Trigrahi Yogam: 10 ವರ್ಷಗಳ ನಂತರ ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗ; ಈ ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Trigrahi Yogam: 10 ವರ್ಷಗಳ ನಂತರ ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗ; ಈ ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

Trigrahi Yogam: 10 ವರ್ಷಗಳ ನಂತರ ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗ; ಈ ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

Trigrahi Yogam: ಸುಮಾರು 10 ವರ್ಷಗಳ ನಂತರ ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪಗೊಳ್ಳುತ್ತಿದೆ. ಮಾರ್ಚ್‌14 ರಂದು ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸಿದ್ಧಾನೆ. ಇದರ ಪರಿಣಾಮ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತಿದೆ.

ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಅದೃಷ್ಟ
ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಅದೃಷ್ಟ (PC: Pixabay)

ತ್ರಿಗ್ರಾಹಿ ಯೋಗ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದ ನಂತರ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ ರೀತಿ ಸ್ಥಾನಪಲ್ಲಟವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವರು ರಾಶಿಯವರಿಗೆ ಶುಭವಾದರೆ, ಕೆಲವರಿಗೆ ಮಿಶ್ರ ಫಲಿತಾಂಶ, ಇನ್ನೂ ಕೆಲವರಿಗೆ ಅಶುಭ ಫಲಗಳನ್ನು ನೀಡುತ್ತದೆ. ಗ್ರಹಗಳ ಅಧಿಪತಿ ಸೂರ್ಯ ಮಾರ್ಚ್ 14 ರಂದು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಬುಧ ಮತ್ತು ರಾಹು ಈಗಾಗಲೇ ಆ ರಾಶಿಯಲ್ಲಿ ನೆಲೆಸಿದ್ದಾರೆ.

ಒಂದು ಗ್ರಹದಲ್ಲಿ 3 ರಾಶಿಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಸುಮಾರು 10 ವರ್ಷಗಳ ನಂತರ ಈ ಯೋಗವು ಮೀನ ರಾಶಿಯಲ್ಲಿ ರೂಪುಗೊಂಡಿತ್ತು. ಬುಧಾದಿತ್ಯ ರಾಜಯೋಗವು ಬುಧ ಮತ್ತು ಸೂರ್ಯನ ಸಂಯೋಜನೆಯಿಂದ ರೂಪುಗೊಂಡಿತು. ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಈ ಯೋಗವಿದ್ದರೆ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೇ 18 ವರ್ಷಗಳ ನಂತರ ರಾಹು ಮತ್ತು ಬುಧ ಗ್ರಹಗಳ ಸಂಯೋಗದಿಂದ ಜಾತತ್ವ ಯೋಗ ಉಂಟಾಗುತ್ತದೆ. ಆದರೆ ಈ ಯೋಗವು ಜ್ಯೋತಿಷ್ಯ ದೃಷ್ಟಿಯಿಂದ ಅಷ್ಟು ಶುಭವಲ್ಲ.

3 ಗ್ರಹಗಳ ಸಂಯೋಜನೆಯಿಂದ ಒಂದು ರಾಶಿಯಲ್ಲಿ ಮೂರು ಯೋಗಗಳು ರೂಪುಗೊಳ್ಳುತ್ತವೆ. ಈ ಕಾರಣದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಮುಂದಿನ 15 ದಿನಗಳಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತಾರೆ. ಇದರಿಂದ 3 ಪಟ್ಟು ಲಾಭ ಪಡೆಯುವಿರಿ. ಪ್ರತಿಯೊಂದು ಕ್ಷೇತ್ರದಲ್ಲೂ ನಿರೀಕ್ಷಿತ ಸಾಧನೆಗಳು ದೊರೆಯುತ್ತವೆ. ಸಂಪತ್ತು ಹೆಚ್ಚುತ್ತದೆ. ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ರಚನೆಯಿಂದ ಯಾವ ರಾಶಿಯವರ ಅದೃಷ್ಟ ಬದಲಾಗುತ್ತದೆ ನೋಡೋಣ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ 3 ಗ್ರಹಗಳ ಸಂಯೋಜನೆಯು ಬಹಳ ಒಳ್ಳೆಯದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಣಕ್ಕೆ ಸಂಬಂಧಿಸಿದ ವಿವಾದಗಳಿಂದ ಮುಕ್ತಿ ದೊರೆಯುತ್ತದೆ. ಮನಸ್ಸು ಶಾಂತವಾಗಿರುತ್ತದೆ. ನೀವು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಸೂರ್ಯ, ಬುಧ ಮತ್ತು ರಾಹುಗಳ ಸಂಯೋಗದಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಉದ್ಯೋಗ ವ್ಯವಹಾರಗಳಲ್ಲಿ ನಿಮಗೆ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಸಾಧಿಸುತ್ತಾರೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ನೆಮ್ಮದಿಯಿಂದ ಬದುಕಲಿದ್ದೀರಿ. ನೀವು ಪಾಲುದಾರರ ಬೆಂಬಲ ಪಡೆಯುತ್ತೀರಿ. ಆದಾಯ ವೃದ್ಧಿಗೆ ಹೊಸ ದಾರಿಗಳು ಸುಗಮವಾಗಲಿವೆ. ಸಂಪತ್ತು ವೃದ್ಧಿಯಾಗಲಿದೆ.

ಮಕರ ರಾಶಿ

ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗದ ಪ್ರಭಾವದಿಂದ, ಮಕರ ರಾಶಿಯವರು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಕೆಲಸದಲ್ಲಿ ನೀವು ತೃಪ್ತಿಕರ ಫಲಿತಾಂಶಗಳನ್ನು ಪಡೆಯುತ್ತೀರಿ. ದತ್ತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಹೊಸ ಆದಾಯ ಮಾರ್ಗಗಳು ಸೃಷ್ಟಿಯಾಗಲಿವೆ. ಈ ರಾಶಿಯವರಿಗೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. ವೃತ್ತಿಯಲ್ಲಿ ಉನ್ನತಿಗೆ ಅವಕಾಶವಿರುತ್ತದೆ.

ಮೀನ ರಾಶಿ

ಈ 3 ಗ್ರಹಗಳ ಸಂಯೋಜನೆಯು ಮೀನ ರಾಶಿಯಲ್ಲಿ ನಡೆಯುತ್ತದೆ. ಪರಿಣಾಮವಾಗಿ 3 ಯೋಗಗಳು ರೂಪುಗೊಳ್ಳುತ್ತವೆ. ಈ ಪ್ರಭಾವದಿಂದ ಮೀನ ರಾಶಿಯವರಿಗೆ ಮೂರು ಪಟ್ಟು ಫಲ ದೊರೆಯುತ್ತದೆ. ಶತ್ರುಗಳು ನಿಮ್ಮಿಂದ ಸೋಲುತ್ತಾರೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಪೂರ್ವಜರು ಆಸ್ತಿಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಪ್ರೇಮ ಸಂಬಂಧ ಇನ್ನಷ್ಟು ಹೆಚ್ಚುತ್ತದೆ. ನಾಲ್ಕು ಜನರ ನಡುವೆ ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ನಿಲ್ಲುತ್ತೀರಿ. ಹೊಸ ಯೋಜನೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಸ್ವೀಕರಿಸಲಿದ್ದೀರಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.