Tomorrow Horoscope: ಸಹೋದರರಿಂದ ಆರ್ಥಿಕ ಸಹಾಯ, ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ; ನಾಳೆಯ ದಿನ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಸಹೋದರರಿಂದ ಆರ್ಥಿಕ ಸಹಾಯ, ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ; ನಾಳೆಯ ದಿನ ಭವಿಷ್ಯ

Tomorrow Horoscope: ಸಹೋದರರಿಂದ ಆರ್ಥಿಕ ಸಹಾಯ, ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ; ನಾಳೆಯ ದಿನ ಭವಿಷ್ಯ

28th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ಸಹೋದರರಿಂದ ಆರ್ಥಿಕ ಸಹಾಯ, ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ; ಜೂನ್ 28ರ ದಿನ ಭವಿಷ್ಯ ತಿಳಿಯಿರಿ
ಸಹೋದರರಿಂದ ಆರ್ಥಿಕ ಸಹಾಯ, ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ; ಜೂನ್ 28ರ ದಿನ ಭವಿಷ್ಯ ತಿಳಿಯಿರಿ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (28th June 2024 Horoscope)

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಶುಕ್ರವಾರ

ತಿಥಿ: ಸಸ್ತಮಿ ಸಾ. 05.58 ರವರೆಗು ಇದ್ದು ಆನಂತರ ಅಷ್ಟಮಿ ಆರಂಭವಾಗುತ್ತದೆ.

ನಕ್ಷತ್ರ: ಪೂರ್ವಾಭಾದ್ರ ನಕ್ಷತ್ರವು ಹ. 12.17 ರವರೆಗೆ ಇದ್ದು ಆನಂತರ ಉತ್ತರಾಭಾದ್ರ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.55

ಸೂರ್ಯಾಸ್ತ: ಸಂಜೆ 06.48

ರಾಹುಕಾಲ: ಬೆ. 10.50 ರಿಂದ ಹ. 12.26

ಮೇಷ ರಾಶಿ

ನಿಮ್ಮಲ್ಲಿನ ಬುದ್ಧಿಶಕ್ತಿ ಅನೀತಿಯ ವಿರುದ್ಧ ಹೋರಾಡಲು ಪ್ರೇರೇಪಿಸುತ್ತದೆ. ಮನದಲಿ ಸದಾಕಾಲ ಸಕಾರಾತ್ಮಕ ಚಿಂತನೆ ಇರುತ್ತದೆ. ತಂದೆ ಅಥವಾ ಕುಟುಂಬದ ಹಿರಿಯರ ಸಲಹೆ ಪಾಲಿಸಿದಲ್ಲಿ ವೃತ್ತಿಯಲ್ಲಿ ಪ್ರಯೋಜನಕಾರಿ ಆಗಲಿದೆ. ಹಾಸ್ಯದ ಭಾವನೆ ಮನಸಿಗೆ ಶಾಂತಿ ನೆಮ್ಮದಿ ನೀಡುತ್ತದೆ. ಮಕ್ಕಳ ಜೊತೆಗಿನ ಸುದೀರ್ಘ ಕಾಲದ ಪ್ರಯಾಣ ಒತ್ತಡದವನ್ನು ಕಡಿಮೆ ಮಾಡುತ್ತದೆ. ಜೀವನದಲ್ಲಿನ ಬಹು ನಿರೀಕ್ಷಿತ ಬದಲಾವಣೆಯು ಉಂಟಾಗಲಿದೆ. ಗಾಳಿಮಾತುಗಳ ನಂಬಿದಲ್ಲಿ ಪ್ರೀತಿಪಾತ್ರರ ಜೊತೆಗಿನ ಸ್ನೇಹ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ನಿಮ್ಮ ಕೆಲಸದಲ್ಲಿನ ಗುಣಮಟ್ಟವು ಹಿರಿಯ ಅಧಿಕಾರಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಲಿದೆ. ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.

ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಬಿಳಿ

ವೃಷಭ ರಾಶಿ

ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ವ್ಯಾಯಾಮ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಿರಿ. ಹೊಸ ವ್ಯಾಪಾರವನ್ನು ಪ್ರಾರಂಭಿಸಿ ಎಲ್ಲರ ಗಮನ ಸೆಳೆಯುವಿರಿ. ನಿಮ್ಮ ಬಗ್ಗೆ ನಿಮಗೆ ವಿಶ್ವಾಸವು ಹೆಚ್ಚುತ್ತದೆ. ಆತ್ಮೀಯರ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವಿರಿ. ದಿನ ನಿತ್ಯದಂತೆ ಮನರಂಜನಾ ಸ್ಥಳಕ್ಕೆ ಮಕ್ಕಳ ಜೊತೆ ತೆರಳುವಿರಿ. ಹಿರಿಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಹಣಕಾಸಿನ ಯೋಜನೆಗಳು ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಸಮಯಕ್ಕೆ ತಕ್ಕಂತೆ ಬದುಕಲು ತೀರ್ಮಾನಿಸುವಿರಿ. ನಿಮ್ಮ ಉತ್ತಮ ಪ್ರಯತ್ನದಿಂದ ಕುಟುಂಬದ ಆದಾಯ ಹೆಚ್ಚುತ್ತದೆ. ನಿಮ್ಮ ಪ್ರೋತ್ಸಾಹದಿಂದಾಗಿ ನಿಮ್ಮ ಮಕ್ಕಳು ಹೊಸ ಚೈತನ್ಯವನ್ನು ಪಡೆಯುತ್ತಾರೆ.

ಪರಿಹಾರ: ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಬೂದು ಬಣ್ಣ

ಮಿಥುನ ರಾಶಿ

ದೈನಂದಿನ ಜೀವನದಲ್ಲಿ ವಿಶೇಷವಾದ ತಿರುವುಗಳು ಎದುರಾಗಲಿವೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಿ. ಬೇರೆಯವರ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರುವಿರಿ. ಸಮಸ್ಯೆಗಳನ್ನು ನೀವಾಗಿಯೇ ಉಂಟಾಗುವಂತೆ ಮಾಡುವಿರಿ. ನಿಮ್ಮ ತಾಯಿಯಯವರಿಂದ ಹಣಕಾಸಿನ ಸಹಾಯ ದೊರೆಯುವ ಸಾಧ್ಯತೆ ಇದೆ. ನಿಮ್ಮ ಉತ್ತಮ ಪ್ರಯತ್ನದಿಂದಾಗಿ ಆರ್ಥಿಕ ಪ್ರಗತಿ ಉಂಟಾಗಲಿದೆ. ಎಂಥಂಹ ಒತ್ತಡದ ಪರಿಸ್ಥಿತಿ ಎದುರಾದರೂ ತಾಳ್ಮೆಯಿಂದ ವರ್ತಿಸುವಿರಿ. ಮಕ್ಕಳ ಸಲುವಾಗಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ.

ಪರಿಹಾರ: ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಕಂದು ಬಣ್ಣ

ಕಟಕ ರಾಶಿ

ಮನದಲ್ಲಿನ ಭಾವನೆಗಳನ್ನು ನಿಯಂತ್ರಿಸಲು ಸಫಲರಾಗುವಿರಿ. ನಿಮ್ಮ ಮನದಲ್ಲಿನ ಆತಂಕವನ್ನು ದೂರಮಾಡಲು ಸಂಗಾತಿಯು ಯಶಸ್ವಿಯಾಗುತ್ತಾರೆ. ಸ್ವಚಿಕಿತ್ಸೆಯ ಕಾರಣ ಆರೋಗ್ಯದಲ್ಲಿ ತೊಂದರೆ ಉಂಟುಮಾಡುತ್ತದೆ. ಮನೆಯಲ್ಲಿನ ಅನಗತ್ಯವಾದ ದುರಸ್ತಿಯಿಂದ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ನಿಮ್ಮದೇ ತಪ್ಪಿನಿಂದಾಗಿ ಆರ್ಥಿಕ ತೊಂದರೆ ಎದುರಿಸಬೇಕಾಗುತ್ತದೆ. ಮಕ್ಕಳ ಸಹಾಯದಿಂದ ತೊಂದರೆಗಳಿಂದ ಪಾರಾಗುವಿರಿ. ಮಕ್ಕಳ ಭವಿಷ್ಯದ ಜೀವನದ ಬಗ್ಗೆ ಯೋಜನೆ ರೂಪಿಸುವಿರಿ. ವಿವಾದಾತ್ಮಕ ವಿಚಾರಗಳಿಂದ ದೂರ ಉಳಿಯುವಿರಿ. ನಿಮ್ಮ ಪ್ರತಿಸ್ಪರ್ಧಿಗಳು ಸುಲಭವಾಗಿ ಸೋಲೊಪ್ಪುತ್ತಾರೆ. ಹಾಸ್ಯದಿಂದ ತುಂಬಿದ ಮಾತುಕತೆಯಿಂದಸ್ನೇಹ ಸಂಬಂಧ ಉತ್ತಮವಾಗುತ್ತದೆ.

ಪರಿಹಾರ: ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು

ಸಿಂಹ ರಾಶಿ

ಕುಟುಂಬದವರೊಂದಿಗೆ ಭಾವನಾತ್ಮಕವಾಗಿ ವರ್ತಿಸುವಿರಿ. ಬೇರೆಯವರ ಜೊತೆ ನಿಮ್ಮ ವರ್ತನೆಯ ಬಗ್ಗೆ ಗಮನವಿರಲಿ. ತಪ್ಪು ಹೆಜ್ಜೆಯಿಂದಾಗಿ ಆರ್ಥಿಕ ತೊಂದರೆಗೆ ಒಳಗಾಗುವಿರಿ. ವಾಸಸ್ಥಳದ ಬದಲಾವಣೆ ಹೆಚ್ಚು ಅನಿವಾರ್ಯವಾಗುತ್ತದೆ. ಪ್ರೀತಿಪಾತ್ರರ ಜೊತೆ ಮನರಂಜನಾಕೇಂದ್ರಕ್ಕೆ ತೆರಳುವಿರಿ. ಸಾಮಾನ್ಯವಾಗಿ ನಿಗದಿತ ವೇಳೆಯಲಿ ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ. ತಪ್ಪನ್ನು ಖಂಡಿಸುವ ಪ್ರವೃತ್ತಿ ಹೊಂದಿರುತ್ತೀರಿ. ಅಪರಿಚಿತ ವ್ಯಕ್ತಿಗಳೊಂದಿಗೆ ಹಣದ ಅವ್ಯವಹಾರ ಸಲ್ಲದು. ಅರ್ಥವಿಲ್ಲದ ವಿಚಾರಗಳಿಗೆ ಅಮೂಲ್ಯವಾದ ಸಮಯವನ್ನು ಹಾಳುಮಾಡುವಿರಿ.

ಪರಿಹಾರ: ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ತಿಳಿಹಸಿರು

ಕನ್ಯಾ ರಾಶಿ

ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಕುಟುಂಬದವರ ಜೊತೆ ಆನಂದಿಂದ ದಿನ ಕಳೆಯುವಿರಿ ಸಹೋದರ-ಸಹೋದರಿಯರ ಸಹಾಯದಿಂದ ಆರ್ಥಿಕ ಸ್ಥಿತಿ ಗತಿ ಲಾಭವನ್ನು ಪಡೆಯುವಿರಿ. ನಿಮ್ಮ ಆತ್ಮೀಯರ ಸಲಹೆ ಒಪ್ಪಿ ಸಮಸ್ಯೆಯಿಂದ ಪಾರಾಗುವಿರಿ. ನಿಮ್ಮ ಕುಟುಂಬದ ಜೊತೆ ಆತ್ಮೀಯತೆ ಇರಲಿದೆ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಂಡು ಎಲ್ಲರ ಮನ ಗೆಲ್ಲುವಿರಿ.ಒಂದೇ ರೀತಿಯ ಕೆಲಸವನ್ನು ವಿರೋಧಿಸುವಿರಿ. ತಾವಾಗಿಯೆ ನಿಮಗೆ ಸಹಾಯ ಮಾಡಲು ಬಂದವರನ್ನು ಗೌರವಿಸುವಿರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವಿರಿ.

ಪರಿಹಾರ: ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 9

ಅಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನಸುಗೆಂಪು

ತುಲಾ ರಾಶಿ

ನಿಮ್ಮ ನಿರೀಕ್ಷೆಗಳನ್ನು ಸ್ನೇಹಿತರ ಸಹಾಯದಿಂದ ಕಾರ್ಯಗತಗೊಳಿಸುವಿರಿ. ವೈಯಕ್ತಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ಆತುರದ ನಿರ್ಧಾರಗಳಿಂದ ನಿಮ್ಮ ಸಂಗಾತಿಯ ಕೋಪಕ್ಕೆ ಕಾರಣವಾಗಲಿದೆ. ನೀವು ಹಣಕಾಸಿನ ಬಗ್ಗೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳಲ್ಲಿ ಹೋರಾಟದ ಪ್ರವೃತ್ತಿ ಕಂಡುಬರಲಿದೆ. ಉತ್ತಮ ಆದಾಯ ಇರಲಿದೆ. ಉದ್ಯೋಗದಲ್ಲಿ ನಿರಾಸೆಯ ವಾತಾವರಣ ಇರುತ್ತದೆ. ನಿಮ್ಮ ಕನಸು ನನಸಾಗಿಸಲು ಕುಟುಂಬದವರು ಪ್ರಯತ್ನಿಸುತ್ತಾರೆ. ಚುರುಕಿನ ಮನಸ್ಸು ನಿಮ್ಮಲ್ಲಿ ಹೊಸ ಹುಮ್ಮಸ್ಸು ಉಂಟುಮಾಡುತ್ತದೆ. ಸಂಗಾತಿಯ ತಿಳುವಳಿಕೆ ನಿಮ್ಮ ಹಣದ ಕೊರತೆಯನ್ನು ಕಡಿಮೆಮಾಡಲಿದೆ. ಉದ್ಯೋಗ ಬದಲಿಸುವ ತೀರ್ಮಾನಕ್ಕೆ ಬದ್ದರಾಗುವಿರಿ.

ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ವೃಶ್ಚಿಕ ರಾಶಿ

ಮಕ್ಕಳ ಬಾಲ್ಯದ ನೆನಪುಗಳು ನಿಮ್ಮಲ್ಲಿ ಸಂತಸವನ್ನು ಉಂಟುಮಾಡುತ್ತದೆ. ನಿಮ್ಮದೇ ತಪ್ಪಿನಿಂದ ತೊಂದರೆಗೆ ಸಿಲುಕುವಿರಿ. ಅನಗತ್ಯ ವಿಚಾರಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆತಂಕದಿಂದ ಉದ್ಯೋಗದಲ್ಲಿ ಕೆಲವು ತಪ್ಪುಗಳಾಗಬಹುದು ಎಚ್ಚರಿಕೆ ಇರಲಿ. ನಿಮ್ಮ ಮಗುವಿನಂತಿರುವ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ವಿರಳ. ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಸವಾಲಾಗುವ ಕೆಲಸಗಳು ಎದುರಾಗಲಿದೆ. ಕಷ್ಟಪಟ್ಟು ಉಳಿಸಿರುವ ಹಣವನ್ನು ಮಕ್ಕಳಿಗಾಗಿ ಖರ್ಚುಮಾಡುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅನುಕೂಲಕರ ಬದಲಾವಣೆ ಕಂಡುಬರಲಿವೆ. ಅನಿರೀಕ್ಷಿತವಾಗಿ ಬರುವ ಶುಭ ಸುದ್ದಿ ಕುಟುಂಬದಲ್ಲಿ ಸಂತೋಷ ಮತ್ತು ಆನಂದವನ್ನು ಉಂಟುಮಾಡುತ್ತದೆ. ಸಂಗಾತಿಯ ಜೀವನದಲ್ಲಿ ಅಚ್ಚರಿಯ ಫಲಿತಾಂಶ ದೊರೆಯುತ್ತದೆ.

ಪರಿಹಾರ: ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಧನಸ್ಸು ರಾಶಿ

ಆತ್ಮೀಯರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಿರಿ. ದೀರ್ಘಕಾಲದ ಯೋಜನೆಗಳಲ್ಲಿ ಹಣವನ್ನು ಹೂಡುವಿರಿ. ಸ್ಟಾಕ್‌ ಮತ್ತು ಷೇರ್‌ಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಕುಟುಂಬದಲ್ಲಿ ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಆಪತ್ಕಾಲದಲ್ಲಿ ಸಂಗಾತಿಯ ಸಹಾಯ ಸಹಕಾರ ದೊರೆಯುತ್ತದೆ. ವ್ಯಾಪಾರೋದ್ಯಮಿಗಳಿಗೆ ಹೆಚ್ಚಿನ ವರಮಾನ ದೊರೆಯಲಿದೆ. ಉದ್ಯೋಗದ ಸಲುವಾಗಿ ಪ್ರವಾಸ ಮಾಡಬೇಕಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ಕುಟುಂಬದ ಅಗತ್ಯಗಳಿಗಾಗಿ ಹೆಚ್ಚಿನ ಪ್ರಯತ್ನ ಮತ್ತು ಹಣ ಬೇಕಾಗುತ್ತದೆ. ನಿಮ್ಮಲ್ಲಿನ ಮರೆವಿನ ಗುಣವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವರು. ಸಮಯವನ್ನು ಅರಿತು ನಡೆಯುವುದು ಒಳ್ಳೆಯದು.

ಪರಿಹಾರ: ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಮಕರ ರಾಶಿ

ಉತ್ತಮ ಆರೋಗ್ಯಗಳಿಸಲು ಆಹಾರ ಕ್ರಮವನ್ನು ಬದಲಿಸಿ, ವ್ಯಾಯಾಮದ ಹಾದಿ ಹಿಡಿಯುವಿರಿ. ನಿಮ್ಮ ಅಭ್ಯುದಯ ಬುದ್ಧಿವಂತಿಕೆಯ ಫಲವಾಗಿ ಆರ್ಥಿಕ ಭದ್ರತೆ ಹೆಚ್ಚುತ್ತದೆ. ಮಕ್ಕಳ ಜೊತೆಯಲ್ಲಿ ಸಾಮಾಜಿಕ ಚಟುವಟಿಕೆಗಳ್ಳಿ ಪಾಲ್ಗೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅನುಕೂಲ ದೊರೆಯುತ್ತದೆ. ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಅದ್ಭುತವಾದ ಬದಲಾವಣೆಗಳು ಎದುರಾಗಲಿದೆ. ವ್ಯಾಪಾರಿಗಳು ಸಾಧ್ಯವಾದಷ್ಟು ಸಾಲದ ವ್ಯವಹಾರದಿಂದ ದೂರ ಉಳಿಯುವುದು ಒಳ್ಳೆಯದು. ಹಣದ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ರಹಸ್ಯವಾಗಿ ಇಡುವಿರಿ. ಉತ್ಸಾಹದ ಮಾತುಕತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ

ಪರಿಹಾರ: ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ಕುಂಭ ರಾಶಿ

ತಂದೆಯೊಂದಿಗೆ ವಾದ ವಿವಾದ ಮಾಡುವುದನ್ನು ತಪ್ಪಿಸಿ. ಹಣಕಾಸಿನ ಹೊಸ ಹೂಡಿಕೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ವಿಶೇಷವಾದ ಅಧ್ಯಯನದಿಂದ ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳುತ್ತಾರೆ. ದಿಟ್ಟ ತೀರ್ಮಾನ ಮಾಡಿದ ನಂತರವೇ ಉದ್ಯೋಗದಲ್ಲಿ ಹೊಸ ಪ್ರಯೋಗವನ್ನು ಮಾಡುವಿರಿ. ಮಕ್ಕಳು ನಿಮಗೆ ಕೆಲಸ ಕಾರ್ಯಗಳನ್ನುಮಾಡಲು ಸಹಾಯ ಮಾಡುತ್ತಾರೆ. ಸುದೀರ್ಘಕಾಲದ ಪ್ರಯಾಣದಲ್ಲಿ ಮನದ ನೋವು ಮರೆಯುವಿರಿ. ಸಮಾಜದ ಗಣ್ಯವ್ಯಕ್ತಿಗಳ ಸಂಪರ್ಕಗಳಿಸಲು ಸಾಧ್ಯವಾಗಲಿದೆ ಹೊಸ ತಂತ್ರಗಳಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಗಲಿದೆ.

ಪರಿಹಾರ: ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಎಲೆಹಸಿರು

ಮೀನ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ನಿಜವಾದ ಆನಂದವನ್ನು ಸವಿಯುವಿರಿ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದರಾಗುವಿರಿ. ಯಾವುದೇ ಪ್ರಮುಖ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಆತ್ಮೀಯರೊಂದಿಗೆ ಚರ್ಚಿಸುವಿರಿ. ಸೋದರರಿಂದ ಆರ್ಥಿಕ ಸಹಾಯ ದೊರೆಯಲಿದೆ. ಕುಟುಂಬದ ಸದಸ್ಯರ ಅಗತ್ಯತೆಗಳನ್ನು ಪೂರೈಸಲು ಪ್ರಯತಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಜೀವನದಲ್ಲಿನ ಕಹಿ ಘಟನೆಗಳನ್ನು ಮರತು ಸಂತೋಷವಾಗಿರಲು ಪ್ರಯತ್ನಿಸುವಿರಿ. ಜನಸಾಮಾನ್ಯರಿಗಾಗಿ ನಿಮ್ಮಅಮೂಲ್ಯ ಸಮಯವನ್ನು ಮೀಸಲಿಡುವಿರಿ. ದುರುಪಯೋಗಪಡಿಸಿಕೊಳ್ಳಬಹುದು. ಮನರಂಜನಾ ಮಾಧ್ಯಮದಲ್ಲಿ ಹೆಚ್ಚಿನ ಸಮಯವನ್ನು ವ್ಯರ್ಥಮಾಡುವಿರಿ.

ಪರಿಹಾರ: ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.