Tomorrow Horoscope: ತಂದೆ ಮನೆತನದ ಆಸ್ತಿ ದೊರೆವ ಸಾಧ್ಯತೆ, ಪ್ರಾಣಿಗಳಿಂದ ತೊಂದರೆ ಆಗಬಹುದು ಎಚ್ಚರ; ಬುಧವಾರದ ದಿನಭವಿಷ್ಯ
28 February 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಬುಧವಾರದ ದಿನಭವಿಷ್ಯ ಹೀಗಿದೆ..
ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 28 February 2024)
ನಾಳಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಬುಧವಾರ
ತಿಥಿ : ಚೌತಿ ರಾ.12.44 ರವರೆಗು ಇದ್ದು ಆನಂತರ ಪಂಚಮಿ ಆರಂಭವಾಗುತ್ತದೆ.
ನಕ್ಷತ್ರ : ಚಿತ್ತೆ ನಕ್ಷತ್ರವು ದಿನ ಪೂರ್ತಿ ಇರುತ್ತದೆ.
ಸೂರ್ಯೋದಯ: ಬೆ.06.36
ಸೂರ್ಯಾಸ್ತ: ಸ.06.27
ರಾಹುಕಾಲ : ಮ.12.00ರಿಂದ ಮ.01.30
ಇಂದಿನ ವಿಶೇಷ : ಶ್ರೀ ಸಂಕಷ್ಟಹರ ಗಣಪತಿ ವ್ರತ
ರಾಶಿ ಫಲಗಳು
ಮೇಷ
ಮಾಡಲು ಅಸಾಧ್ಯವಾಗಿ ಉಳಿದಿದ್ದ ಕೆಲಸವೊಂದು ಸಂಗಾತಿಯ ಸಹಕಾರದಿಂದ ಕೈಗೂಡುವುದು. ಕುಟುಂಬದಲ್ಲಿ ಧನಾತ್ಮಕ ಚಿಂತನೆಗಳು ಇರಲಿವೆ. ಹೊಸ ಕೆಲಸಗಳನ್ನು ಆರಂಭಿಸುವ ಮುನ್ನ ಯೋಚಿಸಿ. ಉದ್ಯೋಗದಲ್ಲಿ ಯಾರನ್ನೂ ಟೀಕಿಸದೆ ಸ್ನೇಹದಿಂದ ವರ್ತಿಸಿ. ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ ಉಂಟಾಗದು. ಹಣಕಾಸಿನ ತೊಂದರೆ ಬಾರದು. ಆದರೆ ಅನಾವಶ್ಯಕ ಖರ್ಚಿನ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ತದೇಕಚಿತ್ತದಿಂದ ಓದಿನಲ್ಲಿ ಮಗ್ನರಾಗುತ್ತಾರೆ. ರೈತರಿಗೆ ಸಂತಸದ ದಿನ. ಪರಿಸ್ಥಿಯ ಒತ್ತಡಕ್ಕೆ ಒಳಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಯೋಗ ಪ್ರಾಣಾಯಾಮದ ತರಬೇತಿದಾರರಿಗೆ ವಿಶೇಷ ಗೌರವಾದರಗಳು ಲಭಿಸುತ್ತವೆ. ಆರೋಗ್ಯದ ಬಗ್ಗೆ ಗಮನವಿರಲಿ.
ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ರಕ್ತದ ಬಣ್ಣ
ವೃಷಭ
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ತಪ್ಪು ನಿರ್ಧಾರದಿಂದ ಕುಟುಂಬದಲ್ಲಿ ಒತ್ತಡದ ವಾತಾವರಣ ಇರಲಿದೆ. ಅನಿರೀಕ್ಶಿತ ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಕಣ್ಣಿನ ತೊಂದರೆ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ. ತಪ್ಪು ಕಲ್ಪನೆಯಿಂದ ನೆರೆಹೊರೆಯವರ ಜೊತೆಯಲ್ಲಿ ವಾದ ವಿವಾದವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತಂದೆಯವರ ಸಹಾಯ ನಿಮಗಿರುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧ್ಯವ್ಯ ಇರುತ್ತದೆ. ವಿದ್ಯೆಗಿಂತಲೂ ಬುದ್ಧಿಶಕ್ತಿ ದೊಡ್ಡ ವಿಪತ್ತಿನಿಂದ ಕಾಪಾಡುತ್ತದೆ. ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳು ಉನ್ನತ ಮಟ್ಟ ತಲುಪಲಿದ್ದಾರೆ. ಅನಾಥಾಶ್ರಮದಲ್ಲಿ ಆಹಾರದ ವ್ಯವಸ್ಥೆ ಮಾಡುವಿರಿ. ಮನದಲ್ಲಿ ಅಳುಕಿನ ಭಾವನೆ ಇರಲಿದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಎಲೆಹಸಿರು ಬಣ್ಣ
ಮಿಥುನ
ಅದೃಷ್ಟವಿದೆ. ಆದರೆ ದೊರೆವ ಅವಕಾಶಗಳನ್ನು ಸಮರ್ಥಕವಾಗಿ ಬಳಸಿಕೊಳ್ಳಬೇಕು. ಹಣಕಾಸಿನ ತೊಂದರೆ ಬಾರದು. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಮಾತಿನಲ್ಲಿ ನಯವಿರಲಿ. ಭೂವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಮನರಂಜನೆಯನ್ನು ಕಡಿಮೆ ಮಾಡುವುದು ಒಳಿತು. ಕಾನೂನು ಚೌಕಟ್ಟಿನಲ್ಲಿ ಮಾಡುವ ಲೇವಾ ದೇವಿ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಖರ್ಚು ಹೆಚ್ಚಾದಲ್ಲಿ ಸಹನೆ ಮರೆತು ಉದ್ವೇಗದಿಂದ ವರ್ತಿಸುವಿರಿ. ಸಂಗಾತಿಗಾಗಿ ಆಭರಣವನ್ನು ಕೊಳ್ಳುವಿರಿ.
ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಕಟಕ
ಅಂಜಿಕೆಯಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕುಟುಂಬದಲ್ಲಿ ಪರಸ್ಪರ ಸಹಕಾರದ ಗುಣ ಇರುತ್ತದೆ. ಮನಸ್ಸು ಮಾಡಿದರೆ ನಿಮಗೆ ಯಾವ ಕೆಲಸವೂ ಅಸಾಧ್ಯವಾಗದು. ವ್ಯಾಪಾರ ವ್ಯವಹಾರದಲ್ಲಿ ಆತುರದಿಂದ ತೊಂದರೆ ಎದುರಿಸಬೇಕಾಗುತ್ತದೆ. ಉದ್ಯೋಗವನ್ನು ಬದಲಾಯಿಸುವ ವಿಚಾರ ಮುಂದೂಡುವಿರಿ. ವಿದ್ಯಾರ್ಥಿಗಳು ಸುಲಭವಾಗಿ ಶುಭ ಫಲಗಳನ್ನು ಪಡೆಯಲಿದ್ದಾರೆ. ಹಣಕಾಸಿನ ವಿವಾದವೊಂದರಲ್ಲಿ ಕಾನೂನಿನ ಮೂಲಕ ಜಯ ಗಳಿಸುವಿರಿ. ದಂಪತಿಗಳ ನಡುವೆ ಹೊಂದಾಣಿಕೆಯ ಕೊರತೆ ಇರುತ್ತದೆ. ಆತ್ಮೀಯರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ಕೃಷಿ ಕಾರ್ಯದಲ್ಲಿ ಆಸಕ್ತಿ ಇರುತ್ತದೆ. ಕಷ್ಟದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ.
ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಸಿಂಹ
ಕುಟುಂಬದ ಸದಸ್ಯರ ನಡುವೆ ಹಣಕಾಸಿನ ವಿಚಾರದಲ್ಲಿ ಭಿನಾಭಿಪ್ರಾಯ ಇರಲಿದೆ. ಸಹೋದ್ಯೋಗಿಗಳ ಜೊತೆಯಲ್ಲಿ ಉದ್ಯೋಗದ ಮೇಲೆ ವಿದೇಶಕ್ಕೆ ತೆರಳುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಬಿಗುವಿನ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ಹಠದಿಂದಾಗಿ ವ್ಯಾಸಂಗದಲ್ಲಿ ಮುಂದಿರುತ್ತಾರೆ. ಸರ್ಕಾರದ ಸಹಯೋಗದಲ್ಲಿ ದಂಪತಿಗಳ ಸಂಧಾನ ಕೇಂದ್ರವನ್ನು ಆರಂಭಿಸುವಿರಿ. ಭೂವ್ಯವಹಾರದಲ್ಲಿ ಉತ್ತಮ ಲಾಭಾಂಶ ಇರುತ್ತದೆ. ಕಣ್ಣಿನ ದೋಷ ಇರುತ್ತದೆ. ವಾಸಸ್ಥಳ ಬದಲಿಸುವ ಸಾಧ್ಯತೆ ಇರುತ್ತದೆ. ದೂರದ ಸಂಬಂಧಿಗಳ ವಿವಾಹಕ್ಕೆ ಹಣದ ಸಹಾಯ ಮಾಡುವಿರಿ. ಪ್ರಾಣಿಗಳಿಂದ ತೊಂದರೆ ಆಗಬಹುದು ಎಚ್ಚರ. ಸಾಲದ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಬಹುದು.
ಪರಿಹಾರ : ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹೊಸ ಉಡುಗೆ ತೊಡುಗೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಕನ್ಯಾ
ಸ್ಥಿರವಾದ ಮನಸ್ಸಿನ ಕೊರತೆ ಕುಟುಂಬದ ಶಾಂತಿಯನ್ನು ಕದಡುತ್ತದೆ. ಉದ್ಯೋಗದಲ್ಲಿ ವಿವಾದವೊಂದು ಕಾನೂನಿನ ಸಹಾಯದಿಂದ ಬಗೆಹರಿಯುತ್ತದೆ. ಸಂಗಾತಿಯ ಸಹಾಯದಿಂದ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟ ತಲ್ಲುಪುವರು. ತಂದೆಯ ಸಹಾಯದಿಂದ ಹುಟ್ಟೂರಲ್ಲಿ ಸ್ಥಿರಾಸ್ಥಿಯನ್ನು ಕೊಳ್ಳುವಿರಿ. ಸೋದರರ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಹೆಚ್ಚಿನ ಆದಾಯಕ್ಕಾಗಿ ಸಣ್ಣಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಸೋದರಿಗೆ ವಿಶೇಷವಾದ ಐಶ್ವರ್ಯ ದೊರೆಯುತ್ತದೆ. ಆತ್ಮೀಯರೊಂದಿಗೆ ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ.
ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ತುಲಾ
ವಿಶ್ರಾಂತಿ ಇಲ್ಲದೆ ಕೆಲಸವನ್ನು ಮಾಡುವಿರಿ. ಕುಟುಂಬದಲ್ಲೆ ಅವಿಶ್ವಾಸ ತುಂಬಿರುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಉದ್ಯೋಗದಲ್ಲಿ ಆತಂಕದ ಪರಿಸ್ಥಿತಿ ಇದ್ದರೂ ತೊಂದರೆ ಆಗದು. ಅವಶ್ಯಕತೆ ಇದ್ದಲ್ಲಿ ವೃತ್ತಿಯನ್ನು ಬದಲಿಸಬಹುದು. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ಮಾಡಬಹುದು. ಸ್ನೇಹಿತರ ಜೊತೆಯಲ್ಲಿ ಉತ್ತಮ ಸಂಬಂಧವಿರುತ್ತದೆ. ಲೆಕ್ಕಾಚಾರ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ದೊರೆಯಲಿದೆ. ಸಂಸಾರದಲ್ಲಿ ಹಣಕಾಸಿನ ವಿವಾದವೊಂದು ಎದುರಾಗುತ್ತದೆ. ಪಾಲುಗಾರಿಕೆಯ ವ್ಯವಹಾರ ಒಳ್ಳೆಯದು. ಭೂವ್ಯವಹಾರ ಬೇಡ. ಮನೆಯ ನವೀಕರಣ ಮಾಡಲಿರುವಿರಿ. ವಾಹನವನ್ನು ಬದಲಾಯಿಸುವಿರಿ.
ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಹಳದಿ ಬಣ್ಣ
ವೃಶ್ಚಿಕ
ಯಾರ ಮಾತನ್ನೂ ಸುಲಭವಾಗಿ ಒಪ್ಪುವುದಿಲ್ಲ. ಸ್ವತಂತ್ರವಾಗಿ ಕುಟುಂಬದ ಕೆಲಸ ಕಾರ್ಯಗಳನ್ನು ಮಾಡುವಿರಿ. ಮಾನಸಿಕ ನೆಮ್ಮದಿ ಇರುವುದಿಲ್ಲ. ಸಣ್ಣ ಪುಟ್ಟ ವಿಚಾರಗಳನ್ನು ಅತಿ ಗಂಭೀರವಾಗಿ ಪರಿಗಣಿಸುವಿರಿ. ಉದ್ಯೋಗದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ವಿದೇಶದಲ್ಲಿ ಉದ್ಯೋಗ ದೊರೆಯಬಹುದು. ದಂಪತಿಗಳ ನಡುವೆ ಹೊಂದಾಣಿಕೆಯ ಕೊರತೆ ಇರುತ್ತದೆ. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಮನಸ್ಸಿಟ್ಟು ಓದಿನಲ್ಲಿ ತೊಡಗಬೇಕಾಗುತ್ತದೆ. ಪಾಲುಗಾರಿಕೆಯ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಪಶುಸಂಗೋಪನೆಯಲ್ಲಿ ಆಸಕ್ತಿ ಮೂಡಲಿದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಈಶಾನ್ಯ ಅದೃಷ್ಟದ ಬಣ್ಣ: ಹಸಿರು ಬಣ್ಣ
ಧನಸ್ಸು
ಆತುರದಿಂದ ತೆಗೆದುಕೊಂಡ ತೀರ್ಮಾನಗಳು ಕುಟುಂಬದಲ್ಲಿ ಬೇಸರ ಮೂಡಿಸುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ಧೈರ್ಯದಿಂದ ಹೊಸ ವ್ಯಾಪರವೊಂದನ್ನು ಆರಂಭಿಸುವಿರಿ. ಕ್ಷಮಾಗುಣದಿಂದ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಸಂಗಾತಿಯನ್ನು ಪ್ರೀತಿ ವಿಶ್ವಾಸದಿಂದ ಕಾಣಿರಿ. ಹೊಸ ಮನೆಯನ್ನು ಕೊಳ್ಳುವ ಯೋಜನೆ ಮಾಡುವಿರಿ. ಜನಸೇವೆ ಮಾಡುವ ಹಂಬಲ ಇರುತ್ತದೆ. ರಾಜಕೀಯ ಕ್ಷೇತ್ರ ಸೇರುವ ಆಸೆ ಮೂಡಲಿದೆ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ.
ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ನೀಲಿ ಬಣ್ಣ
ಮಕರ
ಬುದ್ಧಿವಂತರಾದರು ಕುಟುಂಬದಲ್ಲಿ ಸಹಕಾರ ಇರುವುದಿಲ್ಲ. ಇದರಿಂದ ಮನಸ್ಸಿಗೆ ಬೇಸರವಿರುತ್ತದೆ. ಉದ್ಯೋಗ ಬದಲಿಸುವ ವಿಚಾರದಲ್ಲಿ ಸಮಯಕ್ಕೆ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹಿಂಜರಿಕೆ ಇರುವುದಿಲ್ಲ. ಕಷ್ಟ ಪಟ್ಟು ದುಡಿಯುವಿರಿ. ಸಂಗಾತಿಯ ಜೊತೆಯಲ್ಲಿ ಹಣದ ವ್ಯವಹಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಹೊರಬರಬೇಕು. ವಂಶಕ್ಕೆ ಸೇರಿದ ಪುರಾತನ ಗೃಹವನ್ನು ನವೀಕರಣಗೊಳಿಸಲು ಹಣವನ್ನು ಖರ್ಚು ಮಾಡುವಿರಿ. ಭೂಖರೀದಿಯ ವಿಚಾರದಲ್ಲಿ ವಿವಾದವಿರುತ್ತದೆ. ತಾಯಿಯವರಿಗೆ ತವರಿನ ಬೆಂಬಲವಿರುತ್ತದೆ. ಆತ್ಮೀಯರ ಆಸ್ತಿ ವಿವಾದ ಬಗೆಹರಿಸುವಿರಿ.
ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ಕುಂಭ
ಸಂತಸವನ್ನು ಎಲ್ಲರೊಂದಿಗೆ ಹಂಚುವ ನೀವು ನೋವನ್ನು ಮರೆ ಮಾಚುವಿರಿ. ಕುಟುಂಬದಲ್ಲಿನ ಜವಾಬ್ದಾರಿಯು ಹೆಚ್ಚುತ್ತದೆ. ಉದ್ಯೋಗದಲ್ಲಿನ ನಿಮ್ಮ ಕಾರ್ಯದಕ್ಷತೆ ಎಲ್ಲರ ಮನಗೆಲ್ಲುತ್ತದೆ. ಸ್ವಂತ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತದೆ. ಯಶಸ್ಸನ್ನು ಗಳಿಸುವವರೆಗು ವಿಶ್ರಾಂತಿ ಪಡೆಯುವುದಿಲ್ಲ. ತಂದೆಯವರ ಮನೆತನದ ಆಸ್ತಿ ದೊರೆವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವಿಚಾರವಾಗಿ ಎಲ್ಲರ ಸಹಕಾರ ದೊರೆಯುತ್ತದೆ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ವರ್ತಮಾನವೊಂದು ಬರಲಿದೆ. ಜನೋಪಕಾರಿ ಕೆಲಸದಲ್ಲಿ ಮುಂದೆ ಇರುವಿರಿ. ಸಾಲದ ವ್ಯವಹಾರಗಳಲ್ಲಿ ನಂಬಿಕೆ ಇರುವುದಿಲ್ಲ. ಜನರ ಕಷ್ಟವನ್ನುಅರಿತು ಅವರಿಗೆ ನೆರವಾಗುವಿರಿ.
ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಮೀನ
ಎಲ್ಲರನ್ನೂ ಸಮಾನ ಗೌರವದಿಂದ ಆದರಿಸುವಿರಿ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ವಿಶೇಷವಾದ ಪುರಸ್ಕಾರ ದೊರೆಯಲಿದೆ. ಹಣಕಾಸಿನ ವಿವಾದಗಳಿಗೆ ಸೂಕ್ತ ಪರಿಹಾರವನ್ನು ಸೂಚಿವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಉಂಟಾದರೂ ನಿಮ್ಮ ಪರವಾಗಿರುತ್ತದೆ. ವ್ಯಾಪಾರ ವಹಿವಾಟುಗಳು ನಿಮ್ಮಿಚ್ಛೆಯಂತೆ ನಡೆಯಲಿದೆ. ಆರೋಗ್ಯದ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ವಿದೇಶಿ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುತ್ತದೆ. ಹಣದ ವ್ಯಾಮೋಹ ಇರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ಮಕ್ಕಳ ಜೊತೆಯಲ್ಲಿ ವ್ಯಾಪಾರವನ್ನು ಆರಂಭಿಸುವಿರಿ. ಕ್ರೀಡಾ ಸ್ಪರ್ಧೆಗಳಲ್ಲಿ ವೇಳೆ ಕಳೆಯುವಿರಿ. ಅತಿಯಾದ ನಿದ್ದೆ ನಿಮ್ಮನ್ನು ಕಾಡಲಿದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ತಿಳಿನೀಲಿ
---------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).