ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಾಳೆಯ ದಿನ ಭವಿಷ್ಯ; ಮೇಷ, ವೃಷಭ, ವೃಶ್ಚಿಕ ರಾಶಿಯವರಿಗೆ ಅನಾರೋಗ್ಯ ಸಾಧ್ಯತೆ, ಯಾವ ರಾಶಿಯವರ ರಾಶಿಫಲ ಏನಿದೆ ನೋಡೋಣ

ನಾಳೆಯ ದಿನ ಭವಿಷ್ಯ; ಮೇಷ, ವೃಷಭ, ವೃಶ್ಚಿಕ ರಾಶಿಯವರಿಗೆ ಅನಾರೋಗ್ಯ ಸಾಧ್ಯತೆ, ಯಾವ ರಾಶಿಯವರ ರಾಶಿಫಲ ಏನಿದೆ ನೋಡೋಣ

26th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಮೇಷ, ವೃಷಭ, ವೃಶ್ಚಿಕ ರಾಶಿಯವರಿಗೆ ಅನಾರೋಗ್ಯ ಸಾಧ್ಯತೆ, ಯಾವ ರಾಶಿಯವರ ರಾಶಿಫಲ ಏನಿದೆ ನೋಡೋಣ.

ನಾಳೆಯ ದಿನ ಭವಿಷ್ಯ; ಮೇಷ, ವೃಷಭ, ವೃಶ್ಚಿಕ ರಾಶಿಯವರಿಗೆ ಅನಾರೋಗ್ಯ ಸಾಧ್ಯತೆ, ಯಾವ ರಾಶಿಯವರ ರಾಶಿಫಲ ಏನಿದೆ ನೋಡೋಣ
ನಾಳೆಯ ದಿನ ಭವಿಷ್ಯ; ಮೇಷ, ವೃಷಭ, ವೃಶ್ಚಿಕ ರಾಶಿಯವರಿಗೆ ಅನಾರೋಗ್ಯ ಸಾಧ್ಯತೆ, ಯಾವ ರಾಶಿಯವರ ರಾಶಿಫಲ ಏನಿದೆ ನೋಡೋಣ

ನಾಳೆಯ ದಿನ ಭವಿಷ್ಯ (Tomorrow Horoscope): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (26th June 2024 Horoscope)

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಬುಧವಾರ

ತಿಥಿ : ಪಂಚಮಿ ರಾ.10.44 ರವರೆಗೂ ಇದ್ದು ಆನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ : ಧನಿಷ್ಠ ನಕ್ಷತ್ರವು ಹ. 03.22 ರವರೆಗೆ ಇದ್ದು ಆನಂತರ ಶತಭಿಷ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ ಬೆ.05.55

ಸೂರ್ಯಾಸ್ತ ಸ.06.48

ರಾಹುಕಾಲ : ಹ. 12.26 ರಿಂದ ಹ. 02.02

ಮೇಷ

ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುವುದಿಲ್ಲ. ದೀರ್ಘ ಕಾಲದ ವಿಶ್ರಾಂತಿಯನ್ನು ಬಯಸುವಿರಿ. ದುಡುಕಿನಿಂದ ಆದ ತಪ್ಪನ್ನು ಸರಿಪಡಿಸಿಕೊಂಡು ಮುಂದುವರೆಯುವಿರಿ. ನಿಮ್ಮಲ್ಲಿ ಉತ್ತಮ ಆಡಳಿತದ ಮನೋಭಾವನೆ ಕಂಡುಬರುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭ್ಯವಾಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮದಲ್ಲದ ತಪ್ಪನ್ನು ಒಪ್ಪಿಕೊಳ್ಳುವಿರಿ. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಗುಟ್ಟಾಗಿ ಮನೆಯ ಹಿರಿಯರಿಂದ ಹಣವನ್ನು ಪಡೆಯುವಿರಿ. ಅತಿಯಾದ ಜ್ವರದಿಂದ ಬಳಲುವ ಸಾಧ್ಯತೆಗಳಿವೆ.

ವೃಷಭ

ಬಾಳ ಸಂಗಾತಿಗೆ ಬೇಸರ ಉಂಟುಮಾಡುವ ಕೆಲಸವನ್ನು ಮಾಡುವಿರಿ. ಅನಿವಾರ್ಯವಾಗಿ ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡುವಿರಿ. ಗೃಹಿಣಿಯರಿಗೆ ಮಕ್ಕಳಿಂದ ವಿಶೇಷವಾದಂತಹ ಅನುಕೂಲ ಉಂಟಾಗುತ್ತದೆ. ನಿಶ್ಚಯವಾಗಿದ್ದ ವಿವಾಹವು ವಿವಾದಗಳ ನಡುವೆ ನಡೆಯುತ್ತದೆ. ನಿಮ್ಮ ಕರ್ತವ್ಯ ನಿಷ್ಠೆಗೆ ತಕ್ಕಂತೆ ಫಲಗಳು ದೊರೆಯುವುದಿಲ್ಲ. ಸಹೋದ್ಯೋಗಿಗಳನ್ನು ಅನಾವಶ್ಯಕವಾಗಿ ನಿಂದಿಸುವಿರಿ. ಕುಟುಂಬಕ್ಕೆ ಸೇರಿದ ಅನೇಕ ರಹಸ್ಯಗಳು ತಿಳಿದಿರುತ್ತವೆ. ವೇದ ವೇದಾಂತದಲ್ಲಿ ಆಸಕ್ತಿ ಮೂಡುತ್ತದೆ. ಜನರಿಗೆ ಅಗತ್ಯವಾದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಸಂತಸ ಕಾಣುವಿರಿ.

ಮಿಥುನ

ನಿಮ್ಮದುಡಿಮೆ ಆದರೆ ಬೇರೆಯವರಿಗೆ ಅದರ ಫಲ ದೊರೆಯುತ್ತದೆ. ಇದರಿಂದಾಗಿ ಮಾನಸಿಕವಾಗಿ ನೋವನ್ನು ಅನುಭವಿಸುವಿರಿ. ನಿಮ್ಮಲ್ಲಿ ವಿಶೇಷ ಬುದ್ಧಿವಂತಿಕೆ ಮತ್ತು ಜ್ಞಾನವಿದ್ದರೂ ಅಪಕೀರ್ತಿಯನ್ನು ಎದುರಿಸಬೇಕಾಗುತ್ತದೆ. ಶಾಂತಿ ಸಹನೆಯಿಂದ ಇರುವ ಕಾರಣ ಅಧಿಕಾರಿಗಳ ಗಮನ ಸೆಳೆಯುವಿರಿ. ಮಕ್ಕಳಿಂದ ಉತ್ತಮ ಸಹಾಯ ಸಹಕಾರಗಳನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ದಂಪತಿಗಳ ನಡುವೆ ಪರಸ್ಪರ ತಾತ್ಸಾರದ ಸ್ವಭಾವ ಇರುತ್ತದೆ.

ಕಟಕ

ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೇಹಾಲಸ್ಯ ಹೆಚ್ಚುತ್ತದೆ. ಸುಖ ನಿದ್ರೆಯನ್ನು ಬಯಸುವಿರಿ. ಜನೋಪಕಾರಿ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವಿರಿ. ನಿಮ್ಮ ಕಷ್ಟದ ವೇಳೆ ನಿಮ್ಮ ವಾಹನವೇ ನಿಮಗೆ ಆಸರೆಯಾಗಲಿದೆ. ಕುಟುಂಬದಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಶುಭ ಕಾರ್ಯವನ್ನು ನೆರವೇರಲಿದೆ. ಸಮಾಜದಲ್ಲಿ ನಿಮಗೆ ಉನ್ನತ ಗೌರವ ದೊರೆಯಲಿದೆ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಇರುತ್ತದೆ. ನಿಮ್ಮ ಮಗನು ನಿಮಗೆ ಬೇಸರವಾಗುವಂತಹ ಕೆಲಸವನ್ನು ಮಾಡಬಹುದು. ಮಧ್ಯ ವಯಸ್ಕರಿಗೆ ವಿವಾಹ ಯೋಗವಿದೆ.

ಸಿಂಹ

ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಪೂರ್ವಯೋಜನೆಯಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಹಿರಿಯ ಸೋದರ ಅಥವಾ ಸೋದರಿಯು ವಿವಾದವೊಂದಕ್ಕೆ ಸಿಲುಕುತ್ತಾರೆ. ನಿಮ್ಮ ನಿಷ್ಠೂರದ ಮಾತುಕತೆಗೆ ಆತ್ಮೀಯರಿಂದಲೇ ವಿರೋಧ ವ್ಯಕ್ತವಾಗುತ್ತದೆ. ವಿದ್ಯಾರ್ಥಿಗಳು ಸಾಧಾರಣ ಮಟ್ಟದ ಯಶಸ್ಸು ಗಳಿಸುತ್ತಾರೆ. ನಿಮಗೆ ವಾಯುದೋಷವಿರುತ್ತದೆ. ಮಕ್ಕಳನ್ನು ಅಜೀರ್ಣತೆ ಕಾಡಲಿದೆ. ಹುಟ್ಟೂರಿನಿಂದ ದೂರದ ಸ್ಥಳದಲ್ಲಿ ಉತ್ತಮ ಆದಾಯ ಗಳಿಸುವಿರಿ. ವಿದೇಶ ಪ್ರಯಾಣ ಯೋಗವಿದೆ. ಬಂಧು-ಬಳಗದವರಿಂದ ದೂರವಿರಲು ನಿರ್ಧರಿಸುವಿರಿ.

ಕನ್ಯಾ

ಕುಟುಂಬದ ಬಗ್ಗೆ ತಾಯಿಯವರಿಗೆ ಚಿಂತೆ ಇರುತ್ತದೆ. ವೃಥಾ ಅಲೆದಾಟದಿಂದ ಬೇಸರಗೊಳ್ಳುವಿರಿ. ಹಣದ ಕೊರತೆ ಇರುತ್ತದೆ. ಕಷ್ಟದಲ್ಲಿರುವ ಬೇರೆಯವರ ಬಗ್ಗೆ ಕನಿಕರವಿರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಗಂಗಾ ಸ್ನಾನದ ಯೋಗವಿದೆ. ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ನಡೆಸಲು ತೀರ್ಮಾನಿಸುವಿರಿ.

ತುಲಾ

ಬಂಧು-ಬಳಗದವರನ್ನು ಪ್ರೀತಿಯಿಂದ ಕಾಣುವಿರಿ. ಆದರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬುವುದಿಲ್ಲ. ನಿಮ್ಮನ್ನು ಆಕ್ಷೇಪಿಸಿದಲ್ಲಿ ಕ್ರೋಧದಿಂದ ವರ್ತಿಸುವಿರಿ. ವಾದ ವಿವಾದದಲ್ಲಿ ಸೋತಾಗ ಕಣ್ಣೀರಿನ ಮೂಲಕ ನಿರಾಸೆ ತೋರುವಿರಿ. ಕುಟುಂಬದವರ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಗಡಿಬಿಡಿಯಿಂದ ಕೆಲಸವನ್ನು ಆರಂಭಿಸಿದರೆ ತೊಂದರೆ ಉಂಟಾಗೆ ಸಿಲುಕುವಿರಿ. ಭಾವನಾತ್ಮಕ ಜೀವಿಗಳು. ಸೇಡಿನ ಮನೋಭಾವನೆ ಇರುವುದಿಲ್ಲ. ಕೋಪ ತಾಪದ ವೇಳೆ ಮೌನಕ್ಕೆ ಶರಣಾಗುವಿರಿ.

ವೃಶ್ಚಿಕ

ಬಂಧು ಬಳಗದವರ ಜೊತೆಯಲ್ಲಿ ಯಾವುದೇ ತಾರತಮ್ಯ ತೋರುವುದಿಲ್ಲ. ಸ್ನೇಹಿತರ ಜೊತೆ ನೀರಿರುವ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ದೊರೆಯುತ್ತದೆ. ಆಡುವ ಮಾತಿನಲ್ಲಿ ನಿಜಾಂಶವು ಅಡಗಿರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಆಲಸ್ಯಕ್ಕೆ ಒಳಗಾಗುವಿರಿ. ಬಡವರಲ್ಲಿ ಕರುಣೆ ತೋರುವಿರಿ. ನಿಮ್ಮ ಮನದ ಆಸೆ ಆಕಾಂಕ್ಷೆಗಳು ಕೈಗೂಡುವುದಿಲ್ಲ. ದಂಪತಿಗಳ ನಡುವೆ ಮನಸ್ತಾಪವಿರುತ್ತದೆ. ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯ ವಿರುತ್ತದೆ.

ಧನು

ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದಿಲ್ಲ. ವಿವಾದಗಳಿಲ್ಲದೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದಿಲ್ಲ. ಒಟ್ಟಾರೆ ಮಾತಿನ ದೋಷದಿಂದ ಮನಸ್ಸಿನ ನೆಮ್ಮದಿ ಕಡಿಮೆಯಾಗುತ್ತದೆ. ಉತ್ತಮ ಆದಾಗ ಬರುತ್ತದೆ. ಆತ್ಮೀಯರಿಗೂ ನೀಡಿದ್ದ ದೊಡ್ಡ ಮೊತ್ತದ ಹಣವು ಕಂತಿನ ರೂಪದಲ್ಲಿ ದೊರೆಯಲಿದೆ. ನೋಡಲು ಸಾಮಾನ್ಯದಂತೆ ಕಂಡರು ಮಾಡುವ ಕೆಲಸ ಕಾರ್ಯಗಳು ದೊಡ್ಡಮಟ್ಟದಲ್ಲಿ ಇರುತ್ತದೆ. ಸಾಮಾನ್ಯವಾಗಿ ಸೋಲುವುದಿಲ್ಲ. ಉತ್ತಮ ಆರೋಗ್ಯವಿರುತ್ತದೆ.

ಮಕರ

ಹಣಕಾಸಿನವಿಚಾರದಲ್ಲಿ ಯಾವ ಸಲಹೆಯನ್ನು ಒಪ್ಪುವುದಿಲ್ಲ. ಯಾವುದೆ ವಿಚಾರವನ್ನು ಮರೆಮಾಚದೆ ಹೇಳುವ ಕಾರಣ ವಿವಾದವು ಸದಾ ಬೆನ್ನಿಗಿರುತ್ತದೆ. ತಪ್ಪನ್ನು ಕಂಡಾಗ ಶಿಕ್ಷಿಸದೆ ಹೋದರು ಖಂಡಿಸುವಿರಿ. ಇದರಿಂದ ವಿರೋಧಿಗಳು ಹೆಚ್ಚುತ್ತಾರೆ. ಮೌನವಾಗಿದ್ದರೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆದ್ದರಿಂದ ಸದಾಕಾಲ ಮಾತಿನಲ್ಲಿ ನಿರತರಾಗುವಿರಿ. ನಿಮಗೆ ದೊರೆಯಬೇಕಾದ ಹಕ್ಕಿಗಾಗಿ ಹೋರಾಟ ಮಾಡುವಿರಿ. ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.

ಕುಂಭ

ಬಹುನಿರೀಕ್ಷಿತ ಅಧಿಕಾರಿಯ ಪಟ್ಟ ನಿಮಗೆ ಈಗ ದೊರೆಯುತ್ತದೆ. ಚಿನ್ನವನ್ನು ಮಾರುವ ತೀರ್ಮಾನವನ್ನು ಕೈ ಬಿಡುವಿರಿ. ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುವಿರಿ. ಸ್ವತಂತ್ರವಾದ ಜೀವನವನ್ನು ನಡೆಸಲು ಇಷ್ಟಪಡುವಿರಿ. ಸಣ್ಣಪುಟ್ಟ ತಪ್ಪುಗಳನ್ನು ಟೀಕಿಸುವಿರಿ. ಯಾವುದೇ ವಿಚಾರದಲ್ಲಿ ದುಡುಕದೆ ಸಂಯಮದಿಂದ ವರ್ತಿಸುವಿರಿ. ನಿಮ್ಮ ವಾದ ವಿವಾದಗಳಿಗೆ ಹೆದರಿ ಜನರು ದೂರ ಸರದಿಯುತ್ತಾರೆ.

ಮೀನ

ನಿಮ್ಮ ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಣ ಗಳಿಸಲು ಆರಂಭಿಸುತ್ತಾರೆ. ಹೆಚ್ಚಿನ ಪ್ರೀತಿ ವಿಶ್ವಾಸದಿಂದ ಮಾತ್ರ ವಿಶೇಷ ಶುಭ ಫಲಗಳು ದೊರೆಯುತ್ತವೆ. ದುಡಿವ ಹಣದಲ್ಲಿ ಅಲ್ಪ ಭಾಗ ಉಳಿತಾಯ ಮಾಡುವಿರಿ. ಎದುರಾಗಿದ್ದ ತೊಂದರೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಸಂತಾನ ಲಾಭವಿದೆ. ಕುಟುಂಬದ ಹಣಕಾಸಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಿರಿ. ವ್ಯವಹಾರದಲ್ಲಿ ಲಾಭವಿದೆ. ಯಾರಿಗೂ ಕನಿಕರ ತೋರಿಸುವುದಿಲ್ಲ. ಸಮಯ ಸಾಧಿಸಿ ವಿರೋಧಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.