Valentines Day 2025: ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಪಡೆಯುವ ಅವಕಾಶ ಇರುವ 3 ರಾಶಿಯವರು, ನಿಮ್ಮ ರಾಶಿ ಯಾವುದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Valentines Day 2025: ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಪಡೆಯುವ ಅವಕಾಶ ಇರುವ 3 ರಾಶಿಯವರು, ನಿಮ್ಮ ರಾಶಿ ಯಾವುದು

Valentines Day 2025: ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಪಡೆಯುವ ಅವಕಾಶ ಇರುವ 3 ರಾಶಿಯವರು, ನಿಮ್ಮ ರಾಶಿ ಯಾವುದು

ಒಂಟಿಯಾಗಿದ್ದು, ಬಾಳಸಂಗಾತಿಯನ್ನು ಹುಡುಕುತ್ತಿರುವವರಿಗೆ ಪ್ರೇಮಿಗಳ ದಿನಕ್ಕೂ ಮೊದಲು ಒಳ್ಳೆಯ ಸಂಗತಿಗಳು ನಡೆಯಲಿವೆ. ಜೀವನ ಸಂಗಾತಿಯನ್ನು ಭೇಟಿಯಾಗುವ ಅವಕಾಶಗಳಿವೆ. ಫೆಬ್ರವರಿ 14ರ ಹೊತ್ತಿಗೆ ಈ 3 ರಾಶಿಯವರ ಜೀವನ ಬದಲಾಗುತ್ತದೆ.

ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಪಡೆಯುವ ಅವಕಾಶ ಇರುವ 3 ರಾಶಿಯವರು
ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಪಡೆಯುವ ಅವಕಾಶ ಇರುವ 3 ರಾಶಿಯವರು

ಪ್ರೇಮಿಗಳ ದಿನದಂದು ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರ ಜೊತೆ ಸಂತೋಷವಾಗಿರಲು ಮತ್ತು ಆನಂದದಿಂದ ಕಾಲ ಕಳೆಯಲು ಬಯಸುತ್ತಾರೆ. ಆದರೆ ಒಂಟಿಯಾಗಿ ಇರುವವರು ಸಂಗಾತಿಯನ್ನು ಹುಡುಕುತ್ತಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಈ ಪ್ರೇಮಿಗಳ ದಿನದ ಸಂದರ್ಭ ಸಂಗಾತಿಯನ್ನು ಹುಡುಕಿಕೊಳ್ಳುವ ಸಾಧ್ಯತೆ ಇದೆ.

ಫೆಬ್ರುವರಿ 14ರ ಪ್ರೇಮಿಗಳ ದಿನ ಒಳಗೆ ಜೀವನ ಸಂಗಾತಿಯನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಫೆಬ್ರುವರಿ 14ರ ಹೊತ್ತಿಗೆ ಈ 3 ರಾಶಿಯವರ ಜೀವನ ಬದಲಾಗಲಿದೆ. ಈ ರಾಶಿಯವರ ಜೀವನದಲ್ಲಿ ಪ್ರೀತಿ ಶುರುವಾಗಲಿದೆ. ಆ 3 ರಾಶಿಯವರು ಯಾರು, ಇದರಲ್ಲಿ ನಿಮ್ಮ ರಾಶಿಯೂ ಇದೆಯೇ ಗಮನಿಸಿ.

ಯಾವೆಲ್ಲಾ ರಾಶಿಯವರಿಗೆ ಪ್ರೇಮಿಗಳ ದಿನಕ್ಕೂ ಮುನ್ನ ಪ್ರೀತಿ ಸಿಗಲಿದೆ

1. ಮೇಷ ರಾಶಿ

ಪ್ರೀತಿಯ ಗ್ರಹವಾದ ಶುಕ್ರನು ಮೇಷ ರಾಶಿಯವರಿಗೆ ಒಳ್ಳೆಯದನ್ನು ಮಾಡಲಿದ್ದಾನೆ. ಮೇಷ ರಾಶಿಯಲ್ಲಿ ಶುಕ್ರನ ಸಂಚಾರವು ಮೇಷ ರಾಶಿಯವರಿಗೆ ಉತ್ತಮ ಲಾಭಗಳನ್ನು ತರಲಿದೆ. ಇದು ಇತರರನ್ನು ಆಕರ್ಷಿಸುವಂತೆ ಮಾಡುತ್ತದೆ. ನಿಮಗೆ ಜೀವನ ಸಂಗಾತಿ ಸಿಗುವ ಸಾಧ್ಯತೆ ಇದೆ. ಮೇಷ ರಾಶಿಯವರು ಪ್ರೇಮಿಗಳ ದಿನಕ್ಕೂ ಮೊದಲು ತಮ್ಮ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ.

2. ಸಿಂಹ ರಾಶಿ

ಸಿಂಹ ರಾಶಿಯವರಿಗೆ ಫೆಬ್ರವರಿ 12 ಒಳ್ಳೆಯ ದಿನವಾಗಲಿದೆ. ಈ ರಾಶಿಯವರು ಪ್ರೇಮಿಗಳ ದಿನದ ಮೊದಲು ಬರುವ ಹುಣ್ಣಿಮೆಯಂದು ತಮ್ಮ ಪ್ರೇಮ ಜೀವನವನ್ನು ಬಲಪಡಿಸಿಕೊಳ್ಳಲಿದ್ದಾರೆ. ಪ್ರೇಮಿಗಳ ದಿನಕ್ಕೂ ಮೊದಲು ನೀವು ನಿಮ್ಮ ಸಂಗಾತಿಯನ್ನು ಪಡೆಯಲಿದ್ದೀರಿ.

3. ಮೀನ ರಾಶಿ 

ಮೀನ ರಾಶಿಯವರು ಪ್ರೇಮಿಗಳ ದಿನಕ್ಕೂ ಮೊದಲು ಒಳ್ಳೆಯ ಸುದ್ದಿ ಕೇಳಲಿದ್ದಾರೆ. ಜೀವನ ಸಂಗಾತಿಯು ನಿಮ್ಮನ್ನು ಹುಡುಕಿ ಬರುವ ಸಾಧ್ಯತೆ ಹೆಚ್ಚು. ಬುಧ ಗ್ರಹವು ಮೀನ ರಾಶಿಗೆ ಪ್ರವೇಶಿಸುತ್ತದೆ, ಇದು ಹೃದಯಸ್ಪರ್ಶಿ ಸಂಭಾಷಣೆಗಳು ಮತ್ತು ಆಳವಾದ ಭಾವನಾತ್ಮಕ ಬಂಧಗಳನ್ನು ತರುತ್ತದೆ. ಪ್ರೀತಿಯನ್ನು ಬಲಪಡಿಸಬಹುದು. ನಿಮ್ಮ ಪ್ರೀತಿ ಯಶಸ್ಸು ಕಾಣಲಿದೆ. ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಸಂತೋಷದ ಜೀವನವನ್ನು ಕಳೆಯುತ್ತೀರಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.