ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಅಳವಡಿಸಿದರೆ ನಿಮಗೆ ಒಳ್ಳೆ ಟೈಮ್‌ ಬರೋದು ಗ್ಯಾರಂಟಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಅಳವಡಿಸಿದರೆ ನಿಮಗೆ ಒಳ್ಳೆ ಟೈಮ್‌ ಬರೋದು ಗ್ಯಾರಂಟಿ

ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಅಳವಡಿಸಿದರೆ ನಿಮಗೆ ಒಳ್ಳೆ ಟೈಮ್‌ ಬರೋದು ಗ್ಯಾರಂಟಿ

ಎಲ್ಲರ ಮನೆಯಲ್ಲೂ ಗಡಿಯಾರ ಇದ್ದೇ ಇರುತ್ತದೆ. ಆದರೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಅಳವಡಿಸದಿದ್ದರೆ ಅದರಿಂದ ವಾಸ್ತು ದೋಷಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ. ಹಾಗಾದರೆ ಗಡಿಯಾರವನ್ನು ಯಾವ ಜಾಗದಲ್ಲಿ ಹಾಕುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ತಿಳಿಯೋಣ. (ಬರಹ: ಅರ್ಚನಾ ವಿ ಭಟ್‌)

ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಅಳವಡಿಸಿರೆ ನಿಮಗೆ ಒಳ್ಳೆ ಟೈಮ್‌ ಬರೋದು ಗ್ಯಾರಂಟಿ
ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಅಳವಡಿಸಿರೆ ನಿಮಗೆ ಒಳ್ಳೆ ಟೈಮ್‌ ಬರೋದು ಗ್ಯಾರಂಟಿ (PC: Pixabay)

ಗಡಿಯಾರ ಪ್ರತಿಯೊಬ್ಬರ ಮನೆಯಲ್ಲೂ ಇರುವ ಅತ್ಯಂತ ಅಗತ್ಯ ವಸ್ತುಗಳಲ್ಲೊಂದು. ಸಮಯದ ಪಾಲನೆಗೆ ಗಡಿಯಾರ ಅತಿ ಅವಶ್ಯಕ. ನಾವು ಮಾಡುವ ಪ್ರತಿ ಕೆಲಸವೂ ಸಮಯವನ್ನು ಆಧರಿಸಿಯೇ ಇರುತ್ತದೆ. ಬೆಳಗ್ಗೆ ಏಳುವುದರಿಂದ ಹಿಡಿದು, ರಾತ್ರಿ ಮಲಗುವುದೂ ಕೂಡಾ ಸಮಯವನ್ನು ಅವಲಂಬಿಸಿಯೇ ಇದೆ. ಸಮಯವನ್ನು ತಿಳಿಯಲು ನಾವು ಬಳಸುವ ಸಾಧನ ಗಡಿಯಾರ. ಅದು ಕಾಲ ಕಾಲಕ್ಕೆ ನಮಗೆ ನಮ್ಮ ಕೆಲಸ ಮತ್ತು ಜವಾಬ್ದಾರಿಯನ್ನು ನೆನಪಿಸುತ್ತಿರುತ್ತದೆ.

ಪ್ರತಿಯೊಬ್ಬರ ಮನೆಯಲ್ಲೂ ಗಡಿಯಾರ ಇದ್ದೇ ಇರುತ್ತದೆ. ಚಂದದ ಮನೆಗೆ ಅಂದದ ಗಡಿಯಾರ ಮೆರುಗು ನೀಡುತ್ತದೆ. ದಿನ 24 ಗಂಟೆಗಳನ್ನು ಪ್ರತಿನಿಧಿಸುವ ಗಡಿಯಾರ ಹಲವು ಬಗೆಯ ವಿನ್ಯಾಸಗಳಲ್ಲಿ ದೊರಕುತ್ತದೆ. ಒಂದು ಚೆಂದದ ಗಡಿಯಾರ ಖರೀದಿಸಿ ತಂದು ಯಾವುದಾದರೊಂದು ಜಾಗದಲ್ಲಿ ಇಟ್ಟರೆ ಅಷ್ಟೇ ಸಾಕೇ? ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಎಲ್ಲಿ ಬೇಕೆಂದರಲ್ಲಿ ಇಟ್ಟ ಗಡಿಯಾರದಿಂದಲೂ ವಾಸ್ತುದೋಷ ಉಂಟಾಗುತ್ತದೆ. ಹಾಗೆ ತಪ್ಪು ದಿಕ್ಕಿನಲ್ಲಿ ಇಟ್ಟ ಗಡಿಯಾರದಿಂದ ಆರ್ಥಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕುವುದರಿಂದ ಮನೆಗೆ ಶುಭವನ್ನು ತರುತ್ತದೆ?

ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಗಡಿಯಾರ ಇಡಿ

ಗಡಿಯಾರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾಗಿ ನಿಮ್ಮ ಮನೆಯಲ್ಲಿ ಗಡಿಯಾರವನ್ನು ಇರಿಸಲು ಈ ದಿಕ್ಕುಗಳನ್ನೇ ಆರಿಸಿಕೊಳ್ಳಿ.

ತಿಳಿ ಬಣ್ಣದ ಗಡಿಯಾರ ಆಯ್ದುಕೊಳ್ಳಿ

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಅಳವಡಿಸಬೇಕು. ಗಾಢ ಬಣ್ಣದ ಗಡಿಯಾರವನ್ನು ಅಳವಡಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ.

ಚಲಿಸದ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.

ವಾಸ್ತುಶಾಸ್ತ್ರದ ಪ್ರಕಾರ ಚಲಿಸದ ಗಡಿಯಾರವನ್ನು ಮನೆಯಲ್ಲಿ ಇಡಬಾರದು. ಚಲಿಸದ ಗಡಿಯಾರ ಮನೆಯ ವಾತಾವರಣವನ್ನು ಹಾಳು ಮಾಡಬಹುದು. ಮನೆಯಲ್ಲಿ ಚಲಿಸದ ಗಡಿಯಾರವಿದ್ದರೆ ಅದನ್ನು ಮೊದಲು ಸರಿಪಡಿಸಿ. ಒಂದು ವೇಳೆ ಹಾಳಾಗಿದ್ದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.

ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಗಡಿಯಾರವನ್ನು ಅಳವಡಿಸಬೇಡಿ

ಗಡಿಯಾರವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಅಳವಡಿಸಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಏಕೆಂದರೆ ಈ ದಿಕ್ಕುಗಳಲ್ಲಿ ಗಡಿಯಾರವನ್ನು ಅಳವಡಿಸುವುದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ.

ಒಡೆದ ಗಡಿಯಾರ ಮನೆಯಲ್ಲಿ ಇಟ್ಟುಕೊಳ್ಳಬೇಡಿ.

ವಾಸ್ತು ಪ್ರಕಾರ ಮನೆಯಲ್ಲಿ ಒಡೆದ ಗಡಿಯಾರವನ್ನು ಎಂದಿಗೂ ಇಟ್ಟುಕೊಳ್ಳಬಾರದು. ಒಡೆದ ಗಡಿಯಾರವು ಮನೆಯ ವಾತಾವರಣವನ್ನು ಹಾಳುಮಾಡುತ್ತದೆ. ಅಷ್ಟೇ ಅಲ್ಲದೇ ಒಡೆದ ಗಡಿಯಾರವು ದೌರ್ಭಾಗ್ಯದ ಸಂಕೇತ ಎಂಬ ನಂಬಿಕೆಯಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.