ಈ 3 ರಾಶಿಯವರ ಮೇಲಿದೆ ಕುಬೇರನ ಆಶೀರ್ವಾದ; ಸಂಪತ್ತಿನ ಪ್ರಧಾನ ದೇವತೆ ನಿಮಗೆ ಒಲಿಯಲು ಈ ವಾಸ್ತು ಸಲಹೆ ಅನುಸರಿಸಿ
Vastu Tips: ಲಕ್ಷ್ಮೀಯು ಸಂಪತ್ತಿನ ಅಧಿದೇವತೆ ಆದರೆ ಕುಬೇರನನ್ನು ಪ್ರಧಾನ ದೇವರು ಎನ್ನುತ್ತಾರೆ. ದ್ವಾದಶ ರಾಶಿಗಳಲ್ಲಿ ವಿಶೇಷವಾಗಿ 3 ರಾಶಿಗಳ ಮೇಲೆ ಕುಬೇರನ ಆಶೀರ್ವಾದ ಸದಾ ಇರುತ್ತದೆ. ಅದರಲ್ಲಿ ಈ 3 ರಾಶಿಯವರ ಮೇಲೆ ಕುಬೇರನ ಆಶೀರ್ವಾದ ಸದಾ ಇರಲಿದೆ. ನೀವೂ ಅಷ್ಟೈಶ್ವರ್ಯ ಪಡೆಯಲು ಈ ವಾಸ್ತು ಸಲಹೆ ಅನುಸರಿಸಿ.
ಹಿಂದೂ ಧರ್ಮದ ಪ್ರಕಾರ ಲಕ್ಷ್ಮಿ ದೇವಿ ಸಂಪತ್ತಿನ ದೇವತೆ. ಆದರೆ ಕುಬೇರನನ್ನು ಪ್ರಧಾನ ದೇವರು ಎಂದು ಕರೆಯಲಾಗುತ್ತದೆ. ಕುಬೇರನ ಆಶೀರ್ವಾದವಿದ್ದರೆ ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ಸಂಪತ್ತು ಸಿಗುತ್ತದೆ. ಇಂದು ಬಡವನಾಗಿದ್ದವರು ರಾತ್ರೋ ರಾತ್ರಿ ಶ್ರೀಮಂತರಾಗಬಹುದು. ಕುಬೇರನನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದವರು ತಮ್ಮ ಜೀವನದುದ್ದಕ್ಕೂ ಹಣದ ಕೊರತೆಯನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ.
ಹಾಗೇ ಎಲ್ಲಾ 12 ಚಿಹ್ನೆಗಳನ್ನು ಬೇರೆ ಬೇರೆ ಗ್ರಹಗಳು ಆಳುತ್ತವೆ. ಗ್ರಹಗಳ ಪ್ರಭಾವದಿಂದಾಗಿ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರು ದೇವ- ದೇವತೆಗಳ ಅನುಗ್ರಹವನ್ನು ಪಡೆಯುತ್ತಾರೆ . ಆದರೆ ಕುಬೇರನಿಗೆ ಕೆಲವೊಂದು ರಾಶಿಗಳು ಬಹಳ ಪ್ರಿಯವಾಗಿದೆ. ಈ 3 ರಾಶಿಯವರಿಗೆ ಕುಬೇರನ ಕೃಪೆ ಸದಾ ಇರುತ್ತದೆ.
ವೃಷಭ ರಾಶಿ
ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ. ಶುಕ್ರನನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ಈ ಗ್ರಹವು ಆರ್ಥಿಕ ಸಮೃದ್ಧಿಯನ್ನು ನೀಡುತ್ತದೆ. ವೃಷಭ ರಾಶಿಯವರಿಗೆ ಶುಕ್ರನ ಆಶೀರ್ವಾದ ಹಾಗೂ ಕುಬೇರನ ಆಶೀರ್ವಾದವಿದೆ. ಅವರು ತಮ್ಮ ಜೀವನದಲ್ಲಿ ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ. ಇದರೊಂದಿಗೆ, ಜೀವನದ ಸಮಸ್ಯೆಗಳು ಅವರನ್ನು ದೀರ್ಘಕಾಲ ಕಾಡುವುದಿಲ್ಲ. ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕುಟುಂಬದ ಎಲ್ಲರೊಂದಿಗೆ ಕೂಡಾ ನೀವು ಸಂತೋಷದಿಂದ ಇರುವಿರಿ.
ಕರ್ನಾಟಕ ಚಿಹ್ನೆ
ಕರ್ಕಾಟಕ ರಾಶಿಯವರಿಗೆ ಕುಬೇರ ಎಂದರೆ ಬಹಳ ಇಷ್ಟ. ಚಂದ್ರನು ಈ ರಾಶಿಯ ಅಧಿಪತಿಯಾಗಿ ಕಾರ್ಯ ನಿರ್ವಹಿಸುತ್ತಾನೆ . ಚಂದ್ರನು ತಂಪಾದ, ಶಾಂತ ಮತ್ತು ಸ್ನೇಹಪರ ಮನಸ್ಸನ್ನು ಹೊಂದಿದ್ದಾನೆ. ಈ ರಾಶಿಗೆ ಸೇರಿದವರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಯಾವುದೇ ಸವಾಲನ್ನು ಎದುರಿಸಲು ಸಮರ್ಥರಾಗಿರುತ್ತಾರೆ. ಜೀವನದಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸುವ ಸಂಪೂರ್ಣ ಅವಕಾಶವನ್ನು ಈ ರಾಶಿಯವರು ಪಡೆಯುತ್ತಾರೆ. ಜ್ಞಾನ, ಬುದ್ಧಿವಂತಿಕೆ ಮತ್ತು ಪ್ರತಿಭೆಯ ಮೂಲಕ ಜೀವನದ ಪ್ರತಿಯೊಂದು ಅಂಶದಲ್ಲೂ ಯಶಸ್ಸು ಸಾಧಿಸುತ್ತಾರೆ.
ಧನು ರಾಶಿ
ಧನು ರಾಶಿಯನ್ನು ಗುರುವು ಆಳುತ್ತಾನೆ. ಈ ಮೂರೂ ರಾಶಿಗಳಲ್ಲಿ ಇದು ಕುಬೇರನಿಗ ಬಹಳ ಅಚ್ಚು ಮೆಚ್ಚಿನ ರಾಶಿ. ಈ ರಾಶಿಯವರಿಗೆ ಕುಬೇರ ಸುಲಭವಾಗಿ ಒಲಿಯುತ್ತಾನೆ. ಈ ರಾಶಿಯವರಿಗೆ ಆಧ್ಯಾತ್ಮದಲ್ಲಿ ಬಹಳ ಒಲವು. ಆದ್ದರಿಂದ ಇವರಿಗೆ ಕುಬೇರನ ಆಶೀರ್ವಾದ ಸದಾ ಇರುತ್ತದೆ.
ಕುಬೇರನ ಆಶೀರ್ವಾದ ಪಡೆಯುವ ಮಾರ್ಗಗಳು
ನಿಮ್ಮ ಜೀವನ ಸದಾ ಸುಖವಾಗಿರಬೇಕು, ಅಷ್ಟೈಶ್ವರ್ಯ ಒಲಿಯಬೇಕು ಎಂಬ ಮನಸ್ಸು ಇದ್ದಲ್ಲಿ ಕುಬೇರನ ಆಶೀರ್ವಾದ ಬಹಳ ಮುಖ್ಯ. ಕುಬೇರನ ಆಶೀರ್ವಾದ ನಿಮಗೆ ಬೇಕಾಗಿದ್ದಲ್ಲಿ ಈ ಸಲಹೆಗಳನ್ನು ಅನುಸರಿಸಿ.
- ಮನೆಯ ದಕ್ಷಿಣ ಅಥವಾ ನೈಋತ್ಯ ಗೋಡೆಯ ಕಡೆಗೆ ಲಾಕರ್ ಅಥವಾ ಬೀರು ಅಳವಡಿಸಬೇಕು ಮತ್ತು ಅದರಲ್ಲಿ ಹಣವನ್ನು ಇಡಬೇಕು. ಅದರ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ವ್ಯವಸ್ಥೆ ಮಾಡಬೇಕು. ಈ ದಿಕ್ಕು ಕುಬೇರನಿಗೆ ಸಂಬಂಧಿಸಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಉತ್ತರಕ್ಕೆ ಬಾಗಿಲು ತೆರೆದರೆ ನಿಮ್ಮ ಲಾಕರ್‌ನಲ್ಲಿ ಯಾವಾಗಲೂ ಹಣ ಇರುತ್ತದೆ.
- ನಿಮ್ಮ ತಿಜೋರಿ ಸದಾ ಹಣದಿಂದ ತುಂಬಿರಬೇಕು ಎಂದಾದಲ್ಲಿ ನಗದು ಲಾಕರ್ ಮುಂದೆ ಕನ್ನಡಿಯನ್ನು ಇರಿಸಿ . ನಿಮ್ಮ ಲಾಕರ್ ಚಿತ್ರವು ಕನ್ನಡಿಯಲ್ಲಿ ಗೋಚರಿಸುವಂತೆ ವ್ಯವಸ್ಥೆ ಮಾಡಿ. ಈ ರೀತಿ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗುತ್ತದೆ.
- ಯಾರಿಂದಲೂ ಏನನ್ನೂ ಉಚಿತವಾಗಿ ತೆಗೆದುಕೊಳ್ಳಬೇಡಿ, ಯಾರಿಗೂ ಏನನ್ನೂ ಉಚಿತವಾಗಿ ನೀಡಬೇಡಿ. ಆದರೆ ನಿರ್ಗತಿಕರಿಗೆ ದಾನ ಮಾಡಿದರೆ ಕುಬೇರನಿಗೆ ಸಂತೋಷವಾಗುತ್ತದೆ. ಅವನು ನಿಮಗೆ ಇನ್ನಷ್ಟು ಐಶ್ಚರ್ಯ ನೀಡಿ ಕರುಣಿಸುತ್ತಾನೆ.
- ನಿಮ್ಮ ಆದಾಯದ ಒಂದು ಭಾಗವನ್ನು ದತ್ತಿ ಸೇವೆಗಳಿಗೆ ಬಳಸಬೇಕು. ಇದು ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವಂತೆ ಮಾಡುತ್ತದೆ. ಮನೆಗೆ ಸಮೃದ್ಧಿಯನ್ನು ತರುತ್ತದೆ.
- ಕುಟುಂಬದ ಮಹಿಳೆಯರಿಗೆ ಗೌರವ ನೀಡಬೇಕು. ಏಕೆಂದರೆ ಮನೆಯ ಹೆಣ್ಣು ಮಕ್ಕಳು ಲಕ್ಷ್ಮೀ ದೇವಿಗೆ ಸಮ. ಆದ್ದರಿಂದ ಹೆಣ್ಣು ಮಕ್ಕಳಿಗೆ ಗೌರವ ನೀಡಿದರೆ ಲಕ್ಷ್ಮೀಗೆ ನೀಡಿದಂತೆ.
- ಕುಬೇರ ಯಂತ್ರವನ್ನು ಮನೆಯಲ್ಲಿ ಇಟ್ಟು ನಿತ್ಯ ಪೂಜಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಐಶ್ವರ್ಯ ಹೆಚ್ಚುತ್ತದೆ.
- ಮನೆಯಲ್ಲಿ ತುಳಸಿ ನೆಡಬೇಕು. ಪ್ರತಿ ದಿನ ತುಳಸಿ ಪೂಜೆ ಮಾಡಬೇಕು. ಶುಕ್ರವಾರ ತುಳಸಿಗೆ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ಇರುತ್ತಾಳೆ.
- ಒಡೆದ ಭಾವಚಿತ್ರಗಳು, ಹರಿದ ಬಟ್ಟೆ, ಒಡೆದ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಇವುಗಳನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ
ಇದನ್ನೂ ಓದಿ: ಗುರು, ಮಂಗಳ, ಕೇತುವಿನಿಂದ ಸಿಂಹ ರಾಶಿಯಲ್ಲಿ ರೂಪುಗೊಳ್ಳಲಿದೆ ನವ ಪಂಚಮ ಯೋಗ; ವೃಷಭ ಸೇರಿದಂತೆ 3 ರಾಶಿಯವರಿಗೆ ಸಕಲ ಸೌಭಾಗ್ಯ