ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಯಾವ ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕತೆ ಉಂಟಾಗುತ್ತದೆ?; ವಾಸ್ತು ಟಿಪ್ಸ್‌

Vastu Tips: ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಯಾವ ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕತೆ ಉಂಟಾಗುತ್ತದೆ?; ವಾಸ್ತು ಟಿಪ್ಸ್‌

Vastu Shasthra: ಮನೆಯಲ್ಲಿ ಗೋಡೆ ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು? ವಾಸ್ತು ಶಾಸ್ತ್ರ ಗಡಿಯಾರಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳಿವೆ. ಈ ವಾಸ್ತು ನಿಯಮಗಳನ್ನು ಅನುಸರಿಸಿ, ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುವಂತೆ, ಎಲ್ಲಾ ಕೆಲಸಗಳನ್ನೂ ಯಶಸ್ಸು ಗಳಿಸುವತ್ತ ಗಮನ ಹರಿಸಿ.

ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಯಾವ ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕತೆ ಉಂಟಾಗುತ್ತದೆ?
ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಯಾವ ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕತೆ ಉಂಟಾಗುತ್ತದೆ?

ವಾಸ್ತು ಶಾಸ್ತ್ರ: ಜೀವನದಲ್ಲಿ ಸಮಯ ಎಂಬುದು ಎಲ್ಲರಿಗೂ ಬಹಳ ಮುಖ್ಯ. ಒಮ್ಮೆ ಕಳೆದುಹೋದ ಆ ಅಮೂಲ್ಯ ಸಮಯವನ್ನು ಮತ್ತೆ ವಾಪಸ್‌ ಪಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ನಮಗೆ ದೊರೆಯುವ ಪ್ರತಿ ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ಹಿರಿಯರು. ಸಮಯ ಎಂದರೆ ನಮಗೆ ನೆನಪಾಗುವುದು ಗಡಿಯಾರ. ಅದು ಇಲ್ಲದಿದ್ದರೆ ನಮ್ಮ ದಿನ ನಿತ್ಯದ ಕೆಲಸಗಳು ಆಗುವುದೇ ಇಲ್ಲ.

ಬೆಳಗ್ಗೆ ಬೇಗ ಏಳಲು ಗಡಿಯಾರದಲ್ಲಿ ಅಲಾರಂ ಫಿಕ್ಸ್‌ ಮಾಡಿಕೊಳ್ಳಬೇಕು. ದಿನ ನಿತ್ಯದ ಕೆಲಸಗಳನ್ನು ಶುರು ಮಾಡಲು ಸಮಯ ನೋಡಬೇಕು, ಕಚೇರಿ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಲು ಗಡಿಯಾರ ನೋಡಬೇಕು. ಮಕ್ಕಳನ್ನು ಶಾಲೆಗೆ ಕಳಿಸಲು, ತಿಂಡಿ, ಊಟ ಮಾಡಲು ಎಲ್ಲದಕ್ಕೂ ಗಡಿಯಾರದಲ್ಲಿ ಸಮಯವನ್ನು ನೋಡಲೇಬೇಕು. ಗಡಿಯಾರಕ್ಕೆ ವಾಸ್ತುಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಗೋಡೆ ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದರ ಬಗ್ಗೆ ಕೂಡಾ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. 

ಇದನ್ನೂ ಓದಿ:  ಕನಸಿನಲ್ಲಿ ಮಿಂಚು ನೋಡಿದರೆ ಏನು ಅರ್ಥ?

ಗಡಿಯಾರಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳು

ಅಯ್ಯೋ ಗಡಿಯಾರಕ್ಕೂ ದಿಕ್ಕು ಇದೆಯೇ? ಸಮಯ ನೋಡಲು ತಾನೇ ಎಲ್ಲಿ ಬೇಕಾದರೂ ಇಡಬಹುದು ಎಂದುಕೊಂಡರೆ ಅದು ತಪ್ಪು. ಇದರ ಬಗ್ಗೆ ಅನೇಕ ಜನರಿಗೆ ಗೊಂದಲವಿದೆ. ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾರ್ಪೊರೇಟ್ ವಲಯದಲ್ಲಿ ಕೈ ಗಡಿಯಾರಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಾಸ್ತು ಶಾಸ್ತ್ರದಲ್ಲಿ ಗಡಿಯಾರಕ್ಕೆ ಸಂಬಂಧಿಸಿದ ಕೆಲವೊಂದು ಪ್ರಮುಖ ವಿಚಾರಗಳಿವೆ.

ಮನೆಯಲ್ಲಿ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಏಕೆಂದರೆ ಗಡಿಯಾರದ ದಿಕ್ಕು ನಮ್ಮ ಕೆಲಸದ ದಿಕ್ಕು ಮತ್ತು ಅದರ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ವಾಸ್ತು ಪ್ರಕಾರ, ಗಡಿಯಾರವನ್ನು ಮನೆ-ಕಚೇರಿಯ ಪೂರ್ವ, ಪಶ್ಚಿಮ ಅಥವಾ ಉತ್ತರದ ಗೋಡೆಯ ಮೇಲೆ ಇಡಬೇಕು. ಈ ದಿಕ್ಕುಗಳಲ್ಲಿ ಇರಿಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೊರ ಸೂಸುತ್ತದೆ. ಇದಲ್ಲದೆ, ಈ ದಿಕ್ಕುಗಳಲ್ಲಿ ಗಡಿಯಾರವನ್ನು ಇಟ್ಟರೆ ನಾವು ಆರಂಭಿಸುವ ಎಲ್ಲಾ ಕೆಲಸಗಳೂ ಸುಗಮವಾಗಿ ನೆರವೇರುತ್ತವೆ. ಆದ್ದರಿಂದ ಗಡಿಯಾರವನ್ನು ಇಡುವಾಗ ಈ ಮೂರೂ ದಿಕ್ಕುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬಾರದು?

ಮನೆಯಲ್ಲಿ ಮಾತ್ರವಲ್ಲ ನೀವು ಕಚೇರಿಯಲ್ಲಿ ಕೂಡಾ ಗಡಿಯಾರವನ್ನು ಕಚೇರಿಯಲ್ಲಿ ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇರಿಸುವುದು ನಿಮಗೆ ನಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಆದ್ದರಿಂದ, ಸರಿಯಾದ ದಿಕ್ಕನ್ನು ಆರಿಸುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನೆ ಅಥವಾ ಕಚೇರಿಯ ದಕ್ಷಿಣ ಗೋಡೆಯ ಮೇಲೆ ಗಡಿಯಾರವನ್ನು ಇಡಬಾರದು. ಏಕೆಂದರೆ ದಕ್ಷಿಣ ದಿಕ್ಕನ್ನು ಯಮ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆ ದಿಕ್ಕನ್ನು ಸಾವಿನ ದೇವರು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇರಿಸುವುದರಿಂದ, ವ್ಯವಹಾರದಲ್ಲಿ ಅಡೆತಡೆಗಳು ಎದುರಾಗುತ್ತವೆ. ಇದಲ್ಲದೆ, ಇದು ಮನೆಯಲ್ಲಿರುವ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯ ದಕ್ಷಿಣ ದಿಕ್ಕನ್ನು ಹೊರತು ಪಡಿಸಿ ಮನೆಯ ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ಇಡಬಾರದು.

ಕೈ ಗಡಿಯಾರವನ್ನು ದಿಂಬಿನ ಕೆಳಗೆ ಇಡಬೇಡಿ

ನಮ್ಮಲ್ಲಿ ಹೆಚ್ಚಿನವರು ಮಲಗುವ ಮುನ್ನ ಗಡಿಯಾರವನ್ನು ತೆಗೆದು ತಲೆ ದಿಂಬಿನ ಕೆಳಗೆ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ವಾಸ್ತು ಪ್ರಕಾರ ದಿಂಬಿನ ಕೆಳಗೆ ವಾಚ್ ಇಟ್ಟು ಮಲಗಬಾರದು. ದಿಂಬಿನ ಕೆಳಗೆ ಗಡಿಯಾರ ಇಟ್ಟುಕೊಂಡು ಮಲಗಿದರೆ ಅದರ ಸದ್ದು ನಮ್ಮ ನಿದ್ರೆಗೆ ಭಂಗ ತರುವುದಲ್ಲದೆ ಅದರಿಂದ ಹೊರ ಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು ನಮ್ಮ ಮೆದುಳು ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಅಲೆಗಳ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಕೋಣೆಯ ಉದ್ದಕ್ಕೂ ಪರಿಚಲನೆಗೊಳ್ಳುತ್ತದೆ. ಇದು ನಿಮ್ಮ ಮನಸ್ಸಿಗೆ, ನಿಮ್ಮ ಕೆಲಸಗಳಿಗೆ ಅಡೆ ತಡೆ ಉಂಟು ಮಾಡುತ್ತದೆ.

ನಿಂತ ಗಡಿಯಾರವನ್ನು ಮನೆಯಲ್ಲಿ ಇಡಬಾರದು

ನಿಂತ ಗಡಿಯಾರವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು. ನಿಂತ ಗಡಿಯಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯವರಿಗೆ ತೊಂದರೆ ಉಂಟಾಗುತ್ತವೆ. ಅಷ್ಟೇ ಅಲ್ಲ ಕೆಲವರು ಸಮಯವನ್ನು 10 ನಿಮಿಷ ಮುಂದೆ, ಅಥವಾ ಹಿಂದೆ ಹಾಕುತ್ತಾರೆ. ಆದರೆ ಈ ರೀತಿ ಮಾಡುವುದು ಕೂಡಾ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಗಡಿಯಾರವನ್ನು ಫಿಕ್ಸ್‌ ಮಾಡಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.