ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾಸ್ತು ಟಿಪ್ಸ್:‌ ಮನೆಯ ಲಿವಿಂಗ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದುಬಿಡಿ; ಕುಳಿತು ಮಾತನಾಡುವ ಸ್ಥಳ ಹೀಗಿರಲಿ

ವಾಸ್ತು ಟಿಪ್ಸ್:‌ ಮನೆಯ ಲಿವಿಂಗ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದುಬಿಡಿ; ಕುಳಿತು ಮಾತನಾಡುವ ಸ್ಥಳ ಹೀಗಿರಲಿ

Home Living room vastu tips: ಮನೆಯಲ್ಲಿ ಎಲ್ಲರೂ ಕುಳಿತು ಮಾತನಾಡುವ ಸ್ಥಳವೇ ಲಿವಿಂಗ್ ರೂಮ್. ಅತಿಥಿಗಳು ಬಂದಾಗಲೂ ಇಲ್ಲಿಗೆ ಮೊದಲು ಬರುತ್ತಾರೆ. ಹೀಗಾಗಿ ಮನೆಯ ಪ್ರಮುಖ ಕೋಣೆಯ ವಾಸ್ತು ತುಂಬಾ ಮುಖ್ಯ. ಅದು ಹೇಗಿರಬೇಕು ಎಂಬುದನ್ನು ಮುಂದೆ ಓದಿ.

ಮನೆಯ ಲಿವಿಂಗ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದುಬಿಡಿ
ಮನೆಯ ಲಿವಿಂಗ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದುಬಿಡಿ (pixabay)

ಮನೆ ಎಂದ ಮೇಲೆ ವಾಸ್ತು ಪ್ರಕಾರವಾಗಿ ಕಟ್ಟಿರಬೇಕು. ಯಾವ ಭಾಗದಲ್ಲಿ ಏನಿರಬೇಕೋ ಅದರಂತೆಯೇ ಅಡುಗೆ ಮನೆ, ಕೋಣೆಗಳನ್ನು ಕಟ್ಟಿಸಬೇಕು. ಮನೆಯಲ್ಲಿ ಅಡುಗೆ ಮನೆಯ ವಾಸ್ತು ಎಷ್ಟು ಮುಖ್ಯವೋ, ಲಿವಿಂಗ್‌ ಏರಿಯಾದ ವಾಸ್ತು ಕೂಡಾ ತುಂಬಾ ಮುಖ್ಯ. ಮನೆಯವರು ಮಾತ್ರವಲ್ಲದೆ, ಮನೆಗೆ ಬರುವ ಅತಿಥಿಗಳು ಮೊದಲು ಬರುವುದು ಲಿವಿಂಗ್ ರೂಮ್‌ಗೆ. ಅಲ್ಲೇ ಕುಳಿತುಕೊಂಡು ಮಾತುಕತೆ ನಡೆಯುತ್ತದೆ. ಹೀಗಾಗಿ ಲಿವಿಂಗ್‌ ರೂಮ್‌ಗೆ ಮನೆಯಲ್ಲಿ ಹೆಚ್ಚಿನ ಆದ್ಯತೆ ಇದೆ. ಇದರ ವಾಸ್ತು ಕೂಡಾ ಸಮರ್ಪಕವಾಗಿರಬೇಕು.

ಮನೆಯ ಸದಸ್ಯರು ಹೆಚ್ಚಿನ ಸಮಯವನ್ನು ಲಿವಿಂಗ್ ರೂಮ್‌ನಲ್ಲಿ ಕಳೆಯುತ್ತಾರೆ. ಇದು ಮಾತುಗಳ ವಿನಿಮಯ ಮಾತ್ರವಲ್ಲದೆ ಸುಖ-ದುಃಖಗಳನ್ನು ಹಂಚಿಕೊಳ್ಳುವ ಸ್ಥಳ. ಕುಟುಂಬದ ಪ್ರಮುಖ ವಿಚಾರಗಳನ್ನು ಕುಳಿತು ಚರ್ಚಿಸುವ ಸ್ಥಳ. ಮನೆಯ ಪ್ರಮುಖ ವಾಸದ ಕೋಣೆಯ ವಿಚಾರವಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಲಿವಿಂಗ್ ರೂಮ್‌ಗೆ ಹಚ್ಚುವ ಬಣ್ಣದಿಂದ ಹಿಡಿದು, ಮೀನು ಅಕ್ವೇರಿಯಂ ಸೇರಿದಂತೆ ಇತರ ಅನೇಕ ವಸ್ತುಗಳು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಕಾರಣವೆಂದು ನಂಬಲಾಗುತ್ತದೆ. ವಾಸ್ತು ಪ್ರಕಾರ, ಲಿವಿಂಗ್ ರೂಮ್ ಅನ್ನು ಸಮರ್ಪಕವಾಗಿ ಇಟ್ಟುಕೊಳ್ಳುವುದರಿಂದ ಸಂಪತ್ತು, ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಇದೇ ವೇಳೆ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸಂಪತ್ತಿಗೆ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಮನೆಯಲ್ಲಿನ ನಕಾರಾತ್ಮಕ ಅಂಶಗಳನ್ನು ತಡೆದು ಹಾಕುವ ಮೂಲಕ ಸಂತೋಷ ಹೆಚ್ಚುತ್ತದೆ.

ಲಿವಿಂಗ್‌ ಏರಿಯಾದ ವಾಸ್ತು ಸಲಹೆಗಳು

  • ವಾಸ್ತು ಪ್ರಕಾರ, ಮನೆಯ ವಾಸದ ಕೋಣೆಯ ಪ್ರವೇಶವು ದಕ್ಷಿಣ ದಿಕ್ಕಿಗೆ ಇರಬಾರದು. ಇದು ಕುಟುಂಬದ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೀಠೋಪಕರಣಗಳು ಮತ್ತು ಇತರ ಭಾರವಾದ ವಸ್ತುಗಳನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕು.
  • ವಾಸ್ತುಶಾಸ್ತ್ರದ ಪ್ರಕಾರ, ಲಿವಿಂಗ್ ರೂಮ್ ಅನ್ನು ಸ್ವಚ್ಛವಾಗಿಡಬೇಕು. ಇದ್ದಬದ್ದ ವಸ್ತುಗಳನ್ನೆಲ್ಲಾ ಇಲ್ಲಿ ಇಡುವ ಬದಲಿಗೆ ನಿಯಮಿತವಾಗಿ ಬೇಕಾದ ವಸ್ತುಗಳನ್ನು ಮಾತ್ರವೇ ಇಡಬೇಕು.

ಇದನ್ನೂ ಒದಿ | ವಾಸ್ತು ಟಿಪ್ಸ್: ಈ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡಬೇಡಿ, ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಜಾಗ್ರತೆ

  • ಲಿವಿಂಗ್‌ ಏರಿಯಾದ ಗೋಡೆಗಳಿಗೆ ಬಿಳಿ, ತಿಳಿ ನೀಲಿ, ಹಳದಿ ಅಥವಾ ಹಸಿರು ಬಣ್ಣ ಬಳಿದರೆ ಉತ್ತಮ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
  • ಧನಾತ್ಮಕ ಶಕ್ತಿ ಹೆಚ್ಚಿಸುವ ಕಿಟಕಿಗಳು ಲಿವಿಂಗ್‌ ಏರಿಯಾದಲ್ಲಿ ಹೆಚ್ಚು ಇರಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಈ ಕಿಟಕಿಗಳನ್ನು ತೆರೆದಿಡಬೇಕು.
  • ಅನೇಕರು ಲಿವಿಂಗ್‌ ಏರಿಯಾದ ಮಧ್ಯಭಾಗದಲ್ಲಿ ತೂಗುವ ದೀಪಗಳನ್ನು ನೇತಹಾಕುತ್ತಾರೆ. ವಾಸ್ತು ಪ್ರಕಾರ ಇದನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಆಗ ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ಹೆಚ್ಚುತ್ತದೆ ಎಂದು ವಾಸ್ತು ಹೇಳುತ್ತದೆ.
  • ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಓಡಿಸಲು ಪ್ರತಿದಿನ ಸಂಜೆ ಮಣ್ಣಿನ ಹಣತೆ ಬೆಳಗಿಸಿದರೆ ಒಳ್ಳೆಯದು.
  • ಲಿವಿಂಗ್ ರೂಮ್‌ನಲ್ಲಿ ಉದಯಿಸುತ್ತಿರುವ ಸೂರ್ಯ ಮತ್ತು ಏಳು ಕುದುರೆಗಳ ಚಿತ್ರವನ್ನು ಇಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
  • ಲಿವಿಂಗ್ ರೂಮ್‌ನಲ್ಲಿ ಮೀನಿನ ಅಕ್ವೇರಿಯಂ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಬಹುದು. ಎರಡು ಚಿನ್ನದ ಬಣ್ಣದ ಮೀನುಗಳನ್ನು ಇರಿಸಿದರೆ ಮನೆಗೆ ಒಳ್ಳೆಯದು. ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ.
  • ಇದೇ ವೇಳೆ ಕೋಣೆಯಲ್ಲಿ ಚಿತ್ರ, ಪೇಂಟಿಂಗ್ಸ್‌ ಇಡುವುದಾದರೆ ಸಂತಸ ಹೆಚ್ಚಿಸುವಂಥಾ ಚಿತ್ರಗಳನ್ನು ಇರಿಸಬೇಕು. ದುಃಖ ಮತ್ತು ನೋವನ್ನು ತೋರಿಸುವ ಚಿತ್ರಗಳು ಇಲ್ಲಿರಬಾರದು. ಅದು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ.
  • ಕ್ಯಾಕ್ಟಸ್, ಒಣ ಹೂವುಗಳು ಮತ್ತು ಕೃತಕ ಹೂವುಗಳನ್ನು ಲಿವಿಂಗ್ ರೂಮ್‌ನಲ್ಲಿ ಇಡಬಾರದು. ಇದರಿಂದಾಗಿ ಧನಕನಕ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ