ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 17 March 2024 Zodiac Signs Kundali News Sts

Tomorrow Horoscope: ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ, ಹಿಂದಿನ ನೆನಪುಗಳು ಕಾಡುತ್ತವೆ; ಭಾನುವಾರದ ದಿನಭವಿಷ್ಯ

17 March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಭಾನುವಾರದ ದಿನಭವಿಷ್ಯ ಹೀಗಿದೆ..

ಭಾನುವಾರದ ದಿನಭವಿಷ್ಯ
ಭಾನುವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 17 March 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಭಾನುವಾರ

ತಿಥಿ : ಅಷ್ಠಮಿ ರಾ.02.08 ರವರೆಗು ಇರುತ್ತದೆ. ಆನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ : ಮೃಗಶಿರ ನಕ್ಷತ್ರವು ರಾ.09.01 ರವರೆಗೆ ಇರುತ್ತದೆ. ಆನಂತರ ಆರ್ದ್ರೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.26

ಸೂರ್ಯಾಸ್ತ: ಸ.06.29

ರಾಹುಕಾಲ : ಸ.04.30 ರಿಂದ ಸ.06.00

ರಾಶಿ ಫಲಗಳು

ಮೇಷ

ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಯಶಸ್ಸನ್ನು ಗಳಿಸಲು ಶತಾಯುಗತಾಯ ಪ್ರಯತ್ನಿಸುವಿರಿ. ಸಹಜವಾಗಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಮನದ ಧನಾತ್ಮಕ ಚಿಂತನೆಗಳು ಕುಟುಂಬದಲ್ಲಿ ಹೊಸ ನಿರೀಕ್ಷೆಗಳನ್ನು ಸೃಷ್ಟಿಸುತ್ತದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ಹಣಕಾಸಿನ ಯೋಜನೆಗಳನ್ನು ರೂಪಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಸಭೆ ಸಮಾರಂಭಗಳಿಗೆ ಭೇಟಿ ನೀಡುವಿರಿ. ಮಕ್ಕಳ ಮೇಲಿನ ನಿಮ್ಮ ನಿರೀಕ್ಷೆಗಳು ಸುಳ್ಳಾಗುವುದಿಲ್ಲ. ಆದರೆ ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ. ಬಿಡುವಿನ ಸಮಯದಲ್ಲಿ ಹಾಡು ನೃತ್ಯದಂತಹ ಮನರಂಜನಾ ಚಟುವಟಿಕೆಗಳಲ್ಲಿ ತೊಡಗುವಿರಿ. ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣುವುದಿಲ್ಲ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಎಲೆ ಹಸಿರು ಬಣ್ಣ

ವೃಷಭ

ಪ್ರಯತ್ನಪಡದೆ ಯಾವುದೇ ಕೆಲಸ ಸಿದ್ಧಿಸುವುದಿಲ್ಲ ಎಂಬುದನ್ನು ಮನಗಾಣುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಆದರೆ ಕೆಲಸ ಕಾರ್ಯವನ್ನು ಮಾಡಲು ಮನಸ್ಸು ಒಪ್ಪುವುದಿಲ್ಲ. ಕಷ್ಟಪಡದೆ ದಿನವನ್ನು ಕಳೆಯಬೇಕೆಂಬ ನಿರ್ಧಾರ ಮಾಡುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚಿಂತೆ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಕಂಡು ಬರಲಿವೆ. ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಕುಟುಂಬದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಉಪವೃತ್ತಿಯನ್ನು ಅವಲಂಭಿಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಸಂಗಾತಿಯನ್ನು ಜಾಗರೂಕತೆಯಿಂದ ನೋಡಿಕೊಳ್ಳುವಿರಿ. ಹಿಂದಿನ ನೆನಪುಗಳು ಕಾಡುತ್ತವೆ. ಈ ಕಾರಣದಿಂದಾಗಿ ಎಲ್ಲರೊಂದಿಗೆ ಹುಟ್ಟೂರಿಗೆ ಪ್ರಯಾಣ ಬೆಳೆಸುವಿರಿ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕಟ್ಟಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಕೇಸರಿ ಬಣ್ಣ

ಮಿಥುನ

ದಿನಪೂರ್ತಿ ಮನರಂಜನೆಗಾಗಿ ಮೀಸಲಿಡುವಿರಿ. ಎಲ್ಲರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಯಾವುದೇ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಕಾರಣ ಮನಸ್ಸು ಹಗುರವಾಗಿರುತ್ತದೆ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತವೆ. ಹಣಕ್ಕಿಂತ ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಗೌರವ ನೀಡುವಿರಿ. ಬೇರೆಯವರ ತಪ್ಪನ್ನು ಮರೆತು ಸಂತೋಷದಿಂದ ಕಾಲ ಕಳೆಯುವಿರಿ. ಸಾಮಾಜಿಕ ಹೋರಾಟದ ನಾಯಕತ್ವವನ್ನು ವಹಿಸುವಿರಿ. ಸಹಾಯವನ್ನು ಅರಸಿ ಬಂದವರಿಗೆ ನಿರಾಸೆ ಮಾಡುವುದಿಲ್ಲ. ಸಂಗಾತಿಯಿಂದ ಹಣಕಾಸಿನ ಸಹಾಯ ದೊರೆಯಲಿದೆ. ಒಂದಕ್ಕಿಂತಲೂ ಹೆಚ್ಚಿನ ಆದಾಯದ ಮೂಲ ದೊರೆಯಲಿದೆ. ಕಷ್ಟಪಟ್ಟಷ್ಟು ದುಡಿದಲ್ಲಿ ಸುಖವಿದೆ ಎಂಬ ಮಾತಿನಲ್ಲಿ ನಂಬಿಕೆ ಇರುತ್ತದೆ. ಎಲ್ಲರನ್ನೂ ಒಂದೇ ಭಾವನೆಯಿಂದ ನೋಡುವಿರಿ.

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಕಟಕ

ನಿಮ್ಮಲ್ಲಿನ ಶಕ್ತಿಯ ಅರಿವು ನಿಮಗೆ ಇರುವುದಿಲ್ಲ. ಸದಾ ಕ್ರಿಯಾಶೀಲರಾದಕಾರಣ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಲ್ಲಿರಿ. ಭೂಸಂಬಂಧಿತ ವ್ಯಾಪಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಯಾವುದೇ ಅಡುಕಿಲ್ಲದೆ ವಹಿಸಿಕೊಂಡ ಜವಾಬ್ದಾರಿಗಳನ್ನು ಪೂರ್ಣಗೊಳಿಸುವಿರಿ. ಎದುರಾಗುವ ಸೋಲನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಗೆಲ್ಲಲೇ ಬೇಕೆಂಬ ತೀರ್ಮಾನದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ತಂದೆ ತಾಯಿಯರ ಬಗ್ಗೆ ವಿಶೇಷ ಪ್ರೀತಿ ಗೌರವ ಇರುತ್ತದೆ. ಸಂಗಾತಿಯ ಸಹಾಯದಿಂದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸುವಿರಿ. ಉತ್ತಮ ಯೋಜನೆ ಇರದೆ ಕೆಲಸ ನಿರ್ವಹಿಸಿದರೆ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಕಳೆದು ಹೋದ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಮುಂದೂಡದೆ ಪೂರ್ಣಗೊಳಿಸುವುದು ನಿಮ್ಮಲ್ಲಿರುವ ವಿಶೇಷ ಗುಣ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಸಿಂಹ

ಎಷ್ಟೇ ಬುದ್ದಿವಂತಿಕೆ ಇದ್ದರೂ ಮನಸ್ಸಿನಲ್ಲಿ ಒಂದು ರೀತಿಯ ತಳಮಳವಿರುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಲಿಚ್ಚಿಸುವುದಿಲ್ಲ. ಹಣದ ವ್ಯವಹಾರದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿ. ಮಕ್ಕಳ ಮೇಲೆ ವಿಶೇಷವಾದಂತಹ ಪ್ರೀತಿ ಇರುತ್ತದೆ. ಅವರ ಆಸಕ್ತಿಯನ್ನು ಉಳಿಸಿಕೊಳ್ಳಲು ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಅನಾವಶ್ಯಕವಾದ ಒತ್ತಡದಿಂದ ಹೊರಬರಲು ಸಂಗೀತ ಮಾಧ್ಯಮವನ್ನು ಅವಲಂಬಿಸುವಿರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ಸಣ್ಣ ಪುಟ್ಟ ವಿಚಾರವಾದರೂ ಕುಟುಂಬದ ಜನರೊಂದಿಗೆ ಚರ್ಚಿಸಿ ನಂತರ ಮುಂದುವರೆಯುವಿರಿ. ನಿರುದ್ಯೋಗಿಗಳಿಗೆ ಆತ್ಮೀಯರ ಸಹಾಯದಿಂದ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಕಿತ್ತಳೆ ಬಣ್ಣ

ಕನ್ಯಾ

ದೈಹಿಕ ವ್ಯಾಯಾಮ ಮತ್ತು ಕಟ್ಟುನಿಟ್ಟಿನ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಗಳಿಸುವಿರಿ. ಹಣಕಾಸಿನ ಕೊರತೆ ಕಾಣುವುದಿಲ್ಲ. ಆದರೆ ಖರ್ಚು ವೆಚ್ಚಗಳನ್ನು ನಿಯಂತ್ರಿಸುವುದು ಸಾಧ್ಯವಾಗದ ಮಾತು. ಮನೆಯ ಹಿರಿಯರಿಂದ ಹಣವನ್ನು ಪಡೆಯುವಿರಿ. ನಿಮ್ಮ ಮನದಲ್ಲೇ ಇರುವ ಮಹಾತ್ವಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರುವಿರಿ. ಏಕಾಂಗಿಯಾಗಿ ಇರಲು ಇಷ್ಟಪಡುವುದಿಲ್ಲ. ಸದಾಕಾಲ ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ವೇಳೆ ಕಳೆಯಲು ಪ್ರಯತ್ನಿಸುವಿರಿ. ಸ್ನೇಹಿತರಿಗಾಗಿ ಯಾವುದೇ ಕೆಲಸವನ್ನು ಮಾಡಬಲ್ಲಿರಿ. ಸುತ್ತಮುತ್ತಲಿನ ಜನರನ್ನು ಆಕರ್ಷಿಸುವ ಬುದ್ದಿ ನಿಮಗಿರುತ್ತದೆ. ದಂಪತಿಗಳಲ್ಲಿ ಅನಾವಶ್ಯಕವಾದ ವಿವಾದಗಳು ಎದುರಾಗಲಿವೆ. ಸಂಪೂರ್ಣ ಯೋಚಿಸದೆ ಯಾವುದೇ ತೀರ್ಮಾನಕ್ಕೆ ಬರಬೇಡಿರಿ. ಬಿಡುವಿಲ್ಲದ ಕೆಲಸಗಳ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಳದಿ ಬಣ್ಣ

ತುಲಾ

ಮನದಲ್ಲಿರುವ ಅನಾವಶ್ಯಕ ಯೋಚನೆಗಳು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಅಮೂಲ್ಯವಾದ ವೇಳೆಯನ್ನು ಸದ್ಬಳಕೆ ಮಾಡಿಕೊಳ್ಳಿರಿ. ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪ್ರಯೋಜನವಿಲ್ಲದ ವಿಚಾರಗಳಿಗೆ ಹಣ ಖರ್ಚು ಮಾಡುವಿರಿ. ತಪ್ಪು ಮಾಡಿದ ನಂತರ ಪಶ್ಚಾತಾಪ ಪಡುವಿರಿ. ಮಕ್ಕಳ ತುಂಟಾಟದ ಕಾರಣ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ನೆಲೆಯೂರುತ್ತದೆ. ನಿಮ್ಮ ಕಾರ್ಯ ಸಾಧನೆಯಿಂದ ಪ್ರಶಸ್ತಿ ಒಂದನ್ನು ಗಳಿಸುವಿರಿ. ಆತ್ಮೀಯರಿಗೆ ಉಡುಗೊರೆ ಅಥವಾ ನೆನಪಿನ ಕಾಣಿಕೆ ನೀಡುವಿರಿ. ಸಂಗಾತಿಯ ಬಗ್ಗೆ ಉತ್ತಮ ಅಭಿಪ್ರಾಯ ಇರುತ್ತದೆ. ರುಚಿಕರವಾದ ಆಹಾರ ಸೇವಿಸಲು ಇಷ್ಟಪಡುವಿರಿ. ನಿಮಗೆ ಮಿಶ್ರ ಫಲಗಳು ದೊರೆಯಲಿವೆ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಸಿರು ಬಣ್ಣ

ವೃಶ್ಚಿಕ

ಕಹಿ ನೆನಪುಗಳನ್ನು ಮರೆತು ಎಲ್ಲರೊಂದಿಗೆ ಸಂತೋಷ ಸಂಭ್ರಮವನ್ನು ಹಂಚಿಕೊಳ್ಳುವಿರಿ. ಮಕ್ಕಳೊಂದಿಗೆ ಮನರಂಜನೆ ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿರಿ. ಆಧಾರವಿಲ್ಲದ ವರ್ತಮಾನಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅನಿರೀಕ್ಷಿತ ಆದಾಯದಿಂದ ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಉತ್ತಮ ಬಡನಾಟ ಇರುತ್ತದೆ. ಶಾಂತ ಸ್ವರೂಪಿಗಳಾದರು ಕೋಪದಿಂದ ವರ್ತಿಸುವಿರಿ. ಸೋಲಿನ ವೇಳೆ ಅಂಜದೆ ಕೋಪದಿಂದ ವರ್ತಿಸುವಿರಿ. ಆತ್ಮೀಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಧೂಳು ಅಥವಾ ನೀರಿನ ಮೂಲಕ ಸೋಂಕು ಉಂಟಾಗಬಹುದು. ಸ್ನೇಹಿತರೊಬ್ಬರ ಕೌಟುಂಬಿಕ ವಿವಾದವನ್ನು ಬಗೆಹರಿಸುವಿರಿ.

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಧನಸ್ಸು

ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಮನಸ್ಸಿರುತ್ತದೆ. ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಯಾಮಗಳಲ್ಲಿ ನಿರುತರಾಗುವಿರಿ. ಕ್ರೀಡಾಪಟುಗಳಿಗೆ ವಿಶೇಷ ಅನುಕೂಲಗಳು ದೊರೆಯಲಿವೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಸಂತಸದಿಂದ ಕಾಲ ಕಳೆಯುವಿರಿ. ನಿಮ್ಮ ಜವಾಬ್ದಾರಿಯನ್ನು ಯಾರಿಗೂ ವಹಿಸುವುದಿಲ್ಲ. ಯಾರನ್ನು ಸುಲಭವಾಗಿ ನಂಬದೇ ಸ್ವಂತ ಶಕ್ತಿಯನ್ನು ಮತ್ತು ಸ್ವಂತ ಬುದ್ಧಿಯನ್ನು ಅವಲಂಬಿಸುವಿರಿ. ವಂಶಾಧಾರಿತ ಉದ್ಯೋಗವನ್ನು ಆರಂಭಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆತಂಕವಿದ್ದರೂ ಹಿನ್ನೆಡೆ ಉಂಟಾಗುವುದಿಲ್ಲ. ಜನಸೇವೆ ಮಾಡುವ ಆಶಯವಿರುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ. ಬಹು ದೂರದ ಪ್ರದೇಶಕ್ಕೆ ಎಲ್ಲರೊಂದಿಗೆ ಪ್ರವಾಸ ಬೆಳೆಸುವಿರಿ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮಕರ

ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಹಣದ ಅವಶ್ಯಕತೆ ಎದುರಾಗಲಿದೆ. ಉತ್ತಮ ಅವಕಾಶ ಮತ್ತು ಹೆಚ್ಚಿನ ವೇತನದ ಕಾರಣ ಉದ್ಯೋಗವನ್ನು ಬದಲಿಸುವಿರಿ. ಸಂತೋಷ ಸಂಭ್ರಮ ಕುಟುಂಬದಲ್ಲಿ ಮನೆ ಮಾಡಲಿದೆ. ಸದಾಕಾಲ ಬದಲಾವಣೆಗಳನ್ನು ನಿರೀಕ್ಷಿಸುವ ನಿಮಗೆ ನಿರಾಸೆಯಾಗುವುದಿಲ್ಲ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗಾತಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಮಕ್ಕಳ ಬಗ್ಗೆ ತಪ್ಪು ಮಾಹಿತಿ ಬರಲಿದೆ. ಬೇರೆಯವರ ಬಗ್ಗೆ ಇದ್ದ ಅಪಪ್ರಚಾರವನ್ನು ಸರಿಪಡಿಸುವಿರಿ. ಹಣಕ್ಕಿಂತಲೂ ಪ್ರೀತಿ ವಿಶ್ವಾಸಕ್ಕೆ ಹೆಚ್ಚಿನ ಒತ್ತು ನೀಡುವಿರಿ. ವಾಹನ ಬದಲಾಯಿಸುವಿರಿ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕುಂಭ

ನಿಮ್ಮಿಂದ ಪ್ರತ್ಯುಪಕಾರ ಬಯಸದ ಸ್ನೇಹಿತರೊಬ್ಬರು ಸಹಾಯಕ್ಕೆ ಬರಲಿದ್ದಾರೆ. ನೀವಿರುವ ಕಡೆ ಸಂತೋಷಕ್ಕೆ ಕೊನೆ ಇರುವುದಿಲ್ಲ. ಕುಟುಂಬಕ್ಕೆ ಸಂಬಂಧಿಸಿದ ಭೂ ಹಗರಣ ಒಂದು ಸುಖಾಂತ್ಯಗೊಳ್ಳಲಿದೆ. ಮಕ್ಕಳ ಜವಾಬ್ದಾರಿಯುತ ನಡೆ ನುಡಿ ಜೀವನದಲ್ಲಿ ಹೊಸ ಭರವಸೆಯನ್ನು ಮೂಡಿಸಲಿವೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವಿರಿ. ಸ್ವಂತ ಸಾಮರ್ಥ್ಯದ ಮೇಲೆ ಹೆಚ್ಚಿನ ನಂಬಿಕೆ ಇರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯಲಿದೆ. ಕುಟುಂಬದಲ್ಲಿ ಭಾವನಾತ್ಮಕ ಸನ್ನಿವೇಶ ಎದುರಾಗಲಿದೆ. ಮಗಳ ಮದುವೆಯ ಸಿದ್ಧತೆ ನಡೆಸುವಿರಿ. ಅವಿರತ ಪ್ರಯತ್ನದಿಂದ ದೇಹದ ತೂಕವು ಕಡಿಮೆಯಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ಇರಲಿದೆ.

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಮೀನ

ಉತ್ತಮ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಬಹುತೇಕ ನಿಮ್ಮ ಮನಸ್ಸಿನ ದೊಡ್ಡ ಆಸೆಯೊಂದು ಇಂದು ಪೂರ್ಣಗೊಳ್ಳಲಿದೆ. ಸದಾ ಕುಟುಂಬದಲ್ಲಿ ಸಂತೋಷ ಸಂಭ್ರಮ ಇರಲಿದೆ. ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ನಿರ್ವಹಿಸಬಲ್ಲಿರಿ. ಕೆಲಸದ ಮತ್ತು ಜವಾಬ್ದಾರಿಯ ನಡುವೆ ಕುಟುಂಬದ ಸದಸ್ಯರ ಜೊತೆ ಸುದೀರ್ಘ ಪ್ರಯಾಣ ಮಾಡಲಿರುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರಗಳೇ ಅಂತಿಮವಾಗಲಿದೆ. ಕಷ್ಟಪಟ್ಟು ಉಳಿಸಿದ ಹಣವು ಇಂದು ಪ್ರಯೋಜನಕ್ಕೆ ಬರಲಿದೆ. ಮಕ್ಕಳಿಗಾಗಿ ಬೆಲೆಬಾಳುವ ಉಡುಗೊರೆಯನ್ನು ಖರೀದಿಸುವಿರಿ. ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಗೆಳೆಯರೊಂದಿಗೆ ಸಂತೋಷಕೂಟವನ್ನು ಆಯೋಜಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಬೂದು ಬಣ್ಣ

------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).