Vastu Tips: ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ನಿಮ್ಮ ಆರ್ಥಿಕ ಸಂಕಷ್ಟ ದೂರ ಮಾಡಲಿದೆ ನೀಲಿ ಶಂಖಪುಷ್ಪ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ನಿಮ್ಮ ಆರ್ಥಿಕ ಸಂಕಷ್ಟ ದೂರ ಮಾಡಲಿದೆ ನೀಲಿ ಶಂಖಪುಷ್ಪ

Vastu Tips: ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ನಿಮ್ಮ ಆರ್ಥಿಕ ಸಂಕಷ್ಟ ದೂರ ಮಾಡಲಿದೆ ನೀಲಿ ಶಂಖಪುಷ್ಪ

ನೀಲಿ ಶಂಖಪುಷ್ಪ ಅಥವಾ ಅಪರಾಜಿತಾ ಹೂವಿನ ಗಿಡ ಮನೆಯಲ್ಲಿ ಇದ್ದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯಲ್ಲಿ ಈ ಹೂವಿನ ಹೂವಿನ ಗಿಡವಿದ್ದರೆ ಹಣದ ಕೊರತೆ ಇರುವುದಿಲ್ಲ.

ನಿಮ್ಮ ಆರ್ಥಿಕ ಸಂಕಷ್ಟ ದೂರ ಮಾಡಲಿದೆ ನೀಲಿ ಶಂಖಪುಷ್ಪ
ನಿಮ್ಮ ಆರ್ಥಿಕ ಸಂಕಷ್ಟ ದೂರ ಮಾಡಲಿದೆ ನೀಲಿ ಶಂಖಪುಷ್ಪ

ಕೆಲವರು ಹಂತ ಹಂತದಲ್ಲೂ ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಎಷ್ಟೇ ದುಡಿದರೂ ಹಣ ಅವರ ಕೈಯಲ್ಲಿ ಉಳಿಯುವುದಿಲ್ಲ. ಹೆಚ್ಚಿನ ಖರ್ಚುವೆಚ್ಚಗಳು ಮತ್ತು ಅನಿರೀಕ್ಷಿತ ಸಮಸ್ಯೆಗಳು ಮಾತ್ರವೇ ಕೈಯಲ್ಲಿ ಹಣ ಉಳಿಯದೆ ಇರಲು ಕಾರಣವಲ್ಲ. ಕೆಲವೊಮ್ಮೆ ಗ್ರಹ ದೋಷಗಳು ಮತ್ತು ವಾಸ್ತು ದೋಷಗಳಿಂದ ಉಂಟಾಗುತ್ತದೆ. ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಹಲವು ಮಾರ್ಗಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ನೀಲಿ ಅಪರಾಜಿತಾ ಹೂವಿನ ಗಿಡವನ್ನು ಮನೆಯಲ್ಲಿ ನೆಡುವುದಾಗಿದೆ. ಅಪರಾಜಿತಾ ಹೂವನ್ನು ಶಂಖಪುಷ್ಪ ಎಂದೂ ಕರೆಯಲಾಗುತ್ತದೆ. ನೀಲಿ ಮತ್ತು ಬಿಳಿ ಬಣ್ಣದ ಶಂಖಪುಷ್ಪ ಎಲ್ಲೆಡೆ ಕಾಣಸಿಗುತ್ತವೆ. ಆದರೆ ನೀಲಿ ಅಪರಾಜಿತಾ ಹೂವು ಅಥವಾ ಶಂಖಪುಷ್ಪ ಪವಿತ್ರವಾದುದು.

ನೀಲಿ ಅಪರಾಜಿತಾ ಹೂವಿನ ಗಿಡ ಮನೆಯಲ್ಲಿ ಇದ್ದರೆ ಹಣದ ಸಂಬಂಧಿತ ಸಮಸ್ಯೆಗಳು ಮತ್ತು ಸಾಲದ ಸುಳಿಯಿಂದ ಮುಕ್ತಿ ದೊರೆಯುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯಲ್ಲಿ ಒಂದೇ ಒಂದು ಈ ಹೂವಿನ ಹೂವಿನ ಗಿಡವಿದ್ದರೆ ಹಣದ ಕೊರತೆ ಇರುವುದಿಲ್ಲ. ಹೂವುಗಳಿಲ್ಲದೆ ಪೂಜೆ ಅಪೂರ್ಣ. ಈ ಹೂವುಗಳನ್ನು ದೇವರ ಪೂಜೆಯಲ್ಲಿ ಬಳಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಸಂಪತ್ತು ಸಮೃದ್ಧಿ

ಲಕ್ಷ್ಮೀದೇವಿಯನ್ನು ಎಲ್ಲರೂ ಪೂಜಿಸುತ್ತಾರೆ. ಏಕೆಂದರೆ ಲಕ್ಷ್ಮೀದೇವಿಯ ಆಶೀರ್ವಾದವಿದ್ದರೆ ಮನೆಯಲ್ಲಿ ಸಂಪತ್ತು ನೆಲೆಸುತ್ತದೆ ಎಂದು ನಂಬಲಾಗಿದೆ. ಆದರೆ ಅಪರಾಜಿತಾ ಹೂವಿನ ಗಿಡ ಕೂಡ ಮನೆಯಲ್ಲಿದ್ದರೆ ಸಂಪತ್ತು ಲಭಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ದುರ್ಗಾಮಾತೆ, ಆಂಜನೇಯ, ವಿಷ್ಣು, ಶಿವ ಮತ್ತು ಶನಿ ದೇವರಿಗೆ ನೀಲಿ ಅಪರಾಜಿತ ಹೂವುಗಳನ್ನು ಅರ್ಪಿಸಿದರೆ ಅವರ ಕೃಪೆ ಸಿಗುತ್ತದೆ. ನಿಮ್ಮ ಬೆನ್ನುಬಿದ್ದ ಆರ್ಥಿಕ ಸಂಕಷ್ಟ ದೂರಾಗುತ್ತದೆ.

ಶನಿವಾರದಂದು ಶನೇಶ್ವರನಿಗೆ ಅಪರಾಜಿತಾ ಪುಷ್ಪಗಳಿಂದ ಕಟ್ಟಿದ ಹೂವಿನ ಮಾಲೆಯನ್ನು ಅರ್ಪಿಸಬೇಕು. ಹೀಗೆ ಮಾಡಿದರೆ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ.ಬಹಳ ದಿನಗಳಿಂದ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ, ಹನುಮಂತನ ಪಾದಕ್ಕೆ ಅಪರಾಜಿತಾ ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿ. ಹೀಗೆ ಮಾಡುವುದರಿಂದ ಹಣದ ಸಮಸ್ಯೆಗಳು ಪರಿಹಾರವಾಗುವ ಜೊತೆಗೆ ನಿಮ್ಮ ಆಸೆಗಳು ಈಡೇರುತ್ತದೆ.

ಸೋಮವಾರ ಶಿವಲಿಂಗವನ್ನು ಪೂಜಿಸುವಾಗ ಶಂಖಪುಷ್ಪವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ. ಸೋಮವಾರದಂದು ಹರಿಯುವ ನೀರಿನಲ್ಲಿ ಐದು ತಾಜಾ ಅಪರಾಜಿತಾ ಹೂವುಗಳನ್ನು ತೇಲಿ ಬಿಡಬೇಕು. ಹೀಗೆ ಮಾಡಿದರೂ ಹಣದ ಸಮಸ್ಯೆ ದೂರವಾಗುತ್ತದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಬದಲಾವಣೆ ಆಗುತ್ತದೆ.

ನಕಾರಾತ್ಮಕ ಶಕ್ತಿಗೆ ತಡೆ

ಈ ಹೂವುಗಳಿಂದ ಮಾಡಿದ ಮಾಲೆಯನ್ನು ದುರ್ಗಾಮಾತೆ, ಶಿವ ಮತ್ತು ವಿಷ್ಣುವಿಗೆ ಅರ್ಪಿಸಬಹುದು. ಇವುಗಳಲ್ಲಿ ಕೆಲವು ಹೂವುಗಳನ್ನು ನಿಮ್ಮ ಮನೆಯ ಮೂಲೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ.

ಹಣತೆ ಹಚ್ಚಿ ಅದರ ಜೊತೆ ಶಂಖಪುಷ್ಪಗಳನ್ನು ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಂಗಳವಾರದಂದು ಆಂಜನೇಯನ ಪೂಜೆಯಲ್ಲಿ ಅಪರಾಜಿತ ಹೂವುಗಳನ್ನು ಇಡಬೇಕು. ನಂತರ ಅವುಗಳನ್ನು ನಿಮ್ಮ ಪರ್ಸ್ ಅಥವಾ ಹಣ ಸಂಗ್ರಹ ಪ್ರದೇಶದಲ್ಲಿ ಇರಿಸಬಹುದು. ಹೀಗೆ ಮಾಡುವುದರಿಂದ ಹಣದ ಕೊರತೆ ನೀಗುತ್ತದೆ.

ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ 7 ಅಪರಾಜಿತಾ ಹೂವುಗಳನ್ನು ತೆಗೆದುಕೊಂಡು ಗಂಗಾಜಲದಿಂದ ತೊಳೆದು ಹಳದಿ ಬಟ್ಟೆಯಲ್ಲಿ ಹಾಕಿ. ನಂತರ ಇದನ್ನು ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಹಣದ ಪೆಟ್ಟಿಗೆಯಲ್ಲಿ ಇರಿಸಬಹುದು. ಹೀಗೆ ಮಾಡಿದರೆ ವ್ಯಾಪಾರ ನಷ್ಟದಿಂದ ಹೊರಬರಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.