Tomorrow Horoscope: ಆತ್ಮೀಯರಿಗೆ ನೀಡಿದ್ದ ಹಣ ಮರಳಿ ಕೈಸೇರುತ್ತದೆ, ಆದಾಯದಲ್ಲಿ ಸ್ಥಿರತೆ; ಶನಿವಾರದ ದಿನಭವಿಷ್ಯ
23 March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಶನಿವಾರದ ದಿನಭವಿಷ್ಯ ಹೀಗಿದೆ..
![ಶನಿವಾರದ ದಿನಭವಿಷ್ಯ ಶನಿವಾರದ ದಿನಭವಿಷ್ಯ](https://images.hindustantimes.com/kannada/img/2024/03/22/550x309/tomorrow_1711108390648_1711108398474.jpg)
ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 23 March 2024)
ನಾಳಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಶನಿವಾರ
ತಿಥಿ : ತ್ರಯೋದಶಿ ಬೆ. 07.08 ರವರೆಗು ಇರುತ್ತದೆ. ಆನಂತರ ಚತುರ್ದಶಿ ಆರಂಭವಾಗಲಿದೆ.
ನಕ್ಷತ್ರ : ಪುಬ್ಬ ನಕ್ಷತ್ರವು ದಿನಪೂರ್ತಿ ಇರಲಿದೆ.
ಸೂರ್ಯೋದಯ: ಬೆ.06.22
ಸೂರ್ಯಾಸ್ತ: ಸ.06.30
ರಾಹುಕಾಲ : ಬೆ.09.00 ರಿಂದ ಬೆ.10.30
ರಾಶಿ ಫಲಗಳು
ಮೇಷ
ನಿಮ್ಮ ಕಟು ನಿರ್ಧಾರಗಳು ಕುಟುಂಬದ ಕಷ್ಟನಷ್ಟಗಳನ್ನು ಕೊನೆಗೊಳಿಸುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಸದಾ ಇರಲಿದೆ. ಆದ್ದರಿಂದ ದೈಹಿಕವಾಗಿ ಬಳಲುವಿರಿ. ವ್ಯಾಪಾರ ವ್ಯವಹಾರವು ಲಾಭದಾಯಕವಾಗಿರುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ವಿದ್ಯಾರ್ಥಿಗಳು ವಿಶ್ವಾಸದಿಂದ ಹೊಸತನದ ನಿರೀಕ್ಷೆಯಲ್ಲಿ ಇರುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ತಂದೆಯಿಂದ ಹಣದ ಅನುಕೂಲತೆ ಉಂಟಾಗುತ್ತದೆ. ಕುಟುಂಬದವರ ಜೊತೆಗೂಡಿ ಯಾತ್ರಾಸ್ಥಳಕ್ಕೆ ತೆರಳುವಿರಿ. ಹಠದಿಂದಾಗಿ ಕೈಹಿಡಿದ ಕೆಲಸಕಾರ್ಯಗಳಲ್ಲಿ ಜಯಗಳಿಸುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ವಿಫಲರಾಗುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ವೃಷಭ
ಕುಟುಂಬದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಾರವು. ಉದ್ಯೋಗದಲ್ಲಿ ತಪ್ಪಿಲ್ಲದೇ ಹೋದರೂ ವಾದ ವಿವಾದಗಳನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಕಡಿಮೆ ಆಗಲಿದೆ. ಅನಿರೀಕ್ಷಿತವಾದ ಖರ್ಚುವೆಚ್ಚಗಳನ್ನು ಕಡಿತಗೊಳಿಸುವಿರಿ. ವಿದ್ಯಾರ್ಥಿಗಳು ಆತಂಕದಿಂದ ದೂರವಾಗಿ ಸಹಜಸ್ಥಿತಿಗೆ ಮರಳುತ್ತಾರೆ. ವೇಳೆ ಕಳೆಯಲು ಮಕ್ಕಳು ತಾತ್ಕಾಲಿಕವಾದ ಉದ್ಯೋಗದಲ್ಲಿ ತೊಡಗುತ್ತಾರೆ. ಸಮಾಜದಲ್ಲಿನ ಗೌರವವನ್ನು ಉಳಿಸಿಕೊಳ್ಳುವಿರಿ. ಸ್ವತಂತ್ರವಾಗಿ ಧಾರ್ಮಿಕ ಕೆಲಸವನ್ನು ಮಾಡುವಿರಿ. ಅತಿಯಾಸೆ ಇಲ್ಲದೆ ಅಲ್ಪ ತೃಪ್ತಿಯೊಂದಿಗೆ ಜೀವನ ಸಾಗಿಸುವಿರಿ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ತಾಯಿಯವರ ಮನದ ಆಸೆಯನ್ನು ಕಾರ್ಯರೂಪಕ್ಕೆ ತರುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಮಣ್ಣಿನ ಬಣ್ಣ
ಮಿಥುನ
ಕುಟುಂಬದ ಆಧಾರಸ್ತಂಭವಾಗಿ ಎಲ್ಲರ ಮನಗೆಲ್ಲುವಿರಿ. ಜವಾಬ್ದಾರಿಗಳನ್ನು ನೀವಾಗಿಯೇ ಒಪ್ಪಿಕೊಳ್ಳುವಿರಿ. ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಾಯಿಸದಿರಿ. ದೃಢವಾದ ಮನಸ್ಸಿನ ಕಾರಣ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ. ಮುಂದಿನ ದಿನಗಳಿಗಾಗಿ ಹಣವನ್ನು ಉಳಿಸಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರದಲ್ಲಿ ಬಂಡವಾಳದ ಕೊರತೆ ಇರುತ್ತದೆ. ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲಿದ್ದಾರೆ. ಸಮಾಜದ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ಆತ್ಮೀಯರಿಗೆ ನೀಡಿದ್ದ ಹಣ ಮರಳಿ ಕೈಸೇರುತ್ತದೆ. ಉತ್ತಮ ಅವಕಾಶಗಳು ಹೊಸ ಆಸೆಗೆ ಕಾರಣವಾಗಲಿದೆ. ಹಿರಿಯರ ಸಲಹೆಯಂತೆ ನಡೆದರೆ ತೊಂದರೆ ತಾಪತ್ರಯಗಳು ದೂರವಾಗುತ್ತವೆ. ಕುಟುಂಬದ ಹೆಣ್ಣುಮಕ್ಕಳಿಗೆ ಉಡುಗೊರೆ ನೀಡುವಿರಿ.
ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಕಟಕ
ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಮಕ್ಕಳಿಂದ ಸಂತೋಷದ ವಾತಾವರಣ ಉಂಟಾಗುತ್ತದೆ. ಉದ್ಯೋಗದಲ್ಲಿನ ಅನುಕೂಲತೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿ. ಎಲ್ಲರ ಬೆಂಬಲ ಇದ್ದರೂ ಅಳುಕಿನ ಮನಸ್ಸಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಸಂತಸದ ಜೀವನ ನಡೆಸುವರು. ಕಾನೂನಿನ ಸಹಾಯದಿಂದ ವೃತ್ತಿಯಲ್ಲಿನ ಸವಾಲನ್ನು ಗೆಲ್ಲುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ಹಣ ಉಳಿಸುವ ಯೋಚನೆ ಮಾಡುವಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಕಂತಿನ ವ್ಯಾಪಾರದಲ್ಲಿ ಲಾಭವಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಧಾರ್ಮಿಕ ಕೇಂದ್ರಕ್ಕೆ ಎಲ್ಲರಜೊತೆಯಲ್ಲಿ ತೆರಳುವಿರಿ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕಿತ್ತಳೆಬಣ್ಣ
ಸಿಂಹ
ಕುಟುಂಬದ ಹಿರಿಯರ ಆಸೆ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಸಂತಸ ಕಾಣುವಿರಿ. ಉದ್ಯೋಗದಲ್ಲಿ ಹಠದಿಂದ ನ್ಯಾಯಯುತ ಹಕ್ಕನ್ನು ಪಡೆಯುವಿರಿ. ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯ ದೊರೆಯುತ್ತದೆ. ಹಣದ ತೊಂದರೆ ಬಾರದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಾರೆ. ಗಣ್ಯ ವ್ಯಕ್ತಿಗಳ ಆಸರೆ ದೊರೆಯುತ್ತದೆ. ರಾಜಕೀಯದಲ್ಲಿ ಆಸಕ್ತಿ ಉಂಟಾಗುತ್ತದೆ. ತಂದೆಯವರ ಆಸ್ತಿಯ ವಿವಾದವು ಪರಿಹಾರವಾಗಲಿದೆ. ಪಾಲುಗಾರಿಕೆಯ ವ್ಯಾಪಾರದ ಲಾಭದಲ್ಲಿ ಹೆಚ್ಚಿನ ಪಾಲು ದೊರೆಯುತ್ತದೆ. ಹಣದ ಕೊರತೆ ಎದುರಾದಲ್ಲಿ ಸಹನೆಯನ್ನು ಕಳೆದುಕೊಳ್ಳುವಿರಿ. ಬಂಧು ಬಳಗದವರ ಬಗ್ಗೆ ಅನಾದಾರಣೆ ತೋರುವಿರಿ. ಧಾರ್ಮಿಕ ಗುರುಗಳ ಆಶೀರ್ವಾದ ದೊರೆಯುತ್ತದೆ.
ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಹಳದಿ ಬಣ್ಣ
ಕನ್ಯಾ
ಅರ್ಥವಿಲ್ಲದ ಮಾತುಕತೆಯಿಂದ ಕುಟುಂಬದ ನೆಮ್ಮದಿ ಮರೆಯಾಗುತ್ತದೆ. ಉದ್ಯೋಗದಲ್ಲಿ ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶ ದೊರಕುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಆದಾಯ ಗಳಿಸುವಿರಿ. ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ಮುಂದುವರಿಯುತ್ತಾರೆ. ಕೆಲಸ ಕಾರ್ಯದಲ್ಲಿ ಎದುರಾಗುವ ತೊಂದರೆಗೆ ಬೇರೆಯವರನ್ನು ದೂರುವಿರಿ. ದುಡುಕಿನ ಮಾತಿನಿಂದ ಕೆಟ್ಟ ಹೆಸರು ಗಳಿಸುವಿರಿ. ಕುಟುಂಬದ ಮೇಲ್ವಿಚಾರಕರು ಜವಾಬ್ದಾರಿಯಿಂದ ವರ್ತಿಸಬೇಕು. ಪಾಲುಗಾರಿಕೆಯ ವ್ಯಾಪಾರದಿಂದ ಆದಾಯ ಗಳಿಸುವಿರಿ. ಒಳ್ಳೆಯ ಅಭ್ಯಾಸದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಕುಟುಂಬದಲ್ಲಿನ ಹೆಣ್ಣುಮಕ್ಕಳಿಗೆ ಸಿಹಿಯ ಸಹಿತ ಉಡುಗೊರೆ ನೀಡುವಿರಿ. ಸಣ್ಣ ಪುಟ್ಟ ಪ್ರಯಾಣದಲ್ಲಿಯೇ ಸಂತಸ ಕಾಣುವಿರಿ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಹಸಿರು ಬಣ್ಣ
ತುಲಾ
ಕುಟುಂಬದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಗೆ ಪಾತ್ರರಾಗುತ್ತಾರೆ. ಸೋದರಿಯ ಜೀವನದಲ್ಲಿನ ಕಷ್ಟ ನಷ್ಟಗಳನ್ನು ದೂರಮಾಡುವಿರಿ. ಸ್ವಂತ ಮನೆಯಿದ್ದರೂ ಅನಿವಾರ್ಯವಾಗಿ ಪರಸ್ಥಳದಲ್ಲಿ ನೆಲೆಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗುತ್ತವೆ. ತಂದೆಯವರಿಗೆ ಭೂವಿವಾದದಲ್ಲಿ ಯಶಸ್ಸು ದೊರೆಯುತ್ತದೆ. ವ್ಯವಸಾಯದಲ್ಲಿ ಆಸಕ್ತಿ ಉಂಟಾಗುತ್ತದೆ. ಪಾಲುಗಾರಿಕೆ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ಇರುತ್ತದೆ. ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಮಾತ್ರ ಮಾಡುವಿರಿ. ಉದ್ಯೊಗದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಸಾಲದ ವ್ಯವಹಾರ ಮಾಡದಿರಿ.
ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ನೀಲಿ ಬಣ್ಣ
ವೃಶ್ಚಿಕ
ಸಹನೆಯ ಕೊರತೆಯಿಂದ ಕುಟುಂಬದಲ್ಲಿ ಬೇಸರ ಇರಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆ ವಾದದಲ್ಲಿ ತೊಡಗುವಿರಿ. ವ್ಯಾಪಾರ ವ್ಯವಹಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ. ವಿದ್ಯಾರ್ಥಿಗಳು ಜನರ ಗುಂಪಿನಿಂದ ದೂರವಿದ್ದು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ರಕ್ತದ ದೋಷವಿದ್ದಲ್ಲಿ ಎಚ್ಚರಿಕೆಯನ್ನು ವಹಿಸಿ. ತಪ್ಪು ಅಭಿಪ್ರಾಯದಿಂದ ಕುಟುಂಬದಿಂದ ದೂರ ಉಳಿಯುವಿರಿ. ಹಿರಿಯರು ಬಾಳಿದ ಮನೆಯನ್ನು ನವೀಕರಿಸುವ ಕೆಲಸ ಆರಂಭಿಸುವಿರಿ. ಕಿರಿ ಸೋದರಿಯ ವಿವಾಹ ನಿಶ್ಚಯವಾಗಲಿದೆ. ಧಾರ್ಮಿಕ ಕೇಂದ್ರಕ್ಕೆ ಅವಶ್ಯಕವಾದ ಅನುಕೂಲತೆಗಳನ್ನು ಕಲ್ಪಿಸುವಿರಿ. ಒಮ್ಮೆ ತೆಗೆದುಕೊಳ್ಳುವ ತೀರ್ಮಾನವನ್ನು ಬದಲಾಯಿಸದೆ ಯಶಸ್ಸನ್ನು ಗಳಿಸುವಿರಿ.
ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ಧನಸ್ಸು
ಕೌಟುಂಬಿಕ ಕೆಲಸ ಕಾರ್ಯಗಳನ್ನು ಪರಿಪೂರ್ಣಗೊಳಿಸುವಿರಿ. ಯಾವುದೇ ಕಷ್ಟವು ಎದುರಾದರೂ ಒಪ್ಪಿದ ಕೆಲಸದಿಂದ ದೂರ ಉಳಿಯುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡದ ಕಾರಣ ವಿದ್ಯಾರ್ಥಿಗಳು ದೊರೆವ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ. ಒಂದೇ ರೀತಿಯ ಜೀವನವನ್ನು ಇಷ್ಟಪಡದೆ ಹೊಸತನಕ್ಕೆ ಮಾರು ಹೋಗುವಿರಿ. ವ್ಯಾಪಾರ ವ್ಯವಹಾರದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗುತ್ತದೆ. ಆತ್ಮೀಯರ ಸಹಾಯ ಸಹಕಾರ ದೊರೆಯುತ್ತದೆ. ಕ್ರಮೇಣವಾಗಿ ಆದಾಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಮಾತಿನ ಬಲದಿಂದಲೇ ಕೆಲಸ ಸಾಧಿಸುವಿರಿ. ಉಷ್ಣದ ತೊಂದರೆ ಇರುತ್ತದೆ. ಅಗ್ನಿಮಾಂಧ್ಯ ದೋಷದಿಂದ ಬಳಲುವಿರಿ.
ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಮಕರ
ನಿಧಾನಗತಿಯಲ್ಲಿ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಲ್ಲ ಚಾತುರ್ಯತೆ ನಿಮಗಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ತಾಂತ್ರಿಕ ಪರಿಜ್ಞಾನ ಗಳಿಸಲು ವಿದೇಶಕ್ಕೆ ತೆರಳುವರು. ಕಾರ್ಯರೂಪಕ್ಕೆ ಬರುವ ಮನದ ಪರಿಕಲ್ಪನೆಗಳಿಗೆ ಯೋಗ್ಯ ಸ್ಥಾನ ಮತ್ತು ಗೌರವಗಳು ಲಭಿಸುತ್ತವೆ. ಮಕ್ಕಳ ವಿವಾಹದ ಮಾತುಕತೆ ನಡೆಯುತ್ತದೆ. ದುಡುಕಿನ ಮಾತಿನಿಂದಾಗಿ ತೊಂದರೆಗೆ ಸಿಲುಕುವಿರಿ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಮನೆಯ ಸುತ್ತ ಮುತ್ತಲಿನ ಗಿಡ ಮರಗಳ ಸಂರಕ್ಷಣೆಯ ಹೊರೆ ಹೊರುವಿರಿ. ಸಾಧ್ಯವಾದಷ್ಟೂ ಮಾತು ಕಡಿಮೆ ಮಾಡಿರಿ.
ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಕುಂಭ
ಕುಟುಂಬದಲ್ಲಿ ಚರ್ಚೆಯಾಗಬೇಕಿದ್ದ ಕೆಲವು ವಿಚಾರಗಳು ಗೌಪ್ಯವಾಗಿ ಉಳಿಯಲಿವೆ. ಉದ್ಯೋಗದಲ್ಲಿನ ಅನಿರೀಕ್ಷಿತ ಬದಲಾವಣೆಯನ್ನು ಒಪ್ಪಿ ಮುನ್ನಡೆಯುವಿರಿ. ವ್ಯಾಪಾರ ವ್ಯವಹಾರದಲ್ಲಿ ಖರ್ಚಿಗೆ ತಕ್ಕಷ್ಟು ಹಣ ದೊರೆಯುತ್ತದೆ. ವಿದ್ಯಾರ್ಥಿಗಳು ಕಷ್ಟದಿಂದ ಗುರಿ ತಲುಪುವರು. ಮನೆತನದ ಆಸ್ತಿಯಲ್ಲಿ ಸೂಕ್ತ ಪಾಲು ನಿಮಗೆ ದೊರೆಯುತ್ತದೆ. ತಂದೆ ಮತ್ತು ತಾಯಿಯವರಿಂದ ಹಣದ ಸಹಾಯ ಇರುತದೆ. ಸಹಕಾರ ಸಂಸ್ಥೆಯೊಂದರ ಒಡೆತನ ದೊರೆಯುತ್ತದೆ. ತಂದೆಯವರ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಹೆದರಿಕೆಯ ಗುಣವಿರುತ್ತದೆ. ಮೌನಿಯಾಗಿದ್ದುಕೊಂಡು ಮನದಾಸೆಯನ್ನು ಈಡೇರಿಸಿಕೊಳ್ಳುವಿರಿ. ಯಾವುದೇ ನಿರೀಕ್ಷೆ ಒಳಗಾಗದೆ ನಿಮ್ಮ ಪಾಲಿನ ಕರ್ತವ್ಯವನ್ನು ಪೂರೈಸುವಿರಿ.
ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ...
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಬೂದು ಬಣ್ಣ
ಮೀನ
ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಒಮ್ಮೆ ಕೈಗೊಂಡ ನಿರ್ಧಾರವನ್ನು ಬದಲಿಸುವುದಿಲ್ಲ. ಬೇರೆಯವರಿಗೆ ನೀಡಿದ ವಚನವನ್ನು ತಪ್ಪುವುದಿಲ್ಲ. ಹಠದಿಂದ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ. ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಜನಮೆಚ್ಚುವಂತೆ ಮಾತನಾಡುವಿರಿ. ವಿದ್ಯಾರ್ಥಿಗಳು ವಿವಾದದಿಂದ ದೂರ ಉಳಿಯುತ್ತಾರೆ. ಸಮಾಜದ ಲೋಪ ದೋಷವನ್ನು ತಿದ್ದುವ ಜವಾಬ್ದಾರಿಯು ನಿಮ್ಮದಾಗುತ್ತದೆ. ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ನಡೆಸುತ್ತಾರೆ. ಸಮಾಜ ಸೇವಾ ಕೇಂದ್ರವನ್ನು ಆರಂಭಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ದೇವರಕೋಣೆಯನ್ನು ಶುಭ್ರವಾಗಿಸಲು ಪ್ರಯತ್ನಿಸುವಿರಿ. ಆತ್ಮೀಯರ ಮನರಂಜನಾ ಕೂಟದಲ್ಲಿ ಭಾಗವಹಿಸುವಿರಿ.
ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಕಂದು ಬಣ್ಣ
--------------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ಇದನ್ನೂ ಓದಿ: ಡಬಲ್ ಗಜಕೇಸರಿ ಯೋಗ; ಈ ಮೂರು ರಾಶಿಯವರಿಗೆ ಲಾಭವೋ ಲಾಭ
![Whats_app_banner Whats_app_banner](https://kannada.hindustantimes.com/static-content/1y/wBanner.png)