ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 25 February 2024 Zodiac Signs Kundali News Sts

Tomorrow Horoscope: ದೂರದ ಊರಿಗೆ ಪ್ರಯಾಣ, ಖ್ಯಾತ ಸಂಸ್ಥೆಯಿಂದ ಉದ್ಯೋಗಾವಕಾಶ; ಭಾನುವಾರದ ದಿನಭವಿಷ್ಯ

25 February 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಭಾನುವಾರದ ದಿನಭವಿಷ್ಯ ಹೀಗಿದೆ..

ಭಾನುವಾರದ ದಿನಭವಿಷ್ಯ
ಭಾನುವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 25 February 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಭಾನುವಾರ

ತಿಥಿ : ಪಾಡ್ಯ ತಿಥಿಯು ಸಂಜೆ 06.58 ರವರೆಗು ಇದ್ದು ಆನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ : ಪುಬ್ಬ ನಕ್ಷತ್ರವು ರಾತ್ರಿ 12.04 ವರೆಗು ಇರುತ್ತದೆ. ಆನಂತರ ಉತ್ತರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.34

ಸೂರ್ಯಾಸ್ತ: ಸ.06.26

ರಾಹುಕಾಲ : ಸಂ.04.30 ರಿಂದ ಸ.06.00

ರಾಶಿ ಫಲಗಳು

ಮೇಷ

ಕುಟುಂಬದಲ್ಲಿ ಹೊಸ ಕೆಲಸಗಳ ಆರಂಭದ ಕಾರಣ ಉತ್ಸಾಹ ಮನೆ ಮಾಡಿರುತ್ತದೆ. ಅನಾವಶ್ಯಕ ಚಿಂತೆ ಇರುತ್ತದೆ. ಬಳಿ ಇರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಇಚ್ಛೆಗೆ ವಿರೋಧವಾಗಿ ಕೆಲಸ ಕಾರ್ಯಗಳು ನಡೆಯಬಹುದು. ವಾದ ಮಾಡದೆ ಶಾಂತಿ ಸಂಧಾನದಿಂದ ವಿವಾದಗಳಿಂದ ದೂರ ಉಳಿಯುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಆದಾಯ ಇರುವುದಿಲ್ಲ. ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ತಪ್ಪು ನಿರ್ಧಾರವನ್ನು ತೆಗೆದುಕೊಂಡು ವಿವಾದಕ್ಕೆ ಸಿಲುಕುವರು. ಹಣವನ್ನು ಯೋಚಿಸದೆ ಖರ್ಚು ಮಾಡುವಿರಿ. ಕುಟುಂಬ ಸದಸ್ಯರಿಗೆ ಪ್ರಮುಖ ವಿಷಯಗಳ ಬಗ್ಗೆ ತಿಳಿಸುವುದಿಲ್ಲ . ಅನಾವಶ್ಯಕವಾಗಿ ಸಂಗಾತಿಯನ್ನು ಟೀಕಿಸುವುದನ್ನು ತಪ್ಪಿಸಿ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಳದಿ ಬಣ್ಣ

ವೃಷಭ

ಕುಟುಂಬದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವಿರಿ. ಇದರಿಂದ ಕುಟುಂಬದಲ್ಲಿ ಹೊಸ ನಿರೀಕ್ಷೆಗಳು ಮೂಡಲಿವೆ. ಉದ್ಯೋಗದಲ್ಲಿ ಉಂಟಾಗುವ ಗಮನಾರ್ಹ ಬದಲಾವಣೆಗಳು ನಿಮ್ಮ ಪರವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ನೇಹಿತರ ಸಹಕಾರದಿಂದ ಉತ್ತಮ ಆದಾಯವನ್ನು ಗಳಿಸುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸವಲ್ಲದೆ ಬೇರಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಶ್ಚಯವಾಗಿದ್ದ ವಿವಾಹವು ಮುಂದೂಡಲ್ಪತ್ತದೆ. ಹಳೆಯದಾದ ಹಣಕಾಸಿನ ವಿವಾದವು ತೊಂದರೆ ಉಂಟು ಮಾಡಬಲ್ಲದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಹಣವನ್ನು ಪಡೆಯಬೇಕಾದ ಪರಿಸ್ಥಿತಿ ಉಂಟಾಗಬಹುದು. ಸಂಗಾತಿಗಾಗಿ ಅವರು ಮೆಚ್ಚಿದ ಒಡವೆಗೆ ಹೆಚ್ಚಿನ ಹಣ ಬೇಕಾಗಬಹುದು.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಹಸಿರು ಬಣ್ಣ

ಮಿಥುನ

ಅನಗತ್ಯ ಯೋಜನೆಗಳು ಕುಟುಂಬದಲ್ಲಿ ಬಿಗುವಿನ ವಾತಾವರಣವನ್ನು ಉಂಟು ಮಾಡಲಿದೆ. ಉದ್ಯೋಗದಲ್ಲಿ ಪ್ರತಿಯೊಂದು ವಿಚಾರವನ್ನು ಗಮನವಿರಿಸಿ ನೋಡಬೇಕು. ದುಡುಕಿನಲ್ಲಿ ತೊಂದರೆ ಅನುಭವಿಸಬೇಕಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಆದಾಯವು ದೊರೆಯುವುದಿಲ್ಲ. ಅನಿವಾರ್ಯವಾಗಿ ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನಕ್ಕೆ ಬೇರೆಯವರನ್ನು ಅವಲಂಬಿಸುತ್ತಾರೆ. ಆದರೆ ಕಲಿಕೆಯಲ್ಲಿ ಮುಂದಿರುತ್ತಾರೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿ. ಪ್ರತಿಯೊಂದು ಮಾತಿಗೂ ತಪ್ಪಾದ ಅರ್ಥವನ್ನು ಕಲ್ಪಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯಲಿದೆ. ಆತ್ಮೀಯರ ಜೊತೆಯಲ್ಲಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.

ಪರಿಹಾರ : ಕೈ ಅಥವ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕಟಕ

ಕುಟುಂಬದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಸಣ್ಣಪುಟ್ಟ ಕೆಲಸಕಾರ್ಯಗಳಿಗೂ ಬೇರೆಯವರನ್ನು ಆಶ್ರಯಿಸುವಿರಿ. ಉದ್ಯೋಗದಲ್ಲಿ ಕೆಲವರಿಂದ ವಿರೋಧವನ್ನು ಎದುರಿಸಬೇಕಾಗಬಹುದು. ಚುರುಕಿನಿಂದ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವನ್ನು ಗಳಿಸುವಿರಿ. ಅನಾವಶ್ಯಕ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವುದಿಲ್ಲ. ಮನಮೆಚ್ಚುವ ಜನರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ವೈವಾಹಿಕ ಜೀವನದಲ್ಲಿ ಸಂಗಾತಿಯ ಮಾತಿಗೆ ವಿಶೇಷವಾದ ಮನ್ನಣೆ ನೀಡುವಿರಿ. ಸೃಜನಶೀಲ ಕೆಲಸದಲ್ಲಿ ತೊಡಗುವಿರಿ. ಆರೋಗ್ಯದಲ್ಲಿ ಉಂಟಾಗುವ ತೊಂದರೆಯನ್ನು ಸರಿಪಡಿಸಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಸಿಂಹ

ಹಗಲುಗನಸು ಕಾಣುವುದರಲ್ಲಿ ವೇಳೆ ಕಳೆಯುವಿರಿ. ಕುಟುಂಬದಲ್ಲಿ ಹೊಸ ಬದಲಾವಣೆಗಳು ಉಂಟಾಗಬಹುದು. ಕೌಟುಂಬಿಕ ವಿಚಾರಕ್ಕಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಹಣದ ಕೊರತೆ ಎದುರಾಗುವುದಿಲ್ಲ. ಬಹುದಿನದಿಂದ ಕಾಣುತ್ತಿದ್ದ ಕನಸೊಂದು ನನಸಾಗಲಿದೆ. ಉದ್ಯೋಗದಲ್ಲಿ ನಿಮ್ಮ ಕೌಶಲ್ಯಕ್ಕೆ ಸವಾಲಾಗುವ ಯೋಜನೆಗಳು ದೊರೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉನ್ನತಮಟ್ಟ ತಲುಪುವಿರಿ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವರು. ಅನಾವಶ್ಯಕವಾಗಿ ವಿವಾದಕ್ಕೆ ಒಳಗಾಗದೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಮುಂದುವರೆಯಿರಿ. ಸಮಯಕ್ಕೆ ತಕ್ಕಂತೆ ವರ್ತಿಸಿ ನಿಮ್ಮತನವನ್ನು ಉಳಿಸಿಕೊಳ್ಳುವಿರಿ. ನಲ್ಮೆಯ ಮಾತುಗಳಿಂದ ಎಲ್ಲರ ಮನಸ್ಸನ್ನು ಗೆಲ್ಲಬಲ್ಲಿರಿ. ವಿವಾಹದ ವಿಚಾರ ಹಿರಿಯರ ಮನದಲ್ಲಿ ಮೂಡುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕನ್ಯಾ

ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಗರ್ಭಿಣಿಯರು ಎಚ್ಚರಿಕೆಯಿಂದ ಇರಿ. ಕುಟುಂಬದಲ್ಲಿ ಹೊಸ ಆಸೆ ಆಕಾಂಕ್ಷೆಗಳು ಕೈಗೂಡಲಿವೆ. ಉದ್ಯೋಗವನ್ನು ಬದಲಿಸುವ ಹಂಬಲವಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಖರ್ಚು ವೆಚ್ಚಗಳು ಹೆಚ್ಚಲಿವೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮನಸ್ಸಿಟ್ಟು ನಿರ್ವಹಿಸುತ್ತಾರೆ. ಹೊಗಳಿಕೆಯ ಮಾತಿಗೆ ಮರುಳಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದಿರಿ. ಕುಟುಂಬದಲ್ಲಿ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸಂಗಾತಿಯ ಸಲಹೆ ಸೂಚನೆಯನ್ನು ಪಾಲಿಸಬೇಕಾದ ಅನಿವಾರ್ಯತೆ ಇರುತ್ತದೆ. ವಿಶ್ವಾಸವಿದ್ದಲ್ಲಿ ಗೆಲುವು ಸುಲಭವಾಗಿ ದೊರೆಯಲಿದೆ. ಮಕ್ಕಳ ಸಂತಸದ ಕ್ಷಣದಲ್ಲಿ ತೃಪ್ತಿ ಕಾಣುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ತುಲಾ

ನಿಮ್ಮಲ್ಲಿರುವ ಶುಭ್ರವಾದ ಮನಸ್ಸು ಮತ್ತು ನಡವಳಿಕೆ ಎಲ್ಲರ ಪ್ರೀತಿ ಗಳಿಸುತ್ತದೆ. ಕುಟುಂಬದಲ್ಲಿ ಪ್ರಥಮ ಆದ್ಯತೆ ನಿಮ್ಮದಾಗುತ್ತದೆ. ಒತ್ತಡಕ್ಕೆ ಒಳಗಾಗದೆ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಉದ್ಯೋಗದಲ್ಲಿ ಮನಸ್ಸಿಗೆ ಮುದ ನೀಡುವ ಸಂದರ್ಭಗಳು ಎದುರಾಗಲಿವೆ. ಖ್ಯಾತ ಸಂಸ್ಥೆಯಿಂದ ಉದ್ಯೋಗಾವಕಾಶ ಬರಲಿದೆ. ಮನಸ್ಸಿಗೆ ಹಿತ ನೀಡುವ ತೀರ್ಮಾನಗಳಿಗೆ ಬದ್ಧರಾಗುವಿರಿ. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟ ತಲುಪಲಿದ್ದಾರೆ. ಮಕ್ಕಳ ಸಾಧನೆಗಳಿಗೆ ಸಹಕಾರ ನೀಡುವಿರಿ. ನಿಮ್ಮಲ್ಲಿ ಹುದುಗಿದ ಪ್ರತಿಭೆಗೆ ತಕ್ಕ ವೇದಿಕೆ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಆತ್ಮೀಯರಿಂದ ಉಡುಗೊರೆಯೊಂದು ದೊರೆಯಬಹುದು.

ಪರಿಹಾರ : ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಬೂದು ಬಣ್ಣ

ವೃಶ್ಚಿಕ

ವಯಸ್ಸಿಗೂ ಮನಸ್ಸಿಗೂ ತಾಳೆಯಾಗದ ರೀತಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಕುಟುಂಬದಲ್ಲಿ ನಿಮ್ಮ ನಿಲುವಿಗೆ ಎಲ್ಲರ ಸಹಮತ ದೊರೆಯುತ್ತದೆ. ನಿಮ್ಮ ಜವಾಬ್ದಾರಿಯೂ ಹೆಚ್ಚಾಗಬಹುದು. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಕಿರಿಯ ಅಧಿಕಾರಿಗಳ ನಡುವೆ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವಿದೆ. ಎದುರಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳದೆ ಹೋಗುವಿರಿ. ವಿದ್ಯಾರ್ಥಿಗಳು ಸಹಜತೆಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಹೆಚ್ಚಿನ ಅಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಸಮಾಜದಲ್ಲಿ ಜನಪ್ರಿಯತೆಯ ತುತ್ತ ತುದಿಗೇರುವಿರಿ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು ಬಣ್ಣ

ಧನಸ್ಸು

ಆತ್ಮೀಯರ ಜೊತೆಗೂಡಿ ಮನರಂಜನ ಕಾರ್ಯಕ್ರಮವನ್ನು ಆಯೋಜಿಸುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಉದ್ಯೋಗದಲ್ಲಿ ಸೋಲು ಗೆಲುವು ಸಮ ಪ್ರಮಾಣದಲ್ಲಿ ಇರಲಿವೆ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಉಂಟಾಗಲಿವೆ. ವ್ಯಾಪಾರ ವ್ಯವಹಾರಗಳು ಸಾಧಾರಣ ಪ್ರಗತಿಯನ್ನು ಕಾಣಲಿವೆ. ವಿದ್ಯಾರ್ಥಿಗಳು ಸಿಡುಕದೆ ಸಹನೆಯಿಂದ ವರ್ತಿಸಬೇಕು. ಅಸಾಧ್ಯವಾದಂತಹ ಕೆಲಸವು ಸುಲಭವಾಗುತ್ತದೆ. ಅವಶ್ಯಕತೆ ಇದ್ದಷ್ಟು ಹಣ ಕೈ ಸೇರುವುದಿಲ್ಲ. ವಾಸ ಸ್ಥಳವನ್ನು ಬದಲಾಯಿಸುವಿರಿ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಿರಿ. ಸಂಗಾತಿಯ ಮನಮೆಚ್ಚುವ ಕೆಲಸಗಳನ್ನು ನಿರ್ವಹಿಸುವಿರಿ. ಸಾಲದ ವ್ಯವಹಾರ ಒಳ್ಳೆಯದಲ್ಲ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಮಕರ

ಹೆಚ್ಚಿನ ನಿರೀಕ್ಷೆಯಿಂದ ದಿನವನ್ನು ಆರಂಭಿಸುವಿರಿ. ಆದರೆ ಕುಟುಂಬದ ಸದಸ್ಯರಿಂದ ನಿರಾಸೆ ಉಂಟಾಗಬಹುದು. ಮೌನದ ಬದಲು ಮನ ಬಿಚ್ಚಿ ಮಾತನಾಡುವುದು ಒಳ್ಳೆಯದು. ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ಮಣಿಸುವಿರಿ. ಹಿರಿಯ ಅಧಿಕಾರಿಗಳ ಪ್ರಸಂಸ್ಥೆ ಲಭಿಸಲಿದೆ. ವ್ಯಾಪಾರ ವ್ಯವಹಾರಗಳು ನಿಧಾನಗತಿಯಲ್ಲಿ ಲಾಭ ಗಳಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಮಾತಿಗೆ ಗೌರವ ನೀಡದೇ ಹೋದಲ್ಲಿ ವಿವಾದ ಉಂಟಾಗುತ್ತದೆ. ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಫಲರಾಗುವಿರಿ. ಶಾಂತಿ ನೆಮ್ಮದಿಯ ನಿರೀಕ್ಷಿಯಿಂದ ಏಕಾಂತ ಸ್ಥಳಕ್ಕೆ ತೆರಳುವಿರಿ. ಪ್ರೀತಿ ಪಾತ್ರರ ಮನ ಗೆಲ್ಲಲು ಪ್ರಯತ್ನಿಸಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಕುಂಭ

ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಎದುರಾಗುವ ಆತಂಕ ಕ್ರಮೇಣವಾಗಿ ಕಡಿಮೆಯಾಗಲಿದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಉತ್ತಮ ಅವಕಾಶಕ್ಕಾಗಿ ದೊರೆತು ಉದ್ಯೋಗ ಬದಲಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ಹಣವನ್ನು ಉಳಿಸುವ ಪ್ರಯತ್ನ ಮಾಡಿ ಆತ್ಮೀಯರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸ್ವಂತ ಕೆಲಸ ಕಾರ್ಯಗಳಲ್ಲಿ ಸಂದರ್ಭದಲ್ಲಿಅವಕಾಶಕ್ಕಾಗಿ ಕಾಯದೆ ಹೆಚ್ಚಿನ ಪ್ರಯತ್ನಪಡಿ. ಕಷ್ಟದ ಕಾಲದಲ್ಲಿ ಸ್ನೇಹಿತರೊಬ್ಬರು ಸಹಾಯ ಮಾಡಲಿದ್ದಾರೆ ಸಂಗಾತಿಯೊಂದಿಗೆ ಉತ್ತಮ ಅನುಬಂಧ ಏರ್ಪಡುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಮೀನ

ಕುಟುಂಬದ ಎಲ್ಲರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಸುಖ ಸಂತೋಷ ಮನೆ ಮಾಡಿರುತ್ತದೆ. ಉದ್ಯೋಗದಲ್ಲಿ ಅನುಭವಕ್ಕೆ ತಕ್ಕಂತಹ ಸ್ಥಾನಮಾನ ದೊರೆಯಲಿದೆ. ಹಣಕಾಸಿನ ಕೊರತೆ ಕಡಿಮೆಯಾಗಿಸಲು ಸಣ್ಣ ಪ್ರಮಾಣದ ಮತ್ತೊಂದು ವೃತ್ತಿಯನ್ನು ಆದರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಪರಿಪಕ್ವ ಯೋಜನೆಗಳಿಂದ ಮಾತ್ರ ಹಣವನ್ನು ಗಳಿಸಿ ಉಳಿಸಲು ಸಾಧ್ಯ. ವಿದ್ಯಾರ್ಥಿಗಳು ಮಾನಸಿಕ ಒತ್ತಡವಿದ್ದರೂ ನಿರಂತರ ಅಭ್ಯಾಸದಿಂದ ಉನ್ನತ ಸ್ಥಾನ ಗಳಿಸುತ್ತಾರೆ ಷ್ಟಾಕ್​​ ಮತ್ತು ಷೇರಿನಲ್ಲಿ ಹಣವನ್ನು ವಿನಿಯೋಗಿಸುವಿರಿ. ವಿರೋಧಿಗಳ ಬಗ್ಗೆ ಅಸಡ್ಡೆ ಇರುತ್ತದೆ. ಎಚ್ಚರಿಕೆಯಿಂದ ದೈನಂದಿನ ಕೆಲಸದಲ್ಲಿ ಮುಂದುವರೆಯಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

---------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).