ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆ ಇದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಧನಕನಕ ವೃದ್ಧಿಸಲು ಪಂಚಸೂತ್ರಗಳಿವು

ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆ ಇದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಧನಕನಕ ವೃದ್ಧಿಸಲು ಪಂಚಸೂತ್ರಗಳಿವು

ಮನೆಯಲ್ಲಿ ನೆಮ್ಮದಿ ಹೆಚ್ಚಾಗಿ ಸಂಪತ್ತು ವೃದ್ಧಿಸಬೇಕು ಎಂಬುದು ಎಲ್ಲರ ಬಯಕೆ. ಸಂಪತ್ತಿನ ದೇವತೆ ಲಕ್ಷ್ಮೀದೇವಿ ತೃಪ್ತಳಾದಾಗ ಮನೆಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಹೀಗಾಗಬೇಕಾದರೆ, ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೋ ಅಥವಾ ವಿಗ್ರಹ ಇಡುವಾಗ ಕೆಲವೊಂದು ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು.

ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆ ಇದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆ ಇದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಲಕ್ಷ್ಮೀ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ದೇವಿ ನೆಲೆಸಿರುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಎಂದಿಗೂ ಕೊರತೆ ಆಗುವುಲ್ಲ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರವು, ಲಕ್ಷ್ಮೀ ದೇವಿಯ ವಿಗ್ರಹವನ್ನು ಮನೆಯಲ್ಲಿ ಇಡುವುದಕ್ಕೂ ಕೆಲವೊಂದು ನಿಯಮಗಳನ್ನು ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಾಂತಿ-ಸಮೃದ್ಧಿ ನೆಲೆಸಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಕೆಲವೊಂದು ಕ್ರಮಗಳನ್ನು ವಾಸ್ತು ಸೂಚಿಸುತ್ತದೆ. ಕೆಲವೊಬ್ಬರು ತಮ್ಮ ಮನೆಗಳಲ್ಲಿ ದೇವರ ವಿಗ್ರಹಗಳನ್ನು ತಪ್ಪು ದಿಕ್ಕಿನಲ್ಲಿ ಇಡುತ್ತಾರೆ. ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸಂಚರಿಸುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಯ ವಿಗ್ರಹವನ್ನು ಇಡುವ ಸರಿಯಾದ ಕ್ರಮ ಯಾವುದು ಎಂಬ ಮಾಹಿತಿ ಇಲ್ಲಿದೆ.

ಲಕ್ಷ್ಮೀ ದೇವಿಯ ವಿಗ್ರಹವನ್ನು ಎಲ್ಲಿ ಇಡಬೇಕು?

ಲಕ್ಷ್ಮಿ ದೇವಿಯ ವಿಗ್ರಹವನ್ನು ಯಾವಾಗಲೂ ಮನೆಯ ದೇವರ ಕೋಣೆಯಲ್ಲಿಯೇ ಇಡಬೇಕು. ಹಾಗಂತಾ ವಿಗ್ರಹವನ್ನು ನೆಲದ ಮೇಲೆ ಇಡಬಾರದು. ಮನೆಯಲ್ಲಿ ದೇವರ ಗುಡಿ ಅಥವಾ ಕೋಣೆ ನಿರ್ಮಿಸಿದ್ದರೆ, ದೇವರ ಪೀಠ, ಟೇಬಲ್ ಅಥವಾ ಸ್ಟೂಲ್ ಮೇಲೆ ಪ್ರತಿಷ್ಠಾಪಿಸಬೇಕು. ಇದರ ಹೊರತಾಗಿ ಹಾಲ್‌ ಅಥವಾ ಇತರ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಇಡಬಾರದು.

ಲಕ್ಷ್ಮೀ ದೇವಿಯ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮೀ ದೇವಿಯ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ಇದೇ ವೇಳೆ, ದೇವಿಯ ವಿಗ್ರಹವನ್ನು ವಾಯುವ್ಯ ದಿಕ್ಕಿನಲ್ಲಿ ಇರಿಸಬಹುದು. ಈ ಎರಡು ದಿಕ್ಕುಗಳು ಪ್ರಾಶ್ತ್ಯದ ದಿಕ್ಕುಗಳಾಗಿವೆ.

ಲಕ್ಷ್ಮಿ ದೇವಿಯ ವಿಗ್ರಹವನ್ನು ಗಣೇಶನ ಜೊತೆಗೆ ಇಡಬೇಕೇ?

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಲಕ್ಷ್ಮೀ ದೇವಿಯ ವಿಗ್ರಹವನ್ನು ವಿಘ್ನನಿವಾರಕ ಗಣೇಶನ ಜೊತೆಗೆ ಇರಿಸಲಾಗುತ್ತದೆ. ಆದರೆ ಲಕ್ಷ್ಮೀ ದೇವಿಯ ವಿಗ್ರಹವನ್ನು ಗಣೇಶನ ಬಳಿ ಮಾತ್ರ ಇಡಬೇಕು ಎಂಬ ನಿಯಮವಿಲ್ಲ. ಲಕ್ಷ್ಮೀ ವಿಗ್ರಹವನ್ನು ವಿಷ್ಣು ಮತ್ತು ಕುಬೇರನ ಫೋಟೋ ಅಥವಾ ವಿಗ್ರಹದ ಜೊತೆಗೂ ಇರಿಸಬಹುದು. ಗಣೇಶನ ಜೊತೆಗೆ ಲಕ್ಷ್ಮೀ ದೇವಿಯ ವಿಗ್ರಹವನ್ನು ಬಲಭಾಗದಲ್ಲಿ ಇರಿಸಲಾಗುತ್ತದೆ. ಆದರೆ, ವಿಷ್ಣುವಿನ ಜೊತೆಗೆ ತಾಯಿಯ ವಿಗ್ರಹವನ್ನು ಎಡಭಾಗದಲ್ಲಿ ಇರಿಸಬೇಕು.

ಮನೆಯಲ್ಲಿ ಲಕ್ಷ್ಮಿ ದೇವಿಯ ಎಷ್ಟು ವಿಗ್ರಹಗಳನ್ನು ಇಡಬಹುದು?

ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ್ಮೀ ದೇವಿಯ ವಿಗ್ರಹಗಳನ್ನು ಇಡಬಾರದು. ಒಂದಕ್ಕಿಂತ ಹೆಚ್ಚು ವಿಗ್ರಹಗಳಿದ್ದರೆ ನಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಲಕ್ಷ್ಮಿ ದೇವಿಯ ಯಾವ ರೀತಿಯ ವಿಗ್ರಹವನ್ನು ಮನೆಯಲ್ಲಿ ಇಡಬಾರದು?

ಲಕ್ಷ್ಮೀ ದೇಯ ಕುಳಿದ ಭಂಗಿಯ ವಿಗ್ರಹಕ್ಕೆ ಪ್ರಾಶಸ್ತ್ಯ ಹೆಚ್ಚು. ದೇವಿಯು ಕಮಲದ ಆಸನದ ಮೇಲೆ ಕುಳಿತಿರುವ ಫೋಟೋ ಅಥವಾ ವಿಗ್ರಹ ಮನೆಗೆ ಒಳ್ಳೆಯದು. ಹೀಗಾಗಿ ನಿಂತಿರುವ ಭಂಗಿಯಲ್ಲಿರುವ ವಿಗ್ರಹ ಮನೆಯಲ್ಲಿ ಇಡಬಾರದು. ಇದೇ ವೇಳೆ ಒಡೆದ ಅಥವಾ ಯಾವುದೇ ಒಡಕು ಇದ್ದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಒಡಕು ಬಂದ ವಿಗ್ರಹಗಳನ್ನು ಸುಡಬಾರದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.