Vastu shastra: ಏಳು ಕುದುರೆಗಳ ಮೇಲೆ ಸೂರ್ಯ ದೇವರ ಸವಾರಿ, ಈ ಚಿತ್ರಪಟವನ್ನು ಮನೆಯಲ್ಲಿ ವಾಸ್ತು ಪ್ರಕಾರ ಹೀಗೆ ಇಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Shastra: ಏಳು ಕುದುರೆಗಳ ಮೇಲೆ ಸೂರ್ಯ ದೇವರ ಸವಾರಿ, ಈ ಚಿತ್ರಪಟವನ್ನು ಮನೆಯಲ್ಲಿ ವಾಸ್ತು ಪ್ರಕಾರ ಹೀಗೆ ಇಡಿ

Vastu shastra: ಏಳು ಕುದುರೆಗಳ ಮೇಲೆ ಸೂರ್ಯ ದೇವರ ಸವಾರಿ, ಈ ಚಿತ್ರಪಟವನ್ನು ಮನೆಯಲ್ಲಿ ವಾಸ್ತು ಪ್ರಕಾರ ಹೀಗೆ ಇಡಿ

Vastu shastra Tips: ವಾಸ್ತ್ರು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಗಾಗಿ ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುವ ಸೂರ್ಯ ದೇವರ ಫೋಟೋ/ ವಿಗ್ರಹ ಇಡುವುದು ಶುಭದಾಯಕವೆಂದು ಪರಿಗಣಿಸಲಾಗಿದೆ. ಪ್ರತಿದಿನ ಸೂರ್ಯ ದೇವರನ್ನು ನೋಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ.

Vastu shastra: ಏಳು ಕುದುರೆಗಳ ಮೇಲೆ ಸೂರ್ಯ ದೇವರ ಸವಾರಿ
Vastu shastra: ಏಳು ಕುದುರೆಗಳ ಮೇಲೆ ಸೂರ್ಯ ದೇವರ ಸವಾರಿ (Photo Credit: spiritmiracle.com)

Vastu shastra Tips: ಮನೆಯಲ್ಲಿ ವಾಸಿಸುವವರ ನೆಮ್ಮದಿ, ಆರೋಗ್ಯ, ಸಂತೋಷಕ್ಕಾಗಿ ವಾಸ್ತ್ರುಶಾಸ್ತ್ರದಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿ ಪಡೆಯಲು, ಮನೆಯಲ್ಲಿ ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುವ ಸೂರ್ಯ ದೇವರ ವಿಗ್ರಹ ಅಥವಾ ಚಿತ್ರವನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಸೂರ್ಯ ದೇವರ ಏಳು ಕುದುರೆಗಳು ದೊಡ್ಡ ಗಾತ್ರ ಹೊಂದಿವೆ ಮತ್ತು ಬಲಿಷ್ಠವಾಗಿವೆ. ಈ 7 ಕುದುರೆಗಳ ಲಗಾಮು ಅರುಣ ದೇವರ ಕೈಯಲ್ಲಿ ಇರುತ್ತದೆ. ಸೂರ್ಯ ದೇವರು ರಥವನ್ನು ನಡೆಸುತ್ತಾನೆ. ಸೂರ್ಯನ ರಥಕ್ಕೆ ಜೋಡಿಸಲಾದ ಏಳು ಕುದುರೆಗಳ ಹೆಸರುಗಳು ಗಾಯತ್ರಿ, ಭ್ರಾತಿ, ಉಸ್ನಿಕ್, ಜಗತಿ, ತ್ರಿಷ್ಟಪ್, ಅನುಷ್ಟಪ್ ಮತ್ತು ಪಂಕ್ತಿ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಸೂರ್ಯನ ಈ 7 ಕುದುರೆಗಳು ವಾರದ 7 ದಿನಗಳನ್ನು ಪ್ರತಿನಿಧಿಸುತ್ತವೆ. ಮನೆಯಲ್ಲಿ ಸೂರ್ಯ ದೇವರ ಪ್ರತಿಮೆ ಅಥವಾ ಚಿತ್ರವಿದ್ದರೆ ಕುಟುಂಬ ಸದಸ್ಯರ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲು ಆರಂಭವಾಗುತ್ತದೆ, ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ದೊರಕುತ್ತದೆ ಎಂದು ನಂಬಲಾಗಿದೆ. ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುತ್ತಿರುವ ಸೂರ್ಯ ದೇವರ ಚಿತ್ರವನ್ನು ಮನೆಯಲ್ಲಿ ಇಡಲು ವಾಸ್ತು ನಿಯಮಗಳು ಇವೆ. ಯಾವ ದಿಕ್ಕಿನಲ್ಲಿ ಈ ಚಿತ್ರಪಟವನ್ನು ಇಡಬೇಕು? ಯಾವ ದಿಕ್ಕಿನಲ್ಲಿ ಇಡಬಾರದು? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ.

ಸೂರ್ಯ ದೇವರ ಚಿತ್ರವನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಪ್ರಕಾರ ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುತ್ತಿರುವ ಸೂರ್ಯ ದೇವರ ವಿಗ್ರಹ ಅಥವಾ ಚಿತ್ರವನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಸೂರ್ಯೋದಯವು ಪೂರ್ವ ದಿಕ್ಕಿನಲ್ಲಿ ಸಂಭವಿಸುತ್ತದೆ. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಬೆಳಿಗ್ಗೆ ಎದ್ದು ಸೂರ್ಯ ದೇವರನ್ನು ನೋಡುವುದು ಶುಭದಾಯಕ.

ಸೂರ್ಯನ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಪ್ರಯೋಜನಗಳೇನು?

  • ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುವ ಸೂರ್ಯ ದೇವರ ವಿಗ್ರಹವನ್ನು ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮ ಬರುತ್ತದೆ ಎಂದು ವಾಸ್ತ್ರುಶಾಸ್ತ್ರದಲ್ಲಿ ತಿಳಿಸಲಾಗಿದೆ.
  • ಮನೆಯಲ್ಲಿ ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುತ್ತಿರುವ ಸೂರ್ಯ ದೇವರ ವಿಗ್ರಹ ಅಥವಾ ಪ್ರತಿಮೆಯನ್ನು ಇಡುವುದು ಶುಭದಾಯಕ. ಮನೆಯಲ್ಲಿ ಇದನ್ನು ಸ್ಥಾಪಿಸುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
  • ಜ್ಯೋತಿಷದಲ್ಲಿ ಸೂರ್ಯ ದೇವರನ್ನು ಯಶಸ್ಸು, ಗೌರವ, ಉನ್ನತ ಸ್ಥಾನ ಮತ್ತು ಪ್ರತಿಷ್ಠೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಅಂತಹ ಸೂರ್ಯ ದೇವರ ವಿಗ್ರಹವನ್ನು ಮನೆಯಲ್ಲಿ ಇರಿಸಿ ಪ್ರತಿದಿನ ವೀಕ್ಷಿಸುವುದರಿಂದ, ಆತನ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.

ಇದನ್ನೂ ಓದಿ: Vastu Tips: ಮೀನಿನ ಅಕ್ವೇರಿಯಂನಿಂದ ಮನೆಗೆ ಶೋಭೆ, ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು, ಪ್ರಯೋಜನಗಳೇನು, ವಾಸ್ತು ಪ್ರಕಾರ ಈ ಅಂಶಗಳನ್ನು ಗಮನಿಸಿ

ಡಿಸ್‌ಕ್ಲೈಮರ್‌/ ಹಕ್ಕು ನಿರಾಕರಣೆ

ಲಭ್ಯವಿರುವ ಮಾಹಿತಿ ಆಧರಿಸಿದ ಬರಹ ಇದಾಗಿದೆ. ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ಸತ್ಯ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ವಿವರವಾದ ಮತ್ತು ಹೆಚ್ಚಿನ ಮಾಹಿತಿಗಾಗಿ ವಾಸ್ತು ತಜ್ಞರನ್ನು ಅಥವಾ ಸಂಬಂಧಪಟ್ಟ ಕ್ಷೇತ್ರದ ಅನುಭವಿಗಳನ್ನು ಸಂಪರ್ಕಿಸಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.