ಕೇಂದ್ರ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಉಲ್ಲೇಖಿಸಿದ್ದು ಮಹಾಲಕ್ಷ್ಮೀ ಅಷ್ಟಕದ ಸಾಲುಗಳು, ಇಲ್ಲಿದೆ ಪೂರ್ತಿ ಸ್ತೋತ್ರ
Mahalakshmi Ashtakam: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ನಡೆಸಿದ್ದು, ಬಜೆಟ್‌ನ ಆಶೋತ್ತರಗಳ ಸುಳಿವು ನೀಡಿದರು. ಇದೇ ವೇಳೆ ಅವರು ಲಕ್ಷ್ಮೀದೇವಿಯನ್ನು ಸ್ತುತಿಸುವ ಎರಡು ಸಾಲುಗಳನ್ನು ಉಲ್ಲೇಖಿಸಿದರು. ಅದು ಮಹಾಲಕ್ಷ್ಮೀ ಅಷ್ಟಕದ ಸಾಲುಗಳು. ಮಹಾಲಕ್ಷ್ಮೀ ಅಷ್ಟಕದ ಪೂರ್ತಿ ಪಠ್ಯ ಇಲ್ಲಿದೆ.

Mahalakshmi Ashtakam: ಸಂಸತ್‌ನ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗಿದ್ದು, ಇದಕ್ಕೂ ಮೊದಲು ಇದರಲ್ಲಿ ಭಾಗವಹಿಸುವುದಕ್ಕಾಗಿ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಶುಭ ಫಲಕ್ಕಾಗಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುವುದು ವಾಡಿಕೆ ಎಂದು ಹೇಳುತ್ತ, ಲಕ್ಷ್ಮಿ ಸ್ತೋತ್ರದ ಸಾಲುಗಳನ್ನು ಪಠಿಸಿದ್ದರು.
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ |
ಈ ಸಾಲುಗಳನ್ನು ಬಹಳ ಸ್ಪಷ್ಟವಾಗಿ ಪಠಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಡ ಮತ್ತು ಮಧ್ಯಮ ವರ್ಗದವರಿಗೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಸದಾ ಇರಲಿ ಎಂದು ಹಾರೈಸಿದರು.
ಪ್ರಧಾನಿ ಮೋದಿ ಉಲ್ಲೇಖಿಸಿದ್ದು ಮಹಾಲಕ್ಷ್ಮೀ ಅಷ್ಟಕದ ಸಾಲುಗಳು ಇಲ್ಲಿದೆ ಸುದ್ದಿಗೋಷ್ಠಿ ವಿಡಿಯೋ
“ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ನಾನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಗೆ ನಮಸ್ಕರಿಸುತ್ತೇನೆ… ಲಕ್ಷ್ಮಿ ದೇವಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರನ್ನು ಆಶೀರ್ವದಿಸುವುದನ್ನು ಮುಂದುವರಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ 75 ವರ್ಷಗಳನ್ನು ಪೂರ್ಣಗೊಳಿಸಿದೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ ”ಎಂದು ಪ್ರಧಾನಿ ಮೋದಿ ಹೇಳಿದರು.
ಮಹಾಲಕ್ಷ್ಮೀ ಅಷ್ಟಕದ ಪೂರ್ಣ ಪಠ್ಯ
ಅಥಃ ಮಹಾಲಕ್ಷ್ಮೀ ಅಷ್ಟಕಂ- ಇಂದ್ರ ಉವಾಚ -
ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ || ೧ ||
ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೨ ||
ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ |
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೩ ||
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೪ ||
ಆದ್ಯಂತರಹಿತೇ ದೇವಿ ಆದ್ಯಶಕ್ತಿ ಮಹೇಶ್ವರಿ |
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ || ೫ || [ಯೋಗಜ್ಞೇ]
ಸ್ಥೂಲಸೂಕ್ಷ್ಮಮಹಾರೌದ್ರೇ ಮಹಾಶಕ್ತೇ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೬ ||
ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮಸ್ವರೂಪಿಣಿ |
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮಿ ನಮೋಽಸ್ತು ತೇ || ೭ ||
ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ |
ಜಗತ್ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮಿ ನಮೋಽಸ್ತು ತೇ || ೮ ||
ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರಂ ಯಃ ಪಠೇದ್ಭಕ್ತಿಮಾನ್ನರಃ |
ಸರ್ವಸಿದ್ಧಿಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ || ೯ ||
ಏಕಕಾಲಂ ಪಠೇನ್ನಿತ್ಯಂ ಮಹಾಪಾಪವಿನಾಶನಮ್ |
ದ್ವಿಕಾಲಂ ಯಃ ಪಠೇನ್ನಿತ್ಯಂ ಧನಧಾನ್ಯಸಮನ್ವಿತಃ || ೧೦ ||
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರುವಿನಾಶನಮ್ |
ಮಹಾಲಕ್ಷ್ಮೀರ್ಭವೇನ್ನಿತ್ಯಂ ಪ್ರಸನ್ನಾ ವರದಾ ಶುಭಾ || ೧೧ ||
ಇತಿ ಇಂದ್ರಕೃತಂ ಮಹಾಲಕ್ಷ್ಮ್ಯಷ್ಟಕಮ್ ಸಂಪೂರ್ಣಂ.
ಮಹಾಲಕ್ಷ್ಮಿ ಅಷ್ಟಕಂ ಪಠಿಸುವುದರ ಮಹತ್ವ
ಮಹಾಲಕ್ಷ್ಮಿ ಅಷ್ಟಕಂ ಅನ್ನು ನಿತ್ಯವೂ ಪಠಿಸುವುದರಿಂದ ಮನೆಯಲ್ಲಿ ಸುಭಿಕ್ಷೆ ನೆಲೆಸುತ್ತದೆ. ಮನೆಯವರ ಅದೃಷ್ಟ, ನೆಮ್ಮದಿ, ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಮಹಾಲಕ್ಷ್ಮಿ ಅಷ್ಟಕಮ್ ಆಲಿಸುವುದರಿಂದ ಆಧ್ಯಾತ್ಮಿಕ ಆನಂದ ಮತ್ತು ಮಾನಸಿಕ ಶಾಂತಿಯನ್ನೂ ಕಂಡುಕೊಳ್ಳಬಹುದು ಎಂದು ಪ್ರಾಜ್ಞರು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸಹಜವಾಗಿಯೇ ಈ ಸಲ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಬಡ, ಮಧ್ಯಮ ವರ್ಗದ ಜನರ ಆಶೋತ್ತರಗಳು ಈಡೇರಲಿ ಎಂದು ಮಹಾಲಕ್ಷ್ಮಿ ಅಷ್ಟಕದ (Mahalakshmi Ashtakam) ಸಾಲುಗಳನ್ನು ಉಲ್ಲೇಖಿಸಿದಂತೆ ಭಾಸವಾಗಿದೆ.

ವಿಭಾಗ