ನಿಮ್ಮ ಮನಸ್ಸಿಗೆ ಬಂದಾಗ ಬಟ್ಟೆ ಒಗೆಯುತ್ತೀರಾ? ಹಾಗಾದ್ರೆ ಆ ಅಭ್ಯಾಸ ಇಂದೇ ಬದಲಿಸಿಕೊಳ್ಳಿ; ಇಲ್ಲವಾದರೆ ನಷ್ಟ ಅನುಭವಿಸಬೇಕಾಗಬಹುದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮನಸ್ಸಿಗೆ ಬಂದಾಗ ಬಟ್ಟೆ ಒಗೆಯುತ್ತೀರಾ? ಹಾಗಾದ್ರೆ ಆ ಅಭ್ಯಾಸ ಇಂದೇ ಬದಲಿಸಿಕೊಳ್ಳಿ; ಇಲ್ಲವಾದರೆ ನಷ್ಟ ಅನುಭವಿಸಬೇಕಾಗಬಹುದು

ನಿಮ್ಮ ಮನಸ್ಸಿಗೆ ಬಂದಾಗ ಬಟ್ಟೆ ಒಗೆಯುತ್ತೀರಾ? ಹಾಗಾದ್ರೆ ಆ ಅಭ್ಯಾಸ ಇಂದೇ ಬದಲಿಸಿಕೊಳ್ಳಿ; ಇಲ್ಲವಾದರೆ ನಷ್ಟ ಅನುಭವಿಸಬೇಕಾಗಬಹುದು

ನಾವು ಜೀವನದಲ್ಲಿ ಮಾಡುವ ಕೆಲವು ತಪ್ಪುಗಳಿಂದ ಬಹಳಷ್ಟು ಹಾನಿಯನ್ನುಂಟಾಗಬಹುದು. ತಿಳಿಯದೆ ಮಾಡುವ ಕೆಲವು ತಪ್ಪುಗಳಿಂದ ಅನೇಕ ಜನರು ನಷ್ಟವನ್ನು ಎದುರಿಸುತ್ತಾರೆ. ಅದರಲ್ಲಿ ಬಟ್ಟೆ ಒಗೆಯುವುದು ಸೇರಿದೆ. ವಾರದ ಯಾವ ದಿನ ಬಟ್ಟೆ ಒಗೆಯುವುದು ಒಳ್ಳೆಯದಲ್ಲ. ಬಟ್ಟೆ ಒಗೆಯಲು ಅನುಸರಿಸಬೇಕಾದ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ.

ನಿಮ್ಮ ಮನಸ್ಸಿಗೆ ಬಂದಾಗ ಬಟ್ಟೆ ಒಗೆಯುತ್ತೀರಾ? ಹಾಗಾದ್ರೆ ಆ ಅಭ್ಯಾಸ ಇಂದೇ ಬದಲಿಸಿಕೊಳ್ಳಿ
ನಿಮ್ಮ ಮನಸ್ಸಿಗೆ ಬಂದಾಗ ಬಟ್ಟೆ ಒಗೆಯುತ್ತೀರಾ? ಹಾಗಾದ್ರೆ ಆ ಅಭ್ಯಾಸ ಇಂದೇ ಬದಲಿಸಿಕೊಳ್ಳಿ

ವಾಸ್ತುವನ್ನು ಅನುಸರಿಸುವುದರಿಂದ, ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ವಾಸ್ತು ಶಾಸ್ತ್ರವನ್ನು ಪಾಲಿಸುವುದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ ಮತ್ತು ನಿಮ್ಮ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಾಣಬಹುದು. ಇದರಿಂದ ನೆಮ್ಮದಿಯ ಜೀವನ ನಡೆಸಬಹುದು. ಆದರೆ ನಾವು ಮಾಡುವ ಕೆಲವು ತಪ್ಪುಗಳು ಬಹಳಷ್ಟು ಹಾನಿಯನ್ನುಂಟುಮಾಡಬಹುದು. ತಿಳಿಯದೆ ಮಾಡುವ ತಪ್ಪುಗಳಿಂದಲೂ ನಷ್ಟವನ್ನು ಎದುರಿಸಬೇಕಾಗಬಹುದು.

ಮನೆಕೆಲಸಗಳನ್ನು ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸಣ್ಣ ತಪ್ಪುಗಳು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ನಾವೆಲ್ಲರೂ ಪ್ರತಿದಿನ ಬಟ್ಟೆ ಒಗೆಯುತ್ತೇವೆ. ಸ್ವಚ್ಛತೆಯ ಕಡೆಗೆ ಗಮನ ಕೊಡುವುದು ಒಳ್ಳೆಯ ಅಭ್ಯಾಸವೂ ಹೌದು. ಆದರೆ ದಿನದ ಕೆಲವು ಸಮಯದಲ್ಲಿ ಬಟ್ಟೆ ಒಗೆಯುವುದರಿಂದ ಋಣಾತ್ಮಕ ಪರಿಣಾಮಗಳು ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದರೆ ದಿನದ ಯಾವ ಸಮಯದಲ್ಲಿ ಬಟ್ಟೆ ಒಗೆಯುವುದರಿಂದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ, ಯಾವ ದಿನ ಬಟ್ಟೆ ಒಗೆಯಬಾರದು, ಯಾವ ಸಮಯದಲ್ಲಿ ಬಟ್ಟೆ ಒಗೆಯವುದು ಸೂಕ್ತ ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳೋಣ.

ಯಾವ ಸಮಯದಲ್ಲಿ ಬಟ್ಟೆ ಒಗೆಯಬಾರದು?

ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಸಮಯದಲ್ಲಿ ಬಟ್ಟೆ ಒಗೆಯುವುದು ಸೂಕ್ತವಲ್ಲ. ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆ ಉಂಟಾಗುತ್ತದೆ. ರಾತ್ರಿಯ ಸಮಯದಲ್ಲಿ ಆದಷ್ಟು ಶಾಂತವಾಗಿರಬೇಕು. ಈ ಸಮಯದಲ್ಲಿ, ಬಟ್ಟೆ ಒಗೆಯುವುದು ಮತ್ತು ನೀರಿಗೆ ಸಂಬಂಧಿಸಿದ ಕೆಲಸಗಳನ್ನು ಹೆಚ್ಚುವರಿ ಶ್ರಮವಹಿಸಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಶನಿಯ ಪ್ರಭಾವ

ರಾತ್ರಿಯಲ್ಲಿ ಬಟ್ಟೆ ಒಗೆಯುವುದರಿಂದ ಶನಿ ದೇವರ ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ನಷ್ಟಗಳು, ಆರ್ಥಿಕ ತೊಂದರೆಗಳು, ಬಡತನ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದು ನಿಮ್ಮ ಕೆಲಸ, ಸಂಬಂಧಗಳು ಮತ್ತು ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾರದ ಯಾವ ದಿನ ಬಟ್ಟೆ ಒಗೆಯುವುದು ಒಳ್ಳೆಯದಲ್ಲ?

ವಾರದ ಪ್ರತಿ ದಿನವೂ ಬಹಳ ಮುಖ್ಯ. ಆದರೆ ಗುರುವಾರ ಬಟ್ಟೆ ಒಗೆಯುವುದು ಒಳ್ಳೆಯದಲ್ಲ . ಗುರುವಾರ ವಿಷ್ಣುವಿಗೆ ಅರ್ಪಿತವಾಗಿದೆ. ಇಂದು ನಾವು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಆ ದಿನ ನೀವು ಕೊಳಕು ಬಟ್ಟೆಗಳನ್ನು ತೊಳೆಯಬಾರದು ಅಥವಾ ಹೆಚ್ಚು ನೀರು ವ್ಯರ್ಥ ಮಾಡಬಾರದು. ಗುರುವಾರದಂದು ಅತಿಯಾದ ಕೊಳಕು ಬಟ್ಟೆಗಳನ್ನು ಒಗೆಯುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದರಿಂದ ಬಡತನವನ್ನು ಎದುರಿಸಬೇಕಾಗುತ್ತದೆ.

ಬಟ್ಟೆ ಒಗೆಯಲು ಇರುವ ನಿಯಮ

ಬಟ್ಟೆ ಒಗೆಯುವಾಗ ಪಾಲಿಸಬೇಕಾದ ವಾಸ್ತು ನಿಯಮಗಳೇನೆಂದರೆ ಬಟ್ಟೆ ಒಗೆಯಲು ಉತ್ತಮ ಸಮಯ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ. ಮಂಗಳವಾರ ಮತ್ತು ಗುರುವಾರ ಕೊಳಕು ಬಟ್ಟೆಗಳನ್ನು ತೊಳೆಯುವುದು ಒಳ್ಳೆಯದಲ್ಲ. ಈ ತಪ್ಪು ಮಾಡುವುದರಿಂದ ಸಂತೋಷ ಮತ್ತು ಮನಸ್ಸಿನ ಶಾಂತಿ ಕಡಿಮೆಯಾಗುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ನಕಾರಾತ್ಮಕ ಶಕ್ತಿಯೂ ಹರಡಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.