ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 11 March 2024 Zodiac Signs Kundali News Sts

Tomorrow Horoscope: ಕೈ ಜಾರಿದ ಅವಕಾಶವೊಂದು ಮತ್ತೊಮ್ಮೆ ದೊರೆಯಲಿದೆ, ಸಾಲದ ವ್ಯವಹಾರದಿಂದ ತೊಂದರೆ; ಸೋಮವಾರದ ದಿನಭವಿಷ್ಯ

11 March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಸೋಮವಾರದ ದಿನಭವಿಷ್ಯ ಹೀಗಿದೆ..

ಸೋಮವಾರದ ದಿನಭವಿಷ್ಯ
ಸೋಮವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 11 March 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಸೋಮವಾರ

ತಿಥಿ : ಪಾಡ್ಯ ಬೆ.12.58 ರವರೆಗು ಇದ್ದು ಆನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ : ಉತ್ತರಾಭಾದ್ರ ನಕ್ಷತ್ರವು ರಾ.01.58 ರವರೆಗೆ ಇರುತ್ತದೆ. ಆನಂತರ ರೇವತಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.29

ಸೂರ್ಯಾಸ್ತ: ಸ.06.29

ರಾಹುಕಾಲ : ಬೆ. 07.30 ರಿಂದ ಬೆ.09.00

ರಾಶಿ ಫಲಗಳು

ಮೇಷ

ನಿರೀಕ್ಷಿಸಿದ ಸಹಾಯ ಸಹಕಾರ ದೊರಕುವ ಕಾರಣ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ನಿಮಗೆ ಇಷ್ಟವೆನಿಸುವ ವಸ್ತು ಒಂದನ್ನು ಕಳೆದುಕೊಳ್ಳಬಹುದು ಎಚ್ಚರಿಕೆ ಇರಲಿ. ಸಂಗಾತಿಯ ಸ್ವಂತ ವಿಚಾರಗಳಿಂದ ದೂರವಿರುವುದು ಕ್ಷೇಮಕರ. ಯಾರ ಮೇಲೆ ಆದರು ಕೋಪಿಸಿಕೊಳ್ಳುವ ಮೊದಲು ವಿಚಾರ ವಿನಿಮಯದಲ್ಲಿ ತೊಡಗಿರಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮುಂದುವರೆಯಲು ಪ್ರಯತ್ನಿಸಿ. ಕುಟುಂಬದ ಸಮಸ್ಯೆಯೊಂದನ್ನು ಸುಲಭವಾಗಿ ಬಗೆಹರಿಸುವಿರಿ. ಹಗಲುಗನಸು ಕಾಣುವಿರಿ. ಕುಟುಂಬದ ಕಿರಿಯ ಸದಸ್ಯರ ಜೊತೆ ಅನಪೇಕ್ಷಿತ ಮಾತುಕತೆ ನಡೆಯಲಿದೆ. ಬಿಡುವಿನ ವೇಳೆ ಕುಟುಂಬದವರ ಜೊತೆ ಪ್ರೀತಿ ಮಮತೆಯನ್ನು ಹಂಚಿಕೊಳ್ಳಲು ಪ್ರಯತ್ನಿಸಬೇಕು. ನೂತನ ವಿವಾಹಿತರು ಸಂತಸದಿಂದ ಬಾಳ್ವೆ ಮಾಡುತ್ತಾರೆ. ಸಂಜೆಯ ವೇಳೆ ಎಲ್ಲರ ಜೊತೆಯಲ್ಲಿ ವಾಯುವಿಹಾರಕ್ಕೆ ತೆರಳುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ವೃಷಭ

ಕುಟುಂಬದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವಿರಿ. ಸದಾಕಾಲ ನಗುನಗುತ್ತಾ ಬಾಳುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ವರಮಾನ ಇರಲಿದೆ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಹಣಕಾಸಿನ ಕೊರತೆ ಕಾಡಬಹುದು. ಉದ್ಯೋಗದಲ್ಲಿ ಯಾವುದೇ ರೀತಿಯ ಬೆಳವಣಿಗೆ ಕಾಣುವುದಿಲ್ಲ ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಕಂಡು ಬರುತ್ತದೆ ಅಶಕ್ತರ ಪರವಾಗಿ ಕೆಲಸ ಮಾಡುವಿರಿ. ಹೊಸಜನರ ಸಹವಾಸ ಗೆಲುವಿಗೆ ನಾಂದಿಯಾಗುತ್ತದೆ ಎಲ್ಲರ ದೃಷ್ಟಿಯಲ್ಲಿ ಆಪದ್ಬಾಂಧವನಂತೆ ಕಾಣುವಿರಿ. ಹೊಸ ವಾಹನವನ್ನು ಕೊಳ್ಳುವ ಯೋಜನೆ ರೂಪಿಸುವಿರಿ ವಿದ್ಯಾರ್ಥಿಗಳು ಸಮಯಾನುಸಾರವಾಗಿ ನಡೆದುಕೊಂಡು ಎಲ್ಲರ ಮನ ಗೆಲ್ಲುತ್ತಾರೆ. ಗರಿಗರಿ ತಿಂಡಿ ಪದಾರ್ಥಗಳಿಂದ ದೂರವಿರಿ

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ನೀಲಿ ಬಣ್ಣ

ಮಿಥುನ

ಸವಾಲೆನಿಸುವ ಕೆಲಸಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ಇದರಿಂದ ಕುಟುಂಬದ ಒಗ್ಗಟ್ಟಿಗೆ ಧಕ್ಕೆ ಬರಲಿದೆ. ಹಣಕಾಸಿನ ತೊಂದರೆ ಕಾಣುವುದಿಲ್ಲ. ಗಡಿಬಿಡಿಯಿಂದ ತೆಗೆದುಕೊಳ್ಳುವ ತೀರ್ಮಾನ ವಿವಾದಕ್ಕೆ ಕಾರಣವಾಗಲಿದೆ. ಅತಿ ಸಣ್ಣ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಮರೆಯಲಾಗದಂತಹ ಕೆಲಸವನ್ನು ಹಮ್ಮಿಕೊಳ್ಳುವಿರಿ. ನಿಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ತೋರಿಸಲು ಅವಕಾಶವೊಂದು ದೊರೆಯಲಿದೆ. ಕೈ ಜಾರಿದ ಅವಕಾಶವೊಂದು ಮತ್ತೊಮ್ಮೆ ದೊರೆಯಲಿದೆ. ಕೋಪವನ್ನು ಬದಿಗಿಟ್ಟು ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳು ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳು ವಿಶೇಷ ವಿಚಾರಗಳ ಅಧ್ಯಯನದಿಂದ ಜ್ಞಾನವನ್ನು ಬೆಳೆಸಿಕೊಳ್ಳುತ್ತಾರೆ. ನಿಖರವಾದ ಪ್ರಯೋಜನ ದೊರೆಯುವ ಹೊಸ ವ್ಯಾಪಾರದ ಒಡಂಬಡಿಕೆಯನ್ನು ಮಾಡಿಕೊಳ್ಳುವೆವಿರಿ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಕಟಕ

ಅತಿಯಾದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಹಿರಿಯರ ಮಾರ್ಗದರ್ಶನದಲ್ಲಿ ಸುಖ ಜೀವನವನ್ನು ನಡೆಸುವಿರಿ. ಸಾಲದ ವ್ಯವಹಾರದಿಂದ ತೊಂದರೆ ಉಂಟಾಗಬಹುದು. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಸ್ನೇಹಿತರ ಜೊತೆಯಲ್ಲಿ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವಿರಿ. ದುಡುಕಿನಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಯಾವ ಮನಸ್ಸಿಗೂ ನೋವುಂಟು ಮಾಡದೆ ಕೆಲಸದಲ್ಲಿ ತೊಡಗುವಿರಿ. ದಂಪತಿಗಳ ನಡುವಿನ ಬೇಸರವು ದೂರವಾಗಲಿದೆ. ನಿಮ್ಮ ಉದ್ಯೋಗವನ್ನು ಬದಲಿಸುವ ನಿರ್ಧಾರವನ್ನು ಕೈ ಬಿಡುವಿರಿ. ಉತ್ತಮ ಆದಾಯ ನೀಡುವ ವ್ಯಾಪಾರೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವಿರಿ. ಆರೋಗ್ಯದಲ್ಲಿ ಏರಿಳಿತ ಇರಲಿದೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಸಿಂಹ

ಜನಸಾಮಾನ್ಯರ ಮಧ್ಯೆ ನಾಯಕನಾಗಿ ಹೊರಹೊಮ್ಮುವಿರಿ. ಕುಟುಂಬದಲ್ಲಿ ಸಂತಸದ ಕ್ಷಣಗಳು ಎದುರಾಗಲಿವೆ. ದುಬಾರಿ ಉಡುಗೊರೆಯೊಂದು ದೊರೆಯಲಿದೆ. ಎಲ್ಲರ ಸಹಾಯ ಸಹಕಾರ ನಿಮಗೆ ದೊರೆಯಲಿದೆ. ಸಂಗಾತಿಯ ಹಣಕಾಸಿನ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಡಿರಿ. ಅವಶ್ಯಕತೆ ಇರುವ ವೇಳೆಯಲ್ಲಿ ಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ಕುಟುಂಬದ ಕಿರಿಯ ಸದಸ್ಯರಿಗೆ ಎಲ್ಲರಿಂದ ಸಹಾನುಭೂತಿ ದೊರೆಯುತ್ತದೆ. ದಂಪತಿಗಳ ಚಿಂತನೆ ಮತ್ತು ಯೋಜನೆಗಳು ಒಂದೇ ಹಾದಿಯಲ್ಲಿ ಸಾಗಲಿವೆ. ಉದ್ಯೋಗ ಮಾಡಲು ಆಸಕ್ತಿ ಇರುವುದಿಲ್ಲ. ಎಲ್ಲರ ಸಹಾಯದಿಂದ ವ್ಯಾಪಾರವನ್ನು ಆರಂಭಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಯಾರಿಗೂ ಹಣದ ಸಹಾಯ ಮಾಡಲು ಇಚ್ಚಿರುವುದಿಲ್ಲ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಕನ್ಯಾ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಶ್ರಮಿಸುವಿರಿ. ಹಣದ ವ್ಯವಹಾರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿಮ್ಮಲ್ಲಿ ವಿಶೇಷವಾದ ಜನಾಕರ್ಷಕ ಬುದ್ಧಿ ಇರುತ್ತದೆ. ನಿಮ್ಮಲ್ಲಿನ ಒಳ್ಳೆಯ ವ್ಯಕ್ತಿತ್ವ ಹೊಸ ಸ್ನೇಹಿತರನ್ನು ಗಳಿಸಿಕೊಡುತ್ತದೆ. ದಾಂಪತ್ಯ ಜೀವನದಲ್ಲಿ ಇದ್ದ ವಿವಾದವು ಕೊನೆಗೊಳ್ಳುತ್ತದೆ. ಸಂಪೂರ್ಣ ವಿಚಾರವನ್ನು ಅರಿತುಕೊಂಡು ಹಣಕಾಸಿನ ಯೋಜನೆಯನ್ನು ಆರಂಭಿಸಿ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ. ಆರಂಭಿಸಬೇಕಿದ್ದ ಹೊಸ ವ್ಯಾಪಾರವನ್ನು ಮುಂದೂಡುವಿರಿ. ಸ್ವಂತ ಬುದ್ಧಿವಂತಿಕೆಯಿಂದ ದೊಡ್ಡ ವಿವಾದ ದೂರವಾಗುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇದೆ. ವಂಶಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ನಿಮಗೆ ಸಮಪಾಲು ಲಭಿಸುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ತುಲಾ

ಹೆಚ್ಚಿನ ಆತ್ಮವಿಶ್ವಾಸ ಹೊಸ ಆಸೆ ಆಕಾಂಕ್ಷೆಗಳನ್ನುಮೂಡಿಸುತ್ತದೆ. ಸುಲಭವಾಗಿ ಸೋಲನ್ನು ಒಪ್ಪದೆ ಗೆಲುವಿಗಾಗಿ ಹೋರಾಡುವಿರಿ. ದಿಟ್ಟತನದಿಂದ ಒತ್ತಡದ ಸನ್ನಿವೇಶವನ್ನು ಎದುರಿಸುವಿರಿ. ದುರಾಸೆಗೆ ಒಳಗಾಗದೆ ಅಲ್ಪ ತೃಪ್ತಿಗೆ ಸಂತಸ ಪಡುವಿರಿ. ಹಣಕಾಸಿನ ವಿಚಾರವನ್ನು ರಹಸ್ಯವಾಗಿ ನಿರ್ವಹಿಸುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ. ನಿಮ್ಮ ಮನಸ್ಸಿಗೆ ಸಂತೋಷವೆನಿಸುವ ವರ್ತಮಾನವೊಂದು ದೊರೆಯಲಿದೆ. ನಡೆಯಬೇಕಿದ್ದ ಮಂಗಳ ಕಾರ್ಯವನ್ನು ಮುಂದೂಡಬೇಕಾಗುತ್ತದೆ. ಕಷ್ಟಕರ ಸಮಯದಲ್ಲಿಯೂ ಗೆಲ್ಲುವ ತಂತ್ರ ತಿಳಿದಿರುತ್ತದೆ. ಕುಟುಂಬದಲ್ಲಿ ಪರಸ್ಪರ ಸಾಮರಸ್ಯ ಇರಲಿದೆ. ಉದ್ಯೋಗವನ್ನು ಬದಲಿಸುವ ನಿರ್ಧಾರವನ್ನು ಕೈಬಿಡುವಿರಿ. ಸಂಗಾತಿಯು ತೆಗೆದುಕೊಳ್ಳುವ ತೀರ್ಮಾನವೊಂದು ಮುಜುಗರ ಉಂಟುಮಾಡಲಿದೆ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ವೃಶ್ಚಿಕ

ಕುಟುಂಬದ ಬಹುಮುಖ್ಯ ಕೆಲಸಗಳನ್ನು ಮಾತ್ರ ಮಾಡುವಿರಿ. ಮನದಲ್ಲಿರುವ ಆಸೆ ಆಕಾಂಕ್ಷೆಗಳನ್ನು ಸುಲಭವಾಗಿ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ನೋವನ್ನು ನುಂಗಿ ಸಂತೋಷವನ್ನು ಹಂಚುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಉಂಟಾಗುವುದಿಲ್ಲ. ಮನದಲ್ಲಿನ ಬೇಸರವನ್ನು ದೂರ ಮಾಡಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಭೂ ವ್ಯವಹಾರದಲ್ಲಿ ಬಂಡವಾಳ ತೊಡಗಿಸುವಿರಿ. ದೂರವಾದ ಸಂಬಂಧಗಳನ್ನು ಮತ್ತೊಮ್ಮೆ ಬೆಸೆಯುವ ತಂತ್ರ ರೂಪಿಸುವಿರಿ. ನಿಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಮನಸ್ಸಿಗೆ ಒಪ್ಪುವಂತೆ ಮಾರ್ಪಾಡು ಮಾಡುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಬೇಗನೆ ಕೋಪ ಬಂದರು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಧನಸ್ಸು

ಎಲ್ಲರೂ ಅಚ್ಚರಿ ಪಡುವಂತಹ ಬದಲಾವಣೆಗಳು ನಿಮ್ಮಲ್ಲಿ ಉಂಟಾಗಲಿವೆ. ಸಾಂಪ್ರದಾಯಿಕ ಕಲೆಗಳಲ್ಲಿ ವಿಶೇಷ ಅಭಿರುಚಿ ಬೆಳೆಯುತ್ತದೆ. ಮಾನಸಿಕ ಸದೃಢತೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಕುಟುಂಬದ ಆರ್ಥಿಕ ಸಮಸ್ಯೆಗಳು ದೂರವಾಗಲಿವೆ. ಕುಟುಂಬದಲ್ಲಿನ ಅಂತಿಮ ನಿರ್ಧಾರ ನಿಮ್ಮದೇ ಆಗುತ್ತದೆ. ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸಗಳನ್ನು ಮಾತ್ರ ಆಯ್ದುಕೊಳ್ಳುವಿರಿ. ನಿಮ್ಮಲ್ಲಿನ ವ್ಯಕ್ತಿತ್ವ ಎನ್ನರ ಗಮನ ಸೆಳೆಯುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯಲಿದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಮುಂದುವರೆಯುತ್ತದೆ. ಮನರಂಜನೆಯನ್ನು ಸವಿಯಲು ಹೆಚ್ಚಿನ ವೇಳೆಯನ್ನು ಮೀಸಲಿಡುವಿರಿ. ಸೋದರರ ಜೊತೆಯಲ್ಲಿ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ಮಕರ

ಧೈರ್ಯದಿಂದ ಕುಟುಂಬದ ತೊಂದರೆಗಳನ್ನು ಪರಿಹರಿಸುವಿರಿ. ನಿಧಾನವಾದರೂ ಉದ್ಯೋಗ ಬದಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಿರಿ. ದೈಹಿಕವಾಗಿ ಸದೃಡರಾದ ಕಾರಣ ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ. ಹಣಕಾಸಿನ ಕೊರತೆ ಇರುವುದಿಲ್ಲ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅದರ ಆರೋಗ್ಯದ ಬಗ್ಗೆ ಗಮನವಿರಬೇಕು. ವ್ಯಾಪಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಯಾವುದೇ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಮಕ್ಕಳು ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಲಿದ್ದಾರೆ. ಅನಿರೀಕ್ಷಿತವಾಗಿ ಆಗಮಿಸುವ ವ್ಯಕ್ತಿಯೊಬ್ಬರು ನಿಮಗೆ ಸಹಾಯ ನೀಡುತ್ತಾರೆ. ಸೋಲುವ ಸಂದರ್ಭದಲ್ಲಿ ಉದಾಸೀನತೆ ತೋರುವಿರಿ. ದಾಂಪತ್ಯದಲ್ಲಿ ಇದ್ದ ಮನಸ್ತಾಪವು ಕೊನೆಗೊಳ್ಳುತ್ತದೆ. ಕುಟುಂಬದವರೊಡನೆ ಹೆಚ್ಚಿನ ಸಮಯವನ್ನು ಕಳೆಯುವುದು ಇಷ್ಟಪಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಕುಂಭ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಸಂಸಾರದ ಸುಧಾರಣೆಗೆ ಹೆಚ್ಚಿನ ಪ್ರಯತ್ನ ಪಡುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ದುಡುಕಿ ಮಾತನಾಡುವುದರಿಂದ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಪ್ರಯೋಜನವಿಲ್ಲದ ಮಾತನ್ನು ಕಡಿಮೆ ಮಾಡಿ. ಕಷ್ಟಪಟ್ಟು ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಸ್ನೇಹಿತರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಕೆಟ್ಟ ಹವ್ಯಾಸಗಳಿಂದ ದೂರವಾಗುವುದು ಒಳಿತು. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ಬಿಡುವಿನ ಸಮಯದಲ್ಲಿ ಜನಸೇವೆಯನ್ನು ಮಾಡುವಿರಿ. ಬೇಸರ ಕಳೆಯಲು ಕುಟುಂಬದ ಎಲ್ಲದೊಂದಿಗೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿಮಿಶ್ರಿತ ಬಿಳಿ ಬಣ್ಣ

ಮೀನ

ಕೆಲಸ ಕಾರ್ಯಗಳ ನಡುವೆಯೂ ವಿಶ್ವಾಸದಿಂದ ಕುಟುಂಬದಲ್ಲಿ ಬೆರೆಯುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಯಾವುದೇ ವಿಚಾರವಾದರೂ ಕೂಲಂಕುಶವಾಗಿ ಯೋಚಿಸಿ ಮುಂದುವರೆಯಿರಿ. ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಉದ್ಯೋಗದಲ್ಲಿ ಬದಲಾವಣೆಗಳನ್ನು ತರುವಿರಿ. ವ್ಯಾಪಾರ ವ್ಯವಹಾರಗಳು ನಷ್ಟವಿಲ್ಲದೆ ನಡೆಯಲಿವೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಗುಟ್ಟಾಗಿ ಹಣವನ್ನು ಉಳಿಸಲು ಪ್ರಯತ್ನಿಸುವಿರಿ. ಅನುಭವಗಳಿಂದ ಪಾಠ ಕಲಿತು ಯಶಸ್ಸಿನ ಬೆನ್ನೇರುವಿರಿ. ಸಂಗಾತಿಗೆ ಇಷ್ಟವೆವನಿಸುವ ಒಡವೆ ವಸ್ತ್ರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಕುಟುಂಬದ ಪುರಾತನ ಕಾಲದ ಮನೆಯನ್ನು ನವೀಕರಿಸುವಿರಿ. ಮಕ್ಕಳ ಸಂತೋಷವನ್ನು ಗುರಿಯಾಗಿರಿಸಿಕೊಂಡು ಯಾತ್ರಾ ಸ್ಥಳಕ್ಕೆ ತೆರಳುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ ಬಣ್ಣ

-------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).