ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಕುಟುಂಬ ಸದಸ್ಯರ ಜೊತೆ ಅನಗತ್ಯ ವಾದ, ಉದ್ಯೋಗದಲ್ಲಿ ಉನ್ನತ ಅಧಿಕಾರ: ಬುಧವಾರದ ರಾಶಿಭವಿಷ್ಯ

Tomorrow Horoscope: ಕುಟುಂಬ ಸದಸ್ಯರ ಜೊತೆ ಅನಗತ್ಯ ವಾದ, ಉದ್ಯೋಗದಲ್ಲಿ ಉನ್ನತ ಅಧಿಕಾರ: ಬುಧವಾರದ ರಾಶಿಭವಿಷ್ಯ

22nd November 2023 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಬುಧವಾರದ ದಿನಭವಿಷ್ಯ ಹೀಗಿದೆ..

ದಿನಭವಿಷ್ಯ
ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 22 November 2023 )

ನಾಳೆಯ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ಬುಧವಾರ

ತಿಥಿ : ದಶಮಿ ರಾ.10.22 ರವರೆಗೆ ಇರಲಿದ್ದು ಆನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ : ಪೂರ್ವಾಭಾದ್ರ ನಕ್ಷತ್ರವು ಸ.06.47 ರವರೆಗೂ ಇರುತ್ತದೆ. ಆನಂತರ ಉತ್ತರಾಭಾದ್ರ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.20

ಸೂರ್ಯಾಸ್ತ: ಸ.05.50

ರಾಹುಕಾಲ : ಮ.12.00 ರಿಂದ ಮ.01.30

ರಾಶಿ ಫಲಗಳು

ಮೇಷ

ಹಾಸ್ಯದ ಮನೋಭಾವ ಕುಟುಂಬದಲ್ಲಿ ಸಂತಸವನ್ನು ಉಳಿಸುತ್ತದೆ. ಉದ್ಯೋಗದಲ್ಲಿ ಬಹುದಿನದಿಂದ ನಿರೀಕ್ಷಿಸಿದ ಬದಲಾವಣೆಯು ಕಂಡುಬರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆರ್ಥಿಕ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಕ್ರೀಡಾಮನೋಭಾವನೆಯಿಂದ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುತ್ತಾರೆ. ಕುಟುಂಬದ ಭೂ ವಿವಾದವೊಂದು ಬಗೆಹರಿಯಲಿದೆ. ಬಂಧು ಬಳಗದವರು ನಿಮ್ಮ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮುಂಗೋಪವನ್ನು ಕಡಿಮೆ ಮಾಡಿಕೊಂಡಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಸಂಗಾತಿಯ ದುಡುಕಿನ ಮಾತು ಸಂದಿಗ್ದತೆಗೆ ಕಾರಣವಾಗುತ್ತದೆ.

ಪರಿಹಾರ: ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಸಿಹಿ ತಿನಿಸನ್ನು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ವೃಷಭ

ಕುಟುಂಬದ ಕೆಲಸ ಕಾರ್ಯಗಳನ್ನು ಏಕಾಂಗಿಯಾಗಿ ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಾಣದೆ ಹೋದರೂ ಸಮಸ್ಯೆ ಇರದು. ಒಂದೇ ರೀತಿಯ ಕೆಲಸ ಬೇಸರ ಮೂಡಿಸುತ್ತದೆ. ಕರ್ತವ್ಯದ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆಕಾಣದು. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ವಿದೇಶಿ ಕಂಪನಿಯೊಂದರ ಸಹಭಾಗಿತ್ವ ದೊರೆವ ಸೂಚನೆಗಳಿವೆ. ಸಾರ್ವಜನಿಕ ಸಮಾರಂಭದ ಮುಖ್ಯಸ್ಥಾನವನ್ನು ಅಲಂಕರಿಸುವಿರಿ. ತಪ್ಪನ್ನು ಕ್ಷಮಿಸುವ ದೊಡ್ಡತನ ತೋರುವಿರಿ.

ಪರಿಹಾರ : ಮನೆ ಮುಂದಿನ ಗುಂಡಿಗಳನ್ನು ಮುಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ, ಕಿತ್ತಳೆ ಬಣ್ಣ

ಮಿಥುನ

ಕುಟುಂಬದಲ್ಲಿ ಅಚ್ಚರಿಯ ತಿರುವುಗಳು ಕಂಡುಬರುತ್ತವೆ. ಚಿಕ್ಕ ಪುಟ್ಟ ವಿಚಾರಗಳನ್ನು ಸಹ ಮನಸ್ಸಿಟ್ಟು ಪರಿಶೀಲಿಸುವಿರಿ. ಆನಂದದಿಂದ ದಿನ ಕಳೆಯುವಿರಿ. ಉದ್ಯೋಗದಲ್ಲಿ ಆರಂಭದಲ್ಲಿ ಕೆಲಸದ ಒತ್ತಡ ಎದುರಾಗುತ್ತದೆ. ಉತ್ತಮ ಆದಾಯ ಇರುತ್ತದೆ. ಮನಸ್ಸಿಗೆ ಮುದ ನೀಡುವ ಒಡವೆ ವಸ್ತ್ರವನ್ನು ಕೊಳ್ಳುವಿರಿ. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ ಇರುತ್ತದೆ. ಹಣ ಉಳಿಸಲು ಹೊಸ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸುವಿರಿ. ಸಮಯದ ಅಭಾವದಿಂದ ಕೆಲವು ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಆಹಾರ ಸೇವನೆಯ ವಿಚಾರದಲ್ಲಿ ಶುಚಿ ಇರಲಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕಂದು

ಕಟಕ

ಕುಟುಂಬದಲ್ಲಿ ಹತಾಶ ಮನೋಭಾವನೆ ಇರುತ್ತದೆ. ಹಿರಿಯರ ಸಲಹೆ ಸೂಚನೆಯನ್ನು ಅವಗಾಹನೆಗೆ ತೆಗೆದುಕೊಳ್ಳಿರಿ. ಉದ್ಯೋಗದಲ್ಲಿ ಸಮಾಧಾನಕರ ಫಲಿತಾಂಶ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಒತ್ತಡಕ್ಕೆ ಒಳಗಾಗದೆ ಕೆಲಸ ನಿರ್ವಹಿಸಿ. ವಿದ್ಯಾರ್ಥಿಗಳು ಸಂಪೂರ್ಣವಾಗಿ ಸಹಪಾಠಿಗಳ ಅಥವಾ ಶಿಕ್ಷಕರನ್ನು ಅವಲಂಬಿಸಿರುತ್ತಾರೆ. ಉತ್ತಮ ಆದಾಯವಿದ್ದರೂ ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರುವುದಿಲ್ಲ. ಕುಟುಂಬದ ಸದಸ್ಯರಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ. ಪ್ರೀತಿ ವಿಶ್ವಾಸದಿಂದ ನಡೆದುಕೊಂಡಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಪರಿಹಾರ : ಅರಳಿ ಮರಕ್ಕೆ ನೀರನ್ನು ಎರೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಕಪ್ಪು

ಸಿಂಹ

ನಿಷ್ಪಕ್ಷಪಾತದ ವರ್ತನೆಯಿಂದ ಕುಟುಂಬದ ಹಣಕಾಸಿನ ವಿವಾದ ಬಗೆಹರಿಯುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಯೋಚಿಸದೆ ಹಣಕಾಸಿನ ವ್ಯವಹಾರದಲ್ಲಿ ತೊಡಗದಿರಿ. ವ್ಯಾಪಾರ ವ್ಯವಹಾರದಲ್ಲಿ ಏಕಸ್ಮಾಮ್ಯತೆ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ವಯಸ್ಸಿನ ಜನರ ನಡುವೆ ನಾಯಕರಾಗಿ ಬಾಳುತ್ತಾರೆ. ದಿನಾಂತ್ಯಕ್ಕೆ ಹಣದ ಕೊರತೆ ಕಂಡು ಬರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯುತ್ತದೆ. ಮನ ಬಿಚ್ಚಿ ಮಾತನಾಡಿದರೆ ಅನೇಕ ಸಮಸ್ಯೆಗಳು ಕೊನೆಗೊಳ್ಳುವುವು. ಸುಲಭವಾಗಿ ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಮಕ್ಕಳೊಂದಿಗೆ ಸಂತಸದಿಂದ ಸಮಯ ಕಳೆಯುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಕಲ್ಲುಸಕ್ಕರೆ, ಬಾದಾಮಿ ನೀಡೆ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕನ್ಯಾ

ನಗು ಮೊಗದಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಉಂಟು ಮಾಡುವಿರಿ. ಉದ್ಯೋಗದಲ್ಲಿ ಸೋಲು ಗೆಲುವು, ಸ್ನೇಹ ವಿಶ್ವಾಸ ಸರಿ ಸಮಾನವಾಗಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನ ಲಾಭ ಇರುತ್ತದೆ. ವಿದ್ಯಾರ್ಥಿಗಳು ಟೀಕೆಯ ಮನೋಭಾವನೆಯನ್ನು ಬಿಡಬೇಕು. ದಿಡೀರನೆ ಹಣದ ತೊಂದರೆ ಉಂಟಾಗಬಹುದು. ಗುರು ಹಿರಿಯರ ಕೆಲಸ ಕಾರ್ಯಗಳಿಗೆ ನೆರವಾಗುವಿರಿ. ತೆರೆಮರೆಯಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ವಾದ ವಿವಾದ ಸಾಮಾನ್ಯ ವಾಗಿರುತ್ತದೆ ಕುಟುಂಬದ ಜವಾಬ್ದಾರಿಯನ್ನು ಎಲ್ಲರೊಡನೆ ಹಂಚಿಕೊಳ್ಳುವಿರಿ.

ಪರಿಹಾರ : ಜಪ ಸರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ

ತುಲಾ

ಕುಟುಂಬದಲ್ಲಿ ಪ್ರತಿಯೊಬ್ಬರು ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಚರ್ಚೆ ಪ್ರತಿಚರ್ಚೆಯಲ್ಲಿ ತೊಡಗುತ್ತಾರೆ. ದೃಢವಾಗಿ ಕುಟುಂಬದ ವಿಚಾರದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಅಸಮರ್ಥರಾಗುವಿರಿ. ಉದ್ಯೋಗದಲ್ಲಿ ಕೆಲಸ ಕಾರ್ಯಗಳು ತಡೆಯಿಲ್ಲದೆ ನಡೆಯಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಆತ್ಮೀಯರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಮುಂದುವರೆಯುತ್ತಾರೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಹಣ ಗಳಿಸುವಿರಿ. ಆಡುವ ಮಾತಿಗೆ ಎಲ್ಲರೂ ಮೋಡಿಗೆ ಒಳಗಾಗುತ್ತಾರೆ. ಪಾಲುದಾರಿಕೆಯ ವ್ಯಾಪಾರ ವ್ಯವಹಾರ ಲಾಭದಾಯಕ. ಸಾಲದ ವ್ಯವಹಾರದಲ್ಲಿ ತೊಂದರೆ ಇದೆ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು

ವೃಶ್ಚಿಕ

ತಪ್ಪು ಒಪ್ಪುಗಳನ್ನು ಅರಿತುಕೊಂಡು ಮುನ್ನಡೆಯುವಿರಿ. ಕುಟುಂಬದ ಮುಖ್ಯವಾದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಆಗಂತುಕರ ಪರೋಕ್ಷ ಸಹಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅರೆ ಮನಸ್ಸಿನ ತೀರ್ಮಾನಗಳನ್ನು ತೆಗೆದುಕೊಳ್ಳದಿರಿ. ವಿದ್ಯಾರ್ಥಿಗಳು ಹಠದ ಸ್ವಭಾವದಿಂದ ಕಲಿಕೆಯಲ್ಲಿ ಮುಂದಿರುತ್ತಾರೆ. ವಾಸ ಸ್ಥಳವನ್ನು ಬದಲಿಸುವಿರಿ. ಮೌನವಾಗಿದ್ದಷ್ಟೂ ಜೀವನ ಸುಖಮಯವಾಗಿರುತ್ತದೆ. ಸಮಯವನ್ನು ಆತ್ಮೀಯರ ಜೊತೆಯಲ್ಲಿ ದಿನ ಕಳೆಯುವಿರಿ. ಉದ್ಯೋಗದ ವಿಚಾರವಾಗಿ ಪರಸ್ಥಳಕ್ಕೆ ತೆರಳ ಬೇಕಾಗುತ್ತದೆ. ವಿವಾಹದ ಮಾತುಕತೆಯಲ್ಲಿ ಯಶಸ್ಸು ಲಭಿಸುತ್ತದೆ. ಹಾಸ್ಯ ಮನೋಭಾವನೆಯಿಂದ ಕ್ರಿಷ್ಟಕರ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಹಾಲು ಮೊಸರನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಧನಸ್ಸು

ಕುಟುಂಬದಲ್ಲಿ ಹೊಸಬರ ಆಗಮನದಿಂದ ಸಂತೋಷ ನೆಲೆಸಿರುತ್ತದೆ. ಆತ್ಮಸ್ಥೈರ್ಯದಿಂದ ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸ ಚೈತನ್ಯದಾಯಕವಾಗಿರುತ್ತದೆ. ತೆಗೆದುಕೊಂಡ ನಿರ್ಧಾರಗಳಿಗೆ ಬದ್ಧರಾಗಿರಿ. ಕ್ರಮೇಣವಾಗಿ ಆರೋಗ್ಯವು ಸಹಜತೆಗೆ ಮರಳುವುದು. ಕುಟುಂಬದ ಹಿರಿಯರೊಬ್ಬರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಊಹೆಗೂ ಮೀರಿದ ಖರ್ಚು ವೆಚ್ಚಗಳು ಮಾನಸಿಕ ವ್ಯಥೆಗೆ ಕಾರಣವಾಗುತ್ತದೆ. ಕಲಾವಿದರಿಗೆ ಅಪರೂಪದ ಅವಕಾಶ ದೊರೆಯುತ್ತದೆ. ಮನೆಯನ್ನು ಅಲಂಕರಿಸಲು ಸುಂದರವಾದ ವಸ್ತುಗಳನ್ನು ಕೊಳ್ಳುವಿರಿ. ಆತ್ಮೀಯರಿಂದ ಉಡುಗೊರೆ ದೊರೆಯುವುದು.

ಪರಿಹಾರ : ತಲೆಗೆ ಹಾಲನ್ನಿಟ್ಟು ಸ್ನಾನ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಮಕರ

ಕುಟುಂಬದಲ್ಲಿ ಹಿರಿಯರ ಒತ್ತಡದ ಮಾತು ಬೇಸರವನ್ನು ಮೂಡಿಸುತ್ತದೆ. ಉದ್ಯೋಗದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಕೀಳರಿಮೆ ಇರದ ಕಾರಣ ಎಲ್ಲರ ವಿಶ್ವಾಸ ಗಳಿಸುವಿರಿ. ವಿದ್ಯಾರ್ಥಿಗಳು ಕಷ್ಟಪಟ್ಟು ಎಲ್ಲರೂ ಗಮನ ಸೆಳೆವ ಸಾಧನೆ ಮಾಡುವರು. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಹಿರಿಯ ಸೋದರ ಅಥವಾ ಸೋದರಿಯಿಂದ ಹಣದ ಸಹಾಯ ದೊರೆಯುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕುಂಭ

ಸಂಗಾತಿಯ ಮನಸ್ಸಿಗೆ ಬೇಸರ ಮೂಡಿಸುವ ವಾತಾವರಣವಿರುತ್ತದೆ. ಕುಟುಂಬದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಲಿವೆ. ಉದ್ಯೋಗದಲ್ಲಿ ಅತಿ ಮುಖ್ಯ ವಿಚಾರಗಳನ್ನು ರಹಸ್ಯವಾಗಿ ಇಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕಂತಹ ಆದಾಯ ದೊರೆಯುತ್ತದೆ. ಇಂದಿನ ಜೀವನ ಆಡುವ ಮಾತಿನ ಮೇಲೆ ಅವಲಂಬಿತವಾಗಿರುತ್ತದೆ. ವಿದ್ಯಾರ್ತಿಗಳು ಅನಾವಶ್ಯಕವಾಗಿ ಶಾಂತಿ ಕದಡುವ ಕೆಲಸ ಮಾಡುತ್ತಾರೆ. ಪೋಷಕರ ಸಹಾಯ ಮಕ್ಕಳಿಗೆ ಹೊಸ ಭವಿಷ್ಯ ರೂಪಿಸುತ್ತದೆ. ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಕೆಲಸ ಒಂದನ್ನು ಆರಂಭಿಸುವಿರಿ. ಮಕ್ಕಳೊಂದಿಗೆ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ.

ಪರಿಹಾರ : ಮನೆಯಲ್ಲಿನ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ ಮಿಶ್ರಿತ ನೀಲಿ ಬಣ್ಣ

ಮೀನ

ಆತ್ಮೀಯರ ಸಹಾಯದಿಂದ ಕುಟುಂಬದ ನಿರೀಕ್ಷೆಯೊಂದು ಕೈಗೂಡುತ್ತದೆ. ಕುಟುಂಬದ ಹಿರಿಯರ ಸಹಾಯದಿಂದ ಹಣದ ಕೊರತೆ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ಪ್ರೀತಿ ವಿಶ್ವಾಸದ ಮಾತಿನಿಂದ ಕೆಲಸ ಸಾಧಿಸುವಿರಿ. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಮೂಡುತ್ತದೆ. ಅವಿವಾಹಿತರಿಗೆ ವಿವಾಹದ ಮಾತುಕತೆ ಆಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಸರ್ವಾಧಿಕಾರಿಯ ಧೋರಣೆಯಿಂದ ತೊಂದರೆಯನ್ನು ಎದುರಿಸುವಿರಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಸಿನಿಂದ ಅಭ್ಯಾಸದಲ್ಲಿ ನಿರತರಾಗಬೇಕು. ಕೃಷಿ ಭೂಮಿಯನ್ನು ಕೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

------------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ