Feng Shui: ನೆಮ್ಮದಿಯಿಂದ ಉತ್ತಮ ಬಾಂಧವ್ಯದವರೆಗೆ; ಆಮೆಯ ಮೇಲೆ ಮತ್ತೆರಡು ಆಮೆಗಳು ಕುಳಿತ ಪ್ರತಿಮೆ ಮನೆಯಲ್ಲಿದ್ದರೆ ಆಗುವ ಲಾಭಗಳಿವು
ಫೆಂಗ್ ಶುಯಿ ವಸ್ತುಗಳು ಮನೆಯಲ್ಲಿ ಇದ್ದರೆ ಹಲವು ಶುಭಫಲಗಳು ಇರುತ್ತವೆ. ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಆಮೆಯ ಮೇಲೆ ಮತ್ತೆರಡು ಆಮೆಗಳು ಕುಳಿತ ರೀತಿಯಲ್ಲಿನ ಪ್ರತಿಮೆ ಮನೆಯಲ್ಲಿ ಇಟ್ಟುಕೊಂಡರೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ಇಲ್ಲಿ ನೀಡಲಾಗಿದೆ. (ಬರಹ: ಜ್ಯೋತಿಷಿ ಎಚ್. ಸತೀಶ್)
ಮನೆಯಲ್ಲಿ ನಾವು ಇಟ್ಟಿರುವ ಪ್ರತಿಯೊಂದು ಫೋಟೊ ಅಥವಾ ಪ್ರತಿಮೆಗಳಿಗೆ ಒಂದೊಂದು ಅರ್ಥ ಹಾಗೂ ಶುಭಫಲಗಳ ಸಂಕೇತವಾಗಿರುತ್ತವೆ. ಅದೇ ರೀತಿಯಲ್ಲಿ ಮನೆಯಲ್ಲಿ ಆಮೆಯ ತಲೆಯ ಮೇಲೆ ಮತ್ತೆರಡು ಆಮೆಗಳು ಇರುವಂತ ಪ್ರತಿಮೆ ಇಟ್ಟರೆ ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನು ಜ್ಯೋತಿಷಿಗಳಾದ ಎಚ್ ಸತೀಶ್ ಅವರು ಬರೆದಿದ್ದಾರೆ. ಒಂದು ಆಮೆಯ ಮೇಲೆ ಮತ್ತೆರಡು ಆಮೆಗಳು ಕುಳಿತಿರುವ ಪ್ರತಿಮೆ ದೊರೆಯುತ್ತದೆ. ಇದನ್ನು ಮೂರು ತಲೆಮಾರಿನ ಆಮೆ ಎಂದು ಕರೆಯುತ್ತೇವೆ. ಈ ಪ್ರತಿಮೆಯನ್ನು ಬಳಸುವುದರಿಂದ ಕುಟುಂಬದಲ್ಲಿ ಇರುವ ಪರಸ್ಪರ ಅವಿಶ್ವಾಸವು ಮರೆಯಾಗುತ್ತದೆ. ಮುಖ್ಯವಾಗಿ ಕುಟುಂಬದ ಹಿರಿಯರ ಬಗ್ಗೆ ಗೌರವ ಮತ್ತು ಸಹಕಾರದ ಭಾವನೆ ಉಂಟಾಗುತ್ತದೆ. ಸಂಜೆ ಮಕ್ಕಳ ಅಥವಾ ತಾಯಿ ಮಕ್ಕಳ ನಡುವಿನ ಅಂತರವು ದೂರವಾಗಿ ಪರಸ್ಪರ ಪ್ರೀತಿ ವಿಶ್ವಾಸವು ಉಂಟಾಗುತ್ತದೆ.
ಕುಟುಂಬದಲ್ಲಿ ಮನಸ್ತಾಪ ಕಡಿಮೆ ಮಾಡಿ ಸಂತೋಷವನ್ನು ಹೆಚ್ಚಿಸುತ್ತೆ
ಅತ್ತೆ ಮಾವನ ಜೊತೆ ಸೊಸೆ ಅಥವಾ ಅಳಿಯನ ಮನಸ್ತಾಪವು ದೂರವಾಗುತ್ತದೆ. ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವುದು ಬಹಳ ಒಳ್ಳೆಯದು. ಇದನ್ನು ಕೆಲಸ ಮಾಡುವ ಸ್ಥಳದಲ್ಲಿ ಇಟ್ಟಲ್ಲಿ ಸಹೋದ್ಯೋಗಿಗಳ ಮತ್ತು ಹಿರಿಯ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಆದರೆ ಇದನ್ನು ಮಲಗುವ ಕೊಠಡಿಯಲ್ಲಿ ಇಡಬಾರದು. ಮಕ್ಕಳು ಓದುವ ಕೊಠಡಿಯಲ್ಲಿ ಈ ಪ್ರತಿಮೆಯನ್ನು ಇಟ್ಟಲ್ಲಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಉಂಟಾಗುತ್ತದೆ. ಮನೆಯ ಹಿಂಬಾಗಿಲ ಬಳಿ ಈ ಪ್ರತಿಮೆಯನ್ನು ಇರಿಸಿದಲ್ಲಿ ಕುಟುಂಬದಲ್ಲಿ ಇರುವ ಹಿರಿಯರ ಜೊತೆಯಲ್ಲಿ ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಮನೋಭಾವನೆ ಉಂಟಾಗುತ್ತದೆ. ಆದರೆ ಇದನ್ನು ಅಡುಗೆ ಮನೆ ಮನೆಯ ಅಂಗಳ ಅಥವಾ ಸ್ನಾನದ ಮನೆಗಳಲ್ಲಿ ಇಡಬಾರದು.
ಡ್ರ್ಯಾಗನ್ ಕಡಲಾಮೆಯಿಂದ ಹಲವು ಶುಭಫಲಗಳಿವೆ
ಮತ್ತೊಂದು ಉಪಯುಕ್ತ ಪ್ರತಿಮೆ ಎಂದರೆ ಡ್ರ್ಯಾಗನ್ ಕಡಲಾಮೆ. ಇದನ್ನು ನೋಡಿದ ತಕ್ಷಣ ಸರ್ಪವನ್ನು ನೋಡಿದಂತೆ ಭಾಸವಾಗುತ್ತದೆ. ಆದರೆ ಗಮನಹರಿಸಿದರೆ ಇದೊಂದು ಆಮೆ. ಮುಖ್ಯವಾಗಿ ಈ ಪ್ರತಿಮೆಯನ್ನು ಮನೆಯಲ್ಲಿ ಇರಿಸಿರಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಮನೆಯ ಪೂರ್ವದಿಕ್ಕಿನಲ್ಲಿಇದನ್ನು ಇರಿಸಿದಲ್ಲಿ ಉತ್ತಮ ಆರೋಗ್ಯವನ್ನು ಗಳಿಸಬಹುದು. ಉತ್ತರ ದಿಕ್ಕಿನಲ್ಲಿ ಇದನ್ನು ಇರಿಸಿದರೆ ಸ್ಥಿರಾಸ್ತಿ ಗಳಿಸಬಹುದು. ಹಾಗೆಯೇ ಹಣವನ್ನು ಉಳಿಸಬಹುದು. ಇದರಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ಕಠಿಣ ಕೆಲಸ ಕಾರ್ಯಗಳಾದರು ಮನಸ್ಸಿಟ್ಟು ಪೂರೈಸಲು ಸಾಧ್ಯವಾಗುತ್ತದೆ. ಸೋಲಿನ ವೇಳೆಯಲ್ಲಿಯೂ ಗೆಲ್ಲಲೇ ಬೇಕೆಂಬ ಹಠವು ಉಂಟಾಗುತ್ತದೆ. ಇದನ್ನು ಉದ್ಯೋಗ ಮಾಡುವ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟಿದ್ದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ.
ವಿದ್ಯಾರ್ಥಿಗಳು ಓದುವ ಸ್ಥಳದಲ್ಲಿ ಈ ಪ್ರತಿಮೆಯನ್ನು ಇಟ್ಟಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ವಿಶೇಷವಾದಂತಹ ಆಸಕ್ತಿ ಮೂಡುತ್ತದೆ. ಗೆಲ್ಲಲೇ ಬೇಕಮ್ಮ ಆಸಕ್ತಿಯು ಮನದಲ್ಲಿ ಮೂಡುತ್ತದೆ. ಹಣಕಾಸಿನ ವಿಚಾರವಾಗಿ ಉತ್ತರ ದಿಕ್ಕಿನಲ್ಲಿ ಈ ಪ್ರತಿಮೆಯನ್ನು ಇರಿಸಿದ್ದಲ್ಲಿ, ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ. ಒಂದಕ್ಕಿಂತಲೂ ಹೆಚ್ಚು ಈ ಪ್ರತಿಮೆಯನ್ನು ಮನೆಯಲ್ಲಿ ಇರಿಸಬಾರದು. ಈ ಪ್ರತಿಮೆಯನ್ನು ಬಳಸಿದ ನಂತರ ನಕಾರಾತ್ಮಕ ಭಾವನೆ ಅಥವಾ ಫಲಿತಾಂಶಗಳು ಉಂಟಾದಲ್ಲಿ ಇದನ್ನು ಉಪಯೋಗಿಸಬಾರದು.
500 ವರ್ಷಕ್ಕೆ ಒಮ್ಮೆ ಹುಟ್ಟಿ ಬರುವ ಪಕ್ಷಿಯೊಂದಿದೆ. ಅದನ್ನು ಫೀನಿಕ್ಸ್ ಎಂದು ಕರೆಯುತ್ತೇವೆ. ಫೀನಿಕ್ಸ್ ನ ನಿಜ ರೂಪ ನಮಗೆ ತಿಳಿದಿಲ್ಲ. ಅದರ ಚಿತ್ರವೂ ಇಲ್ಲ. ಆದರೆ ಚೀನಾ ವಾಸ್ತುವಿನಲ್ಲಿ ಫೀನಿಕ್ಸ್ ನ ಪ್ರತಿಮೆಯು ನಮಗೆ ಲಭ್ಯವಾಗುತ್ತದೆ. ಹಲವು ಬಣ್ಣದಲ್ಲಿ ದೊರೆಯುವ ಈ ಪ್ರತಿಮೆಯು ಕೆಂಪು ಬಣ್ಣವಾಗಿದ್ದರೆ ಹೆಚ್ಚು ಶುಭಫಲಗಳನ್ನು ನೀಡುತ್ತದೆ. ಫೀನಿಕ್ಸ್ ನ ವಿಶೇಷತೆ ಎಂದರೆ ಅದಕ್ಕೆ ಸಾವೆಂಬುದೇ ಇಲ್ಲ. ಸುಟ್ಟ ಬೂದಿಯಿಂದ ಜೀವ ಪಡೆದು ಎದ್ದು ಬರುವ ಏಕೈಕ ಜೀವಿ ಎಂದರೆ ಫೀನಿಕ್ಸ್ ಎಂದು ಹೇಳಬಹುದು. ಆದ್ದರಿಂದ ನಮ್ಮ ಜೀವನದಲ್ಲಿ ಇದರ ಪಾತ್ರ ಬಹುಮುಖ್ಯವಾಗುತ್ತದೆ. ಇದನ್ನು ಮನೆಯಲ್ಲಿ ಇರಿಸಿದಲ್ಲಿ ನಮ್ಮಲ್ಲಿನ ಆತ್ಮವಿಶ್ವಾಸವು ಹೆಚ್ಚುತ್ತದೆ.
ಸೋಲಿನ ನಡುವೆಯೂ ಗೆಲ್ಲಲೇ ಬೇಕೆಂಬ ಆಸೆ ಮತ್ತು ಹಠ ಮೂಡುತ್ತದೆ. ಮುಖ್ಯವಾಗಿ ಇದನ್ನು ಮನೆಯ ಅಂಗಳದಲ್ಲಿ ಇಡುವುದರಿಂದ ಕುಟುಂಬದ ಸದಸ್ಯರಲ್ಲಿ ಒಮ್ಮತ ಮೂಡುತ್ತದೆ. ಇದನ್ನು ಮಲಗುವ ಕೋಣೆಯಲ್ಲಿ ಇಡಬಹುದು. ಇದರಿಂದ ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ಅಥವಾ ಅಧಿಕಾರಿಗಳಾಗಿದ್ದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಸೋದರ ಭಾಂದವ್ಯ ಮೂಡುತ್ತದೆ.