Tomorrow Horoscope: ಹಣದ ವಿವಾದ ಸುಖಾಂತ್ಯ, ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಿಂದ ಉನ್ನತ ಅಧಿಕಾರ; ಬುಧವಾರದ ದಿನಭವಿಷ್ಯ
6 March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಬುಧವಾರದ ದಿನಭವಿಷ್ಯ ಹೀಗಿದೆ..

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 6 March 2024)
ನಾಳಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಬುಧವಾರ
ತಿಥಿ : ಏಕಾದಶಿ ರಾ.11.53 ರವರೆಗು ಇದ್ದು ಆನಂತರ ದ್ವಾದಶಿ ಆರಂಭವಾಗುತ್ತದೆ.
ನಕ್ಷತ್ರ: ಪೂರ್ವಾಷಾಡ ನಕ್ಷತ್ರವು ಹ.10.35 ರವರೆಗೆ ಇರುತ್ತದೆ. ಆನಂತರ ಉತ್ತರಾಷಾಡ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.32
ಸೂರ್ಯಾಸ್ತ: ಸ.06.27
ರಾಹುಕಾಲ : ಹ.12.00 ರಿಂದ ಹ.01.30
ರಾಶಿ ಫಲಗಳು
ಮೇಷ
ನಿರಾಶೆಯ ನಡುವೆಯೂ ಕುಟುಂಬದಲ್ಲಿ ಹೊಸ ಆಶಾಭಾವನೆ ಮನೆಮಾಡಿರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕರ್ತವ್ಯನಿಷ್ಠೆಗೆ ಮಾರುಹೋಗುತ್ತಾರೆ. ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ವರಮಾನಕ್ಕೆ ತೊಂದರೆ ಇರದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಸಮಾಜದ ಗಣ್ಯರ ಸ್ನೇಹ ದೊರೆಯುತ್ತದೆ. ಆತ್ಮೀಯರ ಕೆಲಸದಲ್ಲಿ ಭಾಗಿಯಾಗುವಿರಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ದೊರೆಯುತ್ತದೆ. ಮನದಲ್ಲಿ ಬೇಡದ ವಿಚಾರದ ಬಗ್ಗೆ ಚಿಂತೆ ಇರುತ್ತದೆ. ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ. ತಂದೆಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಾದ ವಿವಾದಗಳಿರುತ್ತವೆ.
ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬೂದು ಬಣ್ಣ
ವೃಷಭ
ಕುಟುಂಬದಲ್ಲಿ ಪ್ರೀತಿ ಮಮತೆ ನೆಲಸಿರುತ್ತದೆ. ಉದ್ಯೋಗದಲ್ಲಿ ದುಡುಕದೆ ಬೇರೆಯವರ ತಪ್ಪನ್ನು ಮನ್ನಿಸಿ. ದುಡುಕದೆ ಸಮಯಕ್ಕೆ ತಕ್ಕಂತಹ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳು ನಿಮ್ಮ ಇಚ್ಚೆಯಂತೆ ನಡೆಯಲಿವೆ. ವಿದ್ಯಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ಸಾಗುತ್ತಾರೆ. ಶಾಂತ ಸ್ವಭಾವದವರಾದರೂ ಚಿಕ್ಕ ಪುಟ್ಟ ವಿಚಾರಗಳಿಗೂ ಕೋಪಗೊಳ್ಳುವಿರಿ. ಹೊಸತನ್ನು ನಿರೀಕ್ಷಿಸುತ್ತಾ ಸಹೋದ್ಯೋಗಿಗಳನ್ನೂ ಹುರಿದುಂಬಿಸುವಿರಿ. ತಪ್ಪನ್ನು ಮನ್ನಿಸದೆ ನೇರ ಮತ್ತು ನಿಷ್ಠುರದ ಮಾತುಗಳನ್ನು ಆಡುವಿರಿ. ಆತ್ಮೀಯರೊಬ್ಬರ ನಡುವೆ ಹಣಕಾಸಿನ ವಿವಾದ ಉಂಟಾಗಬಹುದು. ಧಾರ್ಮಿಕ ಕೇಂದ್ರಕ್ಕೆ ಹಣದ ಸಹಾಯ ಮಾಡುವಿರಿ.
ಪರಿಹಾರ : ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಕಂದು ಬಣ್ಣ
ಮಿಥುನ
ಕುಟುಂಬದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಶಾಂತಿ ನೆಮ್ಮದಿಯಿಂದ ದಿನ ಕಳೆಯುವಿರಿ. ಉದ್ಯೋಗದಲ್ಲಿ ಪರಸ್ಪರ ಅನುಸರನಾ ಗುಣ ಇರುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಕಂಡುಬರದು. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಜನೋಪಕಾರಿ ಕೆಲಸವನ್ನು ಮಾಡುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಖರ್ಚು ವೆಚ್ಚಗಳು ಹೆಚ್ಚಾದಲ್ಲಿ ಸಹನೆ ಕಳೆದುಕೊಳ್ಳುವಿರಿ. ಸಂಘ ಸಂಸ್ಥೆಯ ಆಡಳಿತ ಇದ್ದಲ್ಲಿ ವಿವಾದವೊಂದು ಎದುರಾಗಲಿದೆ. ಹಣಕಾಸಿನ ವಿವಾದಕ್ಕೆ ಅನಾವಶ್ಯಕವಾಗಿ ಸಿಲುಕುವ ಸಂಭವವಿದೆ. ಸೋದರಿಗೆ ಹಣದ ಸಹಾಯವನ್ನು ಮಾಡುವಿರಿ. ಅನಗತ್ಯ ಚಿಂತೆ ಮಾಡದಿರಿ.
ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ಕಟಕ
ಕುಟುಂಬದಲ್ಲಿ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ಗೌರವ ಇರುತ್ತದೆ. ಪ್ರೀತಿ ವಿಶ್ವಾಸಕ್ಕೆ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ಹಿರಿಯರ ಸಹಾಯದಿಂದ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿ ನಡೆಯುತ್ತವೆ. ವಿದ್ಯಾರ್ಥಿಗಳು ಏಕಾಂಗಿತನದಿಂದ ಹೊರಬರಬೇಕು. ಸಂಗಾತಿಯ ಮಾತನ್ನು ಕೇಳಿದಲ್ಲಿ ಹಣದ ವಿಚಾರದಲ್ಲಿ ತೊಂದರೆ ಆಗದು. ಮನೆಯ ಮುಖ್ಯ ವಿಚಾರದಲ್ಲಿ ತಾಯಿಯವರ ತೀರ್ಮಾನವೇ ಅಂತಿಮವಾಗುತ್ತದೆ. ಹಣದ ವಿವಾದವೊಂದು ಕಾನೂನಿನ ಮೂಲಕ ಸುಖಾಂತ್ಯಗೊಳ್ಳುತ್ತದೆ. ವಂಶದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಪ್ರವಾಸಗಳನ್ನು ಆಯೋಜಿಸುವ ವ್ಯವಹಾರದಲ್ಲಿ ಲಾಭವಿರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಸಿಂಹ
ಕುಟುಂಬದಲ್ಲಿ ಬಿಗುವಿನ ವಾತಾವರಣ ಕಂಡುಬರುತ್ತದೆ. ನಿಮ್ಮ ನಿರ್ಧಾರವೇ ಅಂತಿಮವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಗಳಿಸುವಿರಿ. ಸೇವಾಧಾರಿತ ವ್ಯಾಪಾರ ವ್ಯವಹಾರದಲ್ಲಿ ವಿಶೇಷ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಗುರು ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಾರೆ. ಸರಕಾರದ ಅನುದಾನದಲ್ಲಿ ಸಮಾಜಸೇವೆಯ ಸೇವಾವೃತ್ತಿ ಆರಂಭಿಸುವಿರಿ. ಅವಿವಾಹಿತರಿಗೆ ವಿವಾಹದ ಮಾತಾಗುತ್ತದೆ. ಶಾಂತಿ ಸಹನೆಯಿಂದ ಎಲ್ಲರ ಮನಸ್ಸಾನ್ನು ಗೆಲ್ಲಬಲ್ಲಿರಿ. ಧಾರ್ಮಿಕ ಗುರುಗಳ ಆಶೀರ್ವಾದ ದೊರೆಯುತ್ತದೆ. ಅಪರಿಚಿತರಿಂದ ಹಣವನ್ನು ಪಡೆದು ದಿನದ ಕೆಲಸ ಆರಂಭಿಸುವಿರಿ. ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ಸಹಾಯ ಮಾಡುವಿರಿ.
ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಕನ್ಯಾ
ಕೌಟುಂಬಿಕ ಕಲಹವೊಂದು ಅಂತಿಮ ಹಂತಕ್ಕೆ ಬರಲಿದೆ. ಉದ್ಯೋಗದಲ್ಲಿ ಸ್ಥಿರತೆ ಕಂಡುಬರದ ಕಾರಣ ಉದ್ಯೋಗವನ್ನು ಬದಲಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರೆಯಬೇಕು. ಪರಿಸರವನ್ನು ಕಾಪಾಡುವ ಕಾಯಕವನ್ನು ಆರಿಸುವಿರಿ. ಯಂತ್ರ ಸಂಬಂಧಿತ ಸಂಸ್ಥೆಯಲ್ಲಿ ವ್ಯಾಪಾರದ ಸಹಯೋಗ ದೊರೆಯುತ್ತದೆ. ನೀರಿನ ಜೊತೆ ಚೆಲ್ಲಾಟವಾಡದಿರಿ. ಹಿರಿಯ ಸೋದರನ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಇರುತ್ತದೆ. ಕತ್ತಿನಲ್ಲಿ ನೋವಿನ ತೊಂದರೆ ಇರುತ್ತದೆ. ಚಿನ್ನ ಬೆಳ್ಳಿಯ ಒಡವೆಗಳಿಗೆ ಹೆಚ್ಚಿನ ಹಣ ಖರ್ಚಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ತುಲಾ
ಕುಟುಂಬದ ಎಲ್ಲರಲ್ಲಿ ಆತುರದ ಭಾವನೆ ಸ್ವಭಾವ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಹಣಕಾಸಿನ ವ್ಯವಹಾರದ ಮಧ್ಯಸ್ಥಿಕೆಯಲ್ಲಿ ತೊಂದರೆ ಎದುರಿಸುವಿರಿ. ತಂದೆಯವರ ವ್ಯಾಪಾರದಲ್ಲಿ ನೆರವಾದಲ್ಲಿ ಹೆಚ್ಚಿನ ಅನುಕೂಲವಿದೆ. ತಾಯಿಯವರಿಗೆ ಸೋದರ ವರ್ಗದವರಿಂದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ರಾಜಕೀಯದ ನಂಟು ದೊರೆಯುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಿಂದ ಉನ್ನತ ಅಧಿಕಾರ ಗಳಿಸುವಿರಿ. ಯಂತ್ರ ಜ್ಞಾನಗಳಿಸಲು ವಿದೇಶಕ್ಕೆ ತೆರಳುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕಿನ ತೀರ್ಮಾನವನ್ನು ತೆಗೆದುಕೊಳ್ಳದಿರಿ. ಪಾಲುಗಾರಿಕೆ ವ್ಯಾಪಾರವು ಮಧ್ಯಮಗತಿಯಲ್ಲಿ ನಡೆಯಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರಬಹುದು.
ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ವೃಶ್ಚಿಕ
ಕುಟುಂಬದಲ್ಲಿ ಎಲ್ಲರೂ ಹಠದಿಂದ ವರ್ತಿಸುವ ಕಾರಣ ನೆಮ್ಮದಿ ಇರದು. ಛಲದ ಗುಣದಿಂದ ನೆಮ್ಮ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಉದ್ಯೋಗದಲ್ಲಿ ಸ್ನೇಹಮಯ ಪರಿಸರವಿರುತ್ತದೆ. ಉದ್ಯೋಗದಲ್ಲಿನ ವಿವಾದದಿಂದ ಬುದ್ಧಿವಂತಿಕೆಯಿಂದ ಪಾರಾಗುವಿರಿ. ವ್ಯಾಪಾರ ವ್ಯವಹಾರದ್ದಲ್ಲಿ ಯಶಸ್ವಿಯಾಗಿ ಮುಂದುವರಿಯುವಿರಿ. ವಾಸ ಸ್ಥಳವನ್ನು ಬದಲಾಯಿಸುವಿರಿ. ಹಣಕಾಸಿನ ಕೊರತೆಯು ಕ್ರಮೇಣವಾಗಿ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳು ಸತತ ಅಭ್ಯಾಸದಲ್ಲಿ ತೊಡಗುತ್ತಾರೆ. ಸಂಗಾತಿಯ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುತ್ತವೆ. ಭೂವ್ಯವಹಾರದಲ್ಲಿ ಸಾಧಾರಣ ಲಾಭವಿರುತ್ತದೆ. ಸಾಲದ ವ್ಯವಹಾರ ಮಾಡದಿರಿ. ಚರ್ಮದ ದೋಷ ಇರಲಿದೆ.
ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಧನಸ್ಸು
ಕುಟುಂಬದಲ್ಲಿ ಆಶಾದಾಯಕ ಬದಲಾವಣೆ ಕಾಣುತ್ತದೆ. ಉದ್ಯೋಗದಲ್ಲಿ ಸಮಯಕ್ಕೆ ತಕ್ಕಂತೆ ನಡೆದಲ್ಲಿ ಯಾವುದೇ ತೊಂದರೆ ಬಾರದು. ವ್ಯಾಪಾರ ವ್ಯವಹಾರದಲ್ಲಿ ಕೊಂಚ ಅಳುಕು ಸ್ವಭಾವ ಇರುತ್ತದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಕಂಡುಬರುತ್ತದೆ. ಕುಟುಂಬದ ಒಳಗೂ ಹೊರಗೂ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ವಿನಾಕಾರಣ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಿಸದಿರಿ. ಕುಟುಂಬದವ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ವೈವಾಹಿಕ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮಕ್ಕಳ ಜೀವನದಲ್ಲಿ ಅನುಕೂಲತೆಗಳು ದೊರೆಯಲಿವೆ. ಹೊಸ ವಾಹನವನ್ನು ಕೊಳ್ಳುವ ಮನಸ್ಸಿರುತ್ತದೆ. ಕಣ್ಣಿನ ತೊಂದರೆ ಉಂಟಾಗಬಹುದು.
ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಮಕರ
ಕುಟುಂಬದಲ್ಲಿ ಸಂತಸದ ಜೀವನ ಇರಲಿದೆ. ಮಕ್ಕಳ ಮನ ಮೆಚ್ಚಿಸಲು ಹೆಚ್ಚಿನ ಹಣ ಖರ್ಚುಮಾಡುವಿರಿ. ಉದ್ಯೋಗದಲ್ಲಿ ಅಸಹಜ ಬದಲಾವಣೆ ಕಂಡುಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಲಾಭವಿರುವ ಕೆಲಸಗಳನ್ನು ಮಾತ್ರವೇ ಮಾಡಲು ಇಷ್ಟ ಪಡುವಿರಿ. ಉದ್ಯೋಗ ಬದಲಿಸಲು ಇದು ಸಕಾಲವಲ್ಲ. ಕಷ್ಟಪಟ್ಟು ದುಡಿದಲ್ಲಿ ಉದ್ಯೋಗದಲ್ಲಿ ಸಾಧಾರಣ ಉನ್ನತಿ ಕಂಡುಬರುತ್ತದೆ. ಮನರಂಜನೆ ಮರೆತು ವಿಧ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುವರು. ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಕಾರ್ಮಿಕರಿಗೆ ಸಹಾಯ ಮಾಡುವಿರಿ. ಷೇರಿನ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.
ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಕುಂಭ
ಹಠದ ಗುಣದಿಂದಾಗಿ ಕುಟುಂಬದ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಉದ್ಯೋಗದಲ್ಲಿನ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳ ನಿರೀಕ್ಷಿಸಿದ ಯಶಸ್ಸು ಗಳಿಸುತಾರೆ. ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುವವರೆಗೂ ರಹಸ್ಯವನ್ನು ಕಾಪಾಡುವಿರಿ. ಸೋದರನ ಜೊತೆಗಿನ ಮನಸ್ತಾಪವು ಕೊನೆಗೊಳ್ಳಲಿದೆ. ತಂದೆಯವರ ವ್ಯಾಪಾರದಲ್ಲಿನ ಯಶಸ್ಸಿಗೆ ಕಾರಣರಾಗುವಿರಿ. ಅನಾವಶ್ಯಕವಾಗಿ ಯಾವುದೇ ಕೆಲಸವನ್ನು ಮುಂದೂಡದಿರಿ. ಸಾಲದ ವ್ಯವಹಾರ ಬೇಡ. ಅತಿ ಸರಳವಾದ ಕೆಲಸವನ್ನೂ ಸಹ ಜಾಗರೂಕತೆಯಿಂದ ನಿಧಾನವಾಗಿ ಮಾಡುವಿರಿ. ಎಲ್ಲರಜೊತೆ ಪ್ರೀತಿ ವಿಶ್ವಾಸದಿಂದ ಇರಲು ಪ್ರಯತ್ನಿಸಿ.
ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಹಳದಿ ಮಿಶ್ರಿತಕೆಂಪು ಬಣ್ಣ
ಮೀನ
ಕುಟುಂಬದಲ್ಲಿ ಹೊಸ ನಿರೀಕ್ಷೆ ಮತ್ತು ಸಂತಸ ತುಂಬಿರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಕಾರ್ಯದಕ್ಷತೆಯಿಂದ ಮೆಚ್ಚುಗೆ ಮತ್ತು ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ಕೊರತೆ ಇದ್ದಲ್ಲಿ ಕುಟುಂಬದರ ಸಹಾಯ ದೊರೆಯುತ್ತದೆ. ಅದೃಷ್ಟದಿಂದ ವಿದ್ಯಾರ್ಥಿಗಳ ಆಶೋತ್ತರಗಳು ಸುಲಭವಾಗಿ ನೆರವೇರಲಿವೆ. ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ಆತ್ಮೀಯರ ಒಡನೆ ಸ್ವಂತ ಮನೆ ಕೊಳ್ಳುವ ಬಗ್ಗೆ ಮಾತುಕತೆ ನಡೆಸುವಿರಿ. ಅಶಕ್ತರ ಜೀವನಕ್ಕೆ ಆಧಾರವಾಗುವಿರಿ. ಸಂಗಾತಿಯ ಒಡಗೂಡಿ ವಿದೇಶ ಪ್ರಯಾಣ ಮಾಡುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಮಕ್ಕಳಿಗೆ ಬೆಳ್ಳಿಯ ಉಡುಗೊರೆ ನೀಡುವಿರಿ. ಕುಟುಂಬದವರ ಜೊತೆ ಮನ ತಣಿಸುವ ತಾಣಕ್ಕೆ ಪ್ರವಾಸಕ್ಕೆ ತೆರಳುವಿರಿ.
ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ : ಬೆಳ್ಳಿಯ ಬಣ್ಣ
--------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
