ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 27 February 2024 Zodiac Signs Kundali News Sts

Tomorrow Horoscope: ಸಾಧು ಸಂತರ ಭೇಟಿ, ಒಲ್ಲದ ಮನಸ್ಸಿನಿಂದ ಮಾಡಿದ ಕೆಲಸದಲ್ಲಿ ಹಿನ್ನಡೆ; ಮಂಗಳವಾರದ ದಿನಭವಿಷ್ಯ

27 February 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಮಂಗಳವಾರದ ದಿನಭವಿಷ್ಯ ಹೀಗಿದೆ..

ಮಂಗಳವಾರದ ದಿನಭವಿಷ್ಯ
ಮಂಗಳವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 27 February 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಮಂಗಳವಾರ

ತಿಥಿ : ತದಿಗೆ ತಿಥಿಯು ರಾ.11.05 ರವರೆಗು ಇದ್ದು ಆನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ : ಹಸ್ತ ನಕ್ಷತ್ರವು ಬೆ.05.05 ವರೆಗು ಇರುತ್ತದೆ. ಆನಂತರ ಚಿತ್ತೆ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.35

ಸೂರ್ಯಾಸ್ತ: ಸ.06.26

ರಾಹುಕಾಲ : ಮ.03.00 ರಿಂದ ಬೆ.04.30

ರಾಶಿ ಫಲಗಳು

ಮೇಷ

ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿವೆ. ನೆಮ್ಮದಿಯ ಜೀವನ ನಡೆಸುವಿರಿ. ಅಪರೂಪದ ಪ್ರತಿಭೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ತಾಯಿಗೆ ಭೂಮಿಯೊಂದು ಉಡುಗೊರೆಯಾಗಿ ಬರಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಆದಾಯವಿರುತ್ತದೆ. ಕೇಳುವುದೆಲ್ಲಾ ನಿಜ ಎಂದು ನಂಬದಿರಿ. ಉದ್ಯೋಗವನ್ನು ಬದಲಿಸುವ ಯೋಚನೆ ಮೂಡುತ್ತದೆ. ವಿದ್ಯಾರ್ಥಿಗಳು ಹಠದಿಂದ ಕಲಿಕೆಯಲ್ಲಿ ಮುಂದೆ ಇರುತ್ತಾರೆ. ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಗತ್ಯತೆ ಪೂರೈಸುವಷ್ಟು ಆದಾಯ ಇರುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ವಿವಾಹದ ಮಾತುಕತೆ ನಡೆಯಬಹುದು. ಸಮಯಕ್ಕೆ ಸರಿಯಾಗಿ ಆತ್ಮೀಯರಿಂದ ಹಣದ ಸಹಾಯ ದೊರೆಯಲಿದೆ.

ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಬಣ್ಣ

ವೃಷಭ

ತಂದೆಗೆ ಸೋದರರ ಜೊತೆಯಲ್ಲಿ ಮನಸ್ತಾಪ ಇರುತ್ತದೆ. ಕುಟುಂಬದಲ್ಲಿ ಆತಂಕದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿನ ಅಡಚಣೆ ಮರೆಯಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರದು. ವಿದ್ಯಾರ್ಥಿಗಳು ಗಂಭೀರತೆಯಿಂದ ತಮ್ಮ ಗುರಿ ಸಾಧಿಸಲಿದ್ದಾರೆ. ಸಂಬಂಧಿಯೊಬ್ಬರ ಭೂವಿವಾದವನ್ನು ಪರಿಹರಿಸುವಿರಿ. ರಾಜಕೀಯದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗುವಿರಿ. ಗೃಹಿಣಿಯರು ಆತಂಕದಿಂದ ಹೊರಬರಬೇಕು. ದೃಢವಾದ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ನಿರೂಪಿಸುವಿರಿ. ಮಧ್ಯವರ್ತಿಯಾಗಿ ಹಣದ ವ್ಯವಹಾರದಲ್ಲಿ ಹಣವನ್ನು ಸಂಪಾದಿಸುವಿರಿ. ಕಂತಿನ ವ್ಯಾಪಾರದಲ್ಲಿ ಲಾಭವಿರುತ್ತದೆ. ಸಾಧು ಸಂತರನ್ನು ಭೇಟಿ ಮಾಡುವಿರಿ. ಉತ್ತಮ ಆರೋಗ್ಯ ಇರಲಿದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ ಬಣ್ಣ

ಮಿಥುನ

ಒಲ್ಲದ ಮನಸ್ಸಿನಿಂದ ಮಾಡಿದ ಕೆಲಸದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿರುತ್ತದೆ. ಇದರಿಂದ ಕುಟುಂಬದಲ್ಲಿ ಶಾಂತಿ ಮರೆಯಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಆದಾಯ ದೊರೆಯಲಿದೆ. ಸಿಡುಕುತನದ ಕಾರಣ ಒಂಟಿತನ ಅನುಭವಿಸುವಿರಿ. ಟೀಕೆ ಮಾಡುವುದನ್ನು ಕಡಿಮೆ ಮಾಡಿರಿ. ಮನಸ್ಸು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಅನಿವಾರ್ಯವಾಗಿ ಜಮೀನೊಂದನ್ನು ಮಾರಾಟಮಾಡಿ ಹೊಸ ಮನೆಕೊಳ್ಳುವ ಸಾಧ್ಯತೆ ಇದೆ. ಸೋದರನ ಜೀವನದಲ್ಲಿ ಹೊಸ ತಿರುವು ದೊರೆಯಲಿದೆ. ತಾನಾಗಿಯೇ ದೊರೆವ ಹಣದ ಸಹಾಯವನ್ನು ತಿರಸ್ಕರಿಸುವಿರಿ. ಸ್ವಂತ ಬಳಕಾಗಿ ಬೃಹತ್ ವಾಹನವನ್ನು ಕೊಳ್ಳುವಿರಿ. ಧಾರ್ಮಿಕ ಸ್ಥಳದ ಅಭಿವೃದ್ಧಿಗಾಗಿ ಹಣ ವಿನಿಯೋಗಿಸುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕಟಕ

ಜವಾಬ್ದಾರಿಯಿಂದ ಕುಟುಂಬದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಸಂತೃಪ್ತಿಯ ವಾತಾವರಣ ಇರಲಿದೆ. ಸದಾ ಕಾಲ ಯಾವುದಾದರೊಂದು ಕೆಲಸದಲ್ಲಿ ತಲ್ಲೀನರಾಗುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಉದ್ಯೋಗದಲ್ಲಿನ ಅಧಿಕಾರ ನಿಮ್ಮದಾಗುತ್ತದೆ. ಎಲ್ಲರೂ ಆತ್ಮೀಯರಾಗಿ ನಿಮ್ಮೊಡನೆ ಇರಲಿದ್ದಾರೆ. ವಿದ್ಯಾರ್ಥಿಗಳು ಆತ್ಮಸ್ತೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ರಾಜಕೀಯ ಪ್ರವೇಶಿಸುವ ಆಶಯ ಇದ್ದಲ್ಲಿ ಪ್ರಯತ್ನಿಸಬಹುದು. ವ್ಯವಸಾಯಕ್ಕೆ ಅವಶ್ಯಕವಾದ ಯಂತ್ರೋಪಕರಣಗಳ ಸರಬರಾಜಿನಲ್ಲಿ ಹಣಗಳಿಸುವಿರಿ. ಅತಿಥಿ ಸತ್ಕಾರದಲ್ಲಿ ಸಂತಸ ಕಾಣುವಿರಿ. ಉತ್ತಮ ಆರೋಗ್ಯ ಇರಲಿದೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಸಿಂಹ

ಕುಟುಂಬದ ಯಾರ ಮಾತನ್ನೂ ಒಪ್ಪುವುದಿಲ್ಲ. ನಿಮ್ಮ ಮಾತೇ ಅಂತಿಮ ಆಗಲಿದೆ. ಆದ್ದರಿಂದ ಕುಟುಂಬದಲ್ಲಿ ಬಿಗುವಿನ ವಾತಾವರಣ ಇರುತ್ತದೆ. ಸ್ವಗೃಹ ಭೂಲಾಭವಿದೆ. ಹಣಕಾಸಿನ ವಿಚಾರದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ತಂದೆಯವರ ಹಠದ ಗುಣ ವಿವಾದವನ್ನು ಉಂಟುಮಾಡಬಹುದು. ವೃತ್ತಿಕ್ಷೇತ್ರದಲ್ಲಿ ಯಾವುದೇ ತೊಂದರೆ ಎದುರಾಗದು. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅಪರೂಪದ ಕಲೆಯೊಂದು ಒಲಿಯಲಿದೆ. ಗಾಳಿಮಾತನ್ನು ಒಪ್ಪುವ ಕಾರಣ ಮನೆಯಲ್ಲಿ ವಾದ ವಿವಾದಗಳು ಉಂಟಾಗಲಿವೆ. ಸಾಲದ ವ್ಯವಹಾರ ಮಾಡದಿರಿ. ಹೊಸ ಬಟ್ಟೆ ಕೊಳ್ಳುವಿರಿ

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಕನ್ಯಾ

ಅತಿಯಾಗಿ ಮಾತನಾಡದಿರಿ. ತಪ್ಪು ಮಾಹಿತಿಯನ್ನು ನಂಬಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ. ಉದ್ಯೋಗದಲ್ಲಿ ತೊಂದರೆ ಕಾಣದು. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಸಿನಿಂದ ವ್ಯಾಸಂಗದಲ್ಲಿ ತೊಡಗಿಸಿಕೊಳ್ಳುವರು. ಸೋದರನಿಗೆ ದೂರದ ಸ್ಥಳದಲ್ಲಿ ವೃತ್ತಿ ದೊರೆಯುತ್ತದೆ. ಲೇಖಕರು ಮತ್ತು ಕವಿಗಳಿಗೆ ಗೌರವಾದರಗಳು ಲಭಿಸುತ್ತವೆ. ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಇದು ಸುಸಂದರ್ಭವಲ್ಲ. ತಂದೆಯವರ ವ್ಯಾಪಾರದಲ್ಲಿ ಭಾಗಿಯಾದಲ್ಲಿ ಅನುಕೂಲ ಉಂಟಾಗಲಿದೆ. ಹಣದ ವಿವಾದವೊಂದು ದೂರವಾಗಲಿದೆ. ಸೋದರಿಯ ಜೀವನದಲ್ಲಿನ ವಿವಾದವು ಕೊನೆಗೊಳ್ಳುತ್ತವೆ. ಪ್ರಕೃತಿಯನ್ನು ಉಳಿಸುವ ಕೆಲಸ ಮಾಡುವಿರಿ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಂದು ಬಣ್ಣ

ತುಲಾ

ವಿಶ್ರಾಂತಿ ಇಲ್ಲದೆ ದುಡಿಯುವ ಕಾರಣ ಮನದಲ್ಲಿ ಬೇಸರ ಇರಲಿದೆ. ಸ್ನೇಹಿತರ ಜೊತೆಗೂಡಿ ಸಮಾಜಸೇವೆಯಲ್ಲಿ ತೊಡಗುವಿರಿ. ಉದ್ಯೋಗದಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಮಾಡಬಹುದು. ಬೃಹತ್ ಯಂತ್ರೋಪಕರಣಗಳ ಸರಬರಾಜಿನಲ್ಲಿ ಹೆಚ್ಚಿನ ಲಾಭಾಂಶ ಇರುತ್ತದೆ. ಕುಟುಂಬದಲ್ಲಿ ವಿರಸವಿರುತ್ತದೆ. ವಿರೋಧಿಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಆದಾಯದ ದೃಷ್ಟಿಯಿಂದ ಸೋದರರ ಜೊತೆಗೂಡಿ ವ್ಯಾಪಾರವನ್ನು ಆರಂಭಿಸುವಿರಿ. ಮಗಳು ಅಥವ ಸೋದರಿಯ ವಿವಾಹದ ಮಾತುಕತೆ ನಡೆಯುತ್ತದೆ. ಪುರಾತನ ಮನೆಯನ್ನು ನವೀಕರಿಸುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ವೃಶ್ಚಿಕ

ಸುಲಭವಾಗಿ ಕೈಹಿಡಿದ ಕೆಲಸ ಕಾರ್ಯಗಳು ಯಶಸ್ವಿ ಆಗುತ್ತವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕಣ್ಣಿನ ದೋಷ ಇರುತ್ತದೆ. ಮನೆತನದ ಆಸ್ತಿಯ ವಿಚಾರದಲ್ಲಿ ವಿವಾದವೊಂದು ಎದುರಾಗಲಿದೆ. ಹೆಚ್ಚಿನ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಗುರಿ ತಲುಪಲು ಸಾಧ್ಯ. ವಾಣಿಜ್ಯ ಸಂಸ್ಥೆಯ ಹೊಣೆಗಾರಿಕೆ ನಿಮ್ಮದಾಗಲಿದೆ. ಅನಗತ್ಯವಾದ ಖರ್ಚುವೆಚ್ಚಗಳು ಬೇಸರ ಮೂಡಿಸುತ್ತದೆ. ಯಂತ್ರೋಪಕರಣಗಳ ಮಾರಾಟದಲ್ಲಿ ಲಾಭವಿರುತ್ತದೆ. ಅನಾವಶ್ಯಕ ಮಾತುಕತೆಯಿಂದ ದೂರ ಉಳಿಯುವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಸಾರ್ವಜನಿಕರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡುವಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಧನಸ್ಸು

ಕುಟುಂಬದಲ್ಲಿನ ಅನಿಶ್ಚಿತ ವಾತಾವರಣದ ಕಾರಣ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ. ಅನವಶ್ಯಕ ಕೋಪಕ್ಕೆ ಒಳಗಾಗುವಿರಿ. ಅದೃಷ್ಟದ ಕಾರಣ ಕೈಹಿಡಿದ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ತಾಯಿಯವರ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ದಿನ ಕಳೆದಂತೆ ಪ್ರೀತಿ ವಿಶ್ವಾಸದಿಂದ ಎಲ್ಲರ ಜೊತೆ ಬೆರೆಯುವಿರಿ. ಸಂಗಾತಿಯ ಮಹದಾಸೆಯೊಂದು ನೆರವೇರುತ್ತದೆ. ಉದ್ಯೋಗದ ಉನ್ನತಿ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರಲಿದೆ. ವಿದ್ಯಾರ್ಥಿಗಳು ವ್ಯಾಸಂಗವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಹಣದ ಅತಿಯಾಸೆ ಇರದು. ಆದರೆ ಜೀವನಕ್ಕೆ ಸಾಕಾಗುವಷ್ಟು ಹಣವನ್ನು ಗಳಿಸುವಿರಿ. ವಂಶಾಧಾರಿತ ವೃತ್ತಿಯನ್ನು ಮುಂದುವರಿಸುವಿರಿ. ಧಾರ್ಮಿಕ ಕಾರ್ಯವೊಂದರ ನೇತೃತ್ವ ನಿಮ್ಮದಾಗುತ್ತದೆ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಮಕರ

ಸಮಯವನ್ನು ಅರಿತು ನಡೆವ ಕಾರಣ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಎಲ್ಲರೊಂದಿಗೆ ಸುಖಜೀವನ ನಡೆಸುವಿರಿ. ಉದ್ಯೋಗದಲ್ಲಿ ಕಾರ್ಯದ ಒತ್ತಡ ಅಧಿಕವಾಗಿರುತ್ತದೆ. ಮಾತುಕತೆಯ ಮೂಲಕ ಆಸ್ತಿಯ ವಿವಾದ ಬಗೆಹರಿಸುವಿರಿ. ಬಾಯಿಗೆ ಸಂಬಂಧಿಸಿದಂತೆ ಅನಾರೋಗ್ಯ ಇರುತ್ತದೆ. ಅತಿಯಾದ ಓಡಾಟದಿಂದಾಗಿ ಕೈಕಾಲುಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಾಸಸ್ಥಳವನ್ನು ಬದಲಾಯಿಸುವಿರಿ. ಸ್ನೇಹಿತರೊಬ್ಬರಿಗೆ ಹಣದ ಸಹಾಯ ಮಾಡುವಿರಿ. ಎಲ್ಲರನ್ನೂ ಅನುಮಾನದ ದೃಷ್ಠಿಯಲ್ಲಿ ನೋಡುವಿರಿ. ಮನೆಯಲ್ಲಿ ಮಂಗಳಕಾರ್ಯವೊಂದು ಯಶಸ್ವಿಯಾಗಿ ನಡೆಯಲಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಕುಂಭ

ಮಾಡಲು ಸಾಧ್ಯವೆನಿಸುವ ಕೆಲಸಗಳನ್ನು ಮಾತ್ರ ಆಯ್ಕೆ ಮಾಡುವಿರಿ. ಕುಟುಂಬದಲ್ಲಿ ಹೊಸತನ ಮನೆಮಾಡುತ್ತದೆ. ಯಾರ ಜೊತೆಯಲ್ಲಿಯೂ ಸುಲಭವಾಗಿ ಸ್ನೇಹ ಬೆಳೆಸುವುವಿಲ್ಲ. ಒತ್ತಡದ ಫಲವಾಗಿ ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ಪ್ರೀತಿ ವಿಶ್ವಾಸದಿಂದ ಇರಲು ಪ್ರಯತ್ನಿಸಿ. ನಿಮ್ಮಿಂದಾದ ತಪ್ಪಿಗೂ ಬೇರೆಯವರನ್ನು ದೂರುವಿರಿ. ಗುಟ್ಟಾಗಿ ಸ್ವಂತ ಕೆಲಸ ಸಾಧಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನೀರಿನ ಜೊತೆಯಲ್ಲಿ ಚೆಲ್ಲಾಟ ಆಡದಿರಿ. ಭೂವಿವಾದ ಇರುತ್ತದೆ. ವ್ಯಾಪಾರ ಮತ್ತು ಹಣಕಾಸಿನ ವ್ಯವಹಾರದಲ್ಲಿ ಯಶಸ್ಸು ಗಳಿಸುವಿರಿ. ಆರೋಗ್ಯಕ್ಕೆ ಸಂಬಂಧಿಸಿದ ಸೇವಾಧಾರಿತ ಉದ್ಯಮದಿಂದ ಧನಲಾಭವಿದೆ. ಮಕ್ಕಳಿಗೆ ಹೊಟ್ಟೆನೋವಿನ ತೊಂದರೆ ಉಂಟಾಗಬಹುದು.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಮೀನ

ಕೌಟುಂಬಿಕ ಕೆಲಸವನ್ನು ಅರೆಮನಸ್ಸಿನಿಂದ ಮಾಡುವಿರಿ. ಹಿರಿಯರ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಹಣದ ಕೊರತೆ ಕಾಣದು. ಮೋಡಿಯ ಮಾತಿನಿಂದಲೇ ಕೆಲಸ ಕಾರ್ಯಗಳನ್ನು ಸಾಧಿಸಬಲ್ಲಿರಿ. ಉದ್ಯೋಗದಲ್ಲಿ ತೊಂದರೆ ಇರದು. ಉದ್ಯೋಗ ಬದಲಾಯಿಸುವ ಸೂಚನೆಯಿದೆ. ವಿದ್ಯಾರ್ಥಿಗಳು ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತಾರೆ. ಕುಟುಂಬದಲ್ಲಿ ಒಮ್ಮತ ಇರುತ್ತದೆ. ಜಗಳ ಕದನಗಳನ್ನು ಇಷ್ಟಪಡುವುದಿಲ್ಲ. ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವಿರಿ. ಕೃಷಿಯಲ್ಲಿ ಆಸಕ್ತಿ ಇರುತ್ತದೆ. ಆಹಾರ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಮನೆಗೆ ಐಷಾರಾಮಿ ವಸ್ತುಗಳನ್ನು ಕೊಳ್ಳುವಿರಿ. ಮನೆಯನ್ನು ವಿಸ್ತರಿಸಲು ತೀರ್ಮಾನಿಸುವಿರಿ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ತಿಳಿನೀಲಿ

-------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).