ಯುಗಾದಿ ಹಣಕಾಸು ಭವಿಷ್ಯ: ವೃಷಭ ರಾಶಿಯವರಿಗೆ ಸ್ವಂತ ವ್ಯಾಪಾರದಲ್ಲಿ ಆದಾಯ ಇರುತ್ತೆ, ಕಟಕ ರಾಶಿಯವರು ಹಣದ ವಿಚಾರದಲ್ಲಿ ದುಡುಕುವುದಿಲ್ಲ
Ugadi Finance Horoscope: ಯುಗಾದಿ ಹಣಕಾಸು ವರ್ಷ ಭವಿಷ್ಯ 2025. ವೃಷಭ ರಾಶಿಯವರಿಗೆ ಸ್ವಂತ ವ್ಯಾಪಾರದಲ್ಲಿ ಆದಾಯ ಇರುತ್ತೆ, ಕಟಕ ರಾಶಿಯವರು ಹಣದ ವಿಚಾರದಲ್ಲಿ ದುಡುಕುವುದಿಲ್ಲ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಯುಗಾದಿ ಹಣಕಾಸು ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಹಣಕಾಸು ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಮೇಷದಿಂದ ಕಟಕದವರಿಗೆ ನಾಲ್ಕು ರಾಶಿಯವರ ಹಣಕಾಸು ವರ್ಷ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಉತ್ತಮ ಆದಾಯ ಇದ್ದರು ಅನಗತ್ಯ ಖರ್ಚು ವೆಚ್ಚಗಳಿರುತ್ತವೆ. ಇದರಿಂದ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದರೆ ನಿಮ್ಮ ಬಳಿ ಇರುವ ಸಣ್ಣ ಮೊತ್ತದ ಹಣವನ್ನು ಬೆಳೆಸುವ ಪರಿ ತಿಳಿದಿರುತ್ತದೆ. ಸಾಲದ ಹಣವನ್ನು ಪೂರ್ಣವಾಗಿ ತೀರಿಸಲು ಸಾಧ್ಯವಾಗುವುದಿಲ್ಲ. ಕನಿಷ್ಠಪಕ್ಷ ನೂರು ರೂಗಳನ್ನಾದರೂ ಉಳಿಸಿಕೊಳ್ಳುವಿರಿ. ಆದರೆ ದೊರೆಯುವ ವರಮಾನವು ನಿಮ್ಮ ಖರ್ಚು ವೆಚ್ಚಗಳಿಗೆ ಸಾಲುವಂತಿರುತ್ತದೆ. ಆರೋಗ್ಯದ ವಿಚಾರವಾಗಿ ಹಣವನ್ನು ಖರ್ಚು ಮಾಡುವಿರಿ. ಸಣ್ಣ ಪ್ರಮಾಣದ ವ್ಯಾಪಾರ ವ್ಯವಹಾರಗಳಲ್ಲಿ ಹಣವನ್ನು ಮಿನಿಯೋಗಿಸುವಿರಿ. ವಿದೇಶಿ ಆಡಳಿತವಿರುವ ಸಂಸ್ಥೆಗಳ ಸ್ಟಾಕ್ ಮತ್ತು ಷೇರುಗಳನ್ನು ಕೊಳ್ಳುವ ಆಸಕ್ತಿ ಉಂಟಾಗುತ್ತದೆ. ಒಟ್ಟಾರೆ ಹಣದ ವಿಚಾರವಾಗಿ ಜೀವನದಲ್ಲಿ ತೊಂದರೆ ಪಡುವುದಿಲ್ಲ. ಅಗತ್ಯ ಇದ್ದಲ್ಲಿ ಕುಟುಂಬದ ಸದಸ್ಯರ ಸಹಾಯ ದೊರೆಯುತ್ತದೆ.
ವೃಷಭ ರಾಶಿ
ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ಅವಲಂಬಿಸಿರುವುದಿಲ್ಲ. ಹಣವನ್ನು ಗಳಿಸುವ ಮಾರ್ಗವನ್ನು ಕಂಡುಹಿಡಿಯುವ ಬುದ್ದಿವಂತಿಕೆ ನಿಮ್ಮಲ್ಲಿರುತ್ತದೆ. ಆದರೆ ತಾನಾಗಿ ಒದಗಿ ಬರುವ ಅನುಕೂಲಗಳನ್ನು ಕಳೆದುಕೊಳ್ಳುವುದಿಲ್ಲ. ಐಷಾರಾಮಿ ಜೀವನ ನಡೆಸುವಿರಿ. ಉದ್ಯೋಗಸ್ಥರ ವರಮಾನವು ಹೆಚ್ಚುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತವೆ. ನಿಮಗೆ ದೊರೆಯಬೇಕಾದ ಹಣವು ನಿಧಾನಗತಿಯಲ್ಲಿ ದೊರೆಯುತ್ತದೆ. ಸ್ತ್ರೀಯರಿಗೆ ಹೆಚ್ಚಿನ ಆದಾಯವಿರುತ್ತದೆ. ಕೆಲವೊಮ್ಮೆ ಹಣಕಾಸಿನ ವಿವಾದದಲ್ಲಿ ಸಿಲುಕುವಿರಿ. ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಲಾಭವಿದೆ. ಇರುವ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ. ಆದರೆ ಹಣ ಉಳಿಸುವ ಬಗ್ಗೆ ಆಸಕ್ತಿಯು ಇರುವುದಿಲ್ಲ.
ಮಿಥುನ ರಾಶಿ
ಉತ್ತಮ ಆದಾಯವಿರುತ್ತದೆ. ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳಿರುತ್ತವೆ. ಆದರೆ ಆತಂಕದ ಸನ್ನಿವೇಶದಲ್ಲಿಯೂ ಧೈರ್ಯ ಕಳೆದುಕೊಳ್ಳುವುದಿಲ್ಲ. ಹಣವನ್ನು ಉಳಿಸುವ ಉಪಾಯವು ನಿಮಗೆ ತಿಳಿದಿರುತ್ತದೆ. ಉದ್ಯೋಗಸ್ಥರಿಗೆ ಹೆಚ್ಚಿನ ಲಾಭವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯದೆ ಹೋದರು ನಷ್ಟವಾಗುವುದಿಲ್ಲ. ಅನಾವಶ್ಯಕವಾಗಿ ಬೇರೆಯವರಿಂದ ಹಣವನ್ನು ಪಡೆದರೆ ತೊಂದರೆಗೆ ಸಿಲುಕುವಿರಿ. ಹೊಸ ವಾಹನವನ್ನು ಖರೀದಿಸಲು ಉಳಿತಾಯ ಮಾಡಿರುವ ಹಣ ಉಪಯೋಗಿಸುವಿರಿ. ಆತ್ಮೀಯರ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಲು ಹಣಕಾಸಿನ ಸಹಾಯ ಮಾಡುವಿರಿ. ಹೊಸ ಮನೆ ಕೊಳ್ಳುವ ಯೋಚನೆಯನ್ನು ಕೈಬಿಡುವಿರಿ. ಇರುವ ಹಣದಲ್ಲಿ ಮನೆಯನ್ನು ನವೀಕರಣಗೊಳಿಸುವಿರಿ. ಇದರಿಂದ ನಿಮಗೆ ಹಣದ ಕೊರತೆ ಉಂಟಾಗುತ್ತದೆ.
ಕಟಕ ರಾಶಿ
ಬೇರೆಯವರಿಂದ ಹಣವನ್ನು ಪಡೆಯುವುದು ನಿಮಗೆ ಇಷ್ಟವಾಗುವುದಿಲ್ಲ. ಸಾಲದ ವ್ಯವಹಾರದಲ್ಲಿ ನಂಬಿಕೆ, ಆಸಕ್ತಿ ಇರುವುದಿಲ್ಲ. ಉತ್ತಮ ಜ್ಞಾನದಿಂದ ಹಣವನ್ನು ಗಳಿಸುವಿರಿ. ಶ್ರೀಮಂತರಾಗುವ ಬಗ್ಗೆ ಯೋಚನೆ ಇರುತ್ತದೆ. ಹಠದ ಗುಣದಿಂದಾಗಿ ಅವಶ್ಯವಿರುವ ಹಣವನ್ನು ಸಂಪಾದಿಸುವಿರಿ. ಮನರಂಜನೆಗಾಗಿ ಹಣ ಖರ್ಚು ಮಾಡುವುದಿಲ್ಲ. ಸರಳವಾದ ಜೀವನ ಇಷ್ಟಪಡುವುದಿಲ್ಲ. ಬೇರೆಯವರಿಗಾಗಿ ನಿಮ್ಮಲ್ಲಿರುವ ಹಣವನ್ನು ಖರ್ಚು ಮಾಡುವುದಿಲ್ಲ. ಆದರೆ ಬೇರೆಯವರು ಸಹಾಯ ಮಾಡಿದರೆ ಅದನ್ನು ಒಪ್ಪಿಕೊಳ್ಳುವಿರಿ. ಆತುರಪಡದೆ ಹಣಕಾಸಿನ ವಿಚಾರದಲ್ಲಿ ನಿಧಾನವಾಗಿ ನಿಮ್ಮ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಎರಡು ಅಥವಾ ಹೆಚ್ಚಿನ ಆದಾಯದ ಮೂಲವಿರುತ್ತದೆ. ಭವಿಷ್ಯದ ಜೀವನಕ್ಕಾಗಿ ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ವಿನಿಯೋಗಿಸುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
