡ್ಡ ದೊಡ್ಡ ಆಸೆ ಮತ್ತು ಯೋಜನೆಗಳಿಗೆ ಬಗ್ಗೆ ಯೋಚಿಸುವಿರಿ. ಬೇಸರಕ್ಕೆ ಒಳಗಾದಾಗ ಆರಂಭಿಸಿದ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವಿರಿ. ಶ್ರಮದ ಕೆಲಸ ಕಾರ್ಯಗಳನ್ನು ಇಷ್ಟಪಡುವುದಿಲ್ಲ. ಗೌರವದಿಂದ ಜೀವನವನ್ನು ನಡೆಸುವಿರಿ. ಸಂತಾನ ಲಾಭವಿದೆ. ಬಂಧುಬಾಂಧವರಿಗೆ ಹಣವನ್ನು ನೀಡಬೇಕಾಗುತ್ತದೆ. ಹಣದ ಮೇಲಿನ ಆಸೆಯಿಂದ ತೊಂದರೆಗೆ ಒಳಗಾಗುವಿರಿ. ಯುವಕ ಯುವತಿಯರು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳು ನಿಮ್ಮ ಮನಸ್ಸನ್ನು ಅರಿತು ನಡೆದುಕೊಳ್ಳುವುದಿಲ್ಲ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಳದಿ

ಮಿಥುನ ರಾಶಿ

ಸೋದರರ ಜೊತೆಯಲ್ಲಿ ಉತ್ತಮ ಒಡನಾಟ ಇರುವುದಿಲ್ಲ. ಆಸ್ತಿಯ ವಿಚಾರದಲ್ಲಿದ್ದ ವಿವಾದವು ದೂರವಾಗುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬದ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಸದಾಕಾಲ ಬಾಳುವ ರೀತಿಯನ್ನು ಬದಲಿಸಿ ಸಂತೋಷ ಕಾಣುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಹಣದ ಉಳಿತಾಯ ಮಾಡುವ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಾಲ ನೀಡುವುದು ಅಥವಾ ತೆಗೆದುಕೊಳ್ಳುವುದು ಇಷ್ಟವಾಗುವುದಿಲ್ಲ. ಸಂಗಾತಿ ಮತ್ತು ಮಕ್ಕಳ ಜೊತೆ ಮನರಂಜನಾ ಸ್ಥಳಕ್ಕೆ ಹೋಗುತ್ತೀರಿ. ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಹಸಿರು

ಕಟಕ ರಾಶಿ

ಬೇರೆಯವರ ಹಣ ಅಥವಾ ಆಸ್ತಿಗೆ ಆಸೆ ಪಡುವುದಿಲ್ಲ. ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಉತ್ತಮ ಸ್ನೇಹಿತರು ನಿಮಗಿರುತ್ತಾರೆ. ತಪ್ಪನ್ನು ಮನ್ನಿಸುವ ನಿಮಗೆ ವಿರೋಧಿಗಳಿರುವುದಿಲ್ಲ. ಬೇರೆಯವರಿಗೆ ಕಷ್ಟವೆನಿಸುವ ವಿಚಾರಗಳನ್ನು ಸುಲಭವಾಗಿ ಅರಿತುಕೊಳ್ಳುವಿರಿ. ಸಭೆ ಸಮಾರಂಭಗಳಲ್ಲಿ ನಿಮ್ಮ ಪಾತ್ರ ಅತಿ ಮುಖ್ಯವಾಗುತ್ತದೆ. ಸಮಾಜದಲ್ಲಿ ಗೌರವ ಗಳಿಸುವಿರಿ. ಬೇಗನೆ ಕೋಪಗೊಳ್ಳುವಿರಿ. ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಜೀವನದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಗುರಿ ಇರುತ್ತದೆ. ದಾಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರಲಿದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನೀಲಿ

ಸಿಂಹ ರಾಶಿ

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ಕೆಲಸದ ಒತ್ತಡದ ಕಾರಣ ಅಸಹನೆಯಿಂದ ವರ್ತಿಸುವಿರಿ. ಬೇರೆಯವರ ಅನಿಸಿಕೆಗೆ ಬೆಲೆ ಕೊಡದೆ ಸ್ವಂತ ತೀರ್ಮಾನಕ್ಕೆ ಮೇಲೆ ಬದ್ಧರಾಗುವಿರಿ. ನಿಮ್ಮಿಂದ ಯಾರಿಗೂ ತೊಂದರೆ ಅಥವಾ ನಷ್ಟವಾಗುವುದಿಲ್ಲ. ಅಪಾಯದ ಸನ್ನಿವೇಶದಲ್ಲಿ ಧೈರ್ಯ ಸಾಹಸದಿಂದ ಮುನ್ನುಗ್ಗುವಿರಿ. ನಿಮ್ಮ ವಿರೋಧಿಗಳಿಗೂ ಸಹಾಯ ಮಾಡುವಿರಿ. ಗೌರವವನ್ನು ಉಳಿಸಿಕೊಂಡು ಜೀವನದಲ್ಲಿ ಮುಂದುವರೆಯುವಿರಿ. ಸಮಾಜದಲ್ಲಿ ಕೀರ್ತಿಗಳಿಸುವಿರಿ. ಮನದಲ್ಲಿ ದೊಡ್ಡ ಆಸೆ ಆಕಾಂಕ್ಷೆಗಳು ಇರುತ್ತವೆ. ಕುಟುಂಬದ ಜೊತೆ ಯಾತ್ರಾಸ್ಥಳಕ್ಕೆ ತೆರಳುವಿರಿ. ಹೊಗಳಿಕೆಗೆ ಮರುಳಾಗಿ ಹಣದ ಸಹಾಯ ಮಾಡುವಿರಿ.

ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ನೇರಳೆ

ಕನ್ಯಾ ರಾಶಿ

ನಿಮ್ಮ ಕಷ್ಟದ ಸಂದರ್ಭ ದಲ್ಲಿ ಆತ್ಮೀಯರು ದೂರವಾಗುತ್ತಾರೆ. ಸಂಬಂಧ ಅಥವಾ ಆತ್ಮೀಯರೊಂದಿಗೆ ವಿವಾಹವಾಗುತ್ತದೆ. ನಿಮ್ಮ ನಿಸ್ವಾರ್ಥ ವ್ಯಕ್ತಿತ್ವಕ್ಕೆ ಎಲ್ಲರೂ ತಲೆಬಾಗುತ್ತಾರೆ. ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಹಣವನ್ನು ಉಳಿಸುವಲ್ಲಿ ಸಫಲರಾಗುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಯಾರೊಂದಿಗೂ ಮನ ಬಿಚ್ಚಿ ಮಾತನಾಡುವುದಿಲ್ಲ. ಶಾಸ್ತ್ರ ಸಂಪ್ರದಾಯದಲ್ಲಿ ಆಸಕ್ತಿ ಮೂಡುತ್ತದೆ. ಪ್ರತಿಯೊಂದು ವಿಚಾರವನ್ನು ಮನಸ್ಸಿಟ್ಟು ಅಭ್ಯಾಸ ಮಾಡುವಿರಿ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬಾಳುವಿರಿ. ಬೇರೆಯವರಿಗೆ ಉತ್ತಮ ಸ್ಪೂರ್ತಿಯಾಗುವಿರಿ. ಅತಿಯಾದ ಮಾತಿನಿಂದ ಮನದಲ್ಲಿರುವ ವಿಚಾರಗಳನ್ನೆಲ್ಲ ಬೇರೆಯವರಿಗೆ ತಿಳಿಸುವಿರಿ.

ಪರಿಹಾರ: ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 9

ಅಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ

ತುಲಾ ರಾಶಿ

ಮನದಲ್ಲಿರುವ ವಿಚಾರವನ್ನು ಸಂಕೋಚದ ಕಾರಣ ಯಾರಿಗೂ ತಿಳಿಸುವುದಿಲ್ಲ. ವಿಶೇಷ ಬುದ್ಧಿವಂತಿಕೆ ಇರುತ್ತದೆ. ಚಿಂತೆ ಮಾಡುವುದನ್ನು ಬಿಟ್ಟು ಕೆಲಸ ಮಾಡಿದಲ್ಲಿಲಿ ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ರೀತಿ ನೀತಿಗಳು ಇತರರಿಗೆ ಸ್ಪೂರ್ತಿಯಾಗುತ್ತದೆ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಸಂಘ ಸಂಸ್ಥೆಯ ನೇತೃತ್ವವು ನಿಮಗೆ ದೊರೆಯಲಿದೆ. ಶಿಸ್ತಿನ ಜೀವನ ನಡೆಸುವವರನ್ನು ಗೌರವಿಸುವಿರಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಗೆ ತೆಗೆದುಕೊಳ್ಳುವಿರಿ. ಯಾರನ್ನು ಸುಲಭವಾಗಿ ನಂಬುವುದಿಲ್ಲ. ನಿಮ್ಮಲ್ಲಿರುವ ವಿಚಾರಗಳನ್ನು ಬೇರೆಯವರಿಗೂ ಹಂಚುವಿರಿ. ಅತಿಯಾದ ಆತುರತೆ ಒಳ್ಳೆಯದಲ್ಲ

ಪರಿಹಾರ: ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಬಿಳಿ

ವೃಶ್ಚಿಕ ರಾಶಿ

ಸಣ್ಣಪುಟ್ಟ ವಿವಾದಗಳನ್ನು ದೊಡ್ಡದು ಮಾಡುವಿರಿ. ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ತಪ್ಪು ಮಾಡಿದ ನಂತರ ಪಶ್ಚಾತಾಪ ಪಡುವಿರಿ. ನಿಮ್ಮ ಮನಸ್ಸಿಗೆ ಮುದ ನೀಡುವ ವಸ್ತುಗಳನ್ನು ಕೊಳ್ಳುವಿರಿ. ವಿದ್ಯಾರ್ಥಿಗಳ ಅಭ್ಯಾಸವು ಉನ್ನತ ಮಟ್ಟದಲ್ಲಿರುತ್ತದೆ. ಯಾವುದೇ ವಿಚಾರವಾದರೂ ಅದರ ಮೂಲವನ್ನು ತಿಳಿದು ನಂತರ ಮುಂದುವರೆಯುವಿರಿ. ಬುದ್ಧಿವಂತಿಕೆಯ ಮಾತುಗಳಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಹಾಸ್ಯಪ್ರಿಯರು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಕೌಶಲ್ಯ ಇರುತ್ತದೆ. ಆರ್ಥಿಕ ಪರಿಸ್ಥಿತಿಯು ಕ್ರಮೇಣವಾಗಿ ಉತ್ತಮಗೊಳ್ಳುತ್ತದೆ. ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ.

ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಬೂದು ಬಣ್ಣ

ಧನಸ್ಸು ರಾಶಿ

ಉದ್ಯೋಗದ ಸಲುವಾಗಿ ಪ್ರವಾಸ ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರ ಹೊರತು ಬೇರೊಬ್ಬರ ಜೊತೆ ಬೆರೆಯುವುದಿಲ್ಲ. ಸಭೆ ಸಮಾರಂಭಗಳಲ್ಲಿಯೂ ಏಕಾಂಗಿಯಾಗಿ ಇರುವಿರಿ. ಎಲ್ಲರೂ ನಿಮ್ಮನ್ನು ವಿಶ್ವಾಸದಿಂದ ಕಾಣಬೇಕು, ಗೌರವಿಸಬೇಕು ಎಂಬ ಭಾವನೆ ಇರುತ್ತದೆ. ಬೇರೆಯವರ ಗಮನ ಸೆಳೆಯುವ ಕೆಲಸ ಮಾಡುವಿರಿ. ದೈಹಿಕ ಸದೃಢತೆ ಇರುವುದಿಲ್ಲ. ಪ್ರಾಮಾಣಿಕರಾಗಿ ನಡೆದುಕೊಳ್ಳುವ ಕಾರಣ ಎಲ್ಲರ ಪ್ರೀತಿ ಗಳಿಸುವಿರಿ. ನಿಮ್ಮಲ್ಲಿನ ಸಮರ್ಪಣಾ ಮನೋಭಾವನೆಯಿಂದ ಉದ್ಯೋಗದಲ್ಲಿ ವಿಶೇಷ ಸ್ಥಾನ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದಲ್ಲಿ ಏರಳಿತ ಕಂಡುಬರುತ್ತದೆ. ಆದರೆ ಯಾವುದೇ ತೊಂದರೆ ಇರುವುದಿಲ್ಲ.

ಪರಿಹಾರ: ತಲೆಗೆ ಹಾಲನ್ನಿಟ್ಟು ಸ್ನಾನಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಕಂದು

ಮಕರ ರಾಶಿ

ನಿಮ್ಮಲ್ಲಿ ವಿಶೇಷವಾದ ಆಕರ್ಷಣ ಶಕ್ತಿ ಇರುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಮನಸ್ಸಿಟ್ಟು ಮಾಡುವಿರಿ. ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಆದರೆ ಯಾರಿಂದಲೂ ಯಾವುದೇ ನಿರೀಕ್ಷೆ ಇರುವುದಿಲ್ಲ. ತಪ್ಪಾದ ತೀರ್ಮಾನ ತೆಗೆದುಕೊಳ್ಳುವವರಿಂದ ದೂರವಿರಿ. ಶಾಂತಿ ಸಹನೆಯಿಂದ ಬಾಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಮಾತ್ರ ಕೋಪಗೊಳ್ಳುವಿರಿ. ಮೃದುವಾದ ಸ್ವಭಾವ ಇರುತ್ತದೆ. ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸುವಿರಿ. ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಮಕ್ಕಳನ್ನು ಅತಿಯಾಗಿ ಪ್ರೀತಿಸುವಿರಿ. ನಿಮ್ಮ ಕಷ್ಟ ನಷ್ಟದ ನಡುವೆಯೂ ಮಕ್ಕಳ ಬೇಡಿಕೆಗಳನ್ನು ಪೂರೈಸುವಿರಿ.

ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು

ಕುಂಭ ರಾಶಿ

ಸ್ಥಿರವಾದ ಮನಸ್ಸಿರುವುದಿಲ್ಲ. ಗೊಂದಲದಿಂದ ಕೆಲಸ ಕಾರ್ಯಗಳನ್ನು ಆರಂಭಿಸಿ ತೊಂದರೆ ಅನುಭವಿಸುವಿರಿ. ನಿಮ್ಮ ಮನದಲ್ಲಿ ಅಸುರಕ್ಷಿತ ಭಾವನೆ ಮನೆ ಮಾಡುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಸಂಧಾನ ಸಭೆಗಳಿಂದ ಸಣ್ಣಪುಟ್ಟ ವಿವಾದಗಳನ್ನು ಬಗೆಹರಿಸುವಿರಿ. ಕೋಪ ಬಂದರು ಬಹುಕಾಲ ನಿಲ್ಲುವುದಿಲ್ಲ. ನಿಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಕಾರ್ಯ ನೈಪುಣ್ಯತೆಯನ್ನು ಮೆಚ್ಚುತ್ತಾರೆ. ತಂದೆ ತಾಯಿಗಳ ಜೊತೆ ಅನಾವಶ್ಯಕ ಭಿನ್ನಾಭಿಪ್ರಾಯಗಳು ಇರುತ್ತವೆ. ಮಧ್ಯ ವಯಸ್ಸಿನ ಜನರಿಗೆ ವಿಶೇಷ ಲಾಭ ದೊರೆಯುತ್ತದೆ. ಬಾಳ ಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ನಿಮ್ಮ ತಪ್ಪಾದ ನಿರ್ಧಾರಗಳಿಗೆ ನೀವೇ ಬೇಸರಗೊಳ್ಳುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ತಿಳಿಹಸಿರು

ಮೀನ ರಾಶಿ

ಅನಿರೀಕ್ಷಿಸಿದ ಧನ ಲಾಭವಿರುತ್ತದೆ. ಕೌಟುಂಬಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ನರನಿಶ್ಯಕ್ತಿ ನಿಮ್ಮನ್ನು ಕಾಡುತ್ತದೆ. ಸಂಬಂಧಿಕರ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವಿರಿ. ಆಡಂಬರದ ಜೀವನ ಇಷ್ಟಪಡುವಿರಿ. ಜನರು ನಿಮ್ಮ ಮಾತುಗಳಿಗೆ ಮನಸೊಲುತ್ತಾರೆ. ಸಂಗಾತಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಸಾಲದ ವ್ಯವಹಾರದಿಂದ ತೊಂದರೆ ಇರುತ್ತದೆ ಎಚ್ಚರಿಕೆ ಇರಲಿ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ಹೊಸ ಜವಾಬ್ದಾರಿಗಳಿಂದ ಮನದಲ್ಲಿ ಆತಂಕದ ಭಾವನೆ ಎದುರಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನಸುಗೆಂಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.