ವರಗಳನ್ನು ಕರುಣಿಸುವ ವರಮಹಾಲಕ್ಷ್ಮೀ ಹಬ್ಬ ಯಾವಾಗ; ಪೂಜೆಯ ಮಹತ್ವ, ಈ ವರ್ಷದ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವರಗಳನ್ನು ಕರುಣಿಸುವ ವರಮಹಾಲಕ್ಷ್ಮೀ ಹಬ್ಬ ಯಾವಾಗ; ಪೂಜೆಯ ಮಹತ್ವ, ಈ ವರ್ಷದ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ವರಗಳನ್ನು ಕರುಣಿಸುವ ವರಮಹಾಲಕ್ಷ್ಮೀ ಹಬ್ಬ ಯಾವಾಗ; ಪೂಜೆಯ ಮಹತ್ವ, ಈ ವರ್ಷದ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

Varamahalakshmi Festival 2024: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್‌ 16 ರಂದು ಹಬ್ಬ ಆಚರಿಸಲಾವುದು. ವರಗಳನ್ನು ಕರುಣಿಸುವ ವರಮಹಾಲಕ್ಷ್ಮೀ ಹಬ್ಬದ ಮಹತ್ವ, ಮುಹೂರ್ತ ಈ ರೀತಿ ಇದೆ.

ವರಗಳನ್ನು ಕರುಣಿಸುವ ವರಮಹಾಲಕ್ಷ್ಮೀ ಹಬ್ಬ ಯಾವಾಗ; ಪೂಜೆಯ ಮಹತ್ವ, ಈ ವರ್ಷದ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ
ವರಗಳನ್ನು ಕರುಣಿಸುವ ವರಮಹಾಲಕ್ಷ್ಮೀ ಹಬ್ಬ ಯಾವಾಗ; ಪೂಜೆಯ ಮಹತ್ವ, ಈ ವರ್ಷದ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ಆಷಾಢ ಬಂತೆಂದರೆ ಒಂದರ ಹಿಂದೊಂದರಂತೆ ಹಬ್ಬ, ವ್ರತಗಳ ಸಾಲು ಬರುತ್ತದೆ. ಆಷಾಢ ಕಳೆದು ಶ್ರಾವಣ ಆರಂಭವಾಗುತ್ತಿದ್ದಂತೆ ಇನ್ನಷ್ಟು ಸಂಭ್ರಮ ಶುರುವಾಗುತ್ತದೆ. ಅದರಲ್ಲೂ ಪ್ರತಿ ವರ್ಷ ಎಲ್ಲಾ ಹೆಂಗಳೆಯರು ಆಚರಿಸಲು ಎದುರು ನೋಡುತ್ತಿರುವ ಹಬ್ಬವೆಂದರೆ ಅದು ವರಮಹಾಲಕ್ಷ್ಮಿ ಹಬ್ಬ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ.

ವರ ಮಹಾಲಕ್ಷ್ಮಿ ಹಬ್ಬದ ಮಹತ್ವ

ಹೆಸರೇ ಸೂಚಿಸುವಂತೆ ವರವನ್ನು ಕೊಡುವ ಮಹಾಲಕ್ಷ್ಮಿಯನ್ನು ಪೂಜಿಸುವ ದಿನ ಇದು. ಈ ಶುಭ ಶುಕ್ರವಾರ ಲಕ್ಷ್ಮೀಯನ್ನು ಧೂಪ, ದೀಪ, ವಿವಿಧ ಪರಿಮಳ ಪತ್ರೆಯಿಂದ ಪೂಜಿಸಿದರೆ ಲಕ್ಷ್ಮಿಯು ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾಳೆ. ಭಕ್ತರಿಗೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಸಿರುತ್ತದೆ. ಮದುವೆ ಆಗದ ಹೆಣ್ಣು ಮಕ್ಕಳು ವರಮಹಾಲಕ್ಷ್ಮಿ ವ್ರತ ಮಾಡಿದರೆ ಶೀಘ್ರದಲ್ಲೇ ವಿವಾಹವಾಗುತ್ತದೆ. ಮುತ್ತೈದೆಯರು ಈ ಪೂಜೆಯಲ್ಲಿ ಪಾಲ್ಗೊಂಡರೆ ಪತಿಯ ಆಯುಷ್ಯ ಹೆಚ್ಚಾಗುತ್ತದೆ. ಪತಿ-ಪತ್ನಿ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ.

ವರ ಮಹಾಲಕ್ಷ್ಮೀ ವ್ರತಕಥೆ

ಒಮ್ಮೆ ಪಾರ್ವತಿಯು ಎಲ್ಲಾ ಅನುಗ್ರಹಗಳನ್ನು ನೀಡುವ ಯಾವುದಾದರೂ ವ್ರತ ಇದ್ದರೆ ತಿಳಿಸಿ ಎಂಬುದಾಗಿ ಶಿವನಿಗೆ ಕೇಳುತ್ತಾಳೆ. ಆಗ ಪರಶಿವನು ಜಗನ್ಮಾತೆಗೆ ಈ ಕಥೆಯನ್ನು ಹೇಳುತ್ತಾನೆ. ಒಮ್ಮೆ ಮಗಧ ಸಾಮ್ರಾಜ್ಯದಲ್ಲಿ ಚಾರುಮತಿ ಎಂಬ ವಿವಾಹಿತೆ ಇದ್ದಳು. ಒಂದು ರಾತ್ರಿ ದೇವಿಯು ಅವಳ ಕನಸಿನಲ್ಲಿ ಕಾಣಿಸಿಕೊಂಡು ತನ್ನ ವ್ರತವನ್ನು ಮಾಡುವಂತೆ ಹೇಳುತ್ತಾಳೆ. ಚಾರುಮತಿ ಮುಂಜಾನೆ ಎದ್ದು ತಮ್ಮ ಕನಸಿನ ವಿವರಗಳನ್ನು ಕುಟುಂಬದ ಸದಸ್ಯರಿಗೆ ತಿಳಿಸಿದರು. ಕುಟುಂಬದ ಸದಸ್ಯರ ಸಹಕಾರದಿಂದ ಚಾರುಮತಿ ಶ್ರಾವಣ ಶುಕ್ಲಪಕ್ಷದಲ್ಲಿ ಈ ವ್ರತ ಮಾಡುತ್ತಾಳೆ. ಈ ವ್ರತದ ನಂತರ ಚಾರುಪತಿ ಸಕಲ ಸುಖ, ಸಂಪತ್ತು ಪಡೆದು ಖುಷಿಯಿಂದ ಜೀವನ ನಡೆಸುತ್ತಾಳೆ. ಸಾಕ್ಷಾತ್‌ ಪರಮೇಶ್ವರನು ಪಾರ್ವತಿಗೆ ಹೇಳಿದ ಈ ವ್ರತವನ್ನು ಆಚರಿಸಿದರೆ ಎಲ್ಲಾ ಸುಖ, ಸಂತೋಷ ದೊರೆಯುತ್ತದೆ.

ಈ ಬಾರಿ ವರಮಹಾಲಕ್ಷ್ಮಿ ವ್ರತ, ಮುಹೂರ್ತ ಯಾವಾಗ

ಈ ವರ್ಷ ಆಗಸ್ಟ್‌ 16 ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ವೃಶ್ಚಿಕ ಲಗ್ನ ಪೂಜೆ ಮುಹೂರ್ತ ಮಧ್ಯಾಹ್ನ 12:50 ರಿಂದ 03:08 ರವರೆಗೆ ಒಟ್ಟು ಅವಧಿ 02 ಗಂಟೆಗಳು 19 ನಿಮಿಷ ಇರುತ್ತದೆ. ಕುಂಭ ಲಗ್ನ ಪೂಜೆ ಮುಹೂರ್ತ ಸಂಜೆ 06:55 ರಿಂದ 08:22 ವರೆಗೆ ಇರುತ್ತದೆ. ಪೂಜೆಯ ಅವಧಿ 01 ಗಂಟೆ 27 ನಿಮಿಷ ಇರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.