Tomorrow Horoscope: ಹಣದ ವಿವಾದದಲ್ಲಿ ಸಿಲುಕಬಹುದು ಎಚ್ಚರ, ವಾಹನ ಖರೀದಿ ಭಾಗ್ಯ ; ಗುರುವಾರದ ದಿನಭವಿಷ್ಯ
22 February 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಗುರುವಾರದ ದಿನಭವಿಷ್ಯ ಹೀಗಿದೆ..

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 22 February 2024)
ನಾಳಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಗುರುವಾರ
ತಿಥಿ : ತ್ರಯೋದಶಿ ತಿಥಿಯು ಹಗಲು 01.29 ರವರೆಗು ಇದ್ದು ಆನಂತರ ಚತುರ್ದಶಿ ಆರಂಭವಾಗುತ್ತದೆ.
ನಕ್ಷತ್ರ : ಪುಷ್ಯ ನಕ್ಷತ್ರವು ಸ.05.00 ವರೆಗು ಇರುತ್ತದೆ. ಆನಂತರ ಆಶ್ಲೇಷ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.40
ಸೂರ್ಯಾಸ್ತ: ಸ.06.23
ರಾಹುಕಾಲ : ಮ. 01.30ರಿಂದ ಮ. 03.00
ರಾಶಿ ಫಲಗಳು
ಮೇಷ
ಕ್ರಿಯಾಶೀಲರಾದ ನೀವು ಸಮಯವನ್ನು ವ್ಯರ್ಥಮಾಡದೇ ಕೆಲಸ ಕಾರ್ಯದಲ್ಲಿ ನಿರತರಾಗುವಿರಿ. ವಾದ ವಿವಾದಗಳನ್ನು ಇಷ್ಟ ಪಡುವುದಿಲ್ಲ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮದಾಗಲಿದೆ. ಸಹೋದ್ಯೋಗಿಗಳ ನಡುವೆ ವಿವಾದವೊಂದು ಉಂಟಾಗುತ್ತದೆ. ಯಂತ್ರ ಅಥವಾ ವಾಹನದಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಗೃಹಬಳಕೆಯ ಪದಾರ್ಥಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉನ್ನತದ ಅಧ್ಯಯನದ ಅವಕಾಶ ದೊರೆಯುತ್ತದೆ. ದುಡುಕಿ ಮಾತಿನಿಂದ ವಿವಾದ ಉಂಟಾಗುತ್ತದೆ. ನೆಮ್ಮದಿಯ ಜೀವನ ಇರುತ್ತದೆ.
ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಂದು ಬಣ್ಣ
ವೃಷಭ
ಬೇರೆಯವರ ಮಾತನ್ನು ಕೇಳದೆ ಜೀವನದಲ್ಲಿ ಮುಂದುವರಿಯುವಿರಿ. ನಿಮ್ಮಲಿನ ಅಸಹಕಾರ ಕುಟುಂಬದಲ್ಲಿ ಬೇಸರ ನಿರ್ಮಾಣವಾಗುತ್ತದೆ. ಉದ್ಯೋಗದಲ್ಲಿನ ತೊಂದರೆ ಮರೆಯಾಗಿ ಆತ್ಮವಿಶ್ವಾಸ ಮೂಡುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಸೋದರನ ಭೂವಿವಾದವು ಕೊನೆಗೊಳ್ಳಲು ಕಾರಣರಾ. ವಾಣಿಜ್ಯ ಸಂಸ್ಥೆಯೊಂದರ ಚುಕ್ಕಾಣಿ ಹಿಡಿಯುವಿರಿ. ವಿದ್ಯಾರ್ಥಿಗಳು ಮನಸ್ಸನ್ನು ಬದಲಾಯಿಸದೇ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಮನೆಗೆ ಸಂಬಂಧಿಸಿದ ಹೊಸ ಪರಿಕರಿಗಾಗಿ ಹೆಚ್ಚಿನ ಹಣ ಖರ್ಚುಮಾಡುವಿರಿ. ಮನೆತನಕ್ಕೆ ಸೇರಿದ ಹಳೆಯ ಮನೆಯಲ್ಲಿ ನೆಲೆಸಲು ಇಷ್ಟ ಪಡುವಿರಿ. ಹಿಂದಿನ ಪರಂಪರೆಯನ್ನು ಉಳಿಸುವ ಕೆಲಸಗಳನ್ನು ಮಾಡುವಿರಿ.
ಪರಿಹಾರ : ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ : ಕಪ್ಪು ಬಣ್ಣ
ಮಿಥುನ
ದೃಡವಾದ ತೀರ್ಮಾನಗಳಿಂದ ಕುಟುಂಬಲ್ಲಿ ನೆಮ್ಮದಿ ಇರುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಆರಂಭದಲ್ಲಿ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಹನೆ ಕಳೆದುಕೊಂಡು ಹೊಸ ಕೆಲಸ ಆರಂಭಿಸುವಿರಿ. ವಾಸಸ್ಥಳವನ್ನು ಬದಲಿಸುವಿರಿ. ಸಮಯ ಹೊಂದಾಣಿಕೆಯ ವೇಳೆ ಸ್ವಾರ್ಥದ ಗುಣ ಪ್ರದರ್ಶಿಸುವಿರಿ. ಉದ್ಯೋಗದಲ್ಲಿ ನಿರಾಳ ಮನೋಭಾವ ಇರುತ್ತದೆ. ಅನುಕೂಲಕ್ಕೆ ತಕ್ಕಂತೆ ಮನಸ್ಸನ್ನು ಬದಲಾಯಿಸಬಲ್ಲಿರಿ. ವಿದ್ಯಾರ್ಥಿಗಳಿಗೆ ನಾಯಕನ ಸ್ಥಾನ ಮಾನ ದೊರೆಯುತ್ತದೆ. ಕಣ್ಣಿನ ದೋಷ ಇರುತ್ತದೆ. ಸೋದರರ ಜೊತೆಯಲ್ಲಿ ಸಣ್ಣಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಚಿಕ್ಕ ಪುಟ್ಟ ತಪ್ಪುಗಳನ್ನೂ ದೊಡ್ಡವಿವಾದವನ್ನಾಗಿ ಮಾಡುವಿರಿ.
ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ
ಕಟಕ
ಆತ್ಮಸ್ಥೈರ್ಯದಿಂದ ದೈನಂದಿನ ಕೆಲಸದಲ್ಲಿ ಮುಂದುವರೆಯಿರಿ. ಜವಾಬ್ದಾರಿಯು ದೊಡ್ಡದಾದರೂ ಅಳುಕುಭಾವನೆ ಬೇಡ. ಆದರೆ ಚಿಕ್ಕ ಪುಟ್ಟ ಕೆಲಸಗಳಿಗೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬೇಕು. ಉದ್ಯೋಗದಲ್ಲಿ ನಿಮ್ಮ ಅವಶ್ಯಕತೆ ಬಹಳಷ್ಟಿದೆ. ಆತುರದಿಂದ ಹಣದ ವಿವಾದದಲ್ಲಿ ಸಿಲುಕಬಹುದು ಜಾಗ್ರತೆ ಇರಲಿ. ಹೆಚ್ಚಿನ ನಿರೀಕ್ಷೆ ಇರುವ ಕಾರಣ ವೃತ್ತಿ ಬದಲಾವಣೆ ಮಾಡುವಿರಿ. ಆತುರದಲ್ಲಿ ವಿವೇಚನೆ ಇಲ್ಲದೆ ಮಾತನಾಡುವಿರಿ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಛಾಯಾಚಿತ್ರಕಲೆಯನ್ನು ಬಲ್ಲವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಅಧಿಕಾರ ದೊರೆಯುತ್ತದೆ. ಸೋದರನಿಗೆ ವಾಹನದಿಂದ ತೊಂದರೆ ಆಗಬಹುದು. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಸಿಂಹ
ಗೆಲುವನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುವಿರಿ. ಅತಿಯಾದ ಸಿಡುಕುತನ ಕುಂಟುಂಬದ ಶಾಂತಿಯನ್ನು ಕದಡುತ್ತದೆ. ಉದ್ಯೋಗದಲ್ಲಿ ಜವಾಬ್ದಾರಿಯತ ಸ್ಥಾನ ಲಭ್ಯವಾಗಲಿದೆ. ಉತ್ತಮ ಅವಕಾಶ ದೊರೆತು ವೃತ್ತಿಯನ್ನು ಬದಲಾಯಿಸುವಿರಿ. ಉಪಯೋಗಿಸಿದ ವಾಹನಗಳ ಮಾರಾಟದಲ್ಲಿ ಲಾಭವಿದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಕುಟುಂಬದ ಐಕ್ಯತೆಗಾಗಿ ದುಡಿಯುವಿರಿ. ಜೀವನದ ನಿರ್ವಹಣೆಗಾಗಿ ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಬಿಡುವಿಲ್ಲದ ಕೆಲಸ ಇರುತ್ತದೆ. ಹೆಚ್ಚಿದ ಜವಾಬ್ದಾರಿ ನೆಮ್ಮದಿಯಿಲ್ಲದಂತೆ ಮಾಡುತ್ತದೆ. ಅನಾರೋಗ್ಯವಿರುತ್ತದೆ. ವೃಥಾತಿರುಗಾಟ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಮಾನ ದೊರೆಯುತ್ತದೆ. ಬೇರೆಯವರಿಂದ ಹಣವನ್ನು ಪಡೆಯದಿರಿ.
ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ
ಕನ್ಯಾ
ಕುಟುಂಬದ ಭೂವಿವಾದವನ್ನು ಪರಿಹರಿಸಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ತಂದೆಯ ವಿರೋಧ ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರಮುಖ ಜವಾಬ್ದಾರಿಯನ್ನು ಪೂರೈಸುವಿರಿ. ಹಿರಿಯ ಸೋದರನ ಪಾಲುಗಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಮನೆಯ ಹೆಣ್ಣುಮಗಳ ವಿವಾಹದ ಮಾತುಕತೆ ನಡೆಯುತ್ತದೆ. ತಾಯಿಯವರ ಆರೋಗ್ಯದ ಬಗ್ಗೆ ಗಮನ ಇರಲಿ. ದೇಶ ವಿದೇಶಗಳನ್ನು ಸುತ್ತುವ ಯೋಚನೆ ಮಾಡುವಿರಿ. ಹಣದ ವಿಚಾರದಲ್ಲಿ ತೊಂದರೆ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಹಣ ಕಾಸಿನ ವ್ಯವಹಾರದಲ್ಲಿ ಹಿರಿಯರ ಸಲಹೆಯನ್ನು ಪಡೆಯಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ತುಲಾ
ತೆಗೆದುಕೊಂಡ ನಿರ್ಧಾರಗಳನ್ನು ಒತ್ತಡಕ್ಕೆ ಮಣಿದು ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ಯಾವುದೇ ತಾರತಮ್ಯ ತೋರದೆ ಕರ್ತವ್ಯಕ್ಕೆ ಬದ್ದರಾಗುವಿರಿ. ವಿದ್ಯಾರ್ಥಿಗಳು ಆತ್ಮಾಭಿಮಾನದಿಂದ ಕಲಿಕೆಯಲ್ಲಿ ಮುಂದುವರಿಯುವರು. ಕಷ್ಟದ ದಿನಗಳ ಮರೆತು ಸಂತಸದಿಂದ ಬಾಳುವಿರಿ. ಒಳ್ಳೆಯ ಕೆಲಸಗಳಿಗೆ ಧನ ಸಹಾಯ ಮಾಡುವಿರಿ. ಯಾವುದೇ ಕೆಲಸವಾಗಲಿ ಗೌರವದಿಂದ ನೋಡುವಿರಿ. ಹೆಚ್ಚಿನ ಪ್ರಯತ್ನದಿಂದ ಜೀವನದ ಸಮಸ್ಯೆಯೊಂದನ್ನು ಬಗೆಹರಿಸುವಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಬಹುದು. ಬಂಧುಗಳ ಜೊತೆಯಲ್ಲಿ ಹಣದ ವಿವಾದ ಉಂಟಾಗುತ್ತದೆ. ಭೂವಿಚಾರದಲ್ಲಿ ಲೆಕ್ಕ ಪತ್ರವನ್ನು ಸರಿಯಾಗಿ ಪರಿಶೀಲಿಸಿ. ಸಾರ್ವಜನಿಕರ ಸೇವೆಯಲ್ಲಿ ನಿರತರಾಗುವಿರಿ.
ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ವೃಶ್ಚಿಕ
ಗೆಲ್ಲುವ ಛಲದಿಂದಲೇ ದಿನವನ್ನು ಆರಂಭಿಸುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗುವಿರಿ. ಉತ್ತಮ ಅವಕಾಶ ದೊರೆತರೂ ಉದ್ಯೋಗವನ್ನು ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ವಿರೋಧ ಉಂಟಾದರೂ ಸುರಕ್ಷಿತರಾಗುವಿರಿ. ಶ್ರಮದ ಕಾಲದಲ್ಲಿ ಆತ್ಮೀಯರ ಸಲಹೆ ದೊರೆಯುತ್ತದೆ. ದುಡುಕಿನ ಮಾತುಕತೆ ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತದೆ. ವಿದ್ಯಾರ್ಥಿಗಳು ಪ್ರಯಾಸದಿಂದ ಕಲಿಕೆಯಲ್ಲಿ ಮುಂದುವರಿಯುತ್ತಾರೆ. ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ಹಠದ ಗುಣ ಇರದು. ಉಷ್ಣವಾಯುವಿನ ದೋಷ ಇರುತ್ತದೆ. ಸಂಗಾತಿಯ ಸಹಾಯದಿಂದ ವೈಭವಯುತ ಜೀವನ ನಡೆಸುವಿರಿ. ಅನಿರೀಕ್ಷಿತ ಧನಲಾಭ ಇರುತ್ತದೆ. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ.
ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ
ಧನಸ್ಸು
ಕುಟುಂಬದಲ್ಲಿ ಪರಸ್ಪರ ಅವಲಂಬನೆ ಇರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ನಡುವೆ ಉತ್ತಮ ಸಾಮರಸ್ಯ ಇರುತ್ತದೆ. ಹಣದ ಕೊರೆತೆ ಇರದು. ಅನಿರೀಕ್ಷಿತ ಧನಲಾಭವಿದೆ. ಐಷಾರಾಮಿ ವಾಹನ ಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಧುನಿಕ ತಂತ್ರಜ್ಞಾನವನ್ನು ಆಧರಿಸಿದ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕುಟುಂಬದ ವಿವಾಹವು ಮುಂದೂಡಲ್ಪಡುತ್ತದೆ. ಮನದಲ್ಲಿ ಬೇಸರವಿರುತ್ತದೆ. ತಂದೆಗೆ ಸಂಬಧಿಸಿದ ವ್ಯಾಪಾರ ಮಂದುವರೆಯುತ್ತದೆ. ಕಮೀಷನ್ ಆಧಾರಿತ ಉದ್ಯೋಗ ಅಥವಾ ವ್ಯಾಪಾರ ಲಾಭದಾಯಕ. ಕ್ರೀಡಾ ಸ್ಪರ್ಧಿಗಳಿಗೆ ಅವಕಾಶಗಳು ದೊರೆಯುತ್ತವೆ.
ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ರಕ್ತದ ಬಣ್ಣ
ಮಕರ
ಕುಟುಂಬದ ಜಮೀನನ್ನು ಮಾರಾಟ ಮಾಡಿ ಹೊಸ ಮನೆಯನ್ನು ಕೊಳ್ಳುವಿರಿ. ಕುಟುಂಬದಲ್ಲಿ ಒತ್ತಡವಿರುತ್ತದೆ. ವಿದೇಶದಲ್ಲಿ ಉದ್ಯೋಗ ದೊರೆವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತೊಂದರೆ ಕಾಣದು. ವಿದ್ಯಾರ್ಥಿಗಳು ಸಮಯವರ್ಥಮಾಡದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸಂಗಾತಿಯ ಜೊತೆಯಲ್ಲಿ ಹೋಟೆಲ್ ವ್ಯಾಪಾರವನ್ನು ಆರಂಭಿಸುವಿರಿ. ಭೂವಿವಾದವೊಂದು ಇರುತ್ತದೆ. ಖ್ಯಾತ ವಿಧ್ಯಾಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ಲಭಿಸುತ್ತದೆ. ಸೋದರಿಯ ಜೀವನದಲ್ಲಿ ವಿರಸದ ಸನ್ನಿವೇಶ ಎದುರಾಗುತ್ತದೆ. ಹಣದ ಕೊರತೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅತಿಯಾದ ನಿದ್ದೆ ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ.
ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಎಲೆಹಸಿರುಬಣ್ಣ
ಕುಂಭ
ಕುಟುಂಬದಲ್ಲಿ ಅನಿರೀಕ್ಷಿತ ಬದಲಾವಣೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆ ಹುಸಿ ಆಗಬಹುದು. ವ್ಯಾಪಾರ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ವ್ಯಾಸಂಗ ಮಾಡುವುದು ಉಪಯುಕ್ತ. ಹಣಕಾಸಿನ ಕೊರತೆ ಕಂಡುಬರದು. ಪರಸ್ಥಳದಲ್ಲಿ ಅಭಿವೃದ್ದಿ ಇರುತ್ತದೆ. ಹಣಕಾಸಿನ ವಿವಾದಗಳಲ್ಲಿ ಮಧ್ಯವರ್ತಿಯಾಗಿ ಹಣವನ್ನು ಗಳಿಸುವಿರಿ. ಸ್ವಂತ ಬಳಕೆಗಾಗಿ ವಾಹನವನ್ನು ಕೊಳ್ಳುವಿರಿ. ಗಣ್ಯವ್ಯಕ್ತಿಗಳ ಸಹಾಯದಿಂದ ಜನೋಪಕಾರಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಪಾಲುಗಾರಿಕೆ ವ್ಯಾಪಾರ ಒಳ್ಳೆಯದಲ್ಲ. ನಿಯಮಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಲಭಿಸುತ್ತದೆ.
ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಮೀನ
ಶುದ್ದವಾದ ಮನಸ್ಸಿರುತ್ತದೆ. ಎಲ್ಲರ ಜೊತೆಯಲ್ಲಿ ಆತ್ಮೀಯತೆಯಿಂದ ನಡೆದುಕೊಳ್ಳುವಿರಿ. ಕುಟುಂಬದಲ್ಲಿ ಪ್ರೀತಿ ಮಮತೆ ತುಂಬಿರುತ್ತದೆ. ಉದ್ಯೋಗದಲ್ಲಿ ಯಾವುದೆ ಬದಲಾವಣೆಗಳು ಕಾಣುವುದಿಲ್ಲ. ಹಣಕಾಸಿನ ತೊಂದರೆ ಬಾರದು. ವ್ಯಾಪಾರ ವ್ಯವಹಾರಗಳು ಕೇವಲ ಹವ್ಯಾಸಕ್ಕಾಗಿ ಮಾಡುವಿರಿ. ವಿದ್ಯಾರ್ಥಿಗಳು ಸಮಯಕ್ಕೆ ಹೊಂದಿಕೊಂಡು ಮುಂದುವರೆಯುವರು. ಮನಸ್ಸಿನ ಸಂತೋಷವನ್ನು ಉಳಿಸಿಕೊಳ್ಳಲು ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಜಲಚರಗಳನ್ನು ಸಾಕುವ ಆಸೆ ಉಂಟಾಗಲಿದೆ ಮುಂದಾಲೋಚನೆಯಿಂದ ಹಣ ಉಳಿಸಲು ಯೋಜನೆಯನ್ನು ರೂಪಿಸುವಿರಿ. ಶೀತದ ತೊಂದರೆ ಕಾಡುತ್ತದೆ. ಯೋಗ ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.
ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಬೂದು ಬಣ್ಣ
------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
